LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಣವಿಲ್ಲ ಎಂದು ಬಾಡಿಗೆ ನೀಡದೆ ಪರಾರಿಯಾಗಿದ್ದ ಬಾಡಿಗೆದಾರ: ಬೀಗ ಒಡೆದ ಮನೆ ಮಾಲೀಕನಿಗೆ 37 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟು ಪತ್ತೆ

ನಾಗ್ಪುರ: ಮನೆ ಬಾಡಿಗೆ ಕೇಳಿದರೆ ಬಾಡಿಗೆದಾರ ತನ್ನ ಬಳಿ ಹಣವಿಲ್ಲ ಎಂದು ಹೇಳಿ ಇದ್ದಕ್ಕಿದ್ದಂತೆ ಎಸ್ಕೇಪ್ ಆಗಿದ್ದ ವ್ಯಕ್ತಿಯ ಮನೆ ಬೀಗ ಒಡೆದು ನೋಡಿದಾಗ ಮನೆ ಮಾಅಲೀಕನಿಗೆ ಬರೋಬ್ಬರಿ 37 ಲಕ್ಷ ಮೌಲ್ಯದ ನಕಲಿ ನೋಟು ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ಬಾಡಿಗೆಗೆ ಪಡೆದ ಕೋಣೆಯಲ್ಲೇ 37 ಲಕ್ಷ ರೂಪಾಯಿ ಮೌಲ್ಯದ ನಕಲಿ 500 ರೂಪಾಯಿ ನೋಟುಗಳನ್ನು ಮುದ್ರಿಸಿದ್ದ. ಬಾಡಿಗೆದಾರನು ಹಲವು ದಿನಗಳಿಂದ ನಾಪತ್ತೆಯಾದಾಗ ಮನೆಯ ಮಾಲೀಕರು ಕೋಣೆಯ ಬೀಗ ಒಡೆದು ನೋಡಿದಾಗ, ಈ ಅಕ್ರಮ ಕೃತ್ಯ ಬೆಳಕಿಗೆ ಬಂದಿದೆ.

ಮನೆ ಮಾಲೀಕ ತಕ್ಷಣ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಾಥೋಡಾ ಪೊಲೀಸರು, ಕೋಣೆಯಲ್ಲಿದ್ದ ನಕಲಿ ನೋಟುಗಳ ಕಟ್ಟುಗಳು, ಪ್ರಿಂಟರ್ ಮತ್ತು ಮುದ್ರಣ ಸಾಮಗ್ರಿಗಳನ್ನು ಕಂಡು ಬೆಚ್ಚಿಬಿದ್ದರು. ಅಲ್ಲದೆ, ಭಾಗಶಃ ಮುದ್ರಿತವಾದ ನೋಟುಗಳು ಸೇರಿದಂತೆ ಸುಮಾರು 48 ಲಕ್ಷ ರೂಪಾಯಿ ಮೌಲ್ಯದ ಇತರ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನಾಗ್ಪುರದ ತ್ರಿಮೂರ್ತಿ ನಗರದ ನಿವಾಸಿ ಪುಷ್ಪಕ್ ಕೃಷ್ಣ ಭಂಡಾರ್ಕರ್ (ಅಲಿಯಾಸ್ ಬೆಂದಾನೆ) ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಆತ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಪುಷ್ಪಕ್ ಸುಮಾರು ಒಂದೂವರೆ ವರ್ಷದ ಹಿಂದೆ ಖಾರ್ಬಿ ಪ್ರದೇಶದಲ್ಲಿ ಕೋಣೆಯೊಂದನ್ನು ಬಾಡಿಗೆಗೆ ಪಡೆದಿದ್ದನು. ಅವನ ಬಾಡಿಗೆ ಒಪ್ಪಂದವು ಜನವರಿಯಲ್ಲಿ ಮುಕ್ತಾಯಗೊಂಡಿತ್ತು ಮತ್ತು ಅವನು ಕಳೆದ ಕೆಲವು ತಿಂಗಳುಗಳಿಂದ ಬಾಡಿಗೆಯನ್ನು ಪಾವತಿಸುವುದನ್ನು ನಿಲ್ಲಿಸಿದ್ದನು ಎಂದು ಹೇಳಲಾಗಿದೆ.

ಮನೆ ಮಾಲೀಕ ರಮೇಶ್ ಅವರು ಆ ಜಾಗವನ್ನು ಖಾಲಿ ಮಾಡುವಂತೆ ಪುಷ್ಪಕ್‌ನನ್ನು ಕೇಳಿದಾಗ, ಅವನು ಚಾಕುವಿನಿಂದ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ರಮೇಶ್ ಅವರು ವಥೋಡಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಇದನ್ನು ಗಂಭೀರವಲ್ಲದ ಅಪರಾಧ ಎಂದು ದೂರು ಎಂದು ದಾಖಲಿಸಿಕೊಂಡರು.

ಬಾಡಿಗೆದಾರನು ದೀರ್ಘಕಾಲದಿಂದ ಆ ಕೋಣೆಗೆ ಬಾರದಿರುವುದರಿಂದ, ಅ.24 ಶನಿವಾರದಂದು ರಮೇಶ್ ಅವರು ಸುತ್ತಿಗೆಯಿಂದ ಬೀಗವನ್ನು ಒಡೆದು ಒಳಗೆ ಪ್ರವೇಶಿಸಿದರು.ಆಗ ಅವರಿಗೆ ಬಕೆಟ್ ಒಂದರಲ್ಲಿ ಕರೆನ್ಸಿ ನೋಟುಗಳ ಕಟ್ಟುಗಳು, ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾಗದಗಳು ಮತ್ತು ಕೋಣೆಯಲ್ಲಿ ಅಳವಡಿಸಿದ್ದ ಪ್ರಿಂಟರ್ ಕಂಡುಬಂದವು. ಇದನ್ನು ಕಂಡು ಗಾಬರಿಗೊಂಡ ರಮೇಶ್, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡಗಳು, 500 ರೂಪಾಯಿಯ ನಕಲಿ ನೋಟುಗಳ ಕಟ್ಟುಗಳನ್ನು ಪತ್ತೆಹಚ್ಚಿದವು. ವಶಪಡಿಸಿಕೊಂಡ ನೋಟುಗಳ ಮೊತ್ತವನ್ನು ಅಂದಾಜಿಸಲು ಹಣ ಎಣಿಸುವ ಯಂತ್ರವನ್ನು ತರಿಸಲಾಯಿತು. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ಸುಮಾರು 37 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಮುದ್ರಿಸಿದ್ದಾನೆ ಎಂದು ತಿಳಿದುಬಂದಿದೆ.

ತನಿಖಾಧಿಕಾರಿಗಳಿಗೆ ಭಾಗಶಃ ಮುದ್ರಿತವಾದ ಕರೆನ್ಸಿ ನೋಟುಗಳು ಮತ್ತು ಮುದ್ರಣ ಸಾಮಗ್ರಿಗಳು ಕೂಡ ಸಿಕ್ಕವು. ಒಂದು ಕಡೆ ಮಾತ್ರ ಮುದ್ರಣಗೊಂಡು ಇನ್ನೊಂದು ಕಡೆ ಖಾಲಿಯಾಗಿದ್ದ ನೋಟುಗಳು ಸೇರಿದಂತೆ, ವಶಪಡಿಸಿಕೊಂಡ ಒಟ್ಟು ನೋಟುಗಳು ಮತ್ತು ಸಾಮಗ್ರಿಗಳ ಮೌಲ್ಯ ಸುಮಾರು 48 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಿಂಗಾಯತ, ವೀರಶೈವ ಒಂದೇ ನಾಣ್ಯದ ಎರಡು ಮುಖ: ಸಚಿವ ಈಶ್ವರ ಖಂಡ್ರೆಸೌದಿ ಅರೆಬಿಯಾದ ರಿಯಾದ್ ಹಾಗೂ ದಮ್ಮಾಮ್ ಗೆ ನವೆಂಬರ್ 7ರವರೆಗೆ ಏರ್ ಇಂಡಿಯಾ ವಿಮಾನ ಹಾರಾಟ ರದ್ದುಬೆಂಗಳೂರಿನ IT ಕಂಪನಿಗಳಲ್ಲಿ ಉದ್ದೇಶಪೂರ್ವಕವಾಗಿ ಕನ್ನಡಿಗರನ್ನು ಕಡೆಗಣಿಸಿದ್ರೆ ಕಠಿಣ ಕ್ರಮ : ಸಿಎಂ ಡಿಕೆ ಶಿವಕುಮಾರ್ ವಾರ್ನಿಂಗ್!ಜನವರಿಯೊಳಗೆ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆ: ಸಚಿವ ಈಶ್ವರ ಖಂಡ್ರೆದಸರಾ ಸಾಕಾನೆಗಳಿಗೆ ಹೆಚ್ಚಿನ ತಾಲೀಮು ಅಗತ್ಯ: ಸಚಿವ ಈಶ್ವರ ಖಂಡ್ರೆಡಾ.ಭೀಮಣ್ಣ ಖಂಡ್ರೆಗೆ 'ಕರ್ನಾಟಕ ರತ್ನ' ನೀಡಲು ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯಗ್ರಾಮೀಣ ಕುಡಿಯುವ ನೀರಿಗೆ ಹಣಕಾಸಿನ ಕೊರತೆ ಇಲ್ಲ: ಸಚಿವ ಈಶ್ವರ ಖಂಡ್ರೆನಟ ಧನ್ವೀರ್‌ಗೆ 10 ಕೋಟಿ ರೂ. ನೀಡಿದ್ದರೇ ವಿಜಯಲಕ್ಷ್ಮಿ? ದರ್ಶನ್ ಪತ್ನಿ-ಧನ್ವೀರ್ ನಡುವಿನ ಗಲಾಟೆಗೆ ಹೊಸ ತಿರುವು!ಸಿದ್ದರಾಮಯ್ಯರನ್ನು ಭೇಟಿಯಾಗಿಲ್ಲ, ಕೆಲವರು ಹೇಳಿ ಕೊಟ್ಟಿದನ್ನು ಮಾತ್ರ ಹೇಳಿದ್ದೇನೆ : ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಸ್ಪೋಟಕ ಹೇಳಿಕೆ!ಹಿರಿಯೂರಿನ ಯಲ್ಲದಕೆರೆಯಲ್ಲಿ 'ಅವೈಜ್ಞಾನಿಕ ರೋಡ್ ಹಂಪ್ಸ್‌'ನಿಂದ ಸಾಲು ಸಾಲು ಅಪಘಾತ: ಕಣ್ಮುಚ್ಚಿ ಕುಳಿತ 'ಹೆದ್ದಾರಿ ಪ್ರಾಧಿಕಾರ'