LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಗರದಲ್ಲಿ ತಹಶೀಲ್ದಾರ್ ದೂರವಿಟ್ಟು ಬನ್ನಿ ಸಂಪ್ರದಾಯ ಆಚರಣೆ: ಡಾ.ಪ್ರತಿಭಾ.ಆರ್ ಕಣ್ಣೀರು?

ಸಾಗರ: ಇಡೀ ಊರೇ ಒಟ್ಟಾಗಿ ವಿಜಯದ ಸಂಕೇತವಾಗಿ ಬನ್ನಿ ಮುಡಿಯುವ ಸಂಭ್ರಮದ ಕ್ಷಣವದು. ಆದರೆ, ಅದೇ ಸಂಭ್ರಮದ ನಡುವೆ ಇಡೀ ತಾಲೂಕಿನ ಸರ್ವೋಚ್ಚ ದಂಡಾಧಿಕಾರಿಯೊಬ್ಬರು ಅಸಹಾಯಕರಾಗಿ ಮೂಲೆಗುಂಪಾಗಿ ನಿಂತು ಕಣ್ಣೀರಿಟ್ಟ ಘಟನೆ ಸಾಗರದ ದಸರಾ ಆಚರಣೆಯಲ್ಲಿ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.

ಸಾಂವಿಧಾನಿಕ ಹುದ್ದೆಯಲ್ಲಿದ್ದರೂ ಕೇವಲ ‘ಮಹಿಳೆ’ ಎಂಬ ಕಾರಣಕ್ಕೆ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರನ್ನು ಬನ್ನಿ ಕಡಿಯುವ ಪರಂಪರೆಯಿಂದ ಬಲವಂತವಾಗಿ ಹೊರಗಿಡಲಾಗಿದೆ ಎಂಬ ಆರೋಪ ಭಾರಿ ಸಂಚಲನ ಮೂಡಿಸಿದೆ.

​ಸಂಭ್ರಮದ ಕಣ್ಮಣಿಯಾಗಬೇಕಿದ್ದ ಅಧಿಕಾರಿ ಮೂಲೆಗುಂಪು

​ದಶಕಗಳಿಂದ ನಡೆದುಕೊಂಡು ಬಂದಿರುವ ಪರಂಪರೆಯಂತೆ ಸಾಗರ ತಾಲೂಕಿನಲ್ಲಿ ದಸರಾ ಪ್ರಯುಕ್ತ ಸೀಮೋಲ್ಲಂಘನ ನೆರವೇರಿಸಿ, ಬನ್ನಿ ಕಡಿಯುವ ಧಾರ್ಮಿಕ ವಿಧಿಯ ಗೌರವ ಸಾಗರದ ತಹಶೀಲ್ದಾರ್‌ಗೆ ಸಲ್ಲುತ್ತಿತ್ತು. ಆದರೆ ಈ ಬಾರಿ ಆ ಹುದ್ದೆಯಲ್ಲಿದ್ದವರು ಡಾ. ಪ್ರತಿಭಾ. ಎಲ್ಲಾ ಸಿದ್ಧತೆಗಳ ನಡುವೆಯೂ, ಕೊನೆಯ ಕ್ಷಣದಲ್ಲಿ "ಮಹಿಳೆ ಈ ಶಾಸ್ತ್ರ ಮಾಡಬಾರದು" ಎಂಬ ಅಲಿಖಿತ ಕಂದಾಚಾರದ ನೆಪವೊಡ್ಡಿ ಅವರನ್ನು ಪಕ್ಕಕ್ಕೆ ಸರಿ, ಅವರ ಬದಲಾಗಿ ಉಪವಿಭಾಗಾಧಿಕಾರಿ (ಎಸಿ) ವೀರೇಶ್ ಕುಮಾರ್ ಅವರ ಕೈಯಿಂದ ವಿಧಿವಿಧಾನಗಳನ್ನು ನೆರವೇರಿಸಲಾಯಿತು ಎನ್ನಲಾಗಿದೆ.

​ಪಕ್ಕದ ಊರಲ್ಲಿ ಸಿಕ್ಕ ಮನ್ನಣೆ ಸಾಗರದಲ್ಲಿ ಸಿಗಲಿಲ್ಲವೇಕೆ?

​ಹೆಣ್ಣು ಶಕ್ತಿಯ ವಿರಾಟ ರೂಪವಾದ ದುರ್ಗೆಯನ್ನು ನವರಾತ್ರಿಯ ಒಂಬತ್ತು ದಿನ ಆರಾಧಿಸುವ ನಾಡಿನಲ್ಲಿ, ಹೆಣ್ಣೊಬ್ಬಳಿಗೆ ಇಂತಹ ಅಪಮಾನವಾಗಿದ್ದು ವಿಪರ್ಯಾಸ. ಕಳೆದ ವರ್ಷವಷ್ಟೇ ಪಕ್ಕದ ಹೊಸನಗರ ತಾಲೂಕಿನಲ್ಲಿ ಮಹಿಳಾ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರೇ ಖುದ್ದಾಗಿ ನಿಂತು ಅತ್ಯಂತ ಯಶಸ್ವಿಯಾಗಿ ಬನ್ನಿ ಸಂಪ್ರದಾಯವನ್ನು ನೆರವೇರಿಸಿದ್ದರು. ಅಲ್ಲಿ ಸಾಧ್ಯವಾಗಿದ್ದು ಸಾಗರದಲ್ಲಿ ಏಕೆ ಸಾಧ್ಯವಾಗಲಿಲ್ಲ? ಎಂಬುದು ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ.

​ಕಣ್ಣೀರಾದ ತಹಶೀಲ್ದಾರ್, ಸಾಕ್ಷಿಯಾದ ಜನತೆ

​ತಮ್ಮ ಕಣ್ಣೆದುರೇ ಹಳೆಯ ಸಂಪ್ರದಾಯವನ್ನು ಮುರಿದು, ಅಧಿಕಾರದಲ್ಲಿದ್ದರೂ ಹೆಣ್ಣೆಂಬ ಕಾರಣಕ್ಕೆ ತಮ್ಮನ್ನು ಕಡೆಗಣಿಸಿದ ನೋವು ತಹಶೀಲ್ದಾರ್ ಡಾ. ಪ್ರತಿಭಾ ಅವರನ್ನು ತೀವ್ರವಾಗಿ ಘಾಸಿಗೊಳಿಸಿತು. ಸಮಾರಂಭದ ಸ್ಥಳದಲ್ಲೇ ಇದ್ದ ಅವರು ಗದ್ಗದಿತರಾಗಿ ಕಣ್ಣೀರೊರೆಸಿಕೊಂಡ ದೃಶ್ಯ ನೆರೆದಿದ್ದ ಸಾರ್ವಜನಿಕರ ಮನಕಲಕಿದೆ. ತಾಲೂಕಿನ ಆಡಳಿತ ಚುಕ್ಕಾಣಿ ಹಿಡಿದ ಒಬ್ಬ ದಕ್ಷ ಅಧಿಕಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಆದ ಈ ಅವಮಾನ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

​ಗೊಡ್ಡು ಸಂಪ್ರದಾಯವೋ, ತೆರೆಮರೆಯ ರಾಜಕೀಯ ಆಟವೋ?

​ಪ್ರತಿವರ್ಷ ಸಾಂಗವಾಗಿ ನಡೆಯುತ್ತಿದ್ದ ಅಧಿಕೃತ ಪರಂಪರೆಯನ್ನು ಈ ಬಾರಿ ಏಕಾಏಕಿ ಬದಲಾಯಿಸಿದ್ದೇಕೆ? ಇದು ಪುರುಷಪ್ರಧಾನ ವ್ಯವಸ್ಥೆಯ ಗೊಡ್ಡು ಸಂಪ್ರದಾಯದ ಪ್ರತಿಬಿಂಬವೋ ಅಥವಾ ಅಧಿಕಾರಿಯ ವಿರುದ್ಧ ನಡೆದ ವ್ಯವಸ್ಥಿತ ರಾಜಕೀಯ ಷಡ್ಯಂತ್ರವೋ ಎಂಬುದು ಸದ್ಯ ಸಾಗರದಲ್ಲಿ ಯಕ್ಷಪ್ರಶ್ನೆಯಾಗಿ ಉಳಿದಿದೆ. ಸಾಂವಿಧಾನಿಕ ಜವಾಬ್ದಾರಿ ಹೊತ್ತ ಮಹಿಳಾ ಅಧಿಕಾರಿಯೊಬ್ಬರಿಗೆ ಸಾರ್ವಜನಿಕವಾಗಿ ಇಂತಹ ಅನ್ಯಾಯವಾಗಿದ್ದರೆ, ಇನ್ನು ಜನಸಾಮಾನ್ಯ ಮಹಿಳೆಯರ ಸ್ಥಿತಿ ಏನು ಎಂಬ ಆಕ್ರೋಶದ ಧ್ವನಿ ಸಾರ್ವಜನಿಕ ವಲಯದಲ್ಲಿ ಮಾರ್ದನಿಸುತ್ತಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿ ಕುಟುಂಬಗಳಿಗೆ 2 ಕೋಟಿ ರೂ. ಪರಿಹಾರ ಘೋಷಿಸಿದ ಸಿಎಂ ರೇವಂತ್ ರೆಡ್ಡಿಸಾಗರದಲ್ಲಿ ತಹಶೀಲ್ದಾರ್ ದೂರವಿಟ್ಟು ಬನ್ನಿ ಸಂಪ್ರದಾಯ ಆಚರಣೆ: ಡಾ.ಪ್ರತಿಭಾ.ಆರ್ ಕಣ್ಣೀರು?ಷೇರುಪೇಟೆಯಲ್ಲಿ ದಿಢೀರ್ ಯು-ಟರ್ನ್! ಕೇವಲ 245 ನಿಮಿಷಗಳಲ್ಲಿ ಹೂಡಿಕೆದಾರರಿಗೆ ₹8.78 ಲಕ್ಷ ಕೋಟಿ ನಷ್ಟ!ತಂದೆಯ ತ್ಯಾಗದಿಂದ ಮಗನಿಗೆ ಮರುಜನ್ಮ ; KBC ಸ್ಪರ್ಧಿಯ ನೋವಿನ ಕಥೆ ಕೇಳಿ ಭಾವುಕರಾದ ಅಮಿತಾಭ್ ಬಚ್ಚನ್..!ರೀಲ್ಸ್‌ ಹುಚ್ಚಾಟ.! ಸಮುದ್ರದ ಅಲೆಗಳ ನಡುವೆ ಮಗು ಸಿಲುಕಿದರೂ ರೀಲ್ಸ್‌ ಮಾಡುತ್ತಿದ್ದ ದಂಪತಿ! ವಿಡಿಯೋ ವೈರಲ್‌ನಾಳೆಯಿಂದ ಐದು ದಿನ ಸಾಗರದಲ್ಲಿ ಮಲೆನಾಡ ಸುಗ್ಗಿ ಮತ್ತು ಕೃಷಿ ಮೇಳ ಆಯೋಜನೆ: ಆಪ್ಸ್ ಕೋಸ್ ಅಧ್ಯಕ್ಷ ಇಂದೂಧರ ಗೌಡಪ್ರಿಯಕರನ ವ್ಯಾಮೋಹಕ್ಕೆ ಅವಳಿ ಮಕ್ಕಳು ಬಲಿ ! ಲವರ್ ಜೊತೆ ಸೇರಿ ಕರುಳ ಕುಡಿಗಳನ್ನೇ ಕೊಂದ ತಾಯಿಜಿಯೋ IPO ಇತಿಹಾಸ ಸೃಷ್ಟಿ! ಒಂದೇ ದಿನ 5 ದಾಖಲೆ; ₹30,213 ಕೋಟಿ ಷೇರು ಕೊಡುಗೆಗೆ ಭರ್ಜರಿ ಬೇಡಿಕೆಒಮಾನ್ ಕಡಲತೀರದಲ್ಲಿ ಅಪರೂಪದ ಗುಲಾಬಿ ಬಣ್ಣದ ಡಾಲ್ಫಿನ್‌ಗಳು ಪ್ರತ್ಯಕ್ಷ: ನೀಲಿ ನೀರಿನಲ್ಲಿ ಜಲವಿಹಾರದ ವಿಡಿಯೋ ವೈರಲ್ಮೆಕ್ಕಾ ಮಸೀದಿಯಲ್ಲಿ ಕಿಸ್ ಮಾಡಿದ್ದಕ್ಕೆ ಗಲ್ಲುಶಿಕ್ಷೆಯೇ? ಇಬ್ಬರು ಬಾಂಗ್ಲಾದೇಶಿಯರ ಸಾವು ಜಾಗತಿಕ ಆಕ್ರೋಶಕ್ಕೆ ಕಾರಣ!