ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಬೀದಿ ಬದಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೊಹ್ಲಿ ಅವರಂತೆಯೇ ಇರುವ ಗಡ್ಡದ ಶೈಲಿ, ಹೇರ್ ಸ್ಟೈಲ್ ಹಾಗೂ ಮೈಕಟ್ಟು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಕೇವಲ ಹೋಲಿಕೆ ಮಾತ್ರವಲ್ಲದೆ ಮೈದಾನದಲ್ಲಿ ಬ್ಯಾಟ್ ಹಿಡಿದು ಅವರು ಆಡುತ್ತಿರುವ ರೀತಿ ಅಚ್ಚರಿ ಮೂಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧ ಸೆಲೆಬ್ರಿಟಿಗಳಂತೆ ಕಾಣುವ ಡಬಲ್ ಗ್ಯಾಂಗರ್ ಅಥವಾ ನಕಲು ವ್ಯಕ್ತಿಗಳ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳ ಬಳಗ ದೊಡ್ಡದಿರುವುದರಿಂದ ಇಂತಹ ವಿಡಿಯೋಗಳು ಕ್ಷಣಾರ್ಧದಲ್ಲಿ ಎಲ್ಲೆಡೆ ಹರಡಿಕೊಳ್ಳುತ್ತವೆ. ಭಾರತೀಯ ಕ್ರಿಕೆಟ್ನಲ್ಲಿ ಕೊಹ್ಲಿ ಹೊಂದಿರುವ ಜನಪ್ರಿಯತೆ ಹಾಗೂ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಇಷ್ಟಪಡುವ ಕೋಟ್ಯಂತರ ಅಭಿಮಾನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಕೆಲ ತಿಂಗಳ ಹಿಂದೆ ಕೂಡ ವಿರಾಟ್ ಕೊಹ್ಲಿ ಅವರಂತೆ ಕಾಣುವ ಮತ್ತೊಬ್ಬ ವ್ಯಕ್ತಿ ಟರ್ಫ್ ಕ್ರಿಕೆಟ್ ಆಡುತ್ತಿರುವ ದೃಶ್ಯ ವೈರಲ್ ಆಗಿತ್ತು. ಅಚ್ಚರಿಯೆಂದರೆ ಈ ವ್ಯಕ್ತಿಗಳು ನಿಜವಾದ ಕ್ರಿಕೆಟಿಗರಲ್ಲದಿದ್ದರೂ ಅವರ ಮೈಕಟ್ಟು ಹಾಗೂ ನೋಟ ಅಚ್ಚುಕಟ್ಟಾಗಿ ಕೊಹ್ಲಿ ಅವರನ್ನು ನೆನಪಿಸುವಂತಿರುತ್ತದೆ. ಈ ಹಿಂದೆ ಕೆಲವೊಮ್ಮೆ ಸ್ಟಾರ್ ಆಟಗಾರರಂತೆ ಕಾಣುವವರ ವೀಡಿಯೊಗಳು ಇಂಟರ್ನೆಟ್ ನಲ್ಲಿ ಸದ್ದು ಮಾಡಿದ್ದು, ಪ್ರಸ್ತುತ ಈ ವಿಡಿಯೋ ಕೂಡ ಕ್ರಿಕೆಟ್ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.