LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಲ್ಲಿ ಕಲಾಸಾಗರ ಉತ್ಸವ: 'ಚಂದ್ರಗುತ್ತಿಯ ಚೆಲುವಾಂಬೆ' ಆಡಿಯೋ ಬಿಡುಗಡೆ!

ಬೆಂಗಳೂರು: ದಸರಾ ಹಬ್ಬದ ಸುಸಂದರ್ಭದಲ್ಲಿ ಕಲಾಸಾಗರ ರಂಗತಂಡದ ವತಿಯಿಂದ ನಗರದ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ 'ಕಲಾಸಾಗರ ಉತ್ಸವ' ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಇದೇ ವೇದಿಕೆಯಲ್ಲಿ 'ಚಂದ್ರಗುತ್ತಿಯ ಚೆಲುವಾಂಬೆ' ಭಕ್ತಿಗೀತೆಗಳ ಆಡಿಯೋ ಬಿಡುಗಡೆ ಹಾಗೂ ಮಹಿಳಾ ಕಲಾವಿದರಿಂದ ರಂಗಗೀತೆಗಳ ಗಾಯನ ಕಛೇರಿ ನಡೆಯಿತು.

ಪೋಸ್ಟರ್ ಬಿಡುಗಡೆಯೊಂದಿಗೆ ಕಾರ್ಯಕ್ರಮ ಉದ್ಘಾಟನೆ

ಖ್ಯಾತ ವೈದ್ಯರಾದ ಡಾ. ಆಂಜನಪ್ಪ ಅವರು 'ಚಂದ್ರಗುತ್ತಿಯ ಚೆಲುವಾಂಬೆ' ಭಕ್ತಿಗೀತೆಗಳ ಪೋಸ್ಟರ್ ಅನಾವರಣಗೊಳಿಸುವ ಮೂಲಕ ಸಮಾರಂಭಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ರಂಗಭೂಮಿ ಕಲಾವಿದರಾದ ದೊಡ್ಡರಾಮಯ್ಯ ಅವರು ವಹಿಸಿದ್ದರು. ವೇದಿಕೆಯಲ್ಲಿ ಚಿಂತಕರು ಹಾಗೂ ಕನ್ನಡಪರ ಹೋರಾಟಗಾರರಾದ ಡಾ. ಟಿ. ಗೋವಿಂದರಾಜು, ಕಲಾಪೋಷಕರಾದ ಧನಂಜಯ ಗೌಡ, 'ಹಸಿರೇ ಉಸಿರು' ವೇದಿಕೆಯ ಬೆಟ್ಟಹಲಸೂರು ಶ್ರೀನಿವಾಸಮೂರ್ತಿ ಹಾಗೂ ಪ್ರಗತಿಪರ ರೈತರು ಮತ್ತು ಕಲಾ ಸಂಘಟಕರಾದ ಬಿ.ಎಸ್. ರಾಜೇಗೌಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.

'ಚಂದ್ರಗುತ್ತಿಯ ಚೆಲುವಾಂಬೆ' ಭಕ್ತಿಗೀತೆಗಳ ಲೋಕಾರ್ಪಣೆ

ನಟ, ನಿರ್ದೇಶಕ ಹಾಗೂ ಬರಹಗಾರರಾದ ಮಹೇಶ್ ಸಾಗರ್ (ಮಹಾಬಲೇಶ್ವರ) ಅವರ ಸಾಹಿತ್ಯ ರಚನೆಯಲ್ಲಿ ಮೂಡಿಬಂದಿರುವ, ಚಂದ್ರಗುತ್ತಿ ದೇವಿಯ ಮಹಿಮೆಯನ್ನು ಸಾರುವ 'ಚಂದ್ರಗುತ್ತಿಯ ಚೆಲುವಾಂಬೆ' ಭಕ್ತಿಗೀತೆಗಳ ಆಡಿಯೋ ಧ್ವನಿಸುರುಳಿಯನ್ನು ಸಮಾರಂಭದಲ್ಲಿ ಗಣ್ಯರು ಲೋಕಾರ್ಪಣೆ ಮಾಡಿದರು.

ಮಹಿಳಾ ತಂಡದಿಂದ ರಂಗಗೀತೆಗಳ ರಸದೌತಣ

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಾಗಡಿ ತಾಲ್ಲೂಕಿನ ಕುದೂರಿನ 'ಮಾರುತಿ ಮಹಿಳಾ ನಾಟಕ ತಂಡ'ದ ವತಿಯಿಂದ ಪೌರಾಣಿಕ ರಂಗಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಮಹಿಳಾ ಕಲಾವಿದರೇ ಸುಶ್ರಾವ್ಯವಾಗಿ ಹಾಡಿದ ಪೌರಾಣಿಕ ನಾಟಕಗಳ ರಂಗಗೀತೆಗಳು ಸಭಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿ, ಸಾಂಸ್ಕೃತಿಕ ರಸದೌತಣವನ್ನು ಉಣಬಡಿಸಿದವು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮತ್ತೆ ಬಾಂಬ್ ಭೀತಿ; ಮಹಿಳೆಯರ ಶೌಚಾಲಯದಲ್ಲಿ ಬೆದರಿಕೆ ಪತ್ರ ಪತ್ತೆ!ಶೇ.98.49ರಷ್ಟು ಗೃಹ ಜ್ಯೋತಿ ಸಮೀಕ್ಷೆ ಪೂರ್ಣ: ಅ.31ಕ್ಕೆ ಮುಕ್ತಾಯ, ಗಡುವು ವಿಸ್ತರಣೆ ಇಲ್ಲ'ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2027' ನಲ್ಲಿ ಭಾಗವಹಿಸಿ: ಪೋಲೆಂಡ್ ಗೆ ಸಿಎಂ ಡಿ ಕೆ ಶಿವಕುಮಾರ್ ಆಹ್ವಾನಶಿವಮೊಗ್ಗ ದಸರಾ ಆನೆ ಘಟನೆ: ವೈಜ್ಞಾನಿಕ ವರದಿ ಬಳಿಕ ಮುಂದಿನ ಕ್ರಮ: ಸಚಿವ ಮಧು ಬಂಗಾರಪ್ಪಬೆಂಗಳೂರಲ್ಲಿ ಕಲಾಸಾಗರ ಉತ್ಸವ: 'ಚಂದ್ರಗುತ್ತಿಯ ಚೆಲುವಾಂಬೆ' ಆಡಿಯೋ ಬಿಡುಗಡೆ!ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ: ‘ಶೌರ್ಯ’ ಕಮಾಂಡೋಗಳನ್ನು ನಿಯೋಜಿಸಲು ಕೇಂದ್ರದ ಸಿದ್ಧತೆ!ನಿಗಮ-ಮಂಡಳಿ ಸ್ಥಾನ ನಿರೀಕ್ಷೆಯಲ್ಲಿದ್ದವರಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಗುಡ್ ನ್ಯೂಸ್BREAKING: ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿBREAKING : ಷೇರುಪೇಟೆಯಲ್ಲಿ ರಕ್ತಪಾತ! ಸೆನ್ಸೆಕ್ಸ್‌ 1,200ಕ್ಕೂ ಹೆಚ್ಚು ಅಂಕ ಕುಸಿತ; ನಿಫ್ಟಿ ಇಳಿಕೆಗೆ 5 ಕಾರಣಗಳು9 ಲಕ್ಷ ಗೋಮಾತೆಗಳ ರಕ್ಷಣೆಯ ಹೊಣೆ ಹೊತ್ತ ಅನಂತ್ ಅಂಬಾನಿ! ದಿನವೂ 6 ಹಸುಗಳಿಗೆ ಮಸಾಜ್; ವಿಡಿಯೋ ವೈರಲ್ |WATCH