LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗ್ಲಾಮರ್ ಜೊತೆಗೆ ಸಾಹಸದಲ್ಲೂ ಸೈ ಎನಿಸಿಕೊಂಡ ನಟಿಯರು; ಜೇಮ್ಸ್ ಬಾಂಡ್ ಸಿನಿಮಾ ಇತಿಹಾಸದ ಮರೆಯಲಾಗದ ಬಾಂಡ್ ಗರ್ಲ್ಸ್ ಇವರೇ ನೋಡಿ

ಜೇಮ್ಸ್ ಬಾಂಡ್ ಸರಣಿ ಸಿನಿಮಾಗಳಲ್ಲಿ ನಾಯಕನಷ್ಟೇ ಪ್ರಾಮುಖ್ಯತೆ ಪಡೆಯುವ ಪಾತ್ರಗಳೆಂದರೆ ಅದು ಬಾಂಡ್ ಗರ್ಲ್ಸ್. ಇತ್ತೀಚೆಗೆ ಮುಂದಿನ ಬಾಂಡ್ ಗರ್ಲ್ ಯಾರಾಗಬಹುದು ಎಂಬ ಪ್ರಶ್ನೆಗೆ ನಟಿ ಲಿಯಾ ಸೀಡೌಕ್ಸ್ ತಮಗೆ ಆ ಬಗ್ಗೆ ಆಸಕ್ತಿಯಿಲ್ಲ ಎಂದು ಪ್ರತಿಕ್ರಿಯಿಸಿದ್ದರೂ, ಸಿನಿಪ್ರಿಯರಲ್ಲಿ ಮಾತ್ರ ಈ ಕುತೂಹಲ ಇದ್ದೇ ಇದೆ. ಮುಂದಿನ ಜೇಮ್ಸ್ ಬಾಂಡ್ ಪಾತ್ರಧಾರಿಗೆ ಜೋಡಿಯಾಗಿ ಜೆಂಡಾಯಾ, ಫ್ಲಾರೆನ್ಸ್ ಪಗ್ ಅಥವಾ ಅನ್ಯಾ ಟೇಲರ್-ಜಾಯ್ ಅವರಲ್ಲಿ ಯಾರು ಕಾಣಿಸಿಕೊಳ್ಳಬಹುದು ಎಂಬ ಚರ್ಚೆ ಜೋರಾಗಿದೆ. ಈ ನಡುವೆ, ಕೇವಲ ಗ್ಲಾಮರ್‌ಗೆ ಸೀಮಿತವಾಗದೆ ತಮ್ಮ ನಟನೆ ಮತ್ತು ಸಾಹಸದ ಮೂಲಕ ಬಾಂಡ್ ಸರಣಿಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಪ್ರಮುಖ ನಟಿಯರ ಹಿನ್ನೋಟ ಇಲ್ಲಿದೆ.

ಉರ್ಸುಲಾ ಆಂಡ್ರೆಸ್ (ಡಾ. ನೋ – 1962) 1962ರಲ್ಲಿ ತೆರೆಕಂಡ ಡಾ. ನೋ ಚಿತ್ರದಲ್ಲಿ ಹನಿ ರೈಡರ್ ಪಾತ್ರದಲ್ಲಿ ಕಾಣಿಸಿಕೊಂಡ ಉರ್ಸುಲಾ ಆಂಡ್ರೆಸ್, ಬಾಂಡ್ ಗರ್ಲ್ ಪಾತ್ರಕ್ಕೆ ಹೊಸ ವ್ಯಾಖ್ಯಾನ ಬರೆದರು. ಸಮುದ್ರದಿಂದ ಕ್ರೀಮ್ ಬಣ್ಣದ ಬಿಕಿನಿಯಲ್ಲಿ ಕೈಯಲ್ಲಿ ಶಂಖಗಳನ್ನು ಹಿಡಿದು ಹೊರಬರುವ ಅವರ ದೃಶ್ಯ ಇಂದಿಗೂ ಸಿನಿಮಾ ಇತಿಹಾಸದಲ್ಲಿ ಅಜರಾಮರವಾಗಿದೆ. ತಾಂತ್ರಿಕವಾಗಿ ಇವರು ಮೊದಲ ಬಾಂಡ್ ಗರ್ಲ್ ಅಲ್ಲದಿದ್ದರೂ, ತಮ್ಮ ಮೋಡಿ ಮತ್ತು ಸೌಂದರ್ಯದಿಂದ ನಂತರ ಬಂದ ಎಲ್ಲಾ ನಟಿಯರಿಗೂ ಒಂದು ಮಾನದಂಡವಾಗಿ ನಿಂತರು.

ಫಾಮ್ಕೆ ಜಾನ್ಸೆನ್ (ಗೋಲ್ಡನ್ ಐ – 1995) ಗೋಲ್ಡನ್ ಐ ಚಿತ್ರದಲ್ಲಿ ನಿರ್ದಯಿ ಹಂತಕಿ ಹಾಗೂ ಫೈಟರ್ ಪೈಲಟ್ ಕ್ಸೆನಿಯಾ ಒನಾಟಾಪ್ ಪಾತ್ರದಲ್ಲಿ ಫಾಮ್ಕೆ ಜಾನ್ಸೆನ್ ಅಬ್ಬರಿಸಿದ್ದರು. ತಮ್ಮ ಎದುರಾಳಿಗಳನ್ನು ವಿಶಿಷ್ಟ ರೀತಿಯಲ್ಲಿ ಮಣಿಸುವ ಈ ಪಾತ್ರ ಪ್ರೇಕ್ಷಕರಲ್ಲಿ ನಡುಕ ಹುಟ್ಟಿಸಿತ್ತು. ಹೆಲಿಕಾಪ್ಟರ್‌ನಿಂದ ಇಳಿದು ಬಾಂಡ್ ಮೇಲೆ ದಾಳಿ ಮಾಡುವ ದೃಶ್ಯ ಮತ್ತು ಅಂತಿಮವಾಗಿ ಬಾಂಡ್ ಕೈಯಲ್ಲೇ ಹತರಾಗುವ ಸನ್ನಿವೇಶಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದವು.

ಮೈಕೆಲ್ ಯೋ (ಟುಮಾರೊ ನೆವರ್ ಡೈಸ್ – 1997) ಚೀನಾದ ಗೂಢಚಾರಿಣಿ ವೈ ಲಿನ್ ಪಾತ್ರದಲ್ಲಿ ಮೈಕೆಲ್ ಯೋ ಅದ್ಭುತ ಸಾಹಸ ದೃಶ್ಯಗಳ ಮೂಲಕ ಗಮನ ಸೆಳೆದಿದ್ದರು. ಎದುರಾಳಿಗಳನ್ನು ಬಡಿದುರುಳಿಸುವ ಇವರ ಶೈಲಿ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಅದರಲ್ಲೂ ಜೇಮ್ಸ್ ಬಾಂಡ್ ಜೊತೆ ಕೈಕೋಳ ತೊಟ್ಟು ಬೈಕ್ ಚಲಾಯಿಸುವ ರೋಮಾಂಚಕಾರಿ ದೃಶ್ಯ ಬಾಂಡ್ ಸರಣಿಯ ಅತ್ಯುತ್ತಮ ಸ್ಟಂಟ್ ದೃಶ್ಯಗಳಲ್ಲಿ ಒಂದಾಗಿದೆ.

ಕಿಮ್ ಬ್ಯಾಸಿಂಗರ್ (ನೆವರ್ ಸೇ ನೆವರ್ ಅಗೇನ್) ಖಳನಾಯಕ ಮ್ಯಾಕ್ಸಿಮಿಲಿಯನ್ ಲಾರ್ಗೋನ ಪ್ರೇಯಸಿ ಡೊಮಿನೊ ಪೆಟಾಚಿ ಪಾತ್ರದಲ್ಲಿ ಕಿಮ್ ಬ್ಯಾಸಿಂಗರ್ ನಟಿಸಿದ್ದರು. ತನ್ನ ಸಹೋದರನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಬಾಂಡ್ ಜೊತೆ ಕೈಜೋಡಿಸಿ, ಕೊನೆಗೆ ಖಳನಾಯಕನನ್ನೇ ಮುಗಿಸುವ ಪಾತ್ರಕ್ಕೆ ಅವರು ಜೀವ ತುಂಬಿದ್ದರು. ಆರಂಭಿಕ ದಿನಗಳ ಸಿನಿಮಾವಾಗಿದ್ದರೂ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದರು.

ಬಾಂಡ್ ಮದುವೆಯಾದ ಏಕೈಕ ಮಹಿಳೆ ಜೇಮ್ಸ್ ಬಾಂಡ್ ತನ್ನ ಸಿನಿಮಾ ಪಯಣದಲ್ಲಿ ನಿಜವಾಗಿಯೂ ಪ್ರೀತಿಯಲ್ಲಿ ಬಿದ್ದಿದ್ದು ಕೇವಲ ಎರಡು ಬಾರಿ ಮಾತ್ರ. 1969ರ ಆನ್ ಹರ್ ಮೆಜೆಸ್ಟಿಸ್ ಸೀಕ್ರೆಟ್ ಸರ್ವಿಸ್ ಚಿತ್ರದಲ್ಲಿ ಕೌಂಟೆಸ್ ಟ್ರೇಸಿ ಡಿ ವಿಸೆಂಜೊ ಪಾತ್ರಧಾರಿ ಡಯಾನಾ ರಿಗ್ ಅವರನ್ನು ಬಾಂಡ್ ವಿವಾಹವಾಗುತ್ತಾರೆ. ಆದರೆ ದುರದೃಷ್ಟವಶಾತ್ ಗುಂಡಿನ ದಾಳಿಗೆ ತುತ್ತಾಗಿ ಆಕೆ ಸಾವನ್ನಪ್ಪುತ್ತಾಳೆ.

ಹೃದಯ ಕದ್ದ ವೆಸ್ಪರ್ ಲಿಂಡ್ 2006ರ ಕ್ಯಾಸಿನೊ ರಾಯಲ್ ಚಿತ್ರದಲ್ಲಿ ಇವಾ ಗ್ರೀನ್ ನಿರ್ವಹಿಸಿದ ವೆಸ್ಪರ್ ಲಿಂಡ್ ಪಾತ್ರಕ್ಕೆ ಬಾಂಡ್ ಮನಸೋಲುತ್ತಾನೆ. ಆಕೆಗಾಗಿ ತನ್ನ ಕೆಲಸಕ್ಕೂ ರಾಜೀನಾಮೆ ನೀಡಲು ಮುಂದಾಗುತ್ತಾನೆ. ಆದರೆ ಆಕೆ ಶತ್ರುಗಳ ಪರ ಕೆಲಸ ಮಾಡುವ ಡಬಲ್ ಏಜೆಂಟ್ ಎಂಬ ಸತ್ಯ ತಿಳಿದು ಆಘಾತಕ್ಕೊಳಗಾಗುತ್ತಾನೆ. ನಿಜವಾದ ಪ್ರೀತಿ ಹುಟ್ಟಿದ್ದರೂ, ವೆನಿಸ್‌ನ ಕಟ್ಟಡವೊಂದರಲ್ಲಿ ನೀರಿನಲ್ಲಿ ಮುಳುಗಿ ಆಕೆ ದುರಂತ ಅಂತ್ಯ ಕಾಣುತ್ತಾಳೆ.

ಸ್ಕೈಫಾಲ್ ಹಾಡಿನಲ್ಲಿ ಅಡೆಲೆ ಮೋಡಿ ಬಾಂಡ್ ಸಿನಿಮಾಗಳಲ್ಲಿ ನಟಿಯರಷ್ಟೇ ಅಲ್ಲದೆ ಹಿನ್ನೆಲೆ ಗಾಯನವೂ ವಿಶೇಷ ಸ್ಥಾನ ಪಡೆದಿದೆ. ಈ ಹಿಂದೆ ಮಡೋನಾ ಸೇರಿದಂತೆ ಅನೇಕರು ಹಾಡಿದ್ದರೂ, ಸ್ಕೈಫಾಲ್ ಚಿತ್ರಕ್ಕಾಗಿ ಅಡೆಲೆ ಹಾಡಿದ ಗೀತೆ ಬಾಂಡ್ ಗರ್ಲ್ ಪಾತ್ರದ ನಿಜವಾದ ಆಕರ್ಷಣೆ ಮತ್ತು ಗಾಂಭೀರ್ಯವನ್ನು ಪ್ರತಿಬಿಂಬಿಸುವಂತಿತ್ತು. ಇವರ ಜೊತೆಗೆ ಗೋಲ್ಡ್‌ಫಿಂಗರ್ ಚಿತ್ರದ ಹಾನರ್ ಬ್ಲ್ಯಾಕ್‌ಮನ್, ಲಿವ್ ಆಂಡ್ ಲೆಟ್ ಡೈ ಚಿತ್ರದ ಜೇನ್ ಸೇಮೌರ್ ಹಾಗೂ ಮೂನ್‌ರೇಕರ್ ಚಿತ್ರದ ಲೋಯಿಸ್ ಚೈಲ್ಸ್ ಕೂಡ ತಮ್ಮ ವಿಶಿಷ್ಟ ಪಾತ್ರಗಳ ಮೂಲಕ ಅಭಿಮಾನಿಗಳ ಮನದಲ್ಲಿ ಉಳಿದಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟೋಲ್ ಪಾವತಿ ತಪ್ಪಿಸಲು ನಂಬರ್ ಪ್ಲೇಟ್ ತಿರುಚಿದರೆ 5 ಪಟ್ಟು ದಂಡ: FASTag ಇಲ್ಲದ ವಾಹನಗಳಿಗೂ ಹೊಸ ನಿಯಮದುರಂತದಲ್ಲಿ ಅಂತ್ಯಗೊಂಡ ವಿವಾಹ: ಮದುವೆಯಾದ ಮರುದಿನವೇ ಆರತಕ್ಷತೆ ಸಮಾರಂಭದಲ್ಲಿ ಕುಸಿದು ಬಿದ್ದ ವರ; ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವುದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬೆಲ್ಟ್ ಬಕಲ್ ಒಳಗೆ ಚಾಕು ಪತ್ತೆ ಮಾಡಿದ ಸಿಐಎಸ್ಎಫ್ | VIDEOಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಅರ್ಚಕ ಅರೆಸ್ಟ್ಪುಟಿನ್ ಜೊತೆ ಸೆಲ್ಫಿ ತೆಗೆಸಿಕೊಂಡ ಭಾರತದ 16 ವರ್ಷದ ಎಐ ಪ್ರತಿಭೆ: ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಾಹುಲ್ ಜಾನ್ ಅಜು ಯಾರು?ಪಾಕಿಸ್ತಾನಕ್ಕೆ ಭಾರತದ ಸೇನಾ ರಹಸ್ಯ ಸೋರಿಕೆ! ಪಂಜಾಬ್‌ನಲ್ಲಿ ISI ಏಜೆಂಟ್ ಅರೆಸ್ಟ್ಒಪಿಎಸ್ ಮರು ಜಾರಿ: ಪಿಂಚಣಿ ಶೇ.50ರಿಂದ ಶೇ.67ಕ್ಕೆ ಏರಿಕೆ ಪ್ರಸ್ತಾವನೆ 8ನೇ ವೇತನ ಆಯೋಗ ಒಪ್ಪಿಕೊಂಡ್ರೆ ಎಷ್ಟು ಹೆಚ್ಚುವರಿ ಹಣ ಸಿಗಬಹುದು?ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು: ಲೋಕಸಭೆ ಸ್ಥಾನಗಳು ಶೇ.50ರಷ್ಟು ಹೆಚ್ಚಳಕ್ಕೆ ಪ್ರಸ್ತಾವನೆನೆಸ್ಲೆ ಇಂಡಿಯಾಗೆ ₹36.36 ಲಕ್ಷ ಇಪಿಎಫ್ಒ ಬೇಡಿಕೆ ನೋಟಿಸ್: ಉದ್ಯೋಗಿಗಳ ಭವಿಷ್ಯ ನಿಧಿ ಪಾವತಿ ವಿಚಾರದಲ್ಲಿ ಕ್ರಮರೈಲ್ವೆಗೆ ಭರ್ಜರಿ ಆದಾಯ ತಂದುಕೊಟ್ಟ ಕಾರ್ತಿಕ ಪೂರ್ಣಿಮೆ; ಡಿಜಿಟಲ್ ಟಿಕೆಟ್ ಮೂಲಕ ₹20.73 ಲಕ್ಷ ಸಂಗ್ರಹ!