ಹಾಸ್ಯ ನಟ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಲಕ್ಷ್ಮೀ ಪುತ್ರ ಚಿತ್ರದ ಬರದಿಲ್ಲ ಕಣ ಹೋಗು ಮಾಮ ವಿಡಿಯೋ ಸಾಂಗ್ ಇದೀಗ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಎಪಿ ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅನ್ನಪೂರ್ಣ ಎಪಿ ಅರ್ಜುನ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ರವಿಕಿರಣ್ ಎಂ ಗೌಡ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.
ವಿಜಯ್ ಎಸ್ ಸ್ವಾಮಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಎಪಿ ಅರ್ಜುನ್ ಅವರೇ ಕಥೆ ಬರೆದಿದ್ದು, ಬಿಡುಗಡೆಯಾಗಿರುವ ಈ ವಿಶೇಷ ಹಾಡಿಗೂ ಸಾಹಿತ್ಯ ರಚಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯ ಈ ಗೀತೆಗೆ ಆಂಟನಿ ದಾಸನ್ ಮತ್ತು ಇಂದು ನಾಗರಾಜ್ ತಮ್ಮ ವಿಶಿಷ್ಟ ಕಂಠದ ಮೂಲಕ ಜೀವ ತುಂಬಿದ್ದಾರೆ. ಹರ್ಷ ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಡಿಗೆ ಮತ್ತಷ್ಟು ಮೆರುಗು ನೀಡಿದೆ.
ಚಿಕ್ಕಣ್ಣ ಅವರಿಗೆ ಜೋಡಿಯಾಗಿ ತೇಜಸ್ವಿನಿ ಶರ್ಮಾ ನಟಿಸಿದ್ದು, ಹಿರಿಯ ನಟಿ ತಾರಾ ಅನುರಾಧಾ, ವಂದಿತಾ ಗೌಡ, ಕುರಿ ಪ್ರತಾಪ್, ಧರ್ಮಣ್ಣ, ಮನು, ಮಿತ್ರ, ಅಪ್ಪಣ್ಣ, ಶಿವರಾಜ್ ಕೆಆರ್ ಪೇಟೆ ಹಾಗೂ ಮಾಸ್ಟರ್‌ಪೀಸ್ ಅನಂತು ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ.
ಚಿತ್ರಕಥೆಯನ್ನು ಎಪಿ ಅರ್ಜುನ್ ಮತ್ತು ವಿಜಯ್ ಎಸ್ ಸ್ವಾಮಿ ಜಂಟಿಯಾಗಿ ಹೆಣೆದಿದ್ದರೆ, ಎಪಿ ಅರ್ಜುನ್, ಪ್ರಶಾಂತ್ ರಾಜಪ್ಪ ಮತ್ತು ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದಾರೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಅರುಣ್ ಸಾಗರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ದೇವ್ ಮತ್ತು ಸಿದ್ದೇಶ್ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಸುರೇಶ್ ಕೆ ಮೈಸೂರು ಮತ್ತು ಮಂಡ್ಯ ಮಂಜು ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ರಾಜೇಶ್ ರಾವ್ ಸಹ ನಿರ್ದೇಶಕರಾಗಿ, ಅಭಿನವ್, ರಕ್ಷಿತ್, ಸಚಿನ್ ಮತ್ತು ರಾಯ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ್ದಾರೆ. ಮಂಜರಿ ಸ್ಟುಡಿಯೋಸ್‌ನಲ್ಲಿ ಶಬ್ದ ವಿನ್ಯಾಸ ನಡೆದಿದ್ದು, ಪವಿತ್ರಾ ರೆಡ್ಡಿ ವಸ್ತ್ರ ವಿನ್ಯಾಸ, ಶುಗರ್ ಕ್ಯಾಂಡಿ ಪಬ್ಲಿಸಿಟಿ ಡಿಸೈನ್ ಹಾಗೂ ಎಂಎಂಎಂ ಗ್ರೂಪ್ ಮತ್ತು ಪೂರ್ವಿ ಕುಲಕರ್ಣಿ ಮಾರ್ಕೆಟಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.