LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

'ಸಾಗರ ಬ್ಲಾಕ್ ಕಾಂಗ್ರೆಸ್' ಸಾರಥ್ಯಕ್ಕೆ ಜನಾನುರಾಗಿ ನಾಯಕ ತಾರಾಮೂರ್ತಿ ಸಜ್ಜು: 'ಅಧ್ಯಕ್ಷ ಗದ್ದು'ಗೆ ಬಹುತೇಕ ಫಿಕ್ಸ್!

ಸಾಗರ: ಮಲೆನಾಡಿನ ರಾಜಕೀಯ ಕೇಂದ್ರಬಿಂದು ಸಾಗರದಲ್ಲಿ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿದ್ದು, ಪಕ್ಷದ ಅತ್ಯಂತ ನಿಷ್ಠಾವಂತ, ಸಂಘಟನಾ ಚತುರ ಹಾಗೂ ಹಿರಿಯ ಮುಖಂಡ ತಾರಾಮೂರ್ತಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಪಕ್ಷದ ಹಿತಕ್ಕಾಗಿ ತ್ಯಾಗ, ಸತತ ಪರಿಶ್ರಮ ಹಾಗೂ ಕಾರ್ಯಕರ್ತರ ಪ್ರೀತಿಯನ್ನೇ ಬಂಡವಾಳವಾಗಿಸಿಕೊಂಡಿರುವ ತಾರಾಮೂರ್ತಿ ಅವರಿಗೆ ಈ ಬಾರಿ ಬ್ಲಾಕ್ ಕಾಂಗ್ರೆಸ್ ಸಾರಥ್ಯ ಒಲಿಯುವುದು ಬಹುತೇಕ ಖಚಿತ ಎಂಬ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಬಲವಾಗಿ ಮಾರ್ದನಿಸುತ್ತಿವೆ.

ತ್ಯಾಗ ಮತ್ತು ನಿಷ್ಠೆಯ ಪ್ರತೀಕ ತಾರಾಮೂರ್ತಿ

1995 ರಿಂದಲೂ ಎನ್‌ಎಸ್‌ಯುಐ ವಿದ್ಯಾರ್ಥಿ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಮೂಲಕ ರಾಜಕೀಯ ಹೆಜ್ಜೆಯಿಟ್ಟ ತಾರಾಮೂರ್ತಿ ಅವರು, ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಅಚಲವಾಗಿ ಬದ್ಧರಾಗಿ ದುಡಿದ ಅಪರೂಪದ ನಾಯಕ.

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸುಲಭ ಗೆಲುವಿನ ಸಮೀಪವಿದ್ದರೂ ಪಕ್ಷದ ವರಿಷ್ಠರ ಮಾತಿಗೆ ಗೌರವ ನೀಡಿ ಹೊಂದಾಣಿಕೆ ಮಾಡಿಕೊಂಡ ಹಿರಿಮೆ ಇವರದ್ದು. ಅಷ್ಟೇ ಅಲ್ಲದೆ, ನಗರಸಭೆ ಚುನಾವಣಾ ಸಂದರ್ಭದಲ್ಲಿ ಪಕ್ಷದ ಹಿತದೃಷ್ಟಿಯಿಂದ ಸುಂದರ್ ಸಿಂಗ್ ಅವರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ನಿಸ್ವಾರ್ಥತೆ ಮೆರೆದಿದ್ದರು.

ಹಿಂದೆ 15ನೇ ವಾರ್ಡ್‌ನಲ್ಲಿ ಯಾರೊಬ್ಬರೂ ಸ್ಪರ್ಧಿಸಲು ಧೈರ್ಯ ತೋರದಿದ್ದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಪಕ್ಷದ 'ಬಿ-ಫಾರಂ' ಪಡೆದು ಕಣಕ್ಕಿಳಿದು ದಿಟ್ಟ ಹೋರಾಟ ಸಂಘಟಿಸಿದ ಇತಿಹಾಸ ಇವರ ಬೆನ್ನಿಗಿದೆ.

ಜನಸಾಮಾನ್ಯರ ಸಂಕಷ್ಟಕ್ಕೆ ಸದಾ ಮಿಡಿಯುವ ಹೃದಯವಂತ

ಕೇವಲ ರಾಜಕೀಯಕ್ಕಷ್ಟೇ ಸೀಮಿತವಾಗದೆ, ಸಾರ್ವಜನಿಕರ ಹಿತ ಕಾಯುವಲ್ಲಿ ಸದಾ ಮುಂದು. ಹಗಲಿರುಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು, ಆಸ್ಪತ್ರೆ ಸೇರಿದಂತೆ ತುರ್ತು ವೈದ್ಯಕೀಯ ಸೇವೆಗಳ ಅಗತ್ಯವಿದ್ದಾಗ ಮುಂಚೂಣಿಯಲ್ಲಿ ನಿಂತು ನೆರವಾಗುವ ಗುಣ ತಾರಾಮೂರ್ತಿ ಅವರನ್ನು ಜನಮಾನಸದಲ್ಲಿ ಅಚ್ಚುಮೆಚ್ಚಿನ ನಾಯಕರನ್ನಾಗಿ ಮಾಡಿದೆ.

"ಪಕ್ಷವನ್ನು ತಳಮಟ್ಟದಿಂದ ಇನ್ನಷ್ಟು ಬಲಪಡಿಸಲು ಮತ್ತು ಯುವ ಸಮುದಾಯವನ್ನು ಸಂಘಟಿಸಲು ನಾಯಕತ್ವ ವಹಿಸಿಕೊಳ್ಳಲು ಸಿದ್ಧನಿದ್ದೇನೆ. ವೀಕ್ಷಕರ ಭೇಟಿ ವೇಳೆ ಕಾರ್ಯಕರ್ತರ ಅಭಿಪ್ರಾಯಕ್ಕೆ ತಕ್ಕಂತೆ ವರಿಷ್ಠರು ಅವಕಾಶ ನೀಡುವ ಪೂರ್ಣ ವಿಶ್ವಾಸವಿದೆ" ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖಂಡರು, ಕಾರ್ಯಕರ್ತರ ಜತೆ ನಿರಂತರ ಸಂಪರ್ಕ

ತಳಮಟ್ಟದ ಕಾರ್ಯಕರ್ತನಿಂದ ಹಿಡಿದು ಅಗ್ರಪಂಕ್ತಿಯ ನಾಯಕರವರೆಗೆ ಎಲ್ಲರನ್ನೂ ಪ್ರೀತಿಯಿಂದ ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಪರೂಪದ ಸಂಘಟನಾ ಶಕ್ತಿ ಇವರದ್ದು. ಇತ್ತೀಚೆಗೆ ಸ್ಥಳೀಯ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಪಕ್ಷದ ಪ್ರಮುಖ ಮುಖಂಡರಾದ ಮುಬೀನ್ ಖಾನ್, ರಫೀಕ್ ಭಾಯ್ ಹಾಗೂ ಜಮೀಲ್ ಸೇರಿದಂತೆ ಹಲವು ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದು, ಪಕ್ಷ ಸಂಘಟನೆ ಹಾಗೂ ಮುಂಬರುವ ಆಯ್ಕೆ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ಪಕ್ಷದ ಪ್ರತಿಯೊಂದು ಹೋರಾಟ ಮತ್ತು ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವ ಅವರ ನಾಯಕತ್ವಕ್ಕೆ ಸ್ಥಳೀಯ ಮಟ್ಟದಲ್ಲಿ ಭಾರಿ ಜನಾಭಿಪ್ರಾಯ ವ್ಯಕ್ತವಾಗಿದೆ.

ಅಕ್ಟೋಬರ್.13ಕ್ಕೆ ವೀಕ್ಷಕರ ಭೇಟಿ: ಅಧಿಕೃತ ಘೋಷಣೆ ಬಾಕಿ?

ಅಕ್ಟೋಬರ್ 13ರಂದು ಕೆಪಿಸಿಸಿ ವೀಕ್ಷಕರು ಸಾಗರಕ್ಕೆ ಭೇಟಿ ನೀಡಲಿದ್ದು, ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಪಕ್ಷದ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಹೈಕಮಾಂಡ್ ಕೂಡ ಸಾಗರದಲ್ಲಿ ಪಕ್ಷವನ್ನು ಮತ್ತಷ್ಟು ಕ್ರಿಯಾಶೀಲವಾಗಿ ಮುನ್ನಡೆಸಲು ಜನಸಾಮಾನ್ಯರ ಜತೆ ನಿಲ್ಲುವ ಇಂತಹ ಸಮರ್ಥ ನಾಯಕನ ಅಗತ್ಯವನ್ನು ಮನಗಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಕ್ಟೋಬರ್ 13ರಂದು ನಡೆಯಲಿರುವ ಸಭೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ  ತಾರಾಮೂರ್ತಿ ಅವರ ಹೆಸರು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಆ ಮೂಲಕ ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ತಾರಾಮೂರ್ತಿ ಗದ್ದುಗೆ ಏರಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಅಕ್ಟೋಬರ್.13ರವರೆಗೂ ಕಾದು ನೋಡಬೇಕಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!CJP ಪ್ರತಿಭಟನೆ: 3,000ಕ್ಕೂ ಹೆಚ್ಚು ಜನರ ಬಂಧನ; ದೇಶದಲ್ಲೀಗ ಅಘೋಷಿತ ತುರ್ತು ಪರಿಸ್ಥಿತಿ ಎಂದ ಸೋನಮ್ ವಾಂಗ್ ಚುಕ್ಬೆಳಗಾವಿ ₹2,165 ಕೋಟಿ ವಂಚನೆ ಕೇಸ್: ಕಿಂಗ್‌ಪಿನ್ ಶಿವಾನಂದ್ ನೀಲಣ್ಣನವರ್ ವಿರುದ್ಧ ED ಚಾರ್ಜ್‌ಶೀಟ್ ಸಲ್ಲಿಕೆ'ಸಾಗರ ಬ್ಲಾಕ್ ಕಾಂಗ್ರೆಸ್' ಸಾರಥ್ಯಕ್ಕೆ ಜನಾನುರಾಗಿ ನಾಯಕ ತಾರಾಮೂರ್ತಿ ಸಜ್ಜು: 'ಅಧ್ಯಕ್ಷ ಗದ್ದು'ಗೆ ಬಹುತೇಕ ಫಿಕ್ಸ್!ಹಾಡಿ ಜನರಿಗೆ ಸೌಲಭ್ಯ ಒದಗಿಸಲು "ವಿಶೇಷ ಪ್ರಜಾಸೇವೆ ಅಭಿಯಾನ: ಸಚಿವ ಟಿ.ರಘುಮೂರ್ತಿ