LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿ: ಆಸ್ಪತ್ರೆಯ ಬೆಡ್‌ನಿಂದಲೇ ಅಭಿಮಾನಿಗಳಿಗೆ ಸಂದೇಶ ನೀಡಿದ ಸ್ಟಾರ್ ಬ್ಯಾಟರ್ ಜಾಸ್ ಬಟ್ಲರ್!

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಜಾಸ್ ಬಟ್ಲರ್ ತಮ್ಮ ಎಡಗಾಲಿನ ಹ್ಯಾಮ್‌ಸ್ಟ್ರಿಂಗ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ವೇಳೆ ಗಾಯಗೊಂಡಿದ್ದ ಅವರು, ಇದೀಗ ಚೇತರಿಕೆಯ ಹಾದಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣ ಫಿಟ್‌ನೆಸ್‌ನೊಂದಿಗೆ ಮೈದಾನಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಸೆಪ್ಟೆಂಬರ್ 24 ರಂದು ಹೆಡಿಂಗ್ಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ 36 ವರ್ಷದ ಬಟ್ಲರ್ ಈ ಗಾಯಕ್ಕೆ ತುತ್ತಾಗಿದ್ದರು. ಪಂದ್ಯದ ಮಧ್ಯದಲ್ಲೇ ಅಂಗಳದಿಂದ ಹೊರನಡೆದಿದ್ದ ಅವರು, ಬಳಿಕ ಮತ್ತೆ ಬ್ಯಾಟಿಂಗ್‌ಗೆ ಮರಳಿದ್ದರು. ಆ ಪಂದ್ಯದಲ್ಲಿ ಅವರು 5 ಸಿಕ್ಸರ್ ಸಹಿತ 49 ಎಸೆತಗಳಲ್ಲಿ ಭರ್ಜರಿ 69 ರನ್ ಸಿಡಿಸಿ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಶಸ್ತ್ರಚಿಕಿತ್ಸೆಯ ನಂತರದ ಫೋಟೋವನ್ನು ಹಂಚಿಕೊಂಡಿರುವ ಬಟ್ಲರ್, “ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ, ಚೇತರಿಕೆಯತ್ತ ಹೆಜ್ಜೆ ಇಡುತ್ತಿದ್ದೇನೆ. ಎಂದಿಗಿಂತಲೂ ಹೆಚ್ಚು ಪ್ರೇರಿತನಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಈ ಗಾಯದ ಕಾರಣದಿಂದಾಗಿ ಬಟ್ಲರ್ ಮುಂಬರುವ ಪಾಕಿಸ್ತಾನ ಪ್ರವಾಸದ ತ್ರಿಕೋನ ಸರಣಿಯಿಂದ ಹೊರಬಿದ್ದಿದ್ದಾರೆ. ಜೊತೆಗೆ ನವೆಂಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವೈಟ್‌ಬಾಲ್ ಸರಣಿಗೂ ಅವರು ಲಭ್ಯವಿರುವುದು ಅನುಮಾನವಾಗಿದೆ. ಇದೇ ವೇಳೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಜಾಸ್ ಬಟ್ಲರ್ ಹಾಗೂ ಹಿರಿಯ ಸ್ಪಿನ್ನರ್ ಆದಿಲ್ ರಶೀದ್ ಅವರ ಕೇಂದ್ರ ಒಪ್ಪಂದವನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
LPG Gas Subsidy : ನಿಮ್ಮ ಬ್ಯಾಂಕ್ ಖಾತೆಗೆ ಗ್ಯಾಸ್ ಸಬ್ಸಿಡಿ ಹಣ ಬಂದಿಲ್ವಾ? ಕ್ಷಣಾರ್ಧದಲ್ಲಿ ಹೀಗೆ ಚೆಕ್ ಮಾಡಿ!ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿಜಿ ವ್ಯಾಸಂಗಕ್ಕೆ ಸರ್ಕಾರದಿಂದ ₹15 ಕೋಟಿ ನೆರವು: ಸಚಿವ ಯು.ಟಿ ಖಾದರ್ರೈತರ ಬೇಡಿಕೆ ಈಡೇರಿಸದ ಕೇಂದ್ರ: ಸಾಗರದಲ್ಲಿ ಹೆದ್ದಾರಿ ತಡೆದು ರೈತ ಸಂಘ ಆಕ್ರೋಶರಾಹುಲ್ ಗಾಂಧಿ ರಾಜಕೀಯಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ನಿರಂತರವಾಗಿ ಸೋಲುತ್ತಲೇ ಇದೆ: ಅಮಿತ್ ಶಾ ವಾಗ್ದಾಳಿರಾಜ್ಯದ ಕ್ರೀಡಾ ಸಾಧಕರಿಗೆ ಸಿಹಿಸುದ್ದಿ: ಸರ್ಕಾರಿ ನೌಕರಿಯಲ್ಲಿ ಶೇ.2 ಮೀಸಲಾತಿ ಕಲ್ಪಿಸಿ ಸರ್ಕಾರ ಆದೇಶBREAKING: ಸೀರೆಯಲ್ಲಿ ಚಾಕು ಬಚ್ಚಿಟ್ಟು ಮಮತಾ ಬ್ಯಾನರ್ಜಿ ಮೇಲೆ ದಾಳಿಗೆ ಯತ್ನ? ಮಹಿಳೆ ಅರೆಸ್ಟ್!ಸಿನಿಮಾದಲ್ಲಿ ಚಾನ್ಸ್ ಬೇಕಿದ್ದರೆ ‘ನನ್ನ ಜೊತೆ ಮಲಗಬೇಕು’ ಎಂದ ನಿರ್ದೇಶಕ; ನಟಿ ನೀತಿ ಟೇಲರ್ ಸ್ಫೋಟಕ ಆರೋಪ.!ಸಾಗರ ಮಾರಿಕಾಂಬಾ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ: ಅ.18ರಂದು ದುರ್ಗಾಷ್ಟಮಿ ಪೂಜೆ, ಅನ್ನಸಂತರ್ಪಣೆ'ಸಾಗರ ತಾಲ್ಲೂಕು ಗ್ಯಾರಂಟಿ ಸಮಿತಿ' ಸಭೆ: ಅಧಿಕಾರಿಗಳ ಕಾರ್ಯವೈಖರಿಗೆ 'ಸದಸ್ಯ ನಾಗರಾಜ ಕಲ್ಮನೆ' ಬೇಸರSHOCKING : 16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ರೋಬೋಟ್.! ‘ಹಿಂಭಾಗ ಮುಟ್ಟಿ ಅಸಭ್ಯವಾಗಿ ವರ್ತನೆ’