LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೋಧ್ರಾ ರೈಲು ದುರಂತ; ಅಪರಾಧಿ ಇರ್ಫಾನ್ ಸಿರಾಜ್ ಪಾಡಾಗೆ ಜೀವಾವಧಿ ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2002ರ ಗೋಧ್ರಾ ರೈಲು ದುರಂತ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಇರ್ಫಾನ್ ಸಿರಾಜ್ ಪಾಡಾಗೆ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ವೈದ್ಯಕೀಯ ಆಧಾರದ ಮೇಲೆ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿದೆ. ಪಾಡಾ ಅವರ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ದ್ವಿಸದಸ್ಯ ಪೀಠವು ಈ ಆದೇಶವನ್ನು ಪ್ರಕಟಿಸಿದೆ. ಗಂಭೀರ ಕಾಯಿಲೆಗಳ ಕಾರಣದಿಂದ ಮಧ್ಯಂತರ ಬಿಡುಗಡೆ ಕೋರಿ ಇರ್ಫಾಅನ್ ಪಾಡಾ ಸಲ್ಲಿಸಿದ್ದ ಔಪಚಾರಿಕ ಮನವಿಯನ್ನು ನ್ಯಾಯಪೀಠ ಪರಿಗಣಿಸಿತು.

2002ರ ಫೆಬ್ರವರಿಯಲ್ಲಿ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ಘಟನೆಯು ಗುಜರಾತ್‌ನಾದ್ಯಂತ ವ್ಯಾಪಕ ಕೋಮು ಗಲಭೆಗಳಿಗೆ ಕಾರಣವಾಗಿತ್ತು. ಸುದೀರ್ಘ ವಿಚಾರಣೆಯ ನಂತರ ಪಾಡಾ ಹಾಗೂ ಇತರ ಹಲವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಬಂಧನವಾದಾಗಿನಿಂದ ಪಾಡಾ 18 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾನೆ.

ಅಲ್ಲದೇ ಅಪರಾಧಿ ಇರ್ಫಾನ್ ಸಿರಾಜ್ ಪಾಡಾ ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ನಿರಂತರ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. ಇದಲ್ಲದೆ, ಅತ ಈಗಾಗಲೇ 18 ವರ್ಷ 3 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ಮೇಲ್ಮನವಿ ಅರ್ಜಿಯ ಅಂತಿಮ ವಿಚಾರಣೆ ಇನ್ನೂ ಬಾಕಿ ಇರುವುದರಿಂದ, ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು.

ವಿಚಾರಣೆ ವೇಳೆ ಗುಜರಾತ್ ಸರ್ಕಾರದ ಪರ ವಕೀಲರು, “ಇದೊಂದು ಅತ್ಯಂತ ಗಂಭೀರ ಸ್ವರೂಪದ ಅಪರಾಧ ಪ್ರಕರಣವಾಗಿದೆ. ಅಪರಾಧಿಯು ರೈಲು ಬೋಗಿಯ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ್ದನು. ಆದರೂ ಅಪರಾಧಿಯು ಹೃದಯ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವುದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿರುವ ಕಾರಣ, ಮಾನವೀಯ ಹಾಗೂ ವೈದ್ಯಕೀಯ ಆಧಾರದ ಮೇಲೆ ಶಿಕ್ಷೆ ಅಮಾನತುಗೊಳಿಸಲು ಸರ್ಕಾರವು ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ್ದಾರೆ.

ಅಪರಾಧಿಯ ಆರೋಗ್ಯ ಸ್ಥಿತಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ವಿಧಿಸುವ ಕಠಿಣ ಷರತ್ತುಗಳಿಗೆ ಒಳಪಟ್ಟು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸೂಚಿಸಿದೆ. ಈ ಆದೇಶವು ಪ್ರಕರಣದಿಂದ ಖುಲಾಸೆಯಲ್ಲ, ಬದಲಾಗಿ ಮಧ್ಯಂತರ ಪರಿಹಾರವನ್ನು ಮಾತ್ರ ನೀಡುತ್ತದೆ. ಶಿಕ್ಷೆಯ ವಿರುದ್ಧದ ಅವರ ಮುಖ್ಯ ಮೇಲ್ಮನವಿಯ ಅಂತಿಮ ವಿಚಾರಣೆ ಬಾಕಿ ಇರುವವರೆಗೆ, ವಿಚಾರಣಾ ನ್ಯಾಯಾಲಯವು ವಿಧಿಸುವ ಕಠಿಣ ಷರತ್ತುಗಳಿಗೆ ಒಳಪಟ್ಟು ಪಾಡಾ ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಕೋರ್ಟ್ ಹೇಳಿದೆ.

2002ರ ಫೆಬ್ರವರಿ 27ರಂದು ಗುಜರಾತ್‌ನ ಗೋಧ್ರಾ ನಿಲ್ದಾಣದ ಬಳಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ದುರ್ಘಟನೆಯಲ್ಲಿ 59 ಮಂದಿ ಸಜೀವ ದಹನವಾಗಿದ್ದರು. ಈ ಪ್ರಕರಣದಲ್ಲಿ 2017ರಲ್ಲಿ ಗುಜರಾತ್ ಹೈಕೋರ್ಟ್ 11 ಮಂದಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು ಮತ್ತು 20 ಮಂದಿಯ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿಗಳು 2018ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ ‘ಲಕ್ಷ್ಮೀ ಪುತ್ರ’ ವಿಡಿಯೋ ಸಾಂಗ್; ”ಬರದಿಲ್ಲ ಕಣ ಹೋಗು ಮಾಮ” ಹಾಡಿಗೆ ಭರ್ಜರಿ ರೆಸ್ಪಾನ್ಸ್ಗೋಧ್ರಾ ರೈಲು ದುರಂತ; ಅಪರಾಧಿ ಇರ್ಫಾನ್ ಸಿರಾಜ್ ಪಾಡಾಗೆ ಜೀವಾವಧಿ ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ಅಂತಿಮ ಅವಧಿಯಲ್ಲಿ ದಿಟ್ಟ ರಕ್ಷಣಾತ್ಮಕ ಆಟವಾಡಿದ ಮಿಚೆಲ್ ಮತ್ತು ಫಿಲಿಪ್ಸ್; ಪಂದ್ಯ ಡ್ರಾ ಆದರೂ ನಾವು ಸೇಫ್ ಆದೆವು ಎಂದ ಟಾಮ್ ಲ್ಯಾಥಮ್ಸನ್ನಿ ಡಿಯೋಲ್ ಪುತ್ರನ ಜೊತೆ ಸಾರಾ ತೆಂಡೂಲ್ಕರ್ ಹಸೆಮಣೆ ಏರುತ್ತಾರಾ?; ಮದುವೆ ಗಾಸಿಪ್‌ಗಳಿಗೆ ತೆರೆ ಎಳೆದ ಆಪ್ತರುಮೈದಾನದಲ್ಲೇ ಕೆಎಲ್ ರಾಹುಲ್ ಬಳಿ ಕಿಸ್ ಕೇಳಿದ ರಿಷಭ್ ಪಂತ್; ಕನ್ನಡಿಗನ ರಿಯಾಕ್ಷನ್ ಹೇಗಿತ್ತು ನೋಡಿ, ವಿಡಿಯೋ ಸಖತ್ ವೈರಲ್ಪಾಕಿಸ್ತಾನ ಎ ಆಟಗಾರರ ಜೊತೆ ಮೈದಾನದಲ್ಲಿ ಕಿರಿಕ್; ಹರ್ಷಿತ್ ರಾಣಾ ಇನ್‌ಸ್ಟಾಗ್ರಾಮ್ ಖಾತೆಗೆ ನುಗ್ಗಿ ಕೆಟ್ಟದಾಗಿ ಟ್ರೋಲ್ ಮಾಡಿದ ಪಾಕ್ ಫ್ಯಾನ್ಸ್ಮೊಹಮ್ಮದ್ ಸಿರಾಜ್ ಕೈಬಿಟ್ಟಿದ್ದಕ್ಕೆ ಧಾರ್ಮಿಕ ತಾರತಮ್ಯದ ಆರೋಪ; ರಾಜಕೀಯ ವಿವಾದಕ್ಕೆ ನಾಯಕ ಶುಭಮನ್ ಗಿಲ್ ಖಡಕ್ ಸ್ಪಷ್ಟನೆಭಾರತ ಎ ವಿರುದ್ಧದ ಗೆಲುವನ್ನು ಕಿರಿಯರ ತಂಡಕ್ಕೆ ಅರ್ಪಿಸಿದ ಹಸನ್ ನವಾಜ್; ಏಷ್ಯಾ ಕಪ್ ಫೈನಲ್ ಸೋಲಿನ ನೋವಿನ ನಡುವೆ ಭಾವುಕ ಪೋಸ್ಟ್ವರ್ಷಗಳ ಕಾಲ ಭಾರತಕ್ಕೆ ಭೇಟಿ ನೀಡಲು ಹೆದರಿದ್ದ ಸೋಲೋ ಮಹಿಳಾ ಟ್ರಾವೆಲರ್: ದೆಹಲಿ, ಆಗ್ರಾ ಭೇಟಿ ಬಳಿಕ ‘ನಾನು ಭಾರತಕ್ಕೆ ಕ್ಷಮೆ ಕೇಳಲು ಬಯುಸುತ್ತೇನೆ’ ಎಂದ ಮಹಿಳೆ‘ರಾಮಾಯಣ’ದ ಸಂಗೀತಕ್ಕಾಗಿ 3 ವರ್ಷಗಳನ್ನು ಮೀಸಲಿಟ್ಟೆ, ಈ ಯೋಜನೆಗಾಗಿ 10-12 ಚಿತ್ರಗಳನ್ನು ಕೈಬಿಟ್ಟೆ: ಎ.ಆರ್.ರೆಹಮಾನ್ ಮಾಹಿತಿ