LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದವರಿಗೆ ₹1 ಕೋಟಿ, ಬೆಳ್ಳಿ ಗೆದ್ದವರಿಗೆ ₹75 ಲಕ್ಷ ನಗದು ಬಹುಮಾನ: ಸಿಎಂ ಘೋಷಣೆ

ಬೆಂಗಳೂರು: ಏಷ್ಯನ್ ಗೇಮ್ಸ್ 2026ರ ಕ್ರೀಡಾಕೂಟದಲ್ಲಿ ದೇಶ ಹಾಗೂ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದ ರಾಜ್ಯದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸನ್ಮಾನಿಸಿ, ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ನಗದು ಬಹುಮಾನದ ಭಾರೀ ಹೆಚ್ಚಳ, ನೇರ ಸರ್ಕಾರಿ ಉದ್ಯೋಗ ಹಾಗೂ ಒಲಿಂಪಿಕ್ಸ್ ಸಿದ್ಧತೆಗೆ ವಿಶೇಷ ಅನುದಾನ ಸೇರಿದಂತೆ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಾಯಿತು.

ಭಾಗವಹಿಸಿದ ಪ್ರತಿಯೊಬ್ಬರಿಗೂ ತಲಾ ₹5 ಲಕ್ಷ ಪ್ರೋತ್ಸಾಹಧನ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿನೂತನ ಹೆಜ್ಜೆಯಿಟ್ಟಿರುವ ಸರ್ಕಾರ, ಏಷ್ಯನ್ ಗೇಮ್ಸ್‌ನಲ್ಲಿ ಕೇವಲ ಪದಕ ಗೆದ್ದವರಿಗೆ ಮಾತ್ರವಲ್ಲದೆ, ಅರ್ಹತೆ ಪಡೆದು ಭಾಗವಹಿಸಿದ ರಾಜ್ಯದ ಎಲ್ಲಾ 20 ಕ್ರೀಡಾಪಟುಗಳಿಗೂ ತಲಾ 5 ಲಕ್ಷ ರೂಪಾಯಿ ನಗದು ಪ್ರೋತ್ಸಾಹಧನ ನೀಡಿ ಗೌರವಿಸಿದೆ. ಕ್ರಿಕೆಟರ್ ಶ್ರೇಯಾಂಕ ಪಾಟೀಲ್, ಗಾಲ್ಫ್ ಆಟಗಾರ್ತಿಯರಾದ ಅದಿತಿ ಅಶೋಕ್, ಪ್ರಣವಿ ಅರಸ್, ಅಥ್ಲೀಟ್ ಎಂ.ಆರ್. ಪೂವಮ್ಮ ಸೇರಿದಂತೆ ರಾಜ್ಯವನ್ನು ಪ್ರತಿನಿಧಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಈ ಮೊತ್ತ ಲಭಿಸಿದೆ.

ನಗದು ಬಹುಮಾನ ಮೊತ್ತ ದುಪ್ಪಟ್ಟು: ಚಿನ್ನಕ್ಕೆ ₹1 ಕೋಟಿ

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಈ ಹಿಂದೆ ನೀಡಲಾಗುತ್ತಿದ್ದ ನಗದು ಬಹುಮಾನದ ಮೊತ್ತವನ್ನು ಸರ್ಕಾರ ಗಣನೀಯವಾಗಿ ಹೆಚ್ಚಿಸಿದೆ.

  • ಚಿನ್ನದ ಪದಕಕ್ಕೆ ಈ ಹಿಂದಿದ್ದ ₹35 ಲಕ್ಷವನ್ನು ₹1 ಕೋಟಿಗೆ ಏರಿಕೆ ಮಾಡಲಾಗಿದೆ.

  • ಬೆಳ್ಳಿ ಪದಕದ ಮೊತ್ತವನ್ನು ₹25 ಲಕ್ಷದಿಂದ ₹75 ಲಕ್ಷಕ್ಕೆ ಹೆಚ್ಚಿಸಲಾಗಿದೆ.

  • ಕಂಚಿನ ಪದಕ ವಿಜೇತರಿಗೆ ₹15 ಲಕ್ಷದ ಬದಲು ₹50 ಲಕ್ಷ ಬಹುಮಾನ ನಿಗದಿಪಡಿಸಲಾಗಿದೆ.

ಈ ಬಾರಿ ಪದಕ ಗೆದ್ದ 8 ಕ್ರೀಡಾಪಟುಗಳಿಗೆ ಈ ಪರಿಷ್ಕೃತ ಮೊತ್ತದ ಜೊತೆಗೆ ಭಾಗವಹಿಸುವಿಕೆಗೆ ನೀಡಲಾಗುವ ತಲಾ ₹5 ಲಕ್ಷವನ್ನೂ ಸೇರಿಸಿ ವಿತರಿಸಲಾಗಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಚಿನ್ನ ಗೆದ್ದ ಶ್ರೇಯಾಂಕ ಪಾಟೀಲ್ ಹಾಗೂ ಪುರುಷರ ಹಾಕಿಯಲ್ಲಿ ಚಿನ್ನ ಗೆದ್ದ ಮೋಹಿತ್ ಹೆಚ್.ಎಸ್. ಅವರಿಗೆ ತಲಾ ₹1 ಕೋಟಿ ನಗದು ಪುರಸ್ಕಾರ ದೊರೆತಿದೆ. ಇನ್ನು ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡೂ ಜಯಿಸಿದ ಎಂ.ಆರ್. ಪೂವಮ್ಮ ಹಾಗೂ ಗಾಲ್ಫ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಪ್ರಣವಿ ಎಸ್. ಅರಸ್ ಅವರಿಗೆ ಒಟ್ಟು ತಲಾ ₹1.75 ಕೋಟಿ ನಗದು ಬಹುಮಾನ ಲಭಿಸಿದೆ. ಉಳಿದಂತೆ ತಿಲೋತ್ತಮ ಸೇನ್ ಹಾಗೂ ಅದಿತಿ ಅಶೋಕ್ ತಲಾ ₹75 ಲಕ್ಷ ಮತ್ತು ಆಯುಷ್ ಶೆಟ್ಟಿ ಹಾಗೂ ಸ್ನೇಹ ಎಸ್.ಎಸ್. ತಲಾ ₹50 ಲಕ್ಷ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ನೇರ ಸರ್ಕಾರಿ ಉದ್ಯೋಗ ಮತ್ತು ಶೇ.2ರಷ್ಟು ಮೀಸಲಾತಿ

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪದಕ ಗೆದ್ದು ಸಾಧನೆ ಮಾಡಿದ ಅರ್ಹ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ 'ಗ್ರೂಪ್-ಬಿ' ವೃಂದದ ಉನ್ನತ ಹುದ್ದೆಗಳಲ್ಲಿ ನೇರ ನೇಮಕಾತಿ ನೀಡಲು ನಿಯಮಾವಳಿ ರೂಪಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಉನ್ನತ ಸಮಿತಿ ಈ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಿದೆ. ಇದರೊಂದಿಗೆ ರಾಜ್ಯ ಸಿವಿಲ್ ಸೇವೆಗಳ ಗ್ರೂಪ್ ಎ, ಬಿ, ಸಿ ಮತ್ತು ಡಿ ವೃಂದದ ಎಲ್ಲಾ ನೇರ ನೇಮಕಾತಿಗಳಲ್ಲೂ ಕ್ರೀಡಾ ಸಾಧಕರಿಗೆ ಶೇ.2ರಷ್ಟು ಸಮತಲ ಮೀಸಲಾತಿಯನ್ನು ಕಲ್ಪಿಸಿ ಈಗಾಗಲೇ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

‘ಟಾರ್ಗೆಟ್ ಒಲಿಂಪಿಕ್ಸ್’ಗೆ ತಲಾ ₹10 ಲಕ್ಷ ಸಿದ್ಧತಾ ಅನುದಾನ

ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಾಜ್ಯದ ಕ್ರೀಡಾಪಟುಗಳು ಪದಕ ಬೇಟೆಯಾಡಲು ನೆರವಾಗುವಂತೆ 'ಟಾರ್ಗೆಟ್ ಒಲಿಂಪಿಕ್ಸ್' ಯೋಜನೆಯನ್ನು ಚುರುಕುಗೊಳಿಸಲಾಗಿದೆ. 2026-27ನೇ ಸಾಲಿಗೆ ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್. ಪೂವಮ್ಮ, ಸ್ನೇಹ ಎಸ್.ಎಸ್., ಶ್ರೇಯಾಂಕ ಪಾಟೀಲ್ ಹಾಗೂ ಕಾಮನ್‌ವೆಲ್ತ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಒಲಿಂಪಿಕ್ಸ್ ಪೂರ್ವ ತರಬೇತಿ ಮತ್ತು ಅಭ್ಯಾಸಕ್ಕಾಗಿ ಪ್ರಸಕ್ತ ಸಾಲಿನಲ್ಲಿ ತಲಾ ₹10 ಲಕ್ಷ ವಿಶೇಷ ಅನುದಾನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS: ರೆಬೆಲ್ ಸ್ಟಾರ್ ಅಂಬರೀಶ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡಿ: ಸರ್ಕಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ಪತ್ರದೆಹಲಿಯ ನಿವಾಸಿ ಆಯುಕ್ತ ಸಮೀರ್ ಶುಕ್ಲಗೆ ಬೀಳ್ಕೊಡುಗೆ ನೀಡಿದ ಈಶ್ವರ ಖಂಡ್ರೆBREAKING: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸದ ಮೇಲೆ ED ದಾಳಿಚಿಕ್ಕಮಗಳೂರಲ್ಲಿ: ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲುಜನರಲ್ಲಿ ಭಯ ಭೀತಿಯನ್ನು ಹುಟ್ಟಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ: ಛಲವಾದಿ ನಾರಾಯಣಸ್ವಾಮಿ‘ದಿ ವಾನ್’ ಸಕ್ಸಸ್ ನಡುವೆ ಆಧ್ಯಾತ್ಮಿಕ ಕಥೆ ಬಿಚ್ಚಿಟ್ಟ ತಮನ್ನಾ: ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ಸದ್ಗುರು ಆಶ್ರಮದ ಕನೆಕ್ಷನ್!ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಮೈತ್ರಿಕೂಟದಿಂದ ತೀವ್ರಗೊಂಡ ಪ್ರತಿಭಟನೆ: ಚುನಾವಣಾ ಆಯೋಗಕ್ಕೆ ಮುತ್ತಿಗೆ ಯತ್ನದೆಹಲಿಯ ನಿವಾಸಿ ಆಯುಕ್ತ ಸಮೀರ್ ಶುಕ್ಲಗೆ ಸಚಿವ ಈಶ್ವರ ಖಂಡ್ರೆ ಬೀಳ್ಕೊಡುಗೆಅನಂತ್ ಅಂಬಾನಿಯವರ ‘ಚಾಂಪಿಯನ್ಸ್ ಆಫ್ ಕೇರ್’ಅಭಿಯಾನ ಆರಂಭ: ಕರ್ನಾಟಕದ ಮೂರು ಪ್ರಾಣಿ ಕಲ್ಯಾಣ ಸಂಸ್ಥೆಗಳ ಜತೆಗೆ ವಂತಾರಾ ಪಾಲುದಾರಿಕೆಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದವರಿಗೆ ₹1 ಕೋಟಿ, ಬೆಳ್ಳಿ ಗೆದ್ದವರಿಗೆ ₹75 ಲಕ್ಷ ನಗದು ಬಹುಮಾನ: ಸಿಎಂ ಘೋಷಣೆ