LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING : KPSC ನೇಮಕಾತಿ ಅಕ್ರಮ: ಪಶು ವೈದ್ಯಾಧಿಕಾರಿ ಬೆನ್ನಲ್ಲೇ RTO ಇನ್ಸ್‌ಪೆಕ್ಟರ್‌ ಹುದ್ದೆಯಲ್ಲೂ ಕೋಟಿ ಕೋಟಿ ಡೀಲ್ ಬಟಾಬಯಲು!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸುವ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳ ಸರಣಿ ಮುಂದುವರಿದಿದೆ. ಈಗಾಗಲೇ ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮದ ಕುರಿತು ಸಿಐಡಿ (CID) ತನಿಖೆ  ನಡೆಯುತ್ತಿರುವ ಬೆನ್ನಲ್ಲೇ, ಇದೀಗ ಆರ್‌ಟಿಒ (RTO) ಇನ್ಸ್‌ಪೆಕ್ಟರ್ ನೇಮಕಾತಿಯಲ್ಲೂ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಸಿಐಡಿ ಅಧಿಕಾರಿಗಳ ತನಿಖೆ ವೇಳೆ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಅಭ್ಯರ್ಥಿಗಳಿಂದ ಕೋಟ್ಯಂತರ ಹಣ ವಸೂಲಿ ಮಾಡಿ ಹುದ್ದೆ ಮಾರಾಟ ಮಾಡಿರುವುದು ಪತ್ತೆಯಾಗಿದೆ.

ಈ ಪ್ರಮುಖ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬಸವರಾಜ್ ಕನ್ನಾಳೆ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆತನ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಪ್ರಮುಖ ಡೈರಿಯೊಂದು ಲಭ್ಯವಾಗಿದೆ. ಈ ಡೈರಿಯನ್ನು ಪರಿಶೀಲಿಸಿದಾಗ ಆರ್‌ಟಿಒ ಇನ್ಸ್‌‌ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದ್ದ ಹಣದ ವ್ಯವಹಾರ ಹಾಗೂ ಬಾಕಿ ಲೆಕ್ಕದ ಸಂಪೂರ್ಣ ಮಾಹಿತಿ ಕಂಡುಬಂದಿದ್ದು, ಡೈರಿಯಲ್ಲಿದ್ದ ಆಘಾತಕಾರಿ ವಿವರಗಳನ್ನು ನೋಡಿ ಸಿಐಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ಮೂಲಗಳ ಪ್ರಕಾರ, 2016ರಲ್ಲಿ ಒಟ್ಟು 150 ಆರ್‌ಟಿಒ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ನಂತರ ಕೆಪಿಎಸ್‌ಸಿ ಬಿಡುಗಡೆ ಮಾಡಿದ ಹೊಸ ಪಟ್ಟಿಯಂತೆ ಮೊದಲ ಹಂತದಲ್ಲಿ 80 ಆರ್‌ಟಿಒ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ನಡೆದು, ಪ್ರಸ್ತುತ ಅವರು ಕರ್ತವ್ಯದಲ್ಲಿದ್ದಾರೆ. ಆದರೆ ಈ ಪ್ರತಿಯೊಂದು ಹುದ್ದೆಗೂ ಸುಮಾರು ₹2 ಕೋಟಿ ರೂಪಾಯಿ ಡೀಲ್ ನಡೆದಿದೆ ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ. ಅನರ್ಹ ಅಭ್ಯರ್ಥಿಗಳು ಹಣ ನೀಡಿ ಹುದ್ದೆ ಗಿಟ್ಟಿಸಿಕೊಂಡಿರುವುದು ಜಪ್ತಿಯಾದ ಡೈರಿಯಿಂದ ಸಾಬೀತಾಗಿದೆ.

ತನಿಖೆಯ ವೇಳೆ ಅರ್ಹತೆಯೇ ಇಲ್ಲದ ಮಂಜುನಾಥ್ ಎಂಬಾತ ಆರ್‌ಟಿಒ ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾಗಿರುವುದು ಹಾಗೂ ಮೆಡಿಕಲ್ ಟೆಸ್ಟ್‌ನಲ್ಲಿ ಫೇಲ್ ಆಗಿದ್ದ ಪೂಜಾ ಎಂಬಾಕೆಗೆ ಹುದ್ದೆ ನೀಡಿರುವುದು ಬಯಲಾಗಿದೆ. ಹುದ್ದೆಗಾಗಿ ತಲಾ ₹2 ಕೋಟಿ ನೀಡಿರುವ ಪೈಕಿ, ₹65 ಲಕ್ಷ ಬಾಕಿ ಹಣ ಪಾವತಿಸಬೇಕಿರುವ ಬಗ್ಗೆ ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಸದ್ಯ ಸಿಐಡಿ ಈ ಅಕ್ರಮ ಜಾಲದ ಮೂಲವನ್ನು ಜಾಲಾಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಭಾವಿಗಳ ಹೆಸರು ಹೊರಬರುವ ಸಾಧ್ಯತೆಯಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಕ್ಷದ ಕಚೇರಿ ಸಮೀಪದಲ್ಲೇ ಗುಂಡಿಕ್ಕಿ ಶಿವಸೇನಾ ನಾಯಕ ಪ್ರದೀಪ್ ಪುರ್ನೆಕರ್ ಹತ್ಯೆSHOCKING : ರಾಜ್ಯದಲ್ಲಿ ಹೀನ ಕೃತ್ಯ : ಮೊಮ್ಮಗಳ ಮೇಲೆ ಅಜ್ಜನಿಂದಲೇ ಅತ್ಯಾಚಾರಕ್ಕೆ ಯತ್ನ : ವೃದ್ಧ ಅರೆಸ್ಟ್!BIG NEWS : ಇನ್ಮುಂದೆ 2ನೇ ಬಾರಿ ಅಡುಗೆ ಎಣ್ಣೆ ಬಳಕೆ ಮಾಡಿದರೆ ಕಠಿಣ ಕ್ರಮ : ಸಚಿವ ಯುಟಿ ಖಾದರ್ ಎಚ್ಚರಿಕೆ!ಚಿಕ್ಕಮಗಳೂರಿನಲ್ಲಿ PSI ಎಂದು ನಂಬಿಸಿ ಕೋಟ್ಯಂತರ ರೂ. ವಂಚನೆ : ಖತರ್ನಾಕ್ ಲೇಡಿ ನಿವೇದಿತಾ ಗೌಡ ಅರೆಸ್ಟ್!BREAKING : ಬೆಳಗಾವಿ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಶಾಕ್ : ನಿಪ್ಪಾಣಿ ತಹಸೀಲ್ದಾರ್ ಮನೆ ಮೇಲೆ ದಾಳಿ, ದಾಖಲೆ ಪರಿಶೀಲನೆ!ಎಚ್‌ಡಿಕೆ ನೈಸ್ ಆರೋಪಕ್ಕೆ ಡಿ.ಕೆ. ಶಿವಕುಮಾರ್ ತಿರುಗೇಟು: 1,400 ಕೋಟಿ ರೂ. ಆಸ್ತಿ ಕಾನೂನಾತ್ಮಕ ಎಂದ ಸಿಎಂUPI ಮೂಲಕ ₹10 ಸಾವಿರ ಪಾವತಿಸಿದರೆ ಎಷ್ಟು ಶುಲ್ಕ ಬೀಳುತ್ತದೆ..? ಅ.1 ರಿಂದ ಯಾವ ವಹಿವಾಟಿಗೆ ಎಷ್ಟು?ರೈತರಿಗೆ ಬಿಗ್ ಅಲರ್ಟ್..! ಪಾರಾಕ್ವಾಟ್ ಕಳೆನಾಶಕ ಮಾರಾಟಕ್ಕೆ ಕೇಂದ್ರದಿಂದ ಬ್ರೇಕ್Pitru Paksha: ಪಿತೃಪಕ್ಷದಲ್ಲಿ ಮಕ್ಕಳು ಜನಿಸಿದರೆ ಅದೃಷ್ಟವೇ? ಅಶುಭವೇ? ಜ್ಯೋತಿಷ್ಯ ಏನು ಹೇಳುತ್ತದೆ?ಲಕ್ಷದ್ವೀಪದ ಬಳಿ 3,000 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ 510 ಕೆಜಿ ಮಾದಕವಸ್ತು ಸಹಿತ ಐವರು ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್