LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿ: ವೃಂದ ಹಂಚಿಕೆ ಮರುಪರಿಶೀಲಿಸಿ ಹೊಸ ಆಯ್ಕೆಪಟ್ಟಿ ಪ್ರಕಟಿಸಲು ಹೈಕೋರ್ಟ್ ಆದೇಶ!

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಯಲ್ಲಿ 2023ರ ಫೆಬ್ರವರಿ 1ರ ಸುತ್ತೋಲೆ ಅನ್ವಯಿಸಿ ಸಿದ್ಧಪಡಿಸಲಾಗಿದ್ದ ಆಯ್ಕೆಪಟ್ಟಿಯ ವೃಂದ ಹಂಚಿಕೆಯನ್ನು ಮರುಪರಿಶೀಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.

ಸಹಾಯಕ ಇಂಜಿನಿಯರ್ (AE), ವಿಶೇಷ ಮೀಸಲು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (RSI), ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

2023ರ ಸುತ್ತೋಲೆ ಪೂರ್ವಾನ್ವಯ ಅನ್ವಯಿಸುವುದು ಕಾನೂನುಬಾಹಿರ:

ರಾಜ್ಯ ಸರ್ಕಾರವು 2023ರ ಫೆಬ್ರವರಿ 1ರಂದು ಸುತ್ತೋಲೆ ಹೊರಡಿಸಿ ಸಂವಿಧಾನದ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮೀಸಲಾತಿ ನಿಯಮಗಳಲ್ಲಿ ಬದಲಾವಣೆ ತಂದಿತ್ತು. ಆದರೆ, ಈ ಸುತ್ತೋಲೆ ಹೊರಡಿಸುವುದಕ್ಕಿಂತ ಮುಂಚೆಯೇ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆ ಆರಂಭಿಸಲಾಗಿದ್ದ ಹಳೆಯ ನೇಮಕಾತಿಗಳಿಗೂ ಹೊಸ ಸುತ್ತೋಲೆಯನ್ನು ಅನ್ವಯಿಸಿರುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆಯಾ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಜಾರಿಯಲ್ಲಿದ್ದ ನಿಯಮಾವಳಿಗಳ ಆಧಾರದಲ್ಲೇ ವೃಂದಗಳ (Cadre) ಹಂಚಿಕೆ ಮಾಡಬೇಕು ಎಂದು ಪೀಠ ತಿಳಿಸಿದೆ.

ಅಭ್ಯರ್ಥಿಗಳ ಅಂಕ, ಅರ್ಹತೆ ಬದಲಿಸುವಂತಿಲ್ಲ:

ಇದೇ ವೇಳೆ ನ್ಯಾಯಾಲಯವು ಮತ್ತೊಂದು ಸ್ಪಷ್ಟನೆಯನ್ನು ನೀಡಿದ್ದು, ಈಗಾಗಲೇ ಪೂರ್ಣಗೊಂಡಿರುವ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳು ಮತ್ತು ಅವರ ಅರ್ಹತೆಯನ್ನು ಯಾವುದೇ ಕಾರಣಕ್ಕೂ ಮರುಪರಿಶೀಲಿಸುವಂತಿಲ್ಲ. ಕೇವಲ ಅಭ್ಯರ್ಥಿಗಳಿಗೆ ವೃಂದಗಳನ್ನು (ಕ್ಯಾಡರ್) ಹಂಚಿಕೆ ಮಾಡಿರುವ ವಿಧಾನವನ್ನು ಮಾತ್ರ ಹಳೆಯ ನಿಯಮಾವಳಿಗಳಿಗೆ ಅನುಗುಣವಾಗಿ ಮರುಪರಿಶೀಲಿಸಿ ಪರಿಷ್ಕೃತ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.

ಹೈಕೋರ್ಟ್‌ನ ಈ ತೀರ್ಪಿನಿಂದಾಗಿ ನೇಮಕಾತಿ ನಿರೀಕ್ಷೆಯಲ್ಲಿದ್ದ ಕಲ್ಯಾಣ ಕರ್ನಾಟಕ ಹಾಗೂ ಇತರ ಭಾಗಗಳ ಸಾವಿರಾರು ಅರ್ಹ ಅಭ್ಯರ್ಥಿಗಳಿಗೆ ನಿರಾಳತೆ ಸಿಕ್ಕಂತಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪ್ರೇಮದ ಊರಲಿ’ ಚಿತ್ರದ ಟಿವಿ ಹಾಗೂ OTT ಪ್ರಸಾರ ಹಕ್ಕುಗಳ ಕುರಿತು ಚಿತ್ರ ತಂಡದಿಂದ ಅಧಿಕೃತ ಸ್ಪಷ್ಟನೆಮುಂದಿನ ವಾರ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರು, ಕೇಂದ್ರದ ಅಧಿಕಾರಿಗಳ ಸಭೆ: ಸಿಎಂ ಡಿ ಕೆ ಶಿವಕುಮಾರ್BREAKING: ಕೊಡಗಿನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ: ತೀರ್ಥರೂಪಿಣಿಯಾಗಿ 'ಕಾವೇರಿ ಮಾತೆ' ದರ್ಶನ | Talakaveriಮಾಯಾ ಜಿಂಕೆಯಂತೆ ಬಣ್ಣ ಬದಲಿಸುತ್ತಾ ಮಾರುಕಟ್ಟೆಗೆ ಲಗ್ಗೆ ಇಟ್ಟ ರಾಯಲ್ ಎನ್ ಫೀಲ್ಡ್: ಕ್ಲಾಸಿಕ್ 650 ಹೈಪರ್‌ಶಿಫ್ಟ್ ಎಡಿಷನ್ ಬಿಡುಗಡೆನೀವು ಅನಾರೋಗ್ಯದಿಂದ ಬಳಲುತ್ತೀದ್ದೀರಾ? ಈ ಮಂತ್ರ ಪಠಿಸಿ ನೋಡಿ, ಆರೋಗ್ಯ ವೃದ್ಧಿ ಗ್ಯಾರಂಟಿBREAKING: ವಿಧಾನ ಪರಿಷತ್ ಚುನಾವಣೆ ಹಿನ್ನಲೆ: ಅ.23ರಂದು ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರುಸಿದ್ದರಾಮಯ್ಯ ಅವರೇ ನಿಮ್ಮ ರಕ್ತ ಕುದಿಯುತ್ತಿಲ್ವಾ?: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಿಸಲು ನಿರ್ಧಾರ: ಸಚಿವ ಟಿ.ರಘುಮೂರ್ತಿರಾಜ್ಯ ಸರ್ಕಾರದಿಂದ 8 IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ | IAS Officer Transferಸಾಗರದಲ್ಲಿ ಶೇ.60 ಕನ್ನಡ ನಾಮಫಲಕ ಕಡ್ಡಾಯಕ್ಕೆ ಜಮೀಲ್ ಸಾಗರ್ ಆಗ್ರಹ: ಎಸಿಗೆ ಮನವಿ