LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

UPI ಮೂಲಕ ₹10 ಸಾವಿರ ಪಾವತಿಸಿದರೆ ಎಷ್ಟು ಶುಲ್ಕ ಬೀಳುತ್ತದೆ..? ಅ.1 ರಿಂದ ಯಾವ ವಹಿವಾಟಿಗೆ ಎಷ್ಟು?

ಕೇಂದ್ರ ಸರ್ಕಾರ UPI ಶುಲ್ಕಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್ 15ರಿಂದ MDR ಶುಲ್ಕಗಳನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ. ₹2 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಕೆಲವು ವಹಿವಾಟುಗಳಿಗೆ UPI ಶುಲ್ಕ ವಿಧಿಸಲಾಗುತ್ತದೆ. ಯಾವುದೇ ವ್ಯಾಪಾರಿಯ ಬಳಿ ₹2 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಿದರೆ ಶುಲ್ಕ ಅನ್ವಯವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದುವರೆಗೆ UPI ವಹಿವಾಟುಗಳನ್ನು ಉಚಿತವಾಗಿ ನಡೆಸಬಹುದಾಗಿತ್ತು. ಅಂದರೆ, ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿರಲಿಲ್ಲ. ಆದರೆ ಅಕ್ಟೋಬರ್‌ನಿಂದ ನಿಯಮಗಳಲ್ಲಿ ಬದಲಾವಣೆಯಾಗಲಿದೆ ಎಂದು ವರದಿಯಾಗಿದೆ.

ಅಕ್ಟೋಬರ್ 15ರಿಂದ ಪರ್ಸನ್-ಟು-ಮರ್ಚೆಂಟ್ (P2M) ಮೂಲಕ ನಡೆಯುವ ಕೆಲವು UPI ಪಾವತಿಗಳಿಗೆ ಶುಲ್ಕ ವಿಧಿಸುವ ಪ್ರಸ್ತಾವವಿದೆ. ವ್ಯಾಪಾರಿಗಳ ಬಳಿ ₹2 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ ಶುಲ್ಕ ಅನ್ವಯವಾಗಲಿದೆ. ಈ ಶುಲ್ಕವನ್ನು ಗ್ರಾಹಕರ ಮೇಲೆ ವಿಧಿಸಲು ಅವಕಾಶ ಇರುವುದಿಲ್ಲ. ವ್ಯಾಪಾರಿಗಳೇ ತಮ್ಮ ಬ್ಯಾಂಕ್‌ಗಳು ಅಥವಾ ಪೇಮೆಂಟ್ ಅಗ್ರಿಗೇಟರ್‌ಗಳಿಗೆ ಈ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಈ ಶುಲ್ಕದ ಹಣ ಕೇಂದ್ರ ಸರ್ಕಾರಕ್ಕೆ ಹೋಗುವುದಿಲ್ಲ. ಬದಲಾಗಿ UPI ಪ್ಲಾಟ್‌ಫಾರ್ಮ್‌ಗಳು ಮತ್ತು ಬ್ಯಾಂಕ್‌ಗಳಿಗೆ ಸೇರುತ್ತದೆ. UPI ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ಈ ಹಣವನ್ನು ಬಳಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

₹25 ಸಾವಿರ ಪಾವತಿಸಿದರೆ ಎಷ್ಟು ಶುಲ್ಕ?

ಉದಾಹರಣೆಗೆ, ಗ್ರಾಹಕರೊಬ್ಬರು ಅಂಗಡಿಯಲ್ಲಿ ₹10 ಸಾವಿರ ಮೌಲ್ಯದ ವಸ್ತುವನ್ನು ಖರೀದಿಸಿ UPI ಮೂಲಕ ಪಾವತಿಸಿದರೆ, 0.4% ದರದಂತೆ ವ್ಯಾಪಾರಿಗೆ ₹40 ಶುಲ್ಕ ಬೀಳುತ್ತದೆ.ಅದೇ ರೀತಿ ₹25 ಸಾವಿರ ಪಾವತಿಸಿದರೆ 0.4% ದರದಂತೆ ₹100 ಶುಲ್ಕ ಅನ್ವಯಿಸುತ್ತದೆ. ₹50 ಸಾವಿರ ಪಾವತಿಸಿದರೆ ₹200 ಶುಲ್ಕ ಬೀಳುತ್ತದೆ.₹75 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟು ಮಾಡಿದರೂ ಗರಿಷ್ಠ ಶುಲ್ಕ ₹300ಕ್ಕೆ ಸೀಮಿತವಾಗಿರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ₹2 ಸಾವಿರ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ವಹಿವಾಟುಗಳಿಗೆ ಯಾವುದೇ MDR ಶುಲ್ಕ ಇರುವುದಿಲ್ಲ ಎಂದು ಹೇಳಲಾಗಿದೆ.

ರೈಲ್ವೆ ಟಿಕೆಟ್ ಬುಕ್ ಮಾಡಿದರೆ MDR ಶುಲ್ಕ ಬೀಳುತ್ತದೆಯೇ?

ನೀವು ರೈಲು ಟಿಕೆಟ್‌ಗಾಗಿ ₹3 ಸಾವಿರ ಪಾವತಿಸಿದ್ದೀರಿ ಎಂದುಕೊಳ್ಳಿ. ರೈಲು ಟಿಕೆಟ್ ಬುಕ್ಕಿಂಗ್‌ಗೆ ಫ್ಲಾಟ್ ₹5 MDR ಶುಲ್ಕ ನಿಗದಿಪಡಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಅಂದರೆ, ಟಿಕೆಟ್‌ನ ₹3 ಸಾವಿರ ಮೊತ್ತಕ್ಕೆ ಹೆಚ್ಚುವರಿಯಾಗಿ ₹5 ಶುಲ್ಕ ಅನ್ವಯವಾಗಬಹುದು. ಆದರೆ ಈ ₹5 ಶುಲ್ಕವನ್ನು ವ್ಯಾಪಾರಿಯೇ ಭರಿಸಬೇಕಾಗುತ್ತದೆ. ಹೀಗಾಗಿ ಗ್ರಾಹಕರು ಟಿಕೆಟ್‌ಗೆ ₹3 ಸಾವಿರವನ್ನೇ ಪಾವತಿಸಬೇಕಾಗುತ್ತದೆ.

ಅದೇ ರೀತಿ ₹10 ಸಾವಿರ ಮೌಲ್ಯದ ರೈಲು ಟಿಕೆಟ್ ಬುಕ್ ಮಾಡಿದರೂ MDR ಶುಲ್ಕ ₹5ರಷ್ಟೇ ಇರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.UPI ಶುಲ್ಕವನ್ನು ಗ್ರಾಹಕರ ಮೇಲೆ ವ್ಯಾಪಾರಿಗಳು ಹಾಕದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ ನೀಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಕ್ಷದ ಕಚೇರಿ ಸಮೀಪದಲ್ಲೇ ಗುಂಡಿಕ್ಕಿ ಶಿವಸೇನಾ ನಾಯಕ ಪ್ರದೀಪ್ ಪುರ್ನೆಕರ್ ಹತ್ಯೆSHOCKING : ರಾಜ್ಯದಲ್ಲಿ ಹೀನ ಕೃತ್ಯ : ಮೊಮ್ಮಗಳ ಮೇಲೆ ಅಜ್ಜನಿಂದಲೇ ಅತ್ಯಾಚಾರಕ್ಕೆ ಯತ್ನ : ವೃದ್ಧ ಅರೆಸ್ಟ್!BIG NEWS : ಇನ್ಮುಂದೆ 2ನೇ ಬಾರಿ ಅಡುಗೆ ಎಣ್ಣೆ ಬಳಕೆ ಮಾಡಿದರೆ ಕಠಿಣ ಕ್ರಮ : ಸಚಿವ ಯುಟಿ ಖಾದರ್ ಎಚ್ಚರಿಕೆ!ಚಿಕ್ಕಮಗಳೂರಿನಲ್ಲಿ PSI ಎಂದು ನಂಬಿಸಿ ಕೋಟ್ಯಂತರ ರೂ. ವಂಚನೆ : ಖತರ್ನಾಕ್ ಲೇಡಿ ನಿವೇದಿತಾ ಗೌಡ ಅರೆಸ್ಟ್!BREAKING : ಬೆಳಗಾವಿ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಶಾಕ್ : ನಿಪ್ಪಾಣಿ ತಹಸೀಲ್ದಾರ್ ಮನೆ ಮೇಲೆ ದಾಳಿ, ದಾಖಲೆ ಪರಿಶೀಲನೆ!ಎಚ್‌ಡಿಕೆ ನೈಸ್ ಆರೋಪಕ್ಕೆ ಡಿ.ಕೆ. ಶಿವಕುಮಾರ್ ತಿರುಗೇಟು: 1,400 ಕೋಟಿ ರೂ. ಆಸ್ತಿ ಕಾನೂನಾತ್ಮಕ ಎಂದ ಸಿಎಂUPI ಮೂಲಕ ₹10 ಸಾವಿರ ಪಾವತಿಸಿದರೆ ಎಷ್ಟು ಶುಲ್ಕ ಬೀಳುತ್ತದೆ..? ಅ.1 ರಿಂದ ಯಾವ ವಹಿವಾಟಿಗೆ ಎಷ್ಟು?ರೈತರಿಗೆ ಬಿಗ್ ಅಲರ್ಟ್..! ಪಾರಾಕ್ವಾಟ್ ಕಳೆನಾಶಕ ಮಾರಾಟಕ್ಕೆ ಕೇಂದ್ರದಿಂದ ಬ್ರೇಕ್Pitru Paksha: ಪಿತೃಪಕ್ಷದಲ್ಲಿ ಮಕ್ಕಳು ಜನಿಸಿದರೆ ಅದೃಷ್ಟವೇ? ಅಶುಭವೇ? ಜ್ಯೋತಿಷ್ಯ ಏನು ಹೇಳುತ್ತದೆ?ಲಕ್ಷದ್ವೀಪದ ಬಳಿ 3,000 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ 510 ಕೆಜಿ ಮಾದಕವಸ್ತು ಸಹಿತ ಐವರು ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್