LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಖ್ಯಾತ ಕವಯತ್ರಿ ಗೊರೂರು ಪಂಕಜಗೆ ಪ್ರತಿಷ್ಠಿತ 'ಕೈಯ್ಯಾರ ಕಿಞ್ಞಣ್ಣ ರೈ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ' ಪ್ರದಾನ

ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಸಂಘಟಿತ ಪ್ರಯತ್ನಗಳ ಅಗತ್ಯವಿದೆ ಎಂದು ಸಮಾಜ ಸೇವಕ ಶ್ರೀನಿವಾಸ ಬಹುದ್ದೂರ್ ಅಭಿಪ್ರಾಯಪಟ್ಟಿದ್ದಾರೆ. ಕಾಸರಗೋಡು ದಸರಾ ಮಹೋತ್ಸವದ ಪ್ರಯುಕ್ತ ಪಾಂಗೋಡಿನ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕೋತ್ಸವ ಹಾಗೂ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸಲು ಕನ್ನಡಪರ ಸಂಘಟನೆಗಳು ಮತ್ತು ಸಾಹಿತ್ಯಿಕ ವೇದಿಕೆಗಳು ನಿರಂತರವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಡಾ. ಎಂ. ಜಿ. ಆರ್. ಅರಸು ಮಾತನಾಡಿ, ಇಂತಹ ಕವಿ ಸಮ್ಮೇಳನಗಳು ಕೇವಲ ಕವಿತೆ ವಾಚನಕ್ಕೆ ಸೀಮಿತವಾಗದೆ, ಗಡಿಭಾಗದ ಕನ್ನಡಿಗರ ಭಾವನೆಗಳನ್ನು ಒಗ್ಗೂಡಿಸುವ ಮತ್ತು ಮಾತೃಭಾಷೆಯ ಮೇಲಿನ ಅಭಿಮಾನವನ್ನು ಗಟ್ಟಿಗೊಳಿಸುವ ಮಹತ್ವದ ಕೊಂಡಿಯಾಗಬೇಕು ಎಂದು ಆಶಿಸಿದರು.

ಗೊರೂರು ಪಂಕಜ ಅವರಿಗೆ ಗೌರವ ಸಮರ್ಪಣೆ

ಸಮಾರಂಭದಲ್ಲಿ ಬೆಂಗಳೂರಿನ ಖ್ಯಾತ ಕವಯತ್ರಿ ಗೊರೂರು ಪಂಕಜ ಅವರಿಗೆ ಪ್ರತಿಷ್ಠಿತ ‘ನಾಡೋಜ ಡಾ. ಕೈಯ್ಯಾರ ಕಿಞ್ಞಣ್ಣ ರೈ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗಡಿಪ್ರದೇಶಗಳಲ್ಲಿ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಾಷಾ ಸಂಸ್ಕೃತಿಯನ್ನು ರಕ್ಷಿಸಲು ಹಾಗೂ ಕನ್ನಡಿಗರ ಸ್ವಾಭಿಮಾನವನ್ನು ಎತ್ತಿಹಿಡಿಯಲು ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಜೊತೆಗೆ, ಕಾಸರಗೋಡಿನಲ್ಲಿ ತಮ್ಮ ನಿವಾಸವನ್ನೇ ಕನ್ನಡ ಭವನವನ್ನಾಗಿಸಿ, ನಾಡಿನ ಕನ್ನಡಿಗರಿಗೆ ಆಶ್ರಯ ನೀಡುತ್ತಾ ನಿರಂತರ ಭಾಷಾ ಸೇವೆ ಸಲ್ಲಿಸುತ್ತಿರುವ ಡಾ. ವಾಮನರಾವ್ ಬೇಕಲ್ ಅವರ ನಿಸ್ವಾರ್ಥ ಕಾಯಕವನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಡಾ. ವಾಮನರಾವ್ ಬೇಕಲ್, ಜೆ. ಪಿ. ಅರಸ್, ಕವಿ ಜಯಪ್ಪ ಹೊನ್ನಾಳಿ, ಸೀತಾಲಕ್ಷ್ಮೀ ವರ್ಮಾ, ಸಂಧ್ಯಾರಾಣಿ ಟೀಚರ್ ಹಾಗೂ ವಸಂತ ಕೆರೆಮನೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆ ನೆಪದಲ್ಲಿ ಮತಾಂತರಕ್ಕೆ ಅವಕಾಶವಿಲ್ಲ! ಹೈಕೋರ್ಟ್ ಮಹತ್ವದ ಅಭಿಪ್ರಾಯಸುವರ್ಣ ಸಾಧನೆಯ ಬೆನ್ನಲ್ಲೇ ಭಾವುಕರಾದ ಶೀತಲ್ ದೇವಿ : ಸಾಂತ್ವನ ಹೇಳಿದ ಸಿಬ್ಬಂದಿರೈತರೇ ಗಮನಿಸಿ! ಪಿಎಂ ಕಿಸಾನ್ 24ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದೀರಾ? ಈಗಲೇ ಈ ಕೆಲಸ ಮಾಡಿ!ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಮಂಜೂರು ಮಾಡದ ರಾಜ್ಯ ಕಾಂಗ್ರೆಸ್ ಸರಕಾರ: ಸಿಎಂಗೆ HDK ಪತ್ರವಿದ್ಯಾರ್ಥಿವೇತನ, ಪ್ರೋತ್ಸಾಹಧನ ಮತ್ತು ವಿದ್ಯಾರ್ಥಿನಿಲಯ ಪ್ರವೇಶಾತಿಗೆ ಅರ್ಜಿ ಆಹ್ವಾನಖ್ಯಾತ ಕವಯತ್ರಿ ಗೊರೂರು ಪಂಕಜಗೆ ಪ್ರತಿಷ್ಠಿತ 'ಕೈಯ್ಯಾರ ಕಿಞ್ಞಣ್ಣ ರೈ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ' ಪ್ರದಾನಲಕ್ಷಾಧಿಪತಿಯಾಗುವ ಸ್ಕೀಮ್‌! ತಿಂಗಳಿಗೆ ₹6,000 ಠೇವಣಿ ಇಟ್ಟರೆ ಸಾಕು, ಕೈಗೆ ಸಿಗಲಿದೆ ₹4.28 ಲಕ್ಷ!ನಾಳೆ 'ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆ'ಗೆ ಆಗ್ರಹಿಸಿ ಮಂಡ್ಯದ 'ಗಣಂಗೂರು ಟೋಲ್ ಬಂದ್‌'ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆಪ್ರಯಾಣಿಕರಿಗೆ ಗುಡ್‌ನ್ಯೂಸ್: ನವೆಂಬರ್‌ನಿಂದ ಮುಂಬೈ-ಬೆಂಗಳೂರು ನಡುವೆ ಅತ್ಯಾಧುನಿಕ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭ!ರಾಜ್ಯದಲ್ಲಿ 'ಮಕ್ಕಳ ಶ್ರವಣ ದೋಷ ಮುಕ್ತ'ಕ್ಕೆ ಸರ್ಕಾರ ಮಹತ್ವದ ಹೆಜ್ಜೆ: 'ಆಲಿಸು ಕಂದಾ ಯೋಜನೆ' ಜಾರಿ!