LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನ.28, 29ರಂದು 2 ದಿನ ಮಂಗಳೂರಲ್ಲಿ ಜನನುಡಿ-2026: ಪೋಸ್ಟರ್ ಬಿಡುಗಡೆ

ಮಂಗಳೂರು: ಕರಾವಳಿಯ ಸಾಂಸ್ಕೃತಿಕ ಹಾಗೂ ವೈಚಾರಿಕ ವಲಯದಲ್ಲಿ ತೀವ್ರ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ "ಜನನುಡಿ 2026" ಸಮಾವೇಶದ ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಸಮಾವೇಶದ ಅಧಿಕೃತ ಪೋಸ್ಟರ್ ಬಿಡುಗಡೆ ಹಾಗೂ ಪ್ರಚಾರಾಂದೋಲನಕ್ಕೆ ಚಾಲನೆ ನೀಡುವ ಮಹತ್ವದ ಸಿದ್ಧತಾ ಸಭೆಯು ಮಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಮಂಗಳೂರಿನಲ್ಲಿ ನವೆಂಬರ್ 28 ಮತ್ತು 29 ರಂದು 2 ದಿನಗಳ ಕಾಲ ನಡೆಯಲಿರುವ ಜನನುಡಿ ಸಮ್ಮೇಳನದ ಮುಂದಿನ ಹಂತದ ಯೋಜನೆಗಳು, ವೇದಿಕೆ ನಿರ್ವಹಣೆ ಹಾಗೂ ಸಂಘಟನಾ ಕಾರ್ಯಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು. ಕರಾವಳಿ ಭಾಗದ "ಜನನುಡಿ ಬಳಗ"ದ ಪ್ರಮುಖರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಮಾವೇಶದ ಸರ್ವಾಂಗೀಣ ಯಶಸ್ಸಿಗೆ ಒಗ್ಗಟ್ಟಿನಿಂದ ಶ್ರಮಿಸಲು ತೀರ್ಮಾನಿಸಿದರು.

ಹಿರಿಯ ಗಣ್ಯರಿಂದ ಜನನುಡಿ ಪೋಸ್ಟರ್ ಅನಾವರಣ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖ ಚಿಂತಕರು ಹಾಗೂ ಹೋರಾಟಗಾರರು "ಜನನುಡಿ 2026" ಸಮಾವೇಶದ ಪ್ರಚಾರ ಪೋಸ್ಟರ್ ಅನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು. ಹಿರಿಯ ವಿಚಾರವಾದಿ ಹಾಗೂ ಹೋರಾಟಗಾರ ಪ್ರೊ. ನರೇಂದ್ರ ನಾಯಕ್, ಸಾಂಸ್ಕೃತಿಕ ಚಳವಳಿಯ ಹಿರಿಯ ಮುಖಂಡ ವಾಸುದೇವ ಉಚ್ಚಿಲ, ಖ್ಯಾತ ಕವಿ ವಿಲ್ಸನ್ ಕಟೀಲ್, ಪ್ರಮುಖ ಮುಖಂಡ ಮುನೀರ್ ಕಾಟಿಪಳ್ಳ, 'ಸಾಮರಸ್ಯ ಮಂಗಳೂರು' ಸಂಘಟನೆಯ ಮಂಜುಳಾ ನಾಯಕ್ ಹಾಗೂ ಲುಕ್ಮಾನ್ ಬಂಟ್ವಾಳ ಜಂಟಿಯಾಗಿ ಪೋಸ್ಟರ್ ಬಿಡುಗಡೆ ಮಾಡಿ, ಸಮಾವೇಶದ ಆಶಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದರು.

ಜನಪರ ಕಾಳಜಿ, ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಸೌಹಾರ್ದತೆಯ ನೆಲೆಗಟ್ಟಿನಲ್ಲಿ ಜನನುಡಿ ಸಮಾವೇಶವನ್ನು ಅರ್ಥಪೂರ್ಣವಾಗಿ ಸಂಘಟಿಸಲು ಸಮಿತಿಯು ಸರ್ವ ರೀತಿಯಲ್ಲೂ ಸಜ್ಜಾಗುತ್ತಿದೆ ಎಂದು ಸಭೆಯಲ್ಲಿ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೌದಿಯಲ್ಲಿನ ಕನ್ನಡಿಗರ ರಕ್ಷಣೆಗೆ ತುರ್ತು ಸಹಾಯವಾಣಿ ಸಂಖ್ಯೆ ರಿಲೀಸ್: ಸುರಕ್ಷಿತ ವಾಪಸಾತಿ ನಮ್ಮ ಆದ್ಯತೆ ಎಂದ ಸಿಎಂನ.28, 29ರಂದು 2 ದಿನ ಮಂಗಳೂರಲ್ಲಿ ಜನನುಡಿ-2026: ಪೋಸ್ಟರ್ ಬಿಡುಗಡೆBREAKING: ನಾಪತ್ತೆಯಾಗಿದ್ದ KRIDL ಎಇಇ ಪರ್ವೀಜ್ ಮುಂಬೈನಲ್ಲಿ ಪತ್ತೆಸೌದಿಯಲ್ಲಿ ಕನ್ನಡಿಗ ಉಮ್ರಾ ಯಾತ್ರಿಕರು ಅತಂತ್ರ: ತುರ್ತು ರಕ್ಷಣೆಗೆ ವಿದೇಶಾಂಗ ಸಚಿವ ಜೈಶಂಕರ್‌ಗೆ ಸಿಎಂ ಡಿಕೆಶಿ ಪತ್ರಸೌದಿಯಲ್ಲಿನ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ: ತುರ್ತು ನೆರವಿಗೆ 24x7 ಸಹಾಯವಾಣಿ ಆರಂಭಅನಕ್ಷರಸ್ಥ ಗ್ರಾಮೀಣ ಮಹಿಳೆಯರೇ ಇವರ ಟಾರ್ಗೆಟ್: ರಾಜ್ಯದ ಪ್ರತಿಷ್ಠಿತ ಬ್ಯಾಂಕ್ ನಲ್ಲಿ ನಡೀತಿದೆ ಹಣ ವಂಚನೆ ದಂಧೆ!ರೈತರಿಗೆ ಕೇಂದ್ರ ಸರ್ಕಾರದಿಂದ ದೀಪಾವಳಿ ಉಡುಗೊರೆ: 2 ಸಾವಿರ ರೂ. ಪಿಎಂ-ಕಿಸಾನ್ ನಿಧಿಯ 24ನೇ ಕಂತು ಅಕ್ಟೋಬರ್ 30ರಂದು ಬಿಡುಗಡೆಪತಿ, ಮೂವರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಮುಂಬೈಗೆ ಪರಾರಿಯಾದ ಮಹಿಳೆ: ಕಸದ ರಾಶಿಯಲ್ಲಿ ಶವವಾಗಿ ಪತ್ತೆ: ನಡೆದಿದ್ದೇನು?ಸಾಗರದಲ್ಲಿ 'ಮಲೆನಾಡ ಸುಗ್ಗಿ ಮತ್ತು ಕೃಷಿ ಮೇಳ 2026'ಕ್ಕೆ ಅದ್ಧೂರಿ ಚಾಲನೆ: ರೈತರು ಸ್ವಾವಲಂಬಿಗಳಾಗಲು ಗಣ್ಯರ ಕರೆಇದರ ಬೇರನ್ನು ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ, ಅಡಗಿದ್ದ ನಿಧಿಯು ಗೋಚರಿಸುತ್ತೆ