ಜರ್ಮನಿಯ ಕಲೋನ್ ನಗರದಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. ರೆಸ್ಟೋರೆಂಟ್‌ವೊಂದರ ಹೊರಗೆ ನಿಂತಿದ್ದ 16 ವರ್ಷದ ಬಾಲಕಿಗೆ ಹ್ಯೂಮನಾಯ್ಡ್ ರೋಬೋಟ್ ಲೈಂಗಿಕ ಕಿರುಕುಳ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರೋಬೋಟ್ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವಿಡಿಯೋ ಲೈವ್‌ಸ್ಟ್ರೀಮ್ ಆಗಿದೆ ಎಂದು ವರದಿಯಾಗಿದೆ. ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತಿದ್ದ ರೋಬೋಟ್ ರಸ್ತೆಯ ಮಧ್ಯೆ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ ಎನ್ನಲಾಗಿದೆ.
‘ಐರನ್ ಮ್ಯಾನ್’ ಮಾದರಿಯ ರೋಬೋಟ್‌ನಿಂದ ಕಿರುಕುಳ!
ಮಾರ್ವೆಲ್‌ನ ಜನಪ್ರಿಯ ಸೂಪರ್‌ಹೀರೋ ‘ಐರನ್ ಮ್ಯಾನ್’ ಮಾದರಿಯನ್ನು ಹೋಲುವ ಕೆಂಪು ಮತ್ತು ಚಿನ್ನದ ಬಣ್ಣದ ರೋಬೋಟ್ ಈ ಕೃತ್ಯ ಎಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲೋನ್ ಪೊಲೀಸ್ ಇಲಾಖೆಯ ವಕ್ತಾರರ ಪ್ರಕಾರ, ಸುಮಾರು 1.2 ಮೀಟರ್ ಎತ್ತರದ ರೋಬೋಟ್ 16 ವರ್ಷದ ಬಾಲಕಿಯ ಹಿಂಭಾಗವನ್ನು ಮುಟ್ಟಿ, ಆಕೆಯ ವಿರುದ್ಧ ಅಸಭ್ಯ ಚಲನೆಗಳನ್ನು ಮಾಡಿದೆ ಎಂದು ಆರೋಪಿಸಲಾಗಿದೆ.
ಬಾಲಕಿ ತನ್ನ ಸ್ನೇಹಿತರೊಂದಿಗೆ ಫಾಸ್ಟ್‌ಫುಡ್ ರೆಸ್ಟೋರೆಂಟ್‌ನ ಹೊರಗೆ ನಿಂತಿದ್ದಾಗ, ಈ ರೋಬೋಟ್ ಹಿಂದಿನಿಂದ ಬಂದು ಅನುಚಿತವಾಗಿ ವರ್ತಿಸಿದೆ ಎನ್ನಲಾಗಿದೆ.
ಈ ರೋಬೋಟ್‌ನ 16 ವರ್ಷದ ಮಾಲೀಕ ಮತ್ತು ಆತನ 19 ವರ್ಷದ ಸಹಚರ ಘಟನೆಯನ್ನು ಚಿತ್ರೀಕರಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಬಾಲಕಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲು ರೋಬೋಟ್ ಅನ್ನು ನಿಯಂತ್ರಿಸಲಾಗಿತ್ತೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರೋಬೋಟ್ ವಶಕ್ಕೆ ಪಡೆದ ಪೊಲೀಸರು
ಘಟನೆಯ ಕುರಿತು ಮಾಹಿತಿ ಲಭಿಸಿದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿಗಳಿಗೆ ಸೇರಿದ ವೋಕ್ಸ್‌ವ್ಯಾಗನ್ ಕಾರಿನ ಡಿಕ್ಕಿಯಲ್ಲಿ ರೋಬೋಟ್ ಅನ್ನು ಪತ್ತೆಹಚ್ಚಿದ್ದಾರೆ. ಬಳಿಕ ಅದನ್ನು ವಶಕ್ಕೆ ಪಡೆದಿದ್ದಾರೆ.ಇದರ ಜೊತೆಗೆ, ಆರೋಪಿಗಳಿಗೆ ಸೇರಿದ ಎರಡು ಮೊಬೈಲ್ ಫೋನ್‌ಗಳನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ವಶಪಡಿಸಿಕೊಂಡ ರೋಬೋಟ್ ಬಿಳಿ ಬಣ್ಣದ ತೋಳಿಲ್ಲದ ಟಿ-ಶರ್ಟ್, ಕಪ್ಪು ಬಣ್ಣದ ಬಾಸ್ಕೆಟ್‌ಬಾಲ್ ಶಾರ್ಟ್ಸ್ ಧರಿಸಿತ್ತು.ಹಾಗೂ ಚಿನ್ನದ ಸರವನ್ನೂ ಹಾಕಲಾಗಿತ್ತು ಎಂದು ವರದಿಯಾಗಿದೆ.
ರೋಬೋಟ್ ಮಾಲೀಕನ ವಿರುದ್ಧವೂ ತನಿಖೆ
ಈ ರೋಬೋಟ್‌ನ 16 ವರ್ಷದ ಮಾಲೀಕ ಹಾಗೂ ಆತನ 19 ವರ್ಷದ ಸ್ನೇಹಿತ ಘಟನೆಯನ್ನು ಚಿತ್ರೀಕರಿಸಿ, ನಡೆಯುತ್ತಿದ್ದ ಘಟನೆಯ ಬಗ್ಗೆ ಮಾತನಾಡುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಈ ಆರೋಪಗಳು ಇನ್ನೂ ದೃಢಪಟ್ಟಿಲ್ಲ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶಂಕಿತರಿಗೆ ಸಂಬಂಧಿಸಿದ ವೋಕ್ಸ್‌ವ್ಯಾಗನ್ ಕಾರಿನ ಡಿಕ್ಕಿಯಲ್ಲಿ ರೋಬೋಟ್ ಇರುವುದನ್ನು ಪತ್ತೆಹಚ್ಚಿದ್ದಾರೆ. ಬಳಿಕ ರೋಬೋಟ್ ಮತ್ತು ಇಬ್ಬರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಲೈಂಗಿಕ ಕಿರುಕುಳದ ಶಂಕೆಯಡಿ ತನಿಖೆ
ಈ ಪ್ರಕರಣದ ಕುರಿತು ಕಲೋನ್ ಪೊಲೀಸರು ಲೈಂಗಿಕ ಕಿರುಕುಳದ ಶಂಕೆಯಡಿ ಕ್ರಿಮಿನಲ್ ತನಿಖೆ ಆರಂಭಿಸಿದ್ದಾರೆ.ರೋಬೋಟ್ ಅನ್ನು ಉದ್ದೇಶಪೂರ್ವಕವಾಗಿ ಬಾಲಕಿಗೆ ಕಿರುಕುಳ ನೀಡಲು ಬಳಸಲಾಗಿತ್ತೇ, ಘಟನೆಯನ್ನು ಚಿತ್ರೀಕರಿಸುವ ಉದ್ದೇಶವೇನಿತ್ತು ಎಂಬ ಅಂಶಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ರೋಬೋಟ್ ಮತ್ತು ಮೊಬೈಲ್ ಫೋನ್‌ಗಳನ್ನು ವಶದಲ್ಲಿಟ್ಟುಕೊಂಡಿದ್ದಾರೆ.
ತಂತ್ರಜ್ಞಾನ ಅಭಿವೃದ್ಧಿಯ ನಡುವೆ ರೋಬೋಟ್‌ಗಳ ಬಳಕೆ ಮತ್ತು ಅವುಗಳ ನಿಯಂತ್ರಣದ ಕುರಿತು ಈ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಾಲಕಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲು ರೋಬೋಟ್ ಅನ್ನು ಬಳಸಲಾಗಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿಗಳಿಗೆ ಸೇರಿದ ಎರಡು ಮೊಬೈಲ್ ಫೋನ್‌ಗಳನ್ನೂ ವಶಕ್ಕೆ ಪಡೆಯಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.