LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮದ್ಯವರ್ಜನ ಶಿಬಿರಗಳಿಂದ ನೂರಾರು ಕುಟುಂಬಗಳಿಗೆ ನೆಮ್ಮದಿ: ಸಾಗರದ ತುಮರಿಯಲ್ಲಿ ಮಲ್ಲಿಕಾರ್ಜುನ ಹಕ್ರೆ ಅಭಿಪ್ರಾಯ

ಸಾಗರ : ಕುಡಿತದ ಚಟಕ್ಕೆ ಬಲಿಯಾದವರನ್ನು ಸಮಾಜ ಗೌರವಿಸುವುದಿಲ್ಲ. ಅಂತಹ ವ್ಯಕ್ತಿಗಳನ್ನು ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತರನ್ನಾಗಿಸಿ, ಅವರ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವಂತೆ ಮಾಡಿದ ಕೀರ್ತಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದು ಸಾಗರ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿರಸಿ ವಿಭಾಗದ ಜಿಲ್ಲಾ ಸದಸ್ಯ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಾಗರ ತಾಲ್ಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶಿರಸಿ ವಿಭಾಗ, ತುಮರಿ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸಾಗರ ತಾಲ್ಲೂಕು ತುಮರಿ ವಲಯ ನವಜೀವನ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಶ್ರೀ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ 'ನವಜೀವನ ಸಮಿತಿ ಸದಸ್ಯರ ಸಾಧನಾ ಸಮಾವೇಶ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ: ಮಲ್ಲಿಕಾರ್ಜುನ ಹಕ್ರೆ

ಪೂಜ್ಯ ಡಾ. ಹೆಗ್ಗಡೆಯವರ ದಿವ್ಯ ಮಾರ್ಗದರ್ಶನ ಮತ್ತು ಶ್ರೇಷ್ಠ ಚಿಂತನೆಗಳ ಫಲವಾಗಿ ಇಂದು ಜನಜಾಗೃತಿ ವೇದಿಕೆಯಡಿ ಮದ್ಯವರ್ಜನ ಶಿಬಿರಗಳು ನಿರಂತರವಾಗಿ ನಡೆದು ನೂರಾರು ಮಂದಿಗೆ ಹೊಸ ಬದುಕು ಕಟ್ಟಿಕೊಡಲು ಸಾಧ್ಯವಾಗಿದೆ ಎಂದು ಹಕ್ರೆ ಕೊಂಡಾಡಿದರು. 

ಪ್ರಸ್ತುತ ಯುವ ಸಮುದಾಯವು ಡ್ರಗ್ಸ್, ಗಾಂಜಾ, ಅಫೀಮು ಹಾಗೂ ಮದ್ಯ ಸೇವನೆಯಂತಹ ಮಾರಕ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ತೀವ್ರ ಆತಂಕಕಾರಿ ಸಂಗತಿಯಾಗಿದೆ. ಇದಕ್ಕೆ ಪರಿಹಾರವಾಗಿ ಗ್ರಾಮಾಭಿವೃದ್ಧಿ ಯೋಜನೆಯು ಶಾಲಾ-ಕಾಲೇಜುಗಳಲ್ಲಿ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮಗಳ ಮೂಲಕ ಯುವಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಚಾರ. ದೇಶದ ಭವಿಷ್ಯವಾದ ಯುವಜನತೆಯನ್ನು ಸರಿದಾರಿಗೆ ತರುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಯುವಕರು ದುರ್ಜನರ ಸಹವಾಸದಿಂದ ದೂರವಿದ್ದು, ಸಜ್ಜನರ ಸಂಪರ್ಕ ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

news_1792755921_0_268.webp

ಕುಟುಂಬದ ನೆಮ್ಮದಿಯೇ ಗ್ರಾಮಾಭಿವೃದ್ಧಿ ಯೋಜನೆಯ ಗುರಿ: ಜಿಲ್ಲಾ ನಿರ್ದೇಶಕ ದಿನೇಶ್

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕ ದಿನೇಶ್ ಮಾತನಾಡಿ, ಮದ್ಯವ್ಯಸನದ ದಾಸರಾಗಿ ನಲುಗುತ್ತಿದ್ದ ವ್ಯಕ್ತಿಯಲ್ಲಿ ಸಂಸ್ಕಾರ ಬಿತ್ತಿ ಉತ್ತಮ ನಾಗರಿಕರನ್ನಾಗಿ ಪರಿವರ್ತಿಸುವ ಶಕ್ತಿ ಮದ್ಯವರ್ಜನ ಶಿಬಿರಗಳಿಗಿದೆ ಎಂದರು. 

ಕುಟುಂಬದ ಒಬ್ಬ ವ್ಯಕ್ತಿ ದುಶ್ಚಟಕ್ಕೆ ಬಲಿಯಾದರೂ ಅದು ಇಡೀ ಸಂಸಾರದ ವಿನಾಶಕ್ಕೆ ಕಾರಣವಾಗುತ್ತದೆ. ಅಂತಹವರನ್ನು ತಿದ್ದಿ ಸನ್ಮಾರ್ಗಕ್ಕೆ ತಂದು ಕುಟುಂಬದಲ್ಲಿ ನೆಮ್ಮದಿ ನೆಲೆಸುವಂತೆ ಮಾಡುವುದೇ ಯೋಜನೆಯ ಮೂಲ ಉದ್ದೇಶ. ಇಂದು ವ್ಯಸನಮುಕ್ತರಾಗಿ ನವಜೀವನ ಆರಂಭಿಸಿರುವವರ ಬದುಕಿನಲ್ಲಿ ಹೊಸ ಚೈತನ್ಯ ಮೂಡಿದೆ. ನವಜೀವನ ಸಮಿತಿಯ ಸದಸ್ಯರಿಗೆ ಕೃಷಿ ಹಾಗೂ ಸ್ವ-ಉದ್ಯೋಗ ಕೈಗೊಳ್ಳಲು ಯೋಜನೆ ವತಿಯಿಂದ ಆರ್ಥಿಕ ಸಹಕಾರ ಒದಗಿಸಲಾಗುತ್ತಿದ್ದು, ಸದಸ್ಯರು ಇದರ ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.

ಮಕ್ಕಳಿಗೆ ಪಾಲಕರೇ ಮಾದರಿಯಾಗಬೇಕು: ಪ್ರಸನ್ನ ಕೆರೆಕೈ

ರಾಜ್ಯ ಸಾಂಬಾರು ಮಂಡಳಿಯ ಸದಸ್ಯ ಪ್ರಸನ್ನ ಕೆರೆಕೈ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಬಡ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು. 

ಸಮಾಜದಲ್ಲಿ ಸತ್ಪ್ರಜೆಗಳನ್ನು ರೂಪಿಸಲು ಮೊದಲು ಕುಟುಂಬದಲ್ಲಿ ವ್ಯಕ್ತಿತ್ವ ನಿರ್ಮಾಣವಾಗಬೇಕು. ಪಾಲಕರು ತಮ್ಮ ನಡವಳಿಕೆಗಳ ಮೂಲಕ ಮಕ್ಕಳಿಗೆ ಆದರ್ಶಪ್ರಾಯರಾಗಬೇಕು ಹಾಗೂ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇರಿಸಿ ಅವರು ದುಶ್ಚಟಗಳ ದಾಸರಾಗದಂತೆ ನೋಡಿಕೊಳ್ಳಬೇಕು. ಧರ್ಮೋತ್ಥಾನ ಟ್ರಸ್ಟ್ ಮೂಲಕ ರಾಜ್ಯದ 200ಕ್ಕೂ ಹೆಚ್ಚು ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಭಜನಾ ಕಮ್ಮಟಗಳ ಆಯೋಜನೆಯ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುತ್ತಿರುವ ಕಾರ್ಯ ಮಹತ್ವದ್ದು ಎಂದು ಶ್ಲಾಘಿಸಿದರು.

ಶಿಕ್ಷಣದಿಂದ ಉಜ್ವಲ ಭವಿಷ್ಯ: ಜೆ.ಟಿ. ಸತ್ಯನಾರಾಯಣ

ಕೆ.ಡಿ.ಪಿ. ನಾಮನಿರ್ದೇಶಿತ ಸದಸ್ಯ ಜೆ.ಟಿ. ಸತ್ಯನಾರಾಯಣ ತುಮರಿ ಮಾತನಾಡಿ, ಬಡ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದಕ್ಕೆ ಆದ್ಯತೆ ನೀಡಬೇಕು. ಶಿಕ್ಷಣ ದೊರೆತಾಗ ಯೋಗ್ಯತೆ ತಾನಾಗಿಯೇ ಒಲಿಯುತ್ತದೆ. ದಾರಿ ತಪ್ಪಿದ ಮದ್ಯವ್ಯಸನಿಗಳಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದ್ದು, ಮದ್ಯವರ್ಜನ ಶಿಬಿರಗಳು ಆ ಕೊರತೆಯನ್ನು ನೀಗಿಸಿ ಅಸಂಖ್ಯಾತ ಕುಟುಂಬಗಳನ್ನು ರಕ್ಷಿಸಿವೆ ಎಂದು ಹೇಳಿದರು.

ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವಜೀವನ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಕರೂರು ವಹಿಸಿದ್ದರು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಶಿರಸಿ ವಿಭಾಗದ ಜಿಲ್ಲಾ ಉಪಾಧ್ಯಕ್ಷೆ ಕಸ್ತೂರಿ ಸಾಗರ್, ಸದಸ್ಯರಾದ ದೇವರಾಜ್ ಕುರುವರಿ, ಉಮೇಶ್, ರೂಪಾ ರಮೇಶ್, ಮುಖ್ಯ ಅತಿಥಿಗಳಾಗಿ ಶ್ರೀಧರ ಮೂರ್ತಿ ಅರಬಳ್ಳಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್. ಹೂವಣ್ಣ ಹುರಳಿ, ಶಾಂತವೇರಿ ಗೋಪಾಲಗೌಡ ರಂಗಮಂದಿರದ ಅಧ್ಯಕ್ಷ ಲೋಕಪಾಲ್ ಜೈನ್, ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ, ಉದ್ಯಮಿಗಳಾದ ಸಂತೋಷ್ ಕುಮಾರ್ ಶೆಟ್ಟಿ, ಅಣ್ಣಪ್ಪ ಆಚಾರ್ಯ ಹಾಗೂ ತಾಲ್ಲೂಕು ಯೋಜನಾಧಿಕಾರಿ ದಯಾನಂದ ಉಪಸ್ಥಿತರಿದ್ದರು.

ಬ್ರಾಹ್ಮಣ ಕೆಪ್ಪಿಗೆ ಒಕ್ಕೂಟದ ಅಧ್ಯಕ್ಷ ರಘುಪತಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿ, ಅಭಿಷೇಕ್ ವಂದಿಸಿದರು. ಸಮಾವೇಶದಲ್ಲಿ ವಲಯದ ಸೇವಾಪ್ರತಿನಿಧಿಗಳು, ಸಿಎಸ್‌ಸಿ ಸೇವಾದಾರರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ನವಜೀವನ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಗರದಲ್ಲಿ 'ಮಲೆನಾಡ ಸುಗ್ಗಿ ಮತ್ತು ಕೃಷಿ ಮೇಳ 2026'ಕ್ಕೆ ಅದ್ಧೂರಿ ಚಾಲನೆ: ರೈತರು ಸ್ವಾವಲಂಬಿಗಳಾಗಲು ಗಣ್ಯರ ಕರೆಇದರ ಬೇರನ್ನು ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ, ಅಡಗಿದ್ದ ನಿಧಿಯು ಗೋಚರಿಸುತ್ತೆಕಾರು-ಕ್ಯಾಂಟರ್ ಮುಖಾಮುಖಿ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು; ಮೂವರಿಗೆ ಗಾಯಅ.24ರಿಂದ 27ರವರೆಗೆ 585 ವಿವಿಧ ಹುದ್ದೆಗಳಿಗೆ 48,767 ಮಂದಿ ಪರೀಕ್ಷೆ: ಕೆಇಎ ಇಡಿ ಡಾ.ಹೆಚ್.ಪ್ರಸನ್ನಮಾನಸಿಕ-ದೈಹಿಕ ಬೆಳವಣಿಗೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗ ಪೂರಕ: ಶಾಸಕ ಗೋಪಾಲಕೃಷ್ಣ ಬೇಳೂರುSIR ಮೂಲಕ ದೇಶದಲ್ಲಿ ಹಿಟ್ಲರ್ ಆಡಳಿತಕ್ಕೆ ಹುನ್ನಾರ: ಸಾಗರದಲ್ಲಿ ಶಿವಾನಂದ ಕುಗ್ವೆ ಆಕ್ರೋಶHasanamba Temple: ಅ.29ರಿಂದ ಹಾಸನಾಂಬೆ ದರ್ಶನ ಆರಂಭ: ವಿವಿಐಪಿ, ಸಾಮಾನ್ಯ ಜನರ ದರ್ಶನಕ್ಕೆ ಪ್ರತ್ಯೇಕ ಸಮಯ ನಿಗದಿಮದ್ಯವರ್ಜನ ಶಿಬಿರಗಳಿಂದ ನೂರಾರು ಕುಟುಂಬಗಳಿಗೆ ನೆಮ್ಮದಿ: ಸಾಗರದ ತುಮರಿಯಲ್ಲಿ ಮಲ್ಲಿಕಾರ್ಜುನ ಹಕ್ರೆ ಅಭಿಪ್ರಾಯಟೋಲ್ ಕಲೆಕ್ಷನ್ ನಲ್ಲಿ ನೈಸ್ ಭಾರೀ ಅಕ್ರಮ; ಪಾಸ್ ಟ್ಯಾಗ್ ಅಳವಡಿಕೆಗೆ ಮುನ್ನ ಲೂಟಿ - HDKರಾಜಕೀಯಕ್ಕೆ ಸ್ಟಿಂಗ್‌ ಬಳಕೆ; ಸಿಎಂ ವರದಿಗೆ ಹೆಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲ