LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾರ್ವಜನಿಕ ಸಾರಿಗೆಯಲ್ಲಿ ಮೋಜು-ಮಸ್ತಿ ಸರಿಯೇ ? ಯುವ ಜನತೆ ವರ್ತನೆಗೆ ನೆಟ್ಟಿಗರ ನಡುವೆ ತೀವ್ರ ಚರ್ಚೆ !

ಸಾರ್ವಜನಿಕ ಸಾರಿಗೆಯಲ್ಲಿ, ಅದರಲ್ಲೂ ವೃದ್ಧರು, ಮಕ್ಕಳು ಮತ್ತು ರೋಗಿಗಳು ಪ್ರಯಾಣಿಸುವ ರೈಲು ಬೋಗಿಗಳಲ್ಲಿ ಇತರರಿಗೆ ತೊಂದರೆಯಾಗದಂತೆ ವರ್ತಿಸುವುದು ಕನಿಷ್ಠ ನಾಗರಿಕ ಕರ್ತವ್ಯವಾಗಿದೆ. ಆದರೆ ಇತ್ತೀಚೆಗೆ ಯುವಜನರ ಗುಂಪೊಂದು ರೈಲಿನ ಬೋಗಿಯಲ್ಲಿ ಸಾರ್ವಜನಿಕ ಸಭ್ಯತೆಯನ್ನು ಗಾಳಿಗೆ ತೂರಿ ಗಲಾಟೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಇದನ್ನು ಪ್ರಶ್ನಿಸಿದ ಮಹಿಳೆಯೊಬ್ಬರು ಯುವಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾಚಿ ಎಂಬ ಯುವತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಈ ಘಟನೆ ದಾಖಲಾಗಿದೆ. ಯುವಕ-ಯುವತಿಯರ ಗುಂಪೊಂದು ರೈಲು ಬೋಗಿಯೊಳಗೆ ಜೋರಾಗಿ “ಗಣಪತಿ ಬಪ್ಪ ಮೋರಿಯಾ” ಮತ್ತು “ಹರ್ ಹರ್ ಮಹಾದೇವ್” ಎಂದು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ, ಚಪ್ಪಾಳೆ ತಟ್ಟುತ್ತಾ ಗದ್ದಲ ಮಾಡುತ್ತಿದ್ದರು. ಈ ವೇಳೆ ಅದೇ ಬೋಗಿಯಲ್ಲಿದ್ದ ಹಿರಿಯ ಮಹಿಳೆಯೊಬ್ಬರು ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿ, ಅವರ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲಿನಲ್ಲಿ ಗಲಾಟೆ ಮಾಡುತ್ತಿದ್ದ ಯುವಕರ ಗುಂಪನ್ನು ತರಾಟೆಗೆ ತೆಗೆದುಕೊಂಡ ಮಹಿಳೆ, “ನಿಮಗೆ ಕನಿಷ್ಠ ಶಿಕ್ಷಣ ಮತ್ತು ಸಂಸ್ಕಾರವಿಲ್ಲ. ಪದೇ ಪದೇ ಹೇಳುತ್ತಿದ್ದರೂ ಇಡೀ ಬೋಗಿಗೆ ತೊಂದರೆ ಕೊಡುತ್ತಿದ್ದೀರಾ. ನಿಮ್ಮ ಈ ವರ್ತನೆಯ ವಿರುದ್ಧ ಪೊಲೀಸರಿಗೆ ದೂರು ನೀಡಿ ಮುಂದಿನ ನಿಲ್ದಾಣದಲ್ಲೇ ನಿಮ್ಮನ್ನು ಕೆಳಗಿಳಿಸುವಂತೆ ಮಾಡುತ್ತೇನೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಮೊದಲು ಪೊಲೀಸರು ಬಂದು ಗಲಾಟೆ ಮಾಡದಂತೆ ಎಚ್ಚರಿಸಿದ್ದರೂ ಯುವ ಪಡೆ ಅದನ್ನು ನಿರ್ಲಕ್ಷಿಸಿದ್ದರು ಎಂದು ತಿಳಿದುಬಂದಿದೆ.

ವೀಡಿಯೊ ಹಂಚಿಕೊಂಡ ಯುವತಿ “ರೈಲಿನಲ್ಲಿ ಸ್ವಲ್ಪ ಮೋಜು ಮಾಡಿದರೆ ಏನಾಗುತ್ತದೆ? ನೋಡಿ ಹೀಗಾಯಿತು” ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಆದರೆ ಈ ವೀಡಿಯೊ ಜಾಲತಾಣಗಳಲ್ಲಿ ಹಂಚಕೆಯಾಗುತ್ತಿದ್ದಂತೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ಚಿಲ್ಲರೆ ವರ್ತನೆ ಸಹಿಸಲು ಸಾಧ್ಯವಿಲ್ಲ, ಮೋಜು ಮಾಡಲು ಸ್ವಂತ ವಾಹನಗಳನ್ನು ಬಳಸಲಿ ಎಂದು ಅನೇಕರು ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಕೆಲವರು ಯುವಕರು ಯಾವುದೇ ದುರುದ್ದೇಶವಿಲ್ಲದೆ ಮೋಜು ಮಾಡುತ್ತಿದ್ದರು ಎಂದು ವಾದಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿನ ವರ್ತನೆ ಕುರಿತು ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
H-1B ವೀಸಾ ಮೇಲೆ ಅಮೆರಿಕ ಕಠಿಣ ಕ್ರಮ: ಗ್ರೀನ್ ಕಾರ್ಡ್ ನಿಂದ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಸೇರಿ 8 ಐಟಿ ಕಂಪನಿಗಳ ಅಮಾನತುಸಾಗರದಲ್ಲಿ ‘ಜೀವನ್ಮುಖಿ’ ವತಿಯಿಂದ ‘ದಾರ-ಚಿತ್ತಾರ’ ಕಸೂತಿ ತರಬೇತಿ ಶಿಬಿರ: ಮಹಿಳೆಯರ ಸ್ವಾವಲಂಬನೆಗೆ ಮುನ್ನುಡಿಅ.8ರಿಂದ ಸಾಗರದಲ್ಲಿ ‘ಜೀವನ್ಮುಖಿ’ ವತಿಯಿಂದ ‘ದಾರ-ಚಿತ್ತಾರ’ ಕಸೂತಿ ತರಬೇತಿ ಶಿಬಿರ: ಮಹಿಳೆಯರ ಸ್ವಾವಲಂಬನೆಗೆ ಮುನ್ನುಡಿನಾಳೆ ತುಮರಿಯಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಿಲನ್ಯಾಸರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿಗಳಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ: ಜಾಗರೂಕರಾಗಿರಲು ಭಾರತೀಯರಿಗೆ MEA ಮಹತ್ವದ ಸಲಹೆಚುನಾವಣಾ ಆಯೋಗ, ಇತರೆ ಸಾಂವಿಧಾನಿಕ ಸಂಸ್ಥೆಗಳ ದುರ್ಬಲಗೊಳಿಸುವ ಯತ್ನ ವಿರುದ್ಧ 42 ಮಾಜಿ ನ್ಯಾಯಾಧೀಶರಿಂದ ಬಹಿರಂಗ ಪತ್ರಶಾಸಕರ ಭವನಕ್ಕೆ ಉಪಸಭಾಪತಿ ಡಾ.ಉಮಾಶ್ರೀ ದಿಢೀರ್‌ ಭೇಟಿ, ಪರಿಶೀಲನೆಸಾರ್ವಜನಿಕ ಸಾರಿಗೆಯಲ್ಲಿ ನಾವೀನ್ಯತೆ: BMTC ಪ್ರತಿಷ್ಠಿತ 'ಚೇಂಜ್ ಮೇಕರ್ ಅವಾರ್ಡ್' ಗರಿರೇಣುಕಾಸ್ವಾಮಿ ಹತ್ಯೆ ಕೇಸ್: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್ಕೆನಡಾದ ಲೇಖಕಿ ಅನ್ನೆ ಕಾರ್ಸನ್ ಗೆ ಒಲಿದ ಸಾಹಿತ್ಯದ ನೊಬೆಲ್ ಪ್ರಶಸ್ತಿ