ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆಯನ್ನು ಘೋಷಿಸಿದೆ. ಆಯ್ದ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳ ಮೇಲೆ ಉಚಿತ ಅಪಘಾತ ವಿಮೆ ಹಾಗೂ ಸೈಬರ್ ವಂಚನೆ ಕವರೇಜ್ ಸೌಲಭ್ಯವನ್ನು ಪರಿಚಯಿಸಿದೆ.
ಹೌದು. ಸರ್ಕಾರಿ ಟೆಲಿಕಾಂ ಕಂಪನಿ BSNL ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಪರಿಚಯಿಸಿದೆ. ಆಯ್ದ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳೊಂದಿಗೆ ₹1 ಲಕ್ಷದವರೆಗೆ ಅಪಘಾತ ವಿಮೆ ಹಾಗೂ ₹10 ಸಾವಿರದವರೆಗೆ ಸೈಬರ್ ವಂಚನೆ ಕವರೇಜ್ ಉಚಿತವಾಗಿ ನೀಡಲಾಗುತ್ತಿದೆ. STV 202 ಮತ್ತು STV 2449 ಪ್ಲಾನ್‌ಗಳಿಗೆ ಈ ಸೌಲಭ್ಯ ಅನ್ವಯವಾಗಲಿದ್ದು, ಅಕ್ಟೋಬರ್ 1ರಿಂದ ಸೇವೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
ಇದಕ್ಕಾಗಿ BSNL, ಓರಿಯಂಟಲ್ ಇನ್ಶೂರೆನ್ಸ್ ಕಂಪನಿಯೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. STV 202 ಮತ್ತು STV 2449 ಪ್ರೀಪೇಯ್ಡ್ ಪ್ಲಾನ್‌ಗಳಿಗೆ ಈ ಕೊಡುಗೆ ಅನ್ವಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ಈ ಪ್ಲಾನ್‌ಗಳ ಮೂಲಕ ರೀಚಾರ್ಜ್ ಮಾಡುವ ಗ್ರಾಹಕರು ಅಪಘಾತದಿಂದ ಮೃತಪಟ್ಟರೆ ₹1 ಲಕ್ಷದವರೆಗೆ ವಿಮಾ ರಕ್ಷಣೆ ದೊರೆಯಲಿದೆ. ಅದೇ ರೀತಿ BSNL ಮೊಬೈಲ್ ಸಂಖ್ಯೆಯ ಮೂಲಕ ಸೈಬರ್ ವಂಚನೆಗೆ ಒಳಗಾದರೆ ₹10 ಸಾವಿರದವರೆಗೆ ವಿಮಾ ಕವರೇಜ್ ಸಿಗಲಿದೆ.
ಈ ಸೌಲಭ್ಯ ಹೊಂದಿರುವ ರೀಚಾರ್ಜ್ ಪ್ಲಾನ್ ಖರೀದಿಸಿದ ತಕ್ಷಣವೇ ವಿಮಾ ಕವರೇಜ್ ಜಾರಿಗೆ ಬರಲಿದೆ. ರೀಚಾರ್ಜ್‌ಗೆ ಸಂಬಂಧಿಸಿದ SMSನಲ್ಲಿಯೇ ವಿಮಾ ವಿವರಗಳನ್ನು ಕಂಪನಿ ನೀಡಲಿದೆ. ಪ್ಲಾನ್‌ನ ವ್ಯಾಲಿಡಿಟಿ ಇರುವವರೆಗೆ ವಿಮಾ ಕವರೇಜ್ ಲಭ್ಯವಿರಲಿದೆ.
ಅಕ್ಟೋಬರ್ 1ರಿಂದ ಈ ಸೇವೆಯನ್ನು ಜಾರಿಗೆ ತಂದಿರುವುದಾಗಿ BSNL ತಿಳಿಸಿದೆ. ಟೆಲಿಕಾಂ ಕ್ಷೇತ್ರದಲ್ಲಿ ವಿಮಾ ಕವರೇಜ್ ನೀಡುತ್ತಿರುವ ಮೊದಲ ಕಂಪನಿಯಾಗಿ BSNL ಗುರುತಿಸಿಕೊಂಡಿದೆ ಎಂದು ವರದಿಯಾಗಿದೆ.
ಪ್ಲಾನ್‌ಗಳ ವಿವರ ಹೀಗಿದೆ:
STV 202 ಪ್ಲಾನ್:
-
300 ನಿಮಿಷಗಳ ವಾಯ್ಸ್ ಕರೆ
-
5GB ಡೇಟಾ
-
100 SMS
-
30 ದಿನಗಳ ವ್ಯಾಲಿಡಿಟಿ
-
ಉಚಿತ ಅಪಘಾತ ವಿಮೆ
-
ಉಚಿತ ಸೈಬರ್ ವಂಚನೆ ಕವರೇಜ್
STV 2449 ಪ್ಲಾನ್:
-
365 ದಿನಗಳ ವ್ಯಾಲಿಡಿಟಿ
-
ಅನಿಯಮಿತ ವಾಯ್ಸ್ ಕರೆ
-
ಪ್ರತಿದಿನ 2GB ಡೇಟಾ
-
100 SMS
-
ಉಚಿತ ಅಪಘಾತ ವಿಮೆ
-
ಉಚಿತ ಸೈಬರ್ ಕವರೇಜ್
ಪ್ರೀಪೇಯ್ಡ್ ರೀಚಾರ್ಜ್ ಮಾಡಿದ ಬಳಿಕ ಗ್ರಾಹಕರು BSNL Self Care ಪೋರ್ಟಲ್ ಅಥವಾ SMS ಮೂಲಕ ಲಭ್ಯವಾಗುವ ಲಿಂಕ್ ಬಳಸಿ ತಮ್ಮ ನಾಮಿನಿ ವಿವರಗಳನ್ನು ನೋಂದಾಯಿಸಬೇಕು.ರೀಚಾರ್ಜ್ ಮಾಡಿದ ಪ್ಲಾನ್‌ನ ವ್ಯಾಲಿಡಿಟಿ ಇರುವವರೆಗೆ ಅಥವಾ ಪಾಲಿಸಿಯ ನಿಯಮಗಳ ಪ್ರಕಾರ ಈ ಉಚಿತ ಅಪಘಾತ ವಿಮಾ ರಕ್ಷಣೆ ಅನ್ವಯವಾಗಲಿದೆ.
ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರಗಳನ್ನು ಹೆಚ್ಚಿಸಿರುವ ಸಂದರ್ಭದಲ್ಲಿ, ಕಡಿಮೆ ದರದ ರೀಚಾರ್ಜ್ ಪ್ಲಾನ್‌ಗಳ ಜೊತೆಗೆ ₹1 ಲಕ್ಷದವರೆಗೆ ಉಚಿತ ಅಪಘಾತ ವಿಮೆ ಮತ್ತು ₹10 ಸಾವಿರದವರೆಗೆ ಸೈಬರ್ ವಂಚನೆ ಕವರೇಜ್ ನೀಡುತ್ತಿರುವುದು BSNL ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನವಾಗಲಿದೆ.BSNL ಪ್ರೀಪೇಯ್ಡ್ ಗ್ರಾಹಕರು ತಮ್ಮ ಪ್ಲಾನ್‌ನ ವಿವರಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ನಾಮಿನಿ ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಸೂಕ್ತ.