LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿ ₹2,165 ಕೋಟಿ ವಂಚನೆ ಕೇಸ್: ಕಿಂಗ್‌ಪಿನ್ ಶಿವಾನಂದ್ ನೀಲಣ್ಣನವರ್ ವಿರುದ್ಧ ED ಚಾರ್ಜ್‌ಶೀಟ್ ಸಲ್ಲಿಕೆ

ಬೆಂಗಳೂರು: ಬೆಳಗಾವಿ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಸಾವಿರಾರು ಮುಗ್ಧ ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಜೈಲು ಸೇರಿರುವ 'ಶಿವಂ ಅಸೋಸಿಯೇಟ್ಸ್' ಸಂಸ್ಥೆಯ ಮಾಲೀಕ ಶಿವಾನಂದ್ ನೀಲಣ್ಣನವರ್ ವಿರುದ್ಧ ಜಾರಿ ನಿರ್ದೇಶನಾಲಯ (ED) ಭಾರಿ ಗಾತ್ರದ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದೆ. ಸುಮಾರು 35 ಸಾವಿರ ಜನರಿಗೆ ಬರೋಬ್ಬರಿ ₹2,165 ಕೋಟಿ ವಂಚಿಸಿರುವ ಆಘಾತಕಾರಿ ಅಂಶವನ್ನು ತನಿಖಾ ಸಂಸ್ಥೆ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದೆ.

ಎರಡು ತಿಂಗಳ ಹಿಂದೆ ಬಂಧನ, ₹2.02 ಕೋಟಿ ಜಪ್ತಿ

ಶಿವಂ ಅಸೋಸಿಯೇಟ್ಸ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ತಿಂಗಳ ಹಿಂದಷ್ಟೇ ಇಡಿ ಅಧಿಕಾರಿಗಳು ಶಿವಾನಂದ್ ನೀಲಣ್ಣನವರ್‌ನನ್ನು ಬಂಧಿಸಿದ್ದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತೀವ್ರ ತನಿಖೆ ನಡೆಸಿ, ನೂರಾರು ಕಡತಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯಕ್ಕೆ ಅಧಿಕೃತವಾಗಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಈವರೆಗೆ ಆರೋಪಿಯ ಬ್ಯಾಂಕ್ ಖಾತೆಗಳಲ್ಲಿದ್ದ ₹2.02 ಕೋಟಿ ಹಣವನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

ಸಹಕಾರಿ ಸಂಘಗಳ ದುರ್ಬಳಕೆ, ₹185 ಕೋಟಿ ನಷ್ಟ

ತನಿಖಾ ವರದಿಯ ಪ್ರಕಾರ, ಈ ವಂಚನೆಯಿಂದ ₹185.95 ಕೋಟಿ ನಷ್ಟ ಉಂಟಾಗಿದೆ. ಸಾರ್ವಜನಿಕರ ಹೂಡಿಕೆಯ ಪೈಕಿ ₹25 ಕೋಟಿ ಹಣವನ್ನು ಶ್ರೀಮಾತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್’ ಹಾಗೂ ಧನಶ್ರೀ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್’ ಸಂಸ್ಥೆಗಳಲ್ಲಿ ಠೇವಣಿ ಇಡಲಾಗಿತ್ತು. ಆ ಠೇವಣಿಗಳನ್ನೇ ಅಡವಿಟ್ಟು, ಆಪ್ತರ ಹೆಸರಿನಲ್ಲಿ ಸಾಲ ಪಡೆದು ಅಪಾರ ಪ್ರಮಾಣದ ರಿಯಲ್ ಎಸ್ಟೇಟ್ ಭೂಮಿಯನ್ನು ಖರೀದಿಸಿ ಅಕ್ರಮ ಎಸಗಿರುವುದು ಬಯಲಾಗಿದೆ.

ಹೆಂಡತಿ, ಮಗನ ಖಾತೆಗೆ ಹಣ; ಸಿನಿಮಾಗೂ ಬಂಡವಾಳ!

ಸಾರ್ವಜನಿಕರಿಂದ ಸಂಗ್ರಹಿಸಿದ ಠೇವಣಿ ಹಣವನ್ನು ಶಿವಾನಂದ್ ತನ್ನ ಪತ್ನಿ ಸಂಗೀತಾ ಹಾಗೂ ಅಪ್ರಾಪ್ತ ಮಗ ಸಿದ್ಧಾಂತ್ ಅವರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಒಡೆತನದ ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗೆ ₹19 ಕೋಟಿ ಹಾಗೂ ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್’ ಮತ್ತು `ಶಿವಂ ಫುಡ್ಸ್’ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ಹರಿಸಿದ್ದಾನೆ. ಜನರನ್ನು ವಂಚಿಸಿ ಸಂಗ್ರಹಿಸಿದ ಹಣದಲ್ಲಿ ₹5 ಕೋಟಿಯನ್ನು ಚಲನಚಿತ್ರ ನಿರ್ಮಾಣಕ್ಕೂ ಹೂಡಿಕೆ ಮಾಡಿ ದುಂದುವೆಚ್ಚ ಮಾಡಿರುವುದು ಇಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಬಹಿರಂಗವಾಗಿದೆ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!CJP ಪ್ರತಿಭಟನೆ: 3,000ಕ್ಕೂ ಹೆಚ್ಚು ಜನರ ಬಂಧನ; ದೇಶದಲ್ಲೀಗ ಅಘೋಷಿತ ತುರ್ತು ಪರಿಸ್ಥಿತಿ ಎಂದ ಸೋನಮ್ ವಾಂಗ್ ಚುಕ್ಬೆಳಗಾವಿ ₹2,165 ಕೋಟಿ ವಂಚನೆ ಕೇಸ್: ಕಿಂಗ್‌ಪಿನ್ ಶಿವಾನಂದ್ ನೀಲಣ್ಣನವರ್ ವಿರುದ್ಧ ED ಚಾರ್ಜ್‌ಶೀಟ್ ಸಲ್ಲಿಕೆ'ಸಾಗರ ಬ್ಲಾಕ್ ಕಾಂಗ್ರೆಸ್' ಸಾರಥ್ಯಕ್ಕೆ ಜನಾನುರಾಗಿ ನಾಯಕ ತಾರಾಮೂರ್ತಿ ಸಜ್ಜು: 'ಅಧ್ಯಕ್ಷ ಗದ್ದು'ಗೆ ಬಹುತೇಕ ಫಿಕ್ಸ್!ಹಾಡಿ ಜನರಿಗೆ ಸೌಲಭ್ಯ ಒದಗಿಸಲು "ವಿಶೇಷ ಪ್ರಜಾಸೇವೆ ಅಭಿಯಾನ: ಸಚಿವ ಟಿ.ರಘುಮೂರ್ತಿ