LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶೇ.98.49ರಷ್ಟು ಗೃಹ ಜ್ಯೋತಿ ಸಮೀಕ್ಷೆ ಪೂರ್ಣ: ಅ.31ಕ್ಕೆ ಮುಕ್ತಾಯ, ಗಡುವು ವಿಸ್ತರಣೆ ಇಲ್ಲ

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಗೆ ನೀಡಿರುವ ಗಡುವು ಅಕ್ಟೋಬರ್‌ 31ಕ್ಕೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಗ್ರಾಹಕರು ಅಗತ್ಯ ದಾಖಲಾತಿಗಳನ್ನು ಬೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಸಲ್ಲಿಸಲು ಬೆಸ್ಕಾಂ ವಿನಂತಿಸಿದೆ.

ಕಳೆದ ಮೂರುವರೆ ತಿಂಗಳಿನಿಂದ ನಡೆಯುತ್ತಿರುವ ಸಮೀಕ್ಷೆಯಲ್ಲಿ ಮನೆಗೆ ಬೀಗ ಹಾಕಿರುವ, ಮನೆ ಖಾಲಿ ಇರುವ ಹಾಗೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ಬೆಸ್ಕಾಂ ಕಚೇರಿಗೆ ತೆರಳಿ ದಾಖಲಾತಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದ್ದು, ಗಡುವಿನೊಳಗೆ ದಾಖಲಾತಿ ಸಲ್ಲಿಸಲು ಬೆಸ್ಕಾಂ ಮನವಿಮಾಡಿದ್ದು, ದಾಖಲಾತಿ ಸಲ್ಲಿಸಲು ಇದು ಕೊನೆಯ ಅವಕಾಶ ಎಂದು ಸ್ಪಷ್ಟಪಡಿಸಿದೆ.

ಬೆಸ್ಕಾಂನ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಯ ಗ್ರಾಹಕರು ಸೇರಿದಂತೆ ಒಟ್ಟು 7429773 ಲಕ್ಷ ಗ್ರಾಹಕರು ಗೃಹ ಜ್ಯೋತಿ  ಫಲಾನುಭವಿಗಳಿದ್ದು, ಈ ಪೈಕಿ 7317687 ಲಕ್ಷ ಗ್ರಾಹಕರ ಸಮೀಕ್ಷೆ (ಶೇ. 98.49) ಅಕ್ಟೋಬರ್‌ 22ಕ್ಕೆ ಪೂರ್ಣಗೊಂಡಿದೆ.

ಸಮೀಕ್ಷೆ ಸಂದರ್ಭದಲ್ಲಿ ಬೀಗ ಹಾಕಿರುವ, ಖಾಲಿ ಇರುವ ಮನೆಗಳಿಗೆ ಬೆಸ್ಕಾಂ ಸಿಬ್ಬಂದಿ ಮೂರು ಬಾರಿ ಭೇಟಿ ನೀಡಿದ್ದು, ಈ ವರ್ಗಗಳ ಗ್ರಾಹಕರ ಮೊಬೈಲ್‌ ಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಸಂದೇಶವನ್ನು ಕೂಡ ಕಳುಹಿಸಲಾಗಿತ್ತು. ಇಂತಹ ಗ್ರಾಹಕರಿಗೆ ದಾಖಲಾತಿ ಸಲ್ಲಿಸಲು ಅಕ್ಟೋಬರ್‌ 31 ಕೊನೆಯ ದಿನಾಂಕವಾಗಿದ್ದು, ಗಡುವು ವಿಸ್ತರಣೆ ಇಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದ್ಯವರ್ಜನ ಶಿಬಿರಗಳಿಂದ ನೂರಾರು ಕುಟುಂಬಗಳಿಗೆ ನೆಮ್ಮದಿ: ಸಾಗರದ ತುಮರಿಯಲ್ಲಿ ಮಲ್ಲಿಕಾರ್ಜುನ ಹಕ್ರೆ ಅಭಿಪ್ರಾಯಟೋಲ್ ಕಲೆಕ್ಷನ್ ನಲ್ಲಿ ನೈಸ್ ಭಾರೀ ಅಕ್ರಮ; ಪಾಸ್ ಟ್ಯಾಗ್ ಅಳವಡಿಕೆಗೆ ಮುನ್ನ ಲೂಟಿ - HDKರಾಜಕೀಯಕ್ಕೆ ಸ್ಟಿಂಗ್‌ ಬಳಕೆ; ಸಿಎಂ ವರದಿಗೆ ಹೆಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮತ್ತೆ ಬಾಂಬ್ ಭೀತಿ; ಮಹಿಳೆಯರ ಶೌಚಾಲಯದಲ್ಲಿ ಬೆದರಿಕೆ ಪತ್ರ ಪತ್ತೆ!ಶೇ.98.49ರಷ್ಟು ಗೃಹ ಜ್ಯೋತಿ ಸಮೀಕ್ಷೆ ಪೂರ್ಣ: ಅ.31ಕ್ಕೆ ಮುಕ್ತಾಯ, ಗಡುವು ವಿಸ್ತರಣೆ ಇಲ್ಲ'ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2027' ನಲ್ಲಿ ಭಾಗವಹಿಸಿ: ಪೋಲೆಂಡ್ ಗೆ ಸಿಎಂ ಡಿ ಕೆ ಶಿವಕುಮಾರ್ ಆಹ್ವಾನಶಿವಮೊಗ್ಗ ದಸರಾ ಆನೆ ಘಟನೆ: ವೈಜ್ಞಾನಿಕ ವರದಿ ಬಳಿಕ ಮುಂದಿನ ಕ್ರಮ: ಸಚಿವ ಮಧು ಬಂಗಾರಪ್ಪಬೆಂಗಳೂರಲ್ಲಿ ಕಲಾಸಾಗರ ಉತ್ಸವ: 'ಚಂದ್ರಗುತ್ತಿಯ ಚೆಲುವಾಂಬೆ' ಆಡಿಯೋ ಬಿಡುಗಡೆ!ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ: ‘ಶೌರ್ಯ’ ಕಮಾಂಡೋಗಳನ್ನು ನಿಯೋಜಿಸಲು ಕೇಂದ್ರದ ಸಿದ್ಧತೆ!ನಿಗಮ-ಮಂಡಳಿ ಸ್ಥಾನ ನಿರೀಕ್ಷೆಯಲ್ಲಿದ್ದವರಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಗುಡ್ ನ್ಯೂಸ್