LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಾಹಕರಿಗೆ ಬಿಗ್ ಅಲರ್ಟ್.. ಜನವರಿ 1ರಿಂದ ₹500 ಒಳಗಿನ UPI ಪಾವತಿಗಳಿಗೆ SMS ಬರಲ್ಲ!

ಟೀ ಕುಡಿಯಲು ₹20 ಪಾವತಿಸಿರಲಿ, ತರಕಾರಿ ಖರೀದಿಗೆ ₹100 ಕೊಟ್ಟಿರಲಿ ಅಥವಾ ಅಂಗಡಿಯಲ್ಲಿ ₹200 ಹಣ ನೀಡಿರಲಿ… UPI ಮೂಲಕ ಪಾವತಿ ಮಾಡಿದ ತಕ್ಷಣ ಮೊಬೈಲ್‌ಗೆ ಬರುವ ಬ್ಯಾಂಕ್ SMS ನೋಡುವ ಅಭ್ಯಾಸ ಬಹುತೇಕ ಗ್ರಾಹಕರಿಗಿದೆ. ಖಾತೆಯಿಂದ ಹಣ ಕಡಿತವಾಗಿದೆಯೇ, ಪಾವತಿ ಯಶಸ್ವಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಹಲವರು ನಿರಾಳರಾಗುತ್ತಾರೆ.

ಆದರೆ ಇನ್ಮುಂದೆ ಈ ಅಭ್ಯಾಸಕ್ಕೆ ಬ್ರೇಕ್ ಬೀಳುವ ಸಾಧ್ಯತೆಯಿದೆ. HDFC ಬ್ಯಾಂಕ್ ಗ್ರಾಹಕರಿಗೆ 2027ರ ಜನವರಿ 1ರಿಂದ ಹೊಸ ಬದಲಾವಣೆಯೊಂದು ಜಾರಿಗೆ ಬರಲಿದೆ ಎನ್ನಲಾಗಿದೆ. ₹500 ಅಥವಾ ಅದಕ್ಕಿಂತ ಕಡಿಮೆ ಮೊತ್ತದ UPI ವಹಿವಾಟುಗಳಿಗೆ ಬ್ಯಾಂಕ್ SMS ಅಲರ್ಟ್ ಕಳುಹಿಸುವುದನ್ನು ನಿಲ್ಲಿಸಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇನ್ಮುಂದೆ ಸಣ್ಣ ಮೊತ್ತದ ಪಾವತಿ ಮಾಡಿದಾಗ ಮೊಬೈಲ್‌ಗೆ ಬ್ಯಾಂಕ್‌ನಿಂದ SMS ಬಾರದಿರಬಹುದು. ಆದರೆ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ, ಬದಲಾಗುವುದು ಕೇವಲ ವಹಿವಾಟಿನ ಮಾಹಿತಿ ಪಡೆಯುವ ವಿಧಾನ ಮಾತ್ರ.

ಜನವರಿ 1ರಿಂದ ಏನು ಬದಲಾವಣೆ?

HDFC ಬ್ಯಾಂಕ್‌ನ ಅಧಿಸೂಚನೆಯ ಪ್ರಕಾರ, 2027ರ ಜನವರಿ 1ರಿಂದ ₹500 ಅಥವಾ ಅದಕ್ಕಿಂತ ಕಡಿಮೆ ಮೊತ್ತದ UPI ವಹಿವಾಟುಗಳಿಗೆ ಸಾಮಾನ್ಯ SMS ಅಲರ್ಟ್‌ಗಳು ಬರುವುದಿಲ್ಲ.ಅಂದರೆ ನೀವು ₹50, ₹100, ₹200 ಅಥವಾ ₹500 ಪಾವತಿ ಮಾಡಿದರೂ ಬ್ಯಾಂಕ್‌ನಿಂದ SMS ಬರದೇ ಇರಬಹುದು. ಆದರೆ ₹500ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ SMS ಅಲರ್ಟ್‌ಗಳು ಎಂದಿನಂತೆ ಮುಂದುವರಿಯಲಿವೆ.

RBI ಹೊಸ ನಿಯಮದಲ್ಲಿ ಏನಿದೆ?

ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ಮಾರ್ಗಸೂಚಿಗಳ ಪ್ರಕಾರ, 2027ರ ಜನವರಿ 1ರಿಂದ ₹500ಕ್ಕಿಂತ ಹೆಚ್ಚಿನ ಮೊತ್ತದ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಿಗೆ ಬ್ಯಾಂಕ್‌ಗಳು ತಕ್ಷಣ SMS ಅಲರ್ಟ್ ಕಳುಹಿಸುವುದು ಕಡ್ಡಾಯವಾಗಿದೆ.

ಆದರೆ ₹500 ಅಥವಾ ಅದಕ್ಕಿಂತ ಕಡಿಮೆ ಮೊತ್ತದ ವಹಿವಾಟುಗಳಿಗೆ SMS ಕಳುಹಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಬ್ಯಾಂಕ್‌ಗಳಿಗೇ ಬಿಡಲಾಗಿದೆ. ಬ್ಯಾಂಕ್‌ಗಳು SMS ಕಳುಹಿಸಿದರೆ ಅದಕ್ಕಾಗಿ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ.ಈ ನಿಯಮ ಕೇವಲ UPI ಪಾವತಿಗಳಿಗೆ ಮಾತ್ರವಲ್ಲದೆ ಇತರ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಿಗೂ ಅನ್ವಯಿಸುತ್ತದೆ.

SMS ಬರದಿದ್ದರೂ ಇಮೇಲ್ ಬರುತ್ತದೆ!

ಸಣ್ಣ ಮೊತ್ತದ UPI ಪಾವತಿಗಳಿಗೆ SMS ಬರುವುದಿಲ್ಲ ಎಂಬ ಕಾರಣಕ್ಕೆ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. HDFC ಬ್ಯಾಂಕ್ ಎಲ್ಲಾ UPI ವಹಿವಾಟುಗಳಿಗೂ ಇಮೇಲ್ ಅಲರ್ಟ್‌ಗಳನ್ನು ಮುಂದುವರಿಸಲಿದೆ ಎಂಬ ಮಾಹಿತಿ ಇದೆ.

ಅಂದರೆ ₹50 ಅಥವಾ ₹100 ಪಾವತಿ ಮಾಡಿದರೂ ನಿಮ್ಮ ಬ್ಯಾಂಕ್ ಖಾತೆಗೆ ನೋಂದಾಯಿಸಿರುವ ಇಮೇಲ್ ವಿಳಾಸಕ್ಕೆ ವಹಿವಾಟಿನ ವಿವರಗಳು ಲಭ್ಯವಾಗಲಿವೆ. ಬ್ಯಾಂಕ್‌ನ ವ್ಯವಸ್ಥೆಯನ್ನು ಅವಲಂಬಿಸಿ ಮೊಬೈಲ್ ಆ್ಯಪ್ ಹಾಗೂ ಪುಷ್ ನೋಟಿಫಿಕೇಶನ್‌ಗಳ ಮೂಲಕವೂ ಮಾಹಿತಿ ಸಿಗಬಹುದು.

ಗ್ರಾಹಕರು ಈಗಲೇ ಏನು ಮಾಡಬೇಕು?

ಜನವರಿ 1ರಿಂದ ಅನಗತ್ಯ ಗೊಂದಲ ಉಂಟಾಗದಂತೆ HDFC ಬ್ಯಾಂಕ್ ಗ್ರಾಹಕರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.

  • ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸರಿಯಾಗಿದೆಯೇ ಪರಿಶೀಲಿಸಿ.

  • ನೋಂದಾಯಿತ ಇಮೇಲ್ ವಿಳಾಸ ಸಕ್ರಿಯವಾಗಿದೆಯೇ ಖಚಿತಪಡಿಸಿಕೊಳ್ಳಿ.

  • ಬ್ಯಾಂಕ್ ಮೊಬೈಲ್ ಆ್ಯಪ್‌ನಲ್ಲಿ ವಹಿವಾಟಿನ ನೋಟಿಫಿಕೇಶನ್‌ಗಳನ್ನು ಸಕ್ರಿಯಗೊಳಿಸಿ.

  • UPI ಪಾವತಿ ಮಾಡಿದ ಬಳಿಕ ಆ್ಯಪ್‌ನಲ್ಲಿರುವ ವಹಿವಾಟಿನ ಇತಿಹಾಸವನ್ನೂ ಪರಿಶೀಲಿಸಿ.

ನೆನಪಿಡಿ: ಜನವರಿ 1ರಿಂದ ₹500 ಅಥವಾ ಅದಕ್ಕಿಂತ ಕಡಿಮೆ ಮೊತ್ತದ UPI ಪಾವತಿಗಳಿಗೆ SMS ಬಾರದಿದ್ದರೂ ನಿಮ್ಮ ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಪಾವತಿಗಳು ಎಂದಿನಂತೆ ನಡೆಯಲಿವೆ. ಬದಲಾಗುವುದು ಕೇವಲ ಬ್ಯಾಂಕ್‌ನಿಂದ ವಹಿವಾಟಿನ ಮಾಹಿತಿ ತಲುಪುವ ವಿಧಾನ ಮಾತ್ರ.

ಸೂಚನೆ: ಈ ವರದಿಯಲ್ಲಿನ ಬದಲಾವಣೆಗಳು ಲಭ್ಯವಿರುವ ಬ್ಯಾಂಕ್ ಅಧಿಸೂಚನೆ ಮತ್ತು RBI ಮಾರ್ಗಸೂಚಿಗಳ ಮಾಹಿತಿಯನ್ನು ಆಧರಿಸಿವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯಾಯಾಂಗ ನೇಮಕಾತಿಯಲ್ಲಿ ಪಕ್ಷಪಾತ, ಒಂದೇ ಸಮುದಾಯಕ್ಕೆ ಆದ್ಯತೆ: ರಾಷ್ಟ್ರಪತಿ ಮುರ್ಮುಗೆ ನಿವೃತ್ತ ಸಿಜೆಐ ಬಿ.ಆರ್. ಗವಾಯಿ ಪತ್ರಬಿಸ್ಲೇರಿ ನೀರಿನ ಮಾದರಿಯಲ್ಲಿ ಬ್ಯಾಕ್ಟೀರಿಯಾ ಪತ್ತೆ, ಕೇಸ್ ದಾಖಲಿಸಲು FSSAI ಅನುಮತಿ!CRPF ಭದ್ರತೆಯಲ್ಲಿ ಇಂದು ತಿರುಪರಂಕುಂದ್ರಂನಲ್ಲಿ ಬೆಳಗಲಿದೆ ‘ಕಾರ್ತಿಕೈ ದೀಪಂ’: ಅರೆಸೇನಾ ಪಡೆಗೆ ಹೂಮಳೆ ಸ್ವಾಗತಮಹಿಳಾ ಜಿಲ್ಲಾಧಿಕಾರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ ; ಟಿವಿಕೆ ಶಾಸಕ ಅರೆಸ್ಟ್.!ತುಮಕೂರು, ಚಿತ್ರದುರ್ಗದಲ್ಲಿ 1,300 ಹೆಕ್ಟೇರ್ ನಲ್ಲಿ ‘ರಕ್ಷಣಾ ಉತ್ಪಾದನಾ ಕ್ಲಸ್ಟರ್’ ಬೃಹತ್ ಯೋಜನೆ: 16 ಸಾವಿರ ಕೋಟಿ ರೂ. ಹೂಡಿಕೆಗ್ರಾಹಕರಿಗೆ ಬಿಗ್ ಅಲರ್ಟ್.. ಜನವರಿ 1ರಿಂದ ₹500 ಒಳಗಿನ UPI ಪಾವತಿಗಳಿಗೆ SMS ಬರಲ್ಲ!ಕಿಚ್ಚ ಸುದೀಪ್–‘ಜೋಗಿ’ ಪ್ರೇಮ್ ಹೊಸ ಚಿತ್ರ ‘ದಾದಾ ಆನ್ ಹಾಲಿಡೇ’ ಅದ್ಧೂರಿ ಟೈಟಲ್ ಲಾಂಚ್: ಸಿಎಂ ಡಿ.ಕೆ. ಶಿವಕುಮಾರ್ ಶುಭಹಾರೈಕೆATMನಿಂದ ಹಣ ತೆಗೆಯುವವರಿಗೆ ಗುಡ್ ನ್ಯೂಸ್; ಇನ್ಮುಂದೆ ಈ ವಹಿವಾಟಿಗೆ ಯಾವುದೇ ಶುಲ್ಕವಿಲ್ಲ!ಮುಂಬೈ, ದೆಹಲಿ ಹಿಂದಿಕ್ಕಿ ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದ ಬೆಂಗಳೂರುಟೋಲ್ ಪಾವತಿ ತಪ್ಪಿಸಲು ನಂಬರ್ ಪ್ಲೇಟ್ ತಿರುಚಿದರೆ 5 ಪಟ್ಟು ದಂಡ: FASTag ಇಲ್ಲದ ವಾಹನಗಳಿಗೂ ಹೊಸ ನಿಯಮ