LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಿಮ್‌ನಲ್ಲಿ ಗಂಟೆಗಟ್ಟಲೆ ಕಳೆಯಬೇಕಾಗಿಲ್ಲ: 45 ದಿನಗಳಲ್ಲಿ 7 ಕೆಜಿ ತೂಕ ಇಳಿಸಿದ ಫಿಟ್ನೆಸ್ ಇನ್ಫ್ಲುಯೆನ್ಸರ್ ಸಿಂಪಲ್ ಸೂತ್ರ

ತೂಕ ಇಳಿಸಿಕೊಳ್ಳುವುದು ಎಂದರೆ ಕೇವಲ ಕಠಿಣ ಡಯಟ್ ಅಥವಾ ಜಿಮ್‌ನಲ್ಲಿ ಗಂಟೆಗಟ್ಟಲೆ ಕಳೆಯುವುದು ಮಾತ್ರವಲ್ಲ, ಅದು ನಮ್ಮ ದಿನನಿತ್ಯದ ಸಣ್ಣಪುಟ್ಟ ಅಭ್ಯಾಸಗಳ ಬದಲಾವಣೆಯಿಂದ ಮಾತ್ರ ಸಾಧ್ಯ ಎಂಬುದನ್ನು ಫಿಟ್ನೆಸ್ ಪ್ರಿಯರೊಬ್ಬರು ನಿರೂಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಫ್ಯಾಟ್ ಬರ್ನರ್ ಮಾತ್ರೆಗಳನ್ನು ಆಶ್ರಯಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಯಾವುದೇ ಮಾತ್ರೆ ಅಥವಾ ಉಪವಾಸವಿಲ್ಲದೆ ಕೇವಲ 45 ದಿನಗಳಲ್ಲಿ ಬರೋಬ್ಬರಿ 7 ಕೆಜಿ ತೂಕ ಇಳಿಸಿ ಗಮನ ಸೆಳೆದಿದ್ದಾರೆ ಫಿಟ್ನೆಸ್ ಇನ್ಫ್ಲುಯೆನ್ಸರ್ ಪ್ರೀತಿ ಶರ್ಮಾ.

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಯಶಸ್ಸಿನ ರಹಸ್ಯವನ್ನು ಹಂಚಿಕೊಂಡಿರುವ ಅವರು, ತೂಕ ಇಳಿಸುವುದು ಅಂದುಕೊಂಡಷ್ಟು ಕಷ್ಟದ ಕೆಲಸವೇನಲ್ಲ. ನಾವು ಅತಿಯಾಗಿ ತಿನ್ನುವುದು ಮತ್ತು ದೈಹಿಕ ಶ್ರಮ ಇಲ್ಲದಿರುವುದೇ ದೇಹದ ತೂಕ ಹೆಚ್ಚಾಗಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಮೊದಲ ಹೆಜ್ಜೆ: ಜಂಕ್ ಫುಡ್‌ಗೆ ಬ್ರೇಕ್

ಅನೇಕರು ಹೊಸದಾಗಿ ಡಯಟ್ ಪ್ಲಾನ್ ಮಾಡುವ ಮುನ್ನ ದಿನನಿತ್ಯ ತಿನ್ನುವ ಅನಾರೋಗ್ಯಕರ ಆಹಾರಗಳನ್ನು ಬಿಡುವುದಿಲ್ಲ. ಪ್ರೀತಿ ಶರ್ಮಾ ಅವರು ಮೊದಲು ಮಾಡಿದ್ದೇ ಈ ಕೆಲಸ. ಅನಗತ್ಯ ಕ್ಯಾಲೋರಿಗಳನ್ನು ನೀಡುವ ಆಹಾರ ಪದಾರ್ಥಗಳನ್ನು ಅವರು ಸಂಪೂರ್ಣವಾಗಿ ದೂರವಿಟ್ಟರು. ಕೋಲ್ಡ್ ಡ್ರಿಂಕ್ಸ್, ಪ್ಯಾಕ್ ಮಾಡಿದ ಜ್ಯೂಸ್, ಟೀ ಮತ್ತು ಕಾಫಿಗೆ ಸಕ್ಕರೆ ಬಳಸುವುದು, ಬಿಸ್ಕೆಟ್, ಬೇಕರಿ ತಿಂಡಿಗಳು, ಮೈದಾ ಬ್ರೆಡ್, ಸಮೋಸಾ, ಚಿಪ್ಸ್ ನಂತಹ ಕರಿದ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿದರು. ಇದರೊಂದಿಗೆ ತಡರಾತ್ರಿ ಮ್ಯಾಗಿ ತಿನ್ನುವ ಅಭ್ಯಾಸ, ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವುದು ಮತ್ತು ಬೋರ್ ಆದಾಗಲೆಲ್ಲಾ ಏನನ್ನಾದರೂ ತಿನ್ನುವ ಹವ್ಯಾಸಕ್ಕೆ ಸಂಪೂರ್ಣ ಬ್ರೇಕ್ ಹಾಕಿದರು.

ಪ್ರೊಟೀನ್ ಯುಕ್ತ ಸರಳ ಆಹಾರ ಪದ್ಧತಿ

ತಮ್ಮ ಆಹಾರ ಕ್ರಮದಲ್ಲಿ ಕಟ್ಟುನಿಟ್ಟಿನ ನಿಯಮಗಳ ಬದಲಾಗಿ ಪೌಷ್ಟಿಕಾಂಶ ಮತ್ತು ಪ್ರೊಟೀನ್ ಹೆಚ್ಚಿರುವ ಆಹಾರಕ್ಕೆ ಅವರು ಆದ್ಯತೆ ನೀಡಿದರು.

ಬೆಳಗಿನ ಉಪಹಾರಕ್ಕೆ 3-4 ಮೊಟ್ಟೆಯ ಬಿಳಿ ಭಾಗ ಮತ್ತು ಒಂದು ಇಡೀ ಮೊಟ್ಟೆ, ಇಲ್ಲವೇ ಓಟ್ಸ್ ಜೊತೆಗೆ ಪೀನಟ್ ಬಟರ್ ಮತ್ತು ಹಣ್ಣುಗಳು ಅಥವಾ ಪನೀರ್ ಭುರ್ಜಿ ಹಾಗೂ ಮೊಳಕೆ ಭರಿಸಿದ ಕಾಳುಗಳನ್ನು ಸೇವಿಸುತ್ತಿದ್ದರು.

ಮಧ್ಯಾಹ್ನದ ಊಟಕ್ಕೆ ಎರಡು ಚಪಾತಿ ಅಥವಾ ಒಂದು ಸಣ್ಣ ಬೌಲ್ ರೈಸ್ ಜೊತೆಗೆ ದಾಲ್, ಗ್ರಿಲ್ಡ್ ಚಿಕನ್ ಅಥವಾ ಪನೀರ್ ಬಳಸುತ್ತಿದ್ದರು. ಇದರೊಂದಿಗೆ ಫೈಬರ್ ಅಂಶಕ್ಕಾಗಿ ಹೆಚ್ಚಿನ ಪ್ರಮಾಣದ ಸಲಾಡ್ ಮತ್ತು ಮನೆಯಲ್ಲೇ ಮಾಡಿದ ತರಕಾರಿ ಪಲ್ಯವನ್ನು ತಿನ್ನುತ್ತಿದ್ದರು.

ಸಂಜೆಯ ವೇಳೆಗೆ ಹಸಿವಾದರೆ ಬ್ಲಾಕ್ ಕಾಫಿ ಅಥವಾ ಗ್ರೀನ್ ಟೀ ಜೊತೆಗೆ ಹುರಿದ ಕಡಲೆ ಅಥವಾ ಕೆಲವು ಬಾದಾಮಿಗಳನ್ನು ತಿನ್ನುತ್ತಿದ್ದರು. ಸಿಹಿ ತಿನ್ನಬೇಕು ಎನಿಸಿದಾಗ ಹಣ್ಣುಗಳನ್ನು ಆಯ್ದುಕೊಳ್ಳುತ್ತಿದ್ದರು.

ರಾತ್ರಿಯ ಊಟವನ್ನು ತುಂಬಾ ಹಗುರವಾಗಿ ಇಟ್ಟುಕೊಳ್ಳುತ್ತಿದ್ದ ಅವರು, ಗ್ರಿಲ್ಡ್ ಚಿಕನ್, ಪನೀರ್, ತೋಫು ಅಥವಾ ಆಮ್ಲೆಟ್ ಜೊತೆಗೆ ಬೇಯಿಸಿದ ತರಕಾರಿಗಳನ್ನು ಸೇವಿಸುತ್ತಿದ್ದರು. ರಾತ್ರಿ 9 ಗಂಟೆಯ ನಂತರ ಯಾವುದೇ ಆಹಾರ ಸೇವಿಸುತ್ತಿರಲಿಲ್ಲ ಮತ್ತು ರಾತ್ರಿ ವೇಳೆ ಕಾರ್ಬೋಹೈಡ್ರೇಟ್ಸ್ ಹೆಚ್ಚಿರುವ ಆಹಾರವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು.

ಕೇವಲ ಕಾರ್ಡಿಯೋ ಅಲ್ಲ, ವೇಟ್ ಟ್ರೈನಿಂಗ್ ಮುಖ್ಯ

ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಕೇವಲ ಕಾರ್ಡಿಯೋ ವ್ಯಾಯಾಮಗಳು ಮಾತ್ರ ಸಾಲುವುದಿಲ್ಲ. ಸ್ನಾಯುಗಳ ಬಲವರ್ಧನೆಗೆ ವೇಟ್ ಟ್ರೈನಿಂಗ್ ಕೂಡ ಅಷ್ಟೇ ಮುಖ್ಯ ಎನ್ನುತ್ತಾರೆ ಪ್ರೀತಿ. ವಾರದಲ್ಲಿ 4 ರಿಂದ 5 ದಿನಗಳ ಕಾಲ ಅವರು ಸ್ಕ್ವಾಟ್ಸ್, ಲಂಜಸ್, ಪುಶ್-ಅಪ್ಸ್ ನಂತಹ ದೇಹದ ವಿವಿಧ ಸ್ನಾಯುಗಳಿಗೆ ಕೆಲಸ ಕೊಡುವ ವ್ಯಾಯಾಮಗಳನ್ನು ಮಾಡುತ್ತಿದ್ದರು. ಪ್ರತಿ ಸೆಷನ್ ಮುಗಿದ ನಂತರ 15-20 ನಿಮಿಷಗಳ ಕಾಲ ಕಾರ್ಡಿಯೋ ಮಾಡುತ್ತಿದ್ದರು. ಇದರೊಂದಿಗೆ ಪ್ರತಿದಿನ 8 ರಿಂದ 10 ಸಾವಿರ ಹೆಜ್ಜೆಗಳನ್ನು ನಡೆಯುವುದನ್ನು ರೂಢಿಸಿಕೊಂಡಿದ್ದರು.

ಯಶಸ್ಸಿಗೆ ಕಾರಣವಾದ ಪ್ರಮುಖ ಅಭ್ಯಾಸಗಳು

ದಿನಕ್ಕೆ ಕಡ್ಡಾಯವಾಗಿ 3 ಲೀಟರ್ ನೀರು ಕುಡಿಯುವುದು, 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ದೆ ಮಾಡುವುದು ಮತ್ತು ವಾರಕ್ಕೊಮ್ಮೆ ತೂಕದ ಪ್ರಗತಿಯನ್ನು ಪರೀಕ್ಷಿಸಿಕೊಳ್ಳುವುದು ಅವರ ದಿನಚರಿಯಾಗಿತ್ತು. ಹಬ್ಬ ಅಥವಾ ಪಾರ್ಟಿ ದಿನಗಳಲ್ಲಿ ಇಡೀ ದಿನ ಅತಿಯಾಗಿ ತಿನ್ನುವ ಬದಲು, 10-12 ದಿನಗಳಿಗೊಮ್ಮೆ ಕೇವಲ ಒಂದು ಹೊತ್ತು ಮಾತ್ರ ತಮಗೆ ಇಷ್ಟವಾದ ಆಹಾರ ಸೇವಿಸುತ್ತಿದ್ದರು.

ಯಾವುದೇ ಅಡ್ಡದಾರಿಗಳನ್ನು ಹುಡುಕದೆ, ದಿನನಿತ್ಯದ ಶಿಸ್ತು ಮತ್ತು ಸ್ಥಿರತೆಯನ್ನು ಕಾಯ್ದುಕೊಂಡರೆ ಸುಲಭವಾಗಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು ಎಂಬುದಕ್ಕೆ ಇವರ ಈ ಪಯಣವೇ ಸಾಕ್ಷಿ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ