LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮುಂಬೈ, ದೆಹಲಿ ಹಿಂದಿಕ್ಕಿ ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದ ಬೆಂಗಳೂರು

ಬೆಂಗಳೂರು: ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಬೆಂಗಳೂರು ಮೊದಲ ಸ್ಥಾನದಲ್ಲೇ ಮುಂದುವರಿದಿದೆ ಎಂದು ಡನ್ ಆ್ಯಂಡ್ ಬ್ರಾಡ್‌ಸ್ಟ್ರೀಟ್ (ಡಿ&ಬಿ) ಮತ್ತು ಮಾಸ್ಟರ್‌ಕಾರ್ಡ್ ಜಂಟಿಯಾಗಿ ಬಿಡುಗಡೆ ಮಾಡಿರುವ 2026ರ ಮೂರನೇ ತ್ರೈಮಾಸಿಕದ ‘ಸಿಟಿ ವೈಟಾಲಿಟಿ ಇಂಡೆಕ್ಸ್’ (ಸಿವಿಐ) ವರದಿ ತಿಳಿಸಿದೆ.

ನೂತನ ಪಟ್ಟಿಯಲ್ಲಿ ಬೆಂಗಳೂರಿನ ನಂತರ ಮುಂಬೈ, ದೆಹಲಿ, ಚೆನ್ನೈ ಮತ್ತು ಗುರುಗ್ರಾಮ್ ನಗರಗಳು ಸ್ಥಾನ ಪಡೆದಿವೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ, ಈ ಬಾರಿ ಮುಂಬೈನ ಸಿ.ವಿ.ಐ ಅಂಕ 123ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

ಸಣ್ಣ ನಗರಗಳಲ್ಲೂ ಬೆಳವಣಿಗೆ; ತಮಿಳುನಾಡು ನಂ. 1

ರಾಜ್ಯ ಮಟ್ಟದ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದು, ದೆಹಲಿ ಮತ್ತು ಮಹಾರಾಷ್ಟ್ರ ನಂತರದ ಸ್ಥಾನಗಳಲ್ಲಿವೆ. ಈ ರಾಜ್ಯಗಳ ಆರ್ಥಿಕ ವ್ಯವಸ್ಥೆ ಎಷ್ಟು ಬಲವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ವರದಿ ಉಲ್ಲೇಖಿಸಿದೆ.

ಮತ್ತೊಂದೆಡೆ, ದೊಡ್ಡ ಮೆಟ್ರೋ ನಗರಗಳ ಹೊರತಾಗಿಯೂ ಅಲ್ಮೋರಾ, ಸಹಿಬ್ಜಾದ ಅಜಿತ್‌ ಸಿಂಗ್‌ ನಗರ (ಮೊಹಾಲಿ), ಶ್ರೀನಗರ, ಜಮ್ಮು ಮತ್ತು ಮಹಬೂಬಾಬಾದ್‌ನಂತಹ ನಗರಗಳು ಆರ್ಥಿಕ ಬೆಳವಣಿಗೆಯಲ್ಲಿ ಉತ್ತಮ ಪ್ರಗತಿ ದಾಖಲಿಸಿವೆ. ಮುಂದಿನ ಆರ್ಥಿಕ ಅವಕಾಶಗಳು ಕೇವಲ ದೊಡ್ಡ ಮೆಟ್ರೋಗಳಿಂದಲೇ ಬರಬೇಕಿಲ್ಲ ಎಂಬುದನ್ನು ಇದು ತೋರಿಸಿದೆ.

ಆದಾಗ್ಯೂ, ದೇಶದ ಹಲವು ಭಾಗಗಳಿಗೆ ಆರ್ಥಿಕ ಚಟುವಟಿಕೆ ಹರಡುತ್ತಿದ್ದರೂ, ಮೆಟ್ರೋ ಮತ್ತು ಮೆಟ್ರೋಯೇತರ ಪ್ರದೇಶಗಳ ನಡುವೆ ಇನ್ನೂ 260 ಅಂಕಗಳಷ್ಟು ಆರ್ಥಿಕ ಅಂತರವಿರುವುದು ಸೂಚ್ಯಂಕದಲ್ಲಿ ದಾಖಲಾಗಿದೆ.

ಪಿನ್‌ ಕೋಡ್ ಮಟ್ಟದಲ್ಲೇ ಆರ್ಥಿಕತೆ ಅಳತೆ

ಡನ್ ಆ್ಯಂಡ್ ಬ್ರಾಡ್‌ಸ್ಟ್ರೀಟ್ ಮತ್ತು ಮಾಸ್ಟರ್‌ಕಾರ್ಡ್ ಸಂಸ್ಥೆಗಳು ತಮ್ಮ ಸಿ.ವಿ.ಐ ಸೂಚ್ಯಂಕವನ್ನು ಸುಧಾರಿಸಿ ಬಿಡುಗಡೆ ಮಾಡಿವೆ. ದೇಶದ 750ಕ್ಕೂ ಹೆಚ್ಚು ಜಿಲ್ಲೆಗಳು ಮತ್ತು 18,000ಕ್ಕೂ ಅಧಿಕ ಪಿನ್‌ಕೋಡ್‌ಗಳಲ್ಲಿ ನಡೆಯುತ್ತಿರುವ ಆರ್ಥಿಕ ಚಟುವಟಿಕೆಗಳನ್ನು ಈ ಸೂಚ್ಯಂಕವು ಪರಿಶೀಲಿಸಿದೆ.

ಡನ್ ಆ್ಯಂಡ್ ಬ್ರಾಡ್‌ ಸ್ಟ್ರೀಟ್‌ ನ ಉದ್ಯಮ ಮಾಹಿತಿ ಹಾಗೂ ಮಾಸ್ಟರ್‌ಕಾರ್ಡ್‌ನ ಒಟ್ಟುಗೂಡಿಸಿದ, ಯಾರ ಗುರುತನ್ನೂ ಬಹಿರಂಗಪಡಿಸದ ವಹಿವಾಟಿನ ಮಾಹಿತಿಯನ್ನು ಇದರಲ್ಲಿ ಬಳಸಲಾಗಿದೆ. ವಿಶಾಲ ಉದ್ಯಮ ವಲಯಗಳು ಮತ್ತು ವಿವರವಾದ ಉಪ-ವಲಯಗಳ ಮಾಹಿತಿಯ ಜೊತೆಗೆ, ಗ್ರಾಹಕರ ಖರ್ಚಿನ ವಿಭಾಗಗಳ ವಿವರವನ್ನೂ ಇದು ಒಳಗೊಂಡಿದೆ.

ರಾಷ್ಟ್ರ, ರಾಜ್ಯ ಹಾಗೂ ನಗರಗಳ ಒಟ್ಟಾರೆ ಸರಾಸರಿಗಳಿಗಿಂತ ಆಳಕೆಕ ಇಳಿದು ನೋಡಿದಾಗ ಸ್ಥಳೀಯ ಮಟ್ಟದ ಬೇಡಿಕೆ, ಜನರ ಖರ್ಚಿನ ಬದಲಾವಣೆ ಮತ್ತು ವ್ಯಾಪಾರದ ಅಪಾಯಗಳನ್ನು ಮೊದಲೇ ಗುರುತಿಸಲು ಇದು ಸಹಾಯ ಮಾಡಲಿದೆ. ಮಾರುಕಟ್ಟೆ ವಿಸ್ತರಣೆ, ಪೂರೈಕೆ, ಮಾರಾಟ, ಹೂಡಿಕೆ ಹಾಗೂ ಸಾಲ ನೀಡಿಕೆಯಂತಹ ವಿಷಯಗಳಲ್ಲಿ ಕಂಪನಿಗಳು ನಿರ್ಧಾರ ತೆಗೆದುಕೊಳ್ಳಲು ಇದು ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡನ್ ಆ್ಯಂಡ್ ಬ್ರಾಡ್‌ಸ್ಟ್ರೀಟ್ ಇಂಡಿಯಾದ ಮುಖ್ಯ ಆರ್ಥಿಕ ತಜ್ಞ ಅರುಣ್ ಸಿಂಗ್,  “ಭಾರತದ ಆರ್ಥಿಕತೆ ಬೆಳೆಯುತ್ತಿದೆಯೇ ಎಂಬುದಷ್ಟೇ ಈಗ ಮುಖ್ಯ ಪ್ರಶ್ನೆಯಲ್ಲ. ಬದಲಾಗಿ ಆ ಬೆಳವಣಿಗೆ ಎಲ್ಲಿ ಕಾಣಿಸಿಕೊಳ್ಳುತ್ತಿದೆ, ಯಾವ ವಲಯಗಳು ಅದಕ್ಕೆ ಕಾರಣವಾಗುತ್ತಿವೆ ಮತ್ತು ಆ ವೇಗ ಎಷ್ಟು ಬೇಗ ಬದಲಾಗುತ್ತಿದೆ ಎಂಬುದು ಮುಖ್ಯ. ಬದಲಾವಣೆ ಎಲ್ಲರಿಗೂ ಕಾಣಿಸುವ ಮೊದಲೇ, ಜಿಲ್ಲೆ ಮತ್ತು ಪಿನ್‌ಕೋಡ್ ಮಟ್ಟದಲ್ಲಿ ಅದನ್ನು ಗುರುತಿಸಲು ಈ ಸೂಚ್ಯಂಕ ಸಹಕಾರಿಯಾಗಲಿದೆ,” ಎಂದು ಹೇಳಿದ್ದಾರೆ.

“ಸಂಕೀರ್ಣ ಮಾರುಕಟ್ಟೆ ಸಂಕೇತಗಳನ್ನು ಎಷ್ಟು ವೇಗವಾಗಿ ಕಾರ್ಯರೂಪಕ್ಕೆ ತರಲಾಗುತ್ತದೆ ಎಂಬುದರ ಮೇಲೆ ಉದ್ಯಮದ ಅವಕಾಶಗಳು ನಿಂತಿರುತ್ತವೆ. ಗ್ರಾಹಕರು ಮತ್ತು ಉದ್ಯಮಗಳ ಟ್ರೆಂಡ್‌ಗಳ ಸ್ಪಷ್ಟ ಚಿತ್ರಣ ಸಿಗುವುದರಿಂದ ಕಂಪನಿಗಳು ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿ ದೀರ್ಘಕಾಲದ ಬೆಳವಣಿಗೆಗೆ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ,” ಎಂದು ಮಾಸ್ಟರ್‌ಕಾರ್ಡ್‌ನ ದಕ್ಷಿಣ ಏಷ್ಯಾ ಸಲಹಾ ಸೇವೆಗಳ ಹಿರಿಯ ಉಪಾಧ್ಯಕ್ಷೆ ರಶ್ಮಿ ಘೋಷ್ ತಿಳಿಸಿದ್ದಾರೆ.

ಸೂಚನೆ: ಇದು ಮಾಧ್ಯಮಗಳ ವರದಿ, ‘ಸಿಟಿ ವೈಟಾಲಿಟಿ ಇಂಡೆಕ್ಸ್’ ವರದಿಯನ್ನು ಆಧರಿಸಿದೆ. ವರದಿಯಲ್ಲಿ ಉಲ್ಲೇಖಿಸಿರುವ ನಗರಗಳ ಶ್ರೇಯಾಂಕ, ಅಂಕಿಅಂಶಗಳು ಮತ್ತು ಆರ್ಥಿಕ ಬೆಳವಣಿಗೆಯ ವಿವರಗಳು ಸಂಬಂಧಪಟ್ಟ ಸಂಸ್ಥೆಗಳ ದತ್ತಾಂಶ ಹಾಗೂ ವಿಶ್ಲೇಷಣೆಗೆ ಒಳಪಟ್ಟಿರುತ್ತವೆ. ಈ ಶ್ರೇಯಾಂಕವು ಎಲ್ಲ ರೀತಿಯ ಆರ್ಥಿಕ ಅಭಿವೃದ್ಧಿಯ ಅಂತಿಮ ಮಾನದಂಡವಲ್ಲ. ಓದುಗರು ಇದನ್ನು ಮಾಹಿತಿ ಉದ್ದೇಶಕ್ಕಾಗಿ ಪರಿಗಣಿಸಬೇಕು.

ಚಿತ್ರಕೃಪೆ-ಎಐ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯಾಯಾಂಗ ನೇಮಕಾತಿಯಲ್ಲಿ ಪಕ್ಷಪಾತ, ಒಂದೇ ಸಮುದಾಯಕ್ಕೆ ಆದ್ಯತೆ: ರಾಷ್ಟ್ರಪತಿ ಮುರ್ಮುಗೆ ನಿವೃತ್ತ ಸಿಜೆಐ ಬಿ.ಆರ್. ಗವಾಯಿ ಪತ್ರಬಿಸ್ಲೇರಿ ನೀರಿನ ಮಾದರಿಯಲ್ಲಿ ಬ್ಯಾಕ್ಟೀರಿಯಾ ಪತ್ತೆ, ಕೇಸ್ ದಾಖಲಿಸಲು FSSAI ಅನುಮತಿ!CRPF ಭದ್ರತೆಯಲ್ಲಿ ಇಂದು ತಿರುಪರಂಕುಂದ್ರಂನಲ್ಲಿ ಬೆಳಗಲಿದೆ ‘ಕಾರ್ತಿಕೈ ದೀಪಂ’: ಅರೆಸೇನಾ ಪಡೆಗೆ ಹೂಮಳೆ ಸ್ವಾಗತಮಹಿಳಾ ಜಿಲ್ಲಾಧಿಕಾರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ ; ಟಿವಿಕೆ ಶಾಸಕ ಅರೆಸ್ಟ್.!ತುಮಕೂರು, ಚಿತ್ರದುರ್ಗದಲ್ಲಿ 1,300 ಹೆಕ್ಟೇರ್ ನಲ್ಲಿ ‘ರಕ್ಷಣಾ ಉತ್ಪಾದನಾ ಕ್ಲಸ್ಟರ್’ ಬೃಹತ್ ಯೋಜನೆ: 16 ಸಾವಿರ ಕೋಟಿ ರೂ. ಹೂಡಿಕೆಗ್ರಾಹಕರಿಗೆ ಬಿಗ್ ಅಲರ್ಟ್.. ಜನವರಿ 1ರಿಂದ ₹500 ಒಳಗಿನ UPI ಪಾವತಿಗಳಿಗೆ SMS ಬರಲ್ಲ!ಕಿಚ್ಚ ಸುದೀಪ್–‘ಜೋಗಿ’ ಪ್ರೇಮ್ ಹೊಸ ಚಿತ್ರ ‘ದಾದಾ ಆನ್ ಹಾಲಿಡೇ’ ಅದ್ಧೂರಿ ಟೈಟಲ್ ಲಾಂಚ್: ಸಿಎಂ ಡಿ.ಕೆ. ಶಿವಕುಮಾರ್ ಶುಭಹಾರೈಕೆATMನಿಂದ ಹಣ ತೆಗೆಯುವವರಿಗೆ ಗುಡ್ ನ್ಯೂಸ್; ಇನ್ಮುಂದೆ ಈ ವಹಿವಾಟಿಗೆ ಯಾವುದೇ ಶುಲ್ಕವಿಲ್ಲ!ಮುಂಬೈ, ದೆಹಲಿ ಹಿಂದಿಕ್ಕಿ ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದ ಬೆಂಗಳೂರುಟೋಲ್ ಪಾವತಿ ತಪ್ಪಿಸಲು ನಂಬರ್ ಪ್ಲೇಟ್ ತಿರುಚಿದರೆ 5 ಪಟ್ಟು ದಂಡ: FASTag ಇಲ್ಲದ ವಾಹನಗಳಿಗೂ ಹೊಸ ನಿಯಮ