LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಗರದ ತುಮರಿಯಲ್ಲಿ ಇಂದಿರಾ ವಸತಿ ಶಾಲೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಿಲಾನ್ಯಾಸ

ಸಾಗರ: ತಾಲೂಕಿನ ತುಮರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೇ ಪ್ರಕೃತಿಯ ಸುಂದರ ಮಡಿಲಿನಲ್ಲಿ ತಲೆಯೆತ್ತುತ್ತಿರುವ ಈ ಶಾಲೆ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಉತ್ತಮ ವಾತಾವರಣ ಒದಗಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಾಗರ ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿಗೆ ಒತ್ತು ನೀಡಲಾಗಿದ್ದು, ಗೆಣಸಿನಕುಣಿಯಲ್ಲಿ ₹19 ಕೋಟಿ ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಉಳ್ಳೂರಿನಲ್ಲಿ ₹22 ಕೋಟಿ ವೆಚ್ಚದ ಮೊರಾರ್ಜಿ ದೇಸಾಯಿ ಶಾಲೆ, ಹೊಸನಗರದ ಗೇರುಪುರದಲ್ಲಿ ₹22 ಕೋಟಿ ಹಾಗೂ ತುಮರಿಯಲ್ಲಿ ₹22 ಕೋಟಿ ವೆಚ್ಚದ ಇಂದಿರಾಗಾಂಧಿ ವಸತಿ ಶಾಲೆಗಳು ಸೇರಿದಂತೆ ಒಟ್ಟಾರೆ ಸಾಗರ ತಾಲೂಕಿಗೆ ₹107 ಕೋಟಿ ಮೊತ್ತದ ವಸತಿ ಶಾಲೆಗಳ ಯೋಜನೆಗಳನ್ನು ತರಲಾಗಿದೆ ಎಂದು ವಿವರಿಸಿದರು.

news_1791569735_0_660.webp

​ಸಂಪರ್ಕ ಕ್ರಾಂತಿ: 232 ಕಾಲುಸಂಕಗಳು ಮತ್ತು ರಸ್ತೆ ಅಭಿವೃದ್ಧಿ

​ಹಿಂದಿನಿಂದಲೂ ಕಾಲುಸಂಕಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಗ್ರಾಮೀಣ ಜನರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿ ಚರ್ಚಿಸಿ ಬರೋಬ್ಬರಿ 232 ಕಾಲುಸಂಕಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಜತೆಯಲ್ಲೇ ಅಭಿವೃದ್ಧಿ ಕಾಮಗಾರಿಗಳನ್ನೂ ಚುರುಕುಗೊಳಿಸಲಾಗಿದ್ದು, ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತುಮರಿಯ ರಂಗಮಂದಿರದ ದುರಸ್ತಿಗೆ ₹25 ಲಕ್ಷ ಅನುದಾನ ಒದಗಿಸಿ ಪುನರುಜ್ಜೀವನಗೊಳಿಸಲಾಗಿದೆ.

​ಸಿಗಂದೂರು ಕ್ಷೇತ್ರಕ್ಕೆ ಪೊಲೀಸ್ ಠಾಣೆ ಪ್ರಸ್ತಾವನೆ ಹಾಗೂ ಕೆಪಿಎಸ್ ಮಾದರಿ ಶಿಕ್ಷಣ

​ಸಿಗಂದೂರು ಕ್ಷೇತ್ರಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿರುವುದರಿಂದ ಹಾಗೂ ಕಳ್ಳತನ ಪ್ರಕರಣಗಳನ್ನು ತಡೆಯುವ ಸಲುವಾಗಿ ತುಮರಿಯಲ್ಲಿ ನೂತನ ಪೊಲೀಸ್ ಠಾಣೆ ಸ್ಥಾಪನೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.

ಇದಲ್ಲದೆ, ಗ್ರಾಮೀಣ ಭಾಗದ ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶಾಲಾ ಬಸ್ ಸೌಲಭ್ಯವನ್ನೂ ಸರ್ಕಾರದಿಂದಲೇ ಕಲ್ಪಿಸಿ ಖಾಸಗಿ ಶಾಲೆಗಳಿಗೆ ಸರಿಸಮಾನವಾದ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

news_1791569854_0_762.webp

ಕರಾವಳಿ ಭಾಗದ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್ ಸಮಸ್ಯೆ ಬಗೆಹರಿಸಲು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದರು.

​ಕಸ್ತೂರಿರಂಗನ್ ವರದಿ ವಿರುದ್ಧ ರೈತರ ಪರ ಧ್ವನಿ ಹಾಗೂ ಅರಣ್ಯ ಹಕ್ಕು ರಕ್ಷಣೆ

​ಜಿಲ್ಲೆಯ 447 ಗ್ರಾಮಗಳನ್ನು ಬಾಧಿಸುವ ಕಸ್ತೂರಿರಂಗನ್ ವರದಿಯ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ರೈತರ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ ಎಂದು ತಿಳಿಸಿದರು.

ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ, ರೈತರಿಗೆ ಅನ್ಯಾಯವಾಗದಂತೆ ಈ ಕರಡು ಅಧಿಸೂಚನೆಯನ್ನು ತಿರಸ್ಕರಿಸಲು ಒಮ್ಮತದ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.

news_1791569896_0_357.webp

ಇದೇ ವೇಳೆ, ರೈತರು ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಒತ್ತುವರಿ ಮಾಡದಂತೆ ಹಾಗೂ ಹಳೆಯ ಜಾಗಗಳನ್ನು ಉಳಿಸಿಕೊಂಡು ಶಾಂತಿಯುತವಾಗಿರುವಂತೆ ಮನವಿ ಮಾಡುತ್ತಾ, ಅಧಿಕಾರಿಗಳಿಂದ ಯಾವುದೇ ಕಿರುಕುಳವಾಗದಂತೆ ರೈತರ ರಕ್ಷಣೆಗೆ ನಿಲ್ಲುವುದಾಗಿ ಭರವಸೆ ನೀಡಿದರು.

​ಸೇತುವೆಗಳ ನಿರ್ಮಾಣ: ಹಸಿರಮಕ್ಕಿ, ಮುಪ್ಪಾನೆ ಹಾಗೂ ತುಮರಿ ಸಂಪರ್ಕ

​ದೀರ್ಘಕಾಲ ನೆನೆಗುದಿಗೆ ಬಿದ್ದಿದ್ದ ಹಸಿರಮಕ್ಕಿ ಸೇತುವೆ ಕಾಮಗಾರಿಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಮೂಲಕ ಅನುದಾನ ಬಿಡುಗಡೆ ಮಾಡಿಸಿ, ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು ದೀಪಾವಳಿ ವೇಳೆಗೆ ಉದ್ಘಾಟನೆ ಮಾಡಲಾಗುವುದು ಎಂದು ಪ್ರಕಟಿಸಿದರು.

news_1791569951_0_334.webp

ಅಲ್ಲದೆ, ₹80 ಕೋಟಿ ಅಂದಾಜು ವೆಚ್ಚದ ಮುಪ್ಪಾನೆ ಸೇತುವೆ ನಿರ್ಮಾಣಕ್ಕೂ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗಿದ್ದು, ಅನುದಾನ ಹಂತ ಹಂತವಾಗಿ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.

​ಗ್ರಾಮೀಣ ಬಸ್ ಸಂಪರ್ಕ ಮತ್ತು ರಸ್ತೆ ಯೋಜನೆಗಳು

​ತುಮರಿ ಭಾಗಕ್ಕೆ ಬಸ್ ಸೌಲಭ್ಯ ಒದಗಿಸಿದಂತೆ, ಮುಂದಿನ ವಾರದೊಳಗೆ ಮಾರಲಗೋಡು ಗ್ರಾಮಕ್ಕೂ ಬಸ್ ಸಂಚಾರ ಆರಂಭಿಸಲು ಕ್ರಮಕೈಗೊಳ್ಳುವುದಾಗಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

news_1791570002_0_578.webp

ಕೊಡ್ಸಾರದ ರಸ್ತೆ ವಿಚಾರದಲ್ಲಿ ತಾಂತ್ರಿಕ ಕಾರಣಗಳಿಂದ ಅನುದಾನ ತಡವಾಗಿದ್ದರೂ, ಸದ್ಯಕ್ಕೆ ₹30 ಲಕ್ಷ ಮತ್ತು ನಂತರ ₹50 ಲಕ್ಷ ಸೇರಿಸಿ ಒಟ್ಟು ₹80 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

​ಜೋಗ ಜಲಪಾತ ಅಭಿವೃದ್ಧಿ ಹಾಗೂ ಸಮಾನತೆಯ ಆಡಳಿತ

​ಜೋಗ ಜಲಪಾತವನ್ನು ₹180 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈಗಾಗಲೇ ₹90 ಕೋಟಿ ಬಿಡುಗಡೆಯಾಗಿದೆ. ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವದಲ್ಲಿ ಜೋಗದಲ್ಲಿ ವರ್ಷಪೂರ್ತಿ ನೀರು ಧುಮ್ಮಿಕ್ಕುವಂತೆ ಸರ್ವಋತು ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

news_1791570051_0_798.webp

ಯಾವುದೇ ಜಾತಿ, ಪಕ್ಷ ಅಥವಾ ಭೇದಭಾವವಿಲ್ಲದೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಸಾರ್ವಜನಿಕರ ಸೇವೆಗೆ ಸದಾ ಬದ್ಧನಾಗಿದ್ದು, ಸುಳ್ಳು ಹೇಳಿ ರಾಜಕಾರಣ ಮಾಡುವ ಜಾಯಮಾನ ನನ್ನದಲ್ಲ. ಸುಳ್ಳು ಹೇಳಿದ್ದು ಸಾಬೀತು ಪಡಿಸಿದರೇ ತಾವು ರಾಜಕೀಯ ನಿವೃತ್ತಿಯಾಗುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಸವಾಲು ಹಾಕಿದರು.

news_1791569641_0_172.webp

ತುಮರಿಯ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ಚಾಲನೆ

ಇಂದಿರಾಗಾಂಧಿ ವಸತಿ ಶಾಲೆಗೆ ಶಿಲಾನ್ಯಾಸಕ್ಕೂ ಮುನ್ನ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತುಮರಿಯ ಚದರವಳ್ಳಿ ಮುಂಭಾಗದಲ್ಲಿ 25 ಲಕ್ಷ ವೆಚ್ಚ ರಸ್ತೆ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿದರು. ಅಲ್ಲದೇ 25 ಲಕ್ಷ ವೆಚ್ಚದ ಅರಬಳ್ಳಿ ದೇವಸ್ಥಾನದ ಮುಂಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ತುಮರಿ ಮುಖ್ಯ ರಸ್ತೆಯಿಂದ ಹುರುಳಿ ಹೂವಣ್ಣನವರ ಮನೆವರೆಗೆ 30 ಲಕ್ಷ ವೆಚ್ಚರ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಚಾಲನೆ ನೀಡಿದರು.

news_1791570104_0_404.webp

ಇಂದಿರಾಗಾಂಧಿ ವಸತಿ ಶಾಲೆ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಜಯಲಕ್ಷ್ಮಿ ಪ್ರಾರ್ಥಿಸಿದರೇ, ಪ್ರಾಂಶುಪಾಲರಾದ ಬಿ.ಕೆ ಚಂದ್ರಪ್ಪ ಸ್ವಾಗತಿಸಿದರು. ಕೆಡಿಪಿ ಸದಸ್ಯ ಜಿ.ಟಿ ಸತ್ಯನಾರಾಯಣ ತುಮರಿ ಪ್ರಾಸ್ತಾವಿಕ ನುಡಿಯಾಡಿದರು. ವೇದಿಕೆಯಲ್ಲಿ ಅಕ್ಷರ ದಾಸೋಹದ ಎಡಿ ಭೂಮೇಶ್, ಎಇಇ ನಳಿನಾಕ್ಷಿ, ಕಾಂಗ್ರೆಸ್ ಯುವ ಮುಖಂಡ ಅಶೋಕ್ ಬೇಳೂರು, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪಿಡಬ್ಲೂಡಿ ಇಂಜಿನಿಯರ್ ಅನಿಲ್ ಕುಮಾರ್, ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ ರಮೇಶ್, ಪಿಎ ಶ್ರೀನಿವಾಸ್ ಮೂರ್ತಿ, ಗುತ್ತಿಗೆದಾರ ಶ್ರೀನಿವಾಸ್, ಜಾಕಿ ಗಣೇಶ್, ಸಂಪತ್, ಓಂಕಾರಪ್ಪ ಸೇರಿದಂತೆ ಇತರರು ಅಧಿಕಾರಿಗಳು, ತುಮರಿ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಗರದ ತುಮರಿಯಲ್ಲಿ ಇಂದಿರಾ ವಸತಿ ಶಾಲೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಿಲಾನ್ಯಾಸNPS ಸ್ವಾಸ್ಥ್ಯ ಯೋಜನೆ: ಆರೋಗ್ಯ ನಿಧಿ ಜೊತೆಗೆ 30 ಲಕ್ಷ ರೂ.ವರೆಗೆ ಸೂಪರ್ ಟಾಪ್ಅಪ್ ವಿಮಾ ರಕ್ಷಣೆ37 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿದ ಎಬಿ ಡಿವಿಲಿಯರ್ಸ್: ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾಗೆ 8 ವಿಕೆಟ್ ಜಯಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು: ಮತದಾರರಿಗೆ ಪ್ರಧಾನಿ ಮೋದಿ ಕೃತಜ್ಞತೆರಾಜ್ಯಸಭಾ ಚುನಾವಣೆ: ಮೂರು ರಾಜ್ಯಗಳಲ್ಲಿ 10 ಸ್ಥಾನಗಳನ್ನು ಅವಿರೋಧವಾಗಿ ಗೆದ್ದ ಬಿಜೆಪಿBIG BREAKING: ರಾಜ್ಯದ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಕ್ಷೇತ್ರವಾರು ಮೀಸಲಾತಿ ಕರಡು ಅಧಿಸೂಚನೆ ಪ್ರಕಟ: ಪರಿಶೀಲನೆ ಹೇಗೆ? ಇಲ್ಲಿದೆ ಮಾಹಿತಿಸಿಜೆಪಿ ಪ್ರತಿಭಟನೆ ಹಿನ್ನೆಲೆ ಇಂದು ರಾತ್ರಿ 10 ಗಂಟೆಯಿಂದ ಮಧ್ಯ ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಹಬ್ಬಕ್ಕೆ ಉಚಿತ LPG ಸಿಲಿಂಡರ್, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸೀರೆ ಸೇರಿ ಹಲವು ಯೋಜನೆಗಳಿಗೆ ಯೋಗಿ ಸಂಪುಟ ಅನುಮೋದನೆನಾವು ಪ್ರತಿಭಟನೆ ಮಾಡೇ ಮಾಡ್ತೇವೆ: ನಮ್ಮ ಆಂದೋಲನ ನಿಲ್ಲುವುದಿಲ್ಲ: ಮೂಲಭೂತ ಹಕ್ಕಿಗೆ ಅನುಮತಿ ಅಗತ್ಯವಿಲ್ಲ ಎಂದ ಸಿಜೆಪಿ ನಾಯಕ ಅಭಿಜಿತ್ ದಿಪ್ಕೆವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: JNU ಪ್ರಾಧ್ಯಾಪಕ, ಸಂಸದ ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ವಜಾ