LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿವಿಧ ನೇಮಕಾತಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದ ಕೆಇಎ: ಇಲ್ಲಿದೆ ಡೀಟೆಲ್ಸ್

ಬೆಂಗಳೂರು: ಪೌರಾಡಳಿತ ನಿರ್ದೇಶನಾಲಯ, ಇಎಸ್ಐ, ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ನ.6, ನ.7 ಮತ್ತು ನ.14ರಂದು ನಿರ್ದಿಷ್ಟ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಪೌರಾಡಳಿತ ನಿರ್ದೇಶನಾಲಯದ ಎಲೆಕ್ಟ್ರೀಷಿಯನ್ ಗ್ರೇಡ್- 1 (3 ಹುದ್ದೆ) ಮತ್ರು ಗ್ರೇಡ್- 2 (5 ಹುದ್ದೆ) ಹುದ್ದೆಗಳಿಗೆ ನ.6ರಂದು ನಿರ್ದಿಷ್ಟ ಪತ್ರಿಕೆಯ ಲಿಖಿತ ಪರೀಕ್ಷೆ ಇರಲಿದೆ. ಇಎಸ್ಐ ನ ಫಾರ್ಮಸಿ ಅಧಿಕಾರಿ (11 ಹುದ್ದೆ) ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನರ್ಸಿಂಗ್ ಅಧಿಕಾರಿ (ಶುಶ್ರೂಷಾಧಿಕಾರಿ- 23 ಹುದ್ದೆ) ಹಾಗೂ ನರ್ಸಿಂಗ್ ಅಧಿಕಾರಿ (11) ಹುದ್ದೆಗಳಿಗೆ ನ.7ರಂದು ನಿರ್ದಿಷ್ಟ ಪತ್ರಿಕೆಯ ಪರೀಕ್ಷೆ ನಡೆಯಲಿದೆ.

ಪೌರಾಡಳಿತ ನಿರ್ದೇಶನಾಲಯದ ನೀರು ಸರಬರಾಜು ಆಪರೇಟರ್ (122 ಹುದ್ದೆ) ಹಾಗೂ ಸಹಾಯಕ ನೀರು ಸರಬರಾಜು ಆಪರೇಟರ್ (80 ಹುದ್ದೆ) ಹುದ್ದೆಗಳಿಗೆ ನಿರ್ದಿಷ್ಟ ಪತ್ರಿಕೆಯ ಪರೀಕ್ಷೆ ಅ.14ರಂದು ನಡೆಯಲಿದೆ. ಅ.14ರಂದು ಮಧ್ಯಾಹ್ನದ ನಂತರ ಈ ಎಲ್ಲ ಹುದ್ದೆಗಳಿಗೆ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
E20 ಪೆಟ್ರೋಲ್ ಈಗ 420 ಆಗಿದೆ! ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವ್ಯಂಗ್ಯಸಮಾನ ಅವಕಾಶ ಸಿಗುತ್ತಿಲ್ಲ: ಕೇಂದ್ರದ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿನವೆಂಬರ್ 12ಕ್ಕೆ ಒಟಿಟಿಗೆ ‘ಜೈಲರ್ 2’ ಚಿತ್ರ ! ಎಲ್ಲಿ ವೀಕ್ಷಿಸಬಹುದುಬ್ಲಿಂಕಿಟ್, ಜೆಪ್ಟೋ ಸೇರಿದಂತೆ 105 ಸಂಸ್ಥೆಗಳ ಆಹಾರ ಪರವಾನಗಿ ರದ್ದು; FDA ಮಹತ್ವದ ನಿರ್ಧಾರಭಾರತೀಯ ಸೈನಿಕರನ್ನು ಕೊಂಡಾಡಿದ ರಾಜ್ ನಾಥ್ ಸಿಂಗ್BREAKING : NCP ಹಿರಿಯ ನಾಯಕ ಶರದ್ ಪವಾರ್ ಆರೋಗ್ಯದಲ್ಲಿ ಚೇತರಿಕೆ ; ಆಸ್ಪತ್ರೆಯಿಂದ ಡಿಸ್ಚಾರ್ಜ್ |WATCH VIDEO₹1 ಲಕ್ಷದಲ್ಲಿ ಸೌರಶಕ್ತಿ ತ್ರಿಚಕ್ರ ವಾಹನ ನಿರ್ಮಿಸಿದ 17 ವರ್ಷದ ಬಾಲಕಮಗಳು ರಹಾ 4ನೇ ಬರ್ತ್‌ಡೇ ಆಚರಿಸಿದ ಆಲಿಯಾ-ರಣಬೀರ್: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಕ್ಯೂಟ್ ಫೋಟೋಗಳು!‘ಐ ಲವ್ ಯು’ ಎಂದು ಪ್ರೀತಿ ವ್ಯಕ್ತಪಡಿಸಿದ ಟಾಲಿವುಡ್ ನಟ: ವೈರಲ್ ಆಯ್ತು ಸಾಯಿ ದುರ್ಗಾ ತೇಜ್-ಕಿರನ್ ಎಂಗೇಜ್‌ಮೆಂಟ್ ಫೋಟೋ!ಕಮಲ್ ಹಾಸನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್; ಹೊಸ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ