LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಚ್‌ಡಿಕೆ ನೈಸ್ ಆರೋಪಕ್ಕೆ ಡಿ.ಕೆ. ಶಿವಕುಮಾರ್ ತಿರುಗೇಟು: 1,400 ಕೋಟಿ ರೂ. ಆಸ್ತಿ ಕಾನೂನಾತ್ಮಕ ಎಂದ ಸಿಎಂ

ಎಚ್.ಡಿ. ಕುಮಾರಸ್ವಾಮಿ ಅವರ ನೈಸ್ ಹಾಗೂ ಆಸ್ತಿ ಗಳಿಕೆ ಆರೋಪಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿನ ಮೌಲ್ಯದಲ್ಲಿ ತಮ್ಮ ಬಳಿ 1,400 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದು ನಿಜ. ಆದರೆ, ಅದನ್ನು ಕಾನೂನು ಚೌಕಟ್ಟಿನಲ್ಲೇ ಸಂಪಾದಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು, ತಾ ಮುಂದು ನಾ ಮುಂದು ಎಂಬ ಪೈಪೋಟಿಯಲ್ಲಿ ಕುಮಾರಸ್ವಾಮಿ ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ತಮ್ಮ ಆಸ್ತಿ ಗಳಿಕೆಯನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಾವು ಒಬ್ಬ ರೈತನ ಮಗ ಮತ್ತು ಉದ್ಯಮಿಯಾಗಿದ್ದು, ತಮಗೆ ಹಾಗೂ ತಮ್ಮ ಮಕ್ಕಳಿಗೆ ಕಾನೂನುಬದ್ಧವಾಗಿ ಆಸ್ತಿ ಖರೀದಿಸುವ ಹಕ್ಕಿದೆ ಎಂದರು. ಶೋಭಾ ಡೆವಲಪರ್ಸ್ ಜೊತೆಗಿನ ಹೂಡಿಕೆ ಹಾಗೂ ಮಾಜಿ ಸಿಎಂ ಬಂಗಾರಪ್ಪ ಅವರ ಅವಧಿಯಲ್ಲಿ ಪಡೆದ ನಿವೇಶನದ ಬೆಲೆ ಇಂದು ಕೋಟಿಗಟ್ಟಲೆ ಹೆಚ್ಚಾಗಿರುವುದನ್ನು ಉಲ್ಲೇಖಿಸಿದ ಅವರು, ಬೆಲೆ ಏರಿಕೆಯಾಗುವುದು ಸಹಜ, ಇದರಲ್ಲಿ ತಾವು ಲಂಚ ಪಡೆದಿಲ್ಲ ಅಥವಾ ಯಾವುದೇ ಹಗರಣ ಮಾಡಿಲ್ಲ ಎಂದು ಹೇಳಿದರು. ಪ್ರತಿಯೊಂದು ಆಸ್ತಿಯನ್ನೂ ಚುನಾವಣೆ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಗೆ ಮುಕ್ತವಾಗಿ ಘೋಷಿಸಿಕೊಂಡಿರುವುದಾಗಿ ತಿಳಿಸಿದರು.   

ಕುಮಾರಸ್ವಾಮಿ ಅವರ ಫೋನ್ ಟ್ಯಾಪಿಂಗ್ ಹಾಗೂ ಬ್ಲ್ಯಾಕ್‌ಮೇಲ್ ತಂತ್ರಗಳಿಗೆ ತಾವು ಹೆದರುವುದಿಲ್ಲ ಎಂದ ಡಿ.ಕೆ. ಶಿವಕುಮಾರ್, ಧೈರ್ಯವಿದ್ದರೆ ವಿಧಾನಸಭೆ ಅಥವಾ ಕೌನ್ಸಿಲ್ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ ಸಭೆಯ ಒಳಗಡೆ ಬಂದು ಚರ್ಚಿಸಲಿ ಎಂದು ಸವಾಲು ಹಾಕಿದರು. ಮೆಟ್ಟಿಲುಗಳ ಮೇಲೆ ನಾಟಕ ಮಾಡುವ ಬದಲು ಫ್ರೀಡಂ ಪಾರ್ಕ್‌ನಲ್ಲಿ ಚರ್ಚೆ ಮಾಡಲಿ ಎಂದರು. ಇದರೊಂದಿಗೆ, ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧದ 444 ಕೋಟಿ ರೂ. ಅಕ್ರಮದ ದೂರು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ತಳ್ಳಿಹಾಕಿದ ಅವರು, ದೆಹಲಿಯಲ್ಲಿ ನಡೆದ ಪ್ರಮುಖ ಸಭೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಶಿಕ್ಷಣ ನೀತಿ ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಯುವ ಬಗ್ಗೆ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿರುವುದಾಗಿ ವಿವರಣೆ ನೀಡಿದರು.   

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಲ್ಲಿ ಭೀಕರ ಮರ್ಡರ್ : ಕೆಲಸದ ವಿಚಾರವಾಗಿ ಬಿಹಾರ್ ಮೂಲದ ಯುವಕನ ಹತ್ಯೆ!BIG NEWS: ಸಾಗರದ 'ಹೊನ್ನೆಸರ'ದಲ್ಲಿ ಕೆರೆ ಒತ್ತುವರಿ: ತೆರವುಗೊಳಿಸಿ 7 ದಿನಗಳಲ್ಲಿ ವರದಿ ನೀಡಲು ಸಚಿವ ಈಶ್ವರ ಖಂಡ್ರೆ ಖಡಕ್ ಆದೇಶಪಕ್ಷದ ಕಚೇರಿ ಸಮೀಪದಲ್ಲೇ ಗುಂಡಿಕ್ಕಿ ಶಿವಸೇನಾ ನಾಯಕ ಪ್ರದೀಪ್ ಪುರ್ನೆಕರ್ ಹತ್ಯೆSHOCKING : ರಾಜ್ಯದಲ್ಲಿ ಹೀನ ಕೃತ್ಯ : ಮೊಮ್ಮಗಳ ಮೇಲೆ ಅಜ್ಜನಿಂದಲೇ ಅತ್ಯಾಚಾರಕ್ಕೆ ಯತ್ನ : ವೃದ್ಧ ಅರೆಸ್ಟ್!BIG NEWS : ಇನ್ಮುಂದೆ 2ನೇ ಬಾರಿ ಅಡುಗೆ ಎಣ್ಣೆ ಬಳಕೆ ಮಾಡಿದರೆ ಕಠಿಣ ಕ್ರಮ : ಸಚಿವ ಯುಟಿ ಖಾದರ್ ಎಚ್ಚರಿಕೆ!ಚಿಕ್ಕಮಗಳೂರಿನಲ್ಲಿ PSI ಎಂದು ನಂಬಿಸಿ ಕೋಟ್ಯಂತರ ರೂ. ವಂಚನೆ : ಖತರ್ನಾಕ್ ಲೇಡಿ ನಿವೇದಿತಾ ಗೌಡ ಅರೆಸ್ಟ್!BREAKING : ಬೆಳಗಾವಿ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಶಾಕ್ : ನಿಪ್ಪಾಣಿ ತಹಸೀಲ್ದಾರ್ ಮನೆ ಮೇಲೆ ದಾಳಿ, ದಾಖಲೆ ಪರಿಶೀಲನೆ!ಎಚ್‌ಡಿಕೆ ನೈಸ್ ಆರೋಪಕ್ಕೆ ಡಿ.ಕೆ. ಶಿವಕುಮಾರ್ ತಿರುಗೇಟು: 1,400 ಕೋಟಿ ರೂ. ಆಸ್ತಿ ಕಾನೂನಾತ್ಮಕ ಎಂದ ಸಿಎಂUPI ಮೂಲಕ ₹10 ಸಾವಿರ ಪಾವತಿಸಿದರೆ ಎಷ್ಟು ಶುಲ್ಕ ಬೀಳುತ್ತದೆ..? ಅ.1 ರಿಂದ ಯಾವ ವಹಿವಾಟಿಗೆ ಎಷ್ಟು?ರೈತರಿಗೆ ಬಿಗ್ ಅಲರ್ಟ್..! ಪಾರಾಕ್ವಾಟ್ ಕಳೆನಾಶಕ ಮಾರಾಟಕ್ಕೆ ಕೇಂದ್ರದಿಂದ ಬ್ರೇಕ್