LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮದುವೆ ಕಾರಣ ಹೇಳಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪವಿತ್ರಾ ಗೌಡ: ಶೀಘ್ರ ಅರ್ಜಿ ವಿಚಾರಣೆಗೆ ಮನವಿ

ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ಪವಿತ್ರಾಗೌಡ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಧ್ಯಂತರ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ (A1) ಆಗಿರುವ ಪವಿತ್ರಾ ಗೌಡ ಮದುವೆ ಕಾರಣ ನೀಡಿ ಇದೀಗ ಹೈಕೋರ್ಟ್ ನಲ್ಲಿ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸಹೋದರನ ಮದುವೆಯಿದೆ. ಹಾಗಾಗಿ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಕೋರಿ ಅವರು ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದು, ಶೀಘ್ರ ವಿಚಾರಣೆಗೆ ಮನವಿ ಮಾಡಿದ್ದಾರೆ.

ಪವಿತ್ರಾ ಗೌಡ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ, ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ (SPP) ಅರ್ಜಿಯ ಪ್ರತಿಯನ್ನು ಸಲ್ಲಿಸಲು ಕಾಲಾವಕಾಶ ನೀಡುವಂತೆ ಪವಿತ್ರಾ ಗೌಡ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು.

ಪವಿತ್ರಾ ಗೌಡ ಸಹೋದರನ ಮದುವೆ ಡಿಸೆಂಬರ್ 12 ಮತ್ತು 13ರಂದು ನಡೆಯಲಿದೆ. ಈ ಶುಭಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಪವಿತ್ರಾ ಪರ ವಕೀಲರು ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಕೋರಿದ್ದಾರೆ. ಮದುವೆಯ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ಶೀಘ್ರ ವಿಚಾರಣೆ ನಡೆಸುವಂತೆಯೂ ಮನವಿ ಮಾಡಿದ್ದಾರೆ.

ಈ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್, ಅರ್ಜಿಯ ಪ್ರತಿ ಹಾಗೂ ನೋಟಿಸ್ ಪಡೆದುಕೊಳ್ಳುವಂತೆ ಎಸ್‌ಪಿಪಿ ಅವರಿಗೆ ಸೂಚನೆ ನೀಡಿತು. ಅಲ್ಲದೆ, ಈ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಮುಂದಿನ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ನಿಗದಿಪಡಿಸಿತು.

ಸಹೋದರನ ಮದುವೆಗೆ ಹಾಜರಾಗಲು ಪವಿತ್ರಾ ಗೌಡಗೆ ಮಧ್ಯಂತರ ಜಾಮೀನು ಸಿಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿನ್ನದ ಬೆಲೆ ಏರಿಕೆಯ ಓಟ ಮುಂದುವರಿಕೆ: 10 ಗ್ರಾಂಗೆ ₹1,240 ಹೆಚ್ಚಳ, ಇಂದಿನ ದರ ಎಷ್ಟಿದೆ?ಸಿಜೆಪಿ ಕೋ ಫೌಂಡರ್ ಸೌರವ್ ದಾಸ್ ಗೆ ಶಾಕ್: ಬ್ರಿಟನ್ ಗೆ ತೆರಳುತ್ತಿದ್ದಾಗ ದೆಹಲಿ ಏರ್ ಪೋರ್ಟ್ ನಲ್ಲಿ ತಡೆಪಾಕಿಸ್ತಾನಿ ಹ್ಯಾಂಡ್ಲರ್ ಜೊತೆ ಸಂಪರ್ಕ: ಮೀರತ್ ನಲ್ಲಿ ಯುವಕ ಅರೆಸ್ಟ್ಭೀಕರ ಅಪಘಾತ: ತಾಜ್ ಮಹಲ್ ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದಾಗ ಶಾಲಾ ಬಸ್‌ಗೆ ಟ್ರಕ್ ಡಿಕ್ಕಿ: 4 ಮಕ್ಕಳು ಸಾವುಇರಾನ್‌ನಲ್ಲಿ ಹಿಜಾಬ್ ಇಲ್ಲದೆ ಹಾಡಿದ್ದಕ್ಕೆ ಗಾಯಕಿಗೆ 74 ಛಡಿ ಏಟು ಶಿಕ್ಷೆ: ಏನಿದು ಘಟನೆ?ಗಲಾಟೆ ಪ್ರಕರಣ: ಯುಟ್ಯೂಬರ್ ಅಮುಕು ಡುಮುಕು ಮಂಜು ವಿರುದ್ಧ ಮತ್ತೊಂದು FIR ದಾಖಲುಹರ್ಷ್ ದುಬೆ ಸ್ಪಿನ್ ಮೋಡಿಗೆ ಯುಎಇ 3ನೇ ವಿಕೆಟ್ ಪತನ; ಸೆಮಿಫೈನಲ್ ಕನಸಿನಲ್ಲಿ ಭಾರತ ಎ ಬೌಲರ್‌ಗಳ ಬಿಗಿ ದಾಳಿಮುಸ್ಲಿಂ ವಧುವನ್ನು ವೇಶ್ಯೆಗೆ, ಪುರುಷರನ್ನು ಹಂದಿಗೆ ಹೋಲಿಕೆ: ಹೊಸ ವಿವಾದ ಸೃಷ್ಟಿಸಿದ ಎಐಎಂಐಎಂ ನಾಯಕಆರು ವರ್ಷಗಳ ಬಳಿಕ ಮತ್ತೆ ಒಂದಾದ ಬಿಜೆಪಿ–ಅಕಾಲಿ ದಳರಾಮಾಯಣ ಮತ್ತು ಓಂ ಯಶಸ್ಸಿನ ನಡುವೆ ಸತ್ಯ ಸಾಯಿ ಬಾಬಾ ಶತಮಾನೋತ್ಸವದಲ್ಲಿ ಭಾಗಿಯಾದ ಸಾಯಿ ಪಲ್ಲವಿ!