LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅ.2ರಿಂದ 'ನೈಸ್ ರಸ್ತೆ' ವಿರುದ್ಧ ಪ್ರತಿಭಟನೆ ಆರಂಭ: ಕೇಂದ್ರ HDK

ಬೆಂಗಳೂರು: ನೈಸ್ ಯೋಜನೆಯ ಅಕ್ರಮಗಳ ಬಗ್ಗೆ ತಮ್ಮ ಹೋರಾಟವನ್ನು ಮುಂದುವರಿಸಿರುವ ಕೇಂದ್ರ ಸಚಿವ ಹೆಚ್‍.ಡಿ. ಕುಮಾರಸ್ವಾಮಿ ಅವರು; ನೈಸ್ ಯೋಜನೆಯ ಬಾಧಿತ ಗ್ರಾಮಗಳಿಗೆ ಅಕ್ಟೋಬರ್ 2ರಿಂದ ಭೇಟಿ ನೀಡುವುದಾಗಿ ಘೋಷಿಸಿದರು.

ಅಲ್ಲದೆ, ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಕರೆದು ನೈಸ್ ಯೋಜನೆ ಕುರಿತ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವರು ಘೋಷಿಸಿದರು.

ನೈಸ್ ಕಂಪನಿ ಹಾಗೂ ಅದು ಎಸಗಿರುವ ಅಕ್ರಮಗಳ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು; ಕನಿಷ್ಠ ಐವತ್ತು ಹಳ್ಳಿಗಳಿಗೆ ಭೇಟಿ ನೀಡುತ್ತೇನೆ. ಆ ಕಂಪನಿಯ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಾರ್ವಜನಿಕರನ್ನು ಭೇಟಿಯಾಗುತ್ತೇನೆ. ಜನರ ಜತೆ ಸೇರಿಕೊಂಡು ನಾನು ಹೋರಾಟ ಮಾಡುತ್ತೇನೆ. ಕೊನೆಗೆ ಈ ಕಂಪನಿಗೆ ಯಾವ ರೀತಿ ಪಾಠ ಕಲಿಸಬೇಕು ಎಂದು ಜನರೇ ತೀರ್ಮಾನ ಮಾಡಲಿ ಎಂದು ಸಚಿವರು ಹೇಳಿದರು.

ಮಾದಾವರ ಗ್ರಾಮದಲ್ಲಿ ನೈಸ್ ಇಂಟಿಗ್ರೇಟೆಡ್ ರಸ್ತೆಯ ಬಾಧಿತ ಐದು ಗ್ರಾಮಗಳ ಜನರಿಂದ ಅಹವಾಲು ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು; ಗಾಂಧಿ ಜಯಂತಿ ದಿನದಿಂದ ನನ್ನ ಹೋರಾಟ ಪ್ರಾರಂಭ ಮಾಡುತ್ತೇನೆ. ನಾನು ನಿಮಗೆ ಒಂದು ದಿನ ಸಮಾಧಾನ ಮಾಡಿ ಹೋಗಲು ಬಂದಿಲ್ಲ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು. ಜನರ ಜತೆಗೆ ನಿಂತು ಹೋರಾಟ ಮಾಡುತ್ತೇನೆ. ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ನಾನು ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡುತ್ತೇನೆ. ಇವತ್ತು ನಿಮಗೆ ಮಾತು ಕೊಟ್ಟು ಹೋಗುತ್ತಿದ್ದೇನೆ. ನಾನು ತೋರುಗಾಣಿಕೆಗೆ ಬಂದು ಹೋಗಲು ಬಂದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ದೇವೇಗೌಡರ ಕಾಲ ಮುಗಿದೇ ಹೋಯ್ತು ಎಂದು ಹಂಗಿಸಿದರು. ನಿಮ್ಮ ಆಶೀರ್ವಾದದಿಂದ ದೆಹಲಿಯಲ್ಲಿ ಸಚಿವನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ದೇವೇಗೌಡರು ವ್ಹೀಲ್ ಚೇರ್ ನಲ್ಲಿ ಓಡಾಡಬೇಕು, ಡಯಾಲಿಸೀಸ್ ಗೆ ಒಳಗಾಗಬೇಕು. ಈಗಲೂ ಜನರ ಪರವಾಗಿ ಹೋರಾಟ ಮಾಡುವೆ ಎನ್ನುತ್ತಾರೆ. ಅವರು ಮನೆಯಲ್ಲಿ ಇರಬಹುದಲ್ಲ, ಯಾತಕ್ಕೆ ಬರುತ್ತಿದ್ದಾರೆ ಎಂದು ಅನಿಸುತ್ತದೆ. ನಿಮ್ಮಂತ ಜನರ ಪರವಾಗಿ ಹೋರಾಟ ಮಾಡಲು ಬರುತ್ತಾರೆ ಅವರು. ನಿಮಗೆ ಮಾತು ಕೊಟ್ಟು ಹೋಗ್ತಾ ಇದ್ದೇನೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನದಿಂದ ನಾನು ಈ ಪ್ರವಾಸ ಆರಂಭಿಸುತ್ತೇನೆ ಎಂದು ಎಂದು ಸಚಿವರು ಗುಡುಗಿದರು.

ಸುಮಾರು ಐವತ್ತು ಹಳ್ಳಿಗಳ ಜನರಿಗೆ ನೈಸ್ ಕಂಪನಿಯಿಂದ ಭೂಮಿ ವಾಪಸ್ ಕೊಡಬೇಕು ಎಂದು ಆಂದೋಲನ ಮಾಡುತ್ತಿದ್ದೇವೆ. ಇಲ್ಲಿಂದ ಎಲೆಕ್ಟ್ರಾನಿಕ್ ಸಿಟಿ ವರೆಗೆ ಪ್ರವಾಸ ಮಾಡುತ್ತೇನೆ ಎಂದು ಸಚಿವರು ಹೇಳಿದರು.

ನೀವು ಯಾವುದಕ್ಕೂ ಅಂಜಬೇಡಿ. ಎಷ್ಟು ಜನ ಬರುತ್ತಾರೋ ಬರಲಿ. ನೀವೆಲ್ಲಾ ಒಗ್ಗಟ್ಟಾಗಿರಿ. ಕೋರ್ಟ್ ನಿಂದ ಕೆಲವರು ಸ್ಟೇ ತಂದಿದ್ದರೂ ಅದನ್ನು ಈ ಸರ್ಕಾರ ಪರಿಗಣಿಸುತ್ತಿಲ್ಲ. ಇವರು ಯಾವ ಮಟ್ಟಕ್ಕೆ ಇದ್ದಾರೆ ಎಂದರೆ ಕೋರ್ಟ್ ಆದೇಶಗಳಿಗೆ ಬೆಲೆ ಕೊಡುತ್ತಿಲ್ಲ. ನಿಮ್ಮ ಪರವಾಗಿ ದನಿ ಎತ್ತಲು ನಾನು ಸಿದ್ದನಿದ್ದೇನೆ. ನಿಮ್ಮನ್ನು ದುರ್ಬಳಕೆ ಮಾಡಿಕೊಂಡು ನನಗೇನೂ ಆಗಬೇಕಿಲ್ಲ. ಈಗಾಗಲೇ ಆರೂವರೆ‌ ಕೋಟಿ ಜನರ ಪ್ರೀತಿ ಸಂಪಾದನೆ ಮಾಡಿದ್ದೇನೆ. ನೀವು (ಡಿಕೆಶಿ) ಇಲ್ಲಿವರೆಗೆ ಮಾಡಿರುವ ಎಲ್ಲ ಅಕ್ರಮಗಳನ್ನು ನಿಲ್ಲಿಸಿ,  ಪ್ರಾಮಾಣಿಕವಾಗಿ ರಾಜ್ಯದ ಅಭಿವೃದ್ಧಿ ಗೆ ದುಡಿದರೆ ನಾನೇ ಐವತ್ತು ಸಾವಿರ ಜನರನ್ನು ಸೇರಿಸಿ ನಿಮಗೆ ಸನ್ಮಾನ ಮಾಡುತ್ತೇನೆ. ನನಗೆ ಯಾವ ಅಸೂಯೆ ಇಲ್ಲ ಎಂದು ಸಿಎಂ ಡಿಕೆಶಿಯನ್ನು ಉದ್ದೇಶಿಸಿ ಕುಮಾರಸ್ವಾಮಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎನ್.ಜವರಾಯಗೌಡ ಅವರು, ಮಾಜಿ ಎಂಎಲ್‌ಸಿ ಈ. ಕೃಷ್ಣಪ್ಪ ಅವರು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷರಾದ ಹೆಚ್.ಎಂ. ರಮೇಶ್ ಗೌಡ ಅವರು ಸೇರಿದಂತೆ ಅನೇಕ ಮುಖಂಡರು, ನೊಂದ ರೈತರು ಪಾಲ್ಗೊಂಡಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅರಮನೆ ಗಜಪಡೆ ಕ್ಯಾಂಪ್‌ನಲ್ಲಿ ಹಬ್ಬದ ಕಳೆ: ಮಾವುತರು, ಕಾವಾಡಿಗಳ ಕುಟುಂಬಗಳಿಗೆ ಭರ್ಜರಿ ಗಿಫ್ಟ್!ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ ಪ್ರಕಟ: ಎಚ್‌.ಟಿ.ರತ್ನಾಕರ್‌ಗೆ ಜೀವಮಾನ ಸಾಧನೆ ಗೌರವ; ಇಲ್ಲಿದೆ ಸಂಪೂರ್ಣ ಪಟ್ಟಿಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಗದಗ KRIDL ಎಇಇ ಹೈದರಾಬಾದ್‌ನಲ್ಲಿ ಪತ್ತೆ: ಸಿಎಂ ಡಿ.ಕೆ.ಶಿವಕುಮಾರ್AI ಮೂಲಕ ಪ್ರವಾಸೋದ್ಯಮವನ್ನು ಹೆಚ್ಚು ಸಮಗ್ರ, ಸುಸ್ಥಿರ ಮತ್ತು ಅರ್ಥಪೂರ್ಣವಾಗಿಸಲ ಸಚಿವ ಕೆ.ಜೆ. ಜಾರ್ಜ್  ಕರೆಅ.2ರಿಂದ 'ನೈಸ್ ರಸ್ತೆ' ವಿರುದ್ಧ ಪ್ರತಿಭಟನೆ ಆರಂಭ: ಕೇಂದ್ರ HDKಕಿತ್ತು ಬಂದ ರಸ್ತೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ ಯುವಕನಿಗೆ ಸಚಿವ ಕಪಾಳಮೋಕ್ಷ | VIDEO'ಪತ್ರಕರ್ತರಿಗೆ ರೈಲ್ವೆ ಪಾಸ್' ಮರುಜಾರಿಗೊಳಿಸಲು ಕೇಂದ್ರ ಸಚಿವ ವಿ.ಸೋಮಣ್ಣಗೆ KUWJ ಮನವಿಸಾಲಮನ್ನಾ ಮಾಡಲು ಕಾಂಗ್ರೆಸ್ ಬೆಂಬಲ ಸುಳ್ಳು; ಆ ಪಾಪಿಗಳು ಸಹಕಾರ ನೀಡಲಿಲ್ಲ- HDKCRIME: ಲೈಂಗಿಕ ಕಿರುಕುಳ ನೀಡುತ್ತಿದ್ದವನ ಕತ್ತು ಹಿಸುಕಿ ಕೊಂದ ಮಹಿಳೆ, ಅರೆಸ್ಟ್!ಸಾರ್ವಜನಿಕ ಶೌಚಾಲಯದಲ್ಲಿ ವಿಷಕಾರಿ ರಾಸಾಯನಿಕ ಅನಿಲ ಉಸಿರಾಡಿ ಇಬ್ಬರು ಸಾವು