LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

90ರ ದಶಕದ ನೆಚ್ಚಿನ ಪಾನೀಯ ‘ಗೋಲ್ಡ್ ಸ್ಪಾಟ್’ 26 ವರ್ಷಗಳ ನಂತರ ಮತ್ತೆ ಮಾರುಕಟ್ಟೆಗೆ!

ನವದೆಹಲಿ: 26 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಮತ್ತೆ ಬೆ ಐಕಾನಿಕ್‌ ಗೋಲ್ಡ್‌ ಸ್ಪಾಟ್‌ ಲಗ್ಗೆ ಇಡುತ್ತಿದೆ. 90ರ ದಶಕದ ನೆಚ್ಚಿನ ಪಾನೀಯ ‘ಗೋಲ್ಡ್ ಸ್ಪಾಟ್’ಮತ್ತೆ ಮಾರುಕಟ್ಟೆಗೆ ಮರಳುತ್ತಿದೆ.

ಕೋಕಾ-ಕೋಲಾ ಕಂಪನಿಯು ಈ ಕಿತ್ತಳೆ ಬಣ್ಣದ ಪಾನೀಯವನ್ನು ಕಡಿಮೆ ಸಕ್ಕರೆಯೊಂದಿಗೆ ಪರಿಚಯಿಸುತ್ತಿದೆ. ಎಂ.ಎಸ್. ಧೋನಿ ಅವರ ವೈರಲ್ ಫೋಟೋ ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಗೋಲ್ಡ್ ಸ್ಪಾಟ್’ (Gold Spot) ಎಂಬ ಹೆಸರೇ ಬಿರುಬೇಸಿಗೆಯ ಮಧ್ಯಾಹ್ನದ ಆಯಾಸವನ್ನೆಲ್ಲಾ ಕ್ಷಣಾರ್ಧದಲ್ಲಿ ಕಳೆಯುತ್ತಿದ್ದ ತಣ್ಣನೆಯ ಕೂಲ್ ಡ್ರಿಂಕ್ ಬಾಟಲಿಯ ನೆನಪನ್ನು ತರಿಸುತ್ತದೆ. ಇದೀಗ ಬರೋಬ್ಬರಿ 26 ವರ್ಷಗಳ ಸುದೀರ್ಘ ವಿರಾಮದ ನಂತರ ಆ ಪ್ರಕಾಶಮಾನವಾದ ಕಿತ್ತಳೆ ಬಣ್ಣದ (Orange fizz) ಪಾನೀಯ ಮತ್ತೆ ಮಾರುಕಟ್ಟೆಗೆ ಮರಳಲು ಸಜ್ಜಾಗಿದೆ.. ‘ದಿ ಎಕನಾಮಿಕ್ ಟೈಮ್ಸ್’ ವರದಿಯ ಪ್ರಕಾರ, ಜಾಗತಿಕ ಪಾನೀಯ ದಿಗ್ಗಜ ಕೋಕಾ-ಕೋಲಾ (Coca-Cola) ಕಂಪನಿಯು ‘ಗೋಲ್ಡ್ ಸ್ಪಾಟ್’ ಪಾನೀಯವನ್ನು ಮತ್ತೆ ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸುತ್ತಿದೆ.

ಕೋಕಾ-ಕೋಲಾ ಕಂಪನಿಯು 1993ರಲ್ಲಿ ಪಾರ್ಲೆ ಗ್ರೂಪ್‌ನಿಂದ (Parle group) ಗೋಲ್ಡ್ ಸ್ಪಾಟ್ ಬ್ರ್ಯಾಂಡ್ ಅನ್ನು ಖರೀದಿಸಿತ್ತು. ಇದೀಗ ಸುಮಾರು 26 ವರ್ಷಗಳ ನಂತರ ಮುಂದಿನ ವಾರವೇ ಇದು ಮರುಬಿಡುಗಡೆಯಾಗುವ ನಿರೀಕ್ಷೆಯಿದೆ. ಇಂದಿನ ಗ್ರಾಹಕರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ಹೆಚ್ಚಿನ ಜನರು ಹಗುರವಾದ ಮತ್ತು ಕಡಿಮೆ ಕ್ಯಾಲೋರಿ ಹೊಂದಿರುವ ಪಾನೀಯಗಳನ್ನು ಬಯಸುತ್ತಿರುವುದರಿಂದ ಈ ಬಾರಿ ಗೋಲ್ಡ್ ಸ್ಪಾಟ್ ಕಡಿಮೆ ಸಕ್ಕರೆ (Low-sugar) ಅಥವಾ ಸಕ್ಕರೆ ರಹಿತ (No-sugar / Sugar-free) ರೂಪದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಕೋಕಾ-ಕೋಲಾ ಕಂಪನಿ ಇನ್ನೂ ಈ ಕುರಿತು ಅಧಿಕೃತ ಘೋಷಣೆ ಮಾಡದಿದ್ದರೂ, ವಾರಾಂತ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಅವರ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಈ ಸುದ್ದಿ ಗಮನ ಸೆಳೆದಿದೆ.

ವೈರಲ್ ಆಗಿರುವ ಫೋಟೋಗಳಲ್ಲಿ ಧೋನಿ ಮತ್ತು ಸಾಕ್ಷಿ ಕುಳಿತಿದ್ದ ಟೇಬಲ್ ಮೇಲೆ ‘ಗೋಲ್ಡ್ ಸ್ಪಾಟ್’ ಕ್ಯಾನ್‌ಗಳು ಕಾಣಿಸಿಕೊಂಡಿವೆ. ಅಭಿಮಾನಿಗಳು ತಕ್ಷಣವೇ ತಮ್ಮ ನೆಚ್ಚಿನ ಪಾನೀಯವನ್ನು ಗುರುತಿಸಿದ್ದಾರೆ. ಗೋಲ್ಡ್ ಸ್ಪಾಟ್ ಬ್ರ್ಯಾಂಡ್‌ನ ಪ್ರಚಾರ ರಾಯಭಾರಿಯಾಗಿ ಧೋನಿ ಅವರನ್ನು ಸಹಿ ಮಾಡಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಈ ಫೋಟೋ 90ರ ದಶಕದ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇವಲ 52 ಎಸೆತಗಳಲ್ಲಿ ವೈಭವ್ ಸೂರ್ಯವಂಶಿ ಭರ್ಜರಿ ದ್ವಿಶತಕ; ವಿಶ್ವ ದಾಖಲೆಯ ಇನ್ನಿಂಗ್ಸ್ ನಲ್ಲಿ 28 ಸಿಕ್ಸರ್ ಗಳುಹಣ ಉಳಿತಾಯ ಮಾಡುವವರು ಇತ್ತ ಗಮನಿಸಿ; FDಗಿಂತ ಹೆಚ್ಚು ಬಡ್ಡಿ ನೀಡುವ 7 ಬೆಸ್ಟ್ ಯೋಜನೆಗಳು!ಡೆಂಗ್ಯೂ ಡಯಟ್: ಡೆಂಗ್ಯೂ ಬಂದಾಗ ಯಾವ ಆಹಾರವನ್ನು ಸೇವಿಸಬೇಕು? ಏನು ಸೇವಿಸಬಾರದು? ಇಲ್ಲಿದೆ WHO ಶಿಫಾರಸುಗಳುALERT : ತೂಕ ಇಳಿಸಿಕೊಳ್ಳುವ ಆತುರವೇ ? ಆನ್‌ಲೈನ್‌ನಲ್ಲಿ ಸಿಗುವ ಈ ಇಂಜೆಕ್ಷನ್‌ಗಳ ಬಗ್ಗೆ ಇರಲಿ ಎಚ್ಚರ!ಪಾಕಿಸ್ತಾನದ ಮೊದಲ ನೆಟ್ ಫ್ಲಿಕ್ಸ್ ಸರಣಿ ‘ಬಚೇ ಹೈಂ ಸಂಗ ಸಮೈತ್ ಲೋ’ಗೆ ಭಾರತದಲ್ಲಿ ನಿಷೇಧ ಹೇರಿ: ಪ್ರಧಾನಿ ಮೋದಿಗೆ ಚಲನಚಿತ್ರ ಕಾರ್ಮಿಕರ ಸಂಘಟನೆ ಮನವಿಹೊಸ ವರ್ಷಕ್ಕೆ ಕಾರು ಖರೀದಿದಾರರಿಗೆ ಶಾಕ್: ಜ. 1ರಿಂದ ಆಡಿ ಕಾರುಗಳ ಬೆಲೆ ಶೇ.2ರಷ್ಟು ಹೆಚ್ಚಳ!ನೀವು ಪ್ರತಿದಿನ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನವೇನು?90ರ ದಶಕದ ನೆಚ್ಚಿನ ಪಾನೀಯ ‘ಗೋಲ್ಡ್ ಸ್ಪಾಟ್’ 26 ವರ್ಷಗಳ ನಂತರ ಮತ್ತೆ ಮಾರುಕಟ್ಟೆಗೆ!ನವೆಂಬರ್ 27ರಿಂದ ಬ್ಯಾಂಕ್’ಗಳಿಗೆ ಸಾಲು ಸಾಲು ರಜೆ; ಅರ್ಜೆಂಟ್ ಕೆಲಸಗಳಿದ್ದರೆ ಬೇಗ ಮುಗಿಸಿಕೊಳ್ಳಿ!JOB ALERT : ಬಿಇ, ಬಿಟೆಕ್ ಓದಿದವರಿಗೆ ಭರ್ಜರಿ ಗುಡ್‌ನ್ಯೂಸ್; 415 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ