ನವದೆಹಲಿ: ‘GTA VI’ ಕ್ರೇಜ್‌ಗೆ ಕೈಜೋಡಿಸಿದ ಪ್ರಧಾನಿ ಮೋದಿ ‘GTA V’ ಬಿಡುಗಡೆಯ ನಂತರ ಭಾರತವು ಹೇಗೆ ‘ಮುಂದಿನ ಹಂತಕ್ಕೆ’ (level up) ಏರಿದೆ ಎಂಬುದರ ಕುರಿತು ಪೋಸ್ಟ್ ಮಾಡಿದ್ದಾರೆ.
‘ಗ್ರಾಂಡ್ ಥೆಫ್ಟ್ ಆಟೋ VI’ (Grand Theft Auto VI) ಎಂಬ ವಿಡಿಯೋ ಗೇಮ್ ಬಿಡುಗಡೆಯ ಸುತ್ತ ಜಗತ್ತಿನಾದ್ಯಂತ ಉಂಟಾಗಿರುವ ಭಾರಿ ಉತ್ಸಾಹವನ್ನು ಪ್ರತಿಬಿಂಬಿಸುವಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಗೇಮ್‌ನ ಹಿಂದಿನ ಆವೃತ್ತಿ ಮತ್ತು ಗುರುವಾರ (ನವೆಂಬರ್ 19, 2026) ಜಾಗತಿಕವಾಗಿ ಬಿಡುಗಡೆಯಾದ ಇತ್ತೀಚಿನ ಆವೃತ್ತಿಯ ನಡುವಿನ ವರ್ಷಗಳಲ್ಲಿ ಭಾರತವು ಹೇಗೆ ಬದಲಾಗಿದೆ ಎಂಬುದನ್ನು ಅವರು ಇದರಲ್ಲಿ ತೋರಿಸಿದ್ದಾರೆ.
ಜಗತ್ತಿನಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರುವ ಜನಪ್ರಿಯ ವಿಡಿಯೋ ಗೇಮ್ ‘ಗ್ರ್ಯಾಂಡ್ ಥೆಫ್ಟ್ ಆಟೋ VI’ (GTA 6) ಬಿಡುಗಡೆಯ ಸಂಭ್ರಮದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕ್ರೇಜ್‌ಗೆ ಕೈಜೋಡಿಸಿದ್ದಾರೆ. GTA V ಮತ್ತು GTA VI ನಡುವಿನ 13 ವರ್ಷಗಳ ಅಂತರವನ್ನು ಬಳಸಿಕೊಂಡು ಭಾರತದಲ್ಲಿ ಆಗಿರುವ ಆರ್ಥಿಕ, ತಾಂತ್ರಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಿದ್ದಾರೆ.
‘ಭಾರತ ಈಗ ಸಂಪೂರ್ಣ ಹೊಸ ಆಟವನ್ನಾಡುತ್ತಿದೆ (India is playing a whole new game!) ಎಂದು ಪ್ರಧಾನಿ ಮೋದಿ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
GTA V ಟು GTA VI: ಭಾರತದ ಅಭಿವೃದ್ಧಿಯ ಚಿತ್ರಣ
‘Between GTA V and VI, here’s how India upgraded’ ಎಂಬ ಶೀರ್ಷಿಕೆಯಡಿ 10 ಸ್ಲೈಡ್ ಗಳ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. 2013ರಲ್ಲಿ ಬಿಡುಗಡೆಯಾದ GTA V ಸಮಯದ ಭಾರತದ ಪರಿಸ್ಥಿತಿಯನ್ನು 2026ರ ಭಾರತದ ಸ್ಥಿತಿಯೊಂದಿಗೆ ಹೋಲಿಕೆ ಮಾಡಲಾಗಿದೆ.
ಪ್ರಧಾನಿ ಹಂಚಿಕೊಂಡಿರುವ ಪ್ರಮುಖ ಅಂಕಿಅಂಶಗಳು ಹೀಗಿವೆ:
ಭಾರತದ ಅಭಿವೃದ್ಧಿಯ ಪ್ರಮುಖ ಅಂಶಗಳು
1. ಆರ್ಥಿಕ ಪ್ರಗತಿ: 2013ರಲ್ಲಿ ‘Fragile Five’ ಆರ್ಥಿಕತೆಗಳ ಪಟ್ಟಿಯಲ್ಲಿದ್ದ ಭಾರತ, ಈಗ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂದು ಬಿಂಬಿಸಲಾಗಿದೆ.
2. ಬಡತನ ಇಳಿಕೆ: ತೀವ್ರ ಬಡತನ ಪ್ರಮಾಣ ಶೇ.27ರಿಂದ ಶೇ.2.6ಕ್ಕೆ ಇಳಿಕೆಯಾಗಿದೆ ಎಂದು ಚಿತ್ರಗಳಲ್ಲಿ ಉಲ್ಲೇಖಿಸಲಾಗಿದೆ.
3. ಸ್ವಚ್ಛ ಭಾರತ ಅಭಿಯಾನ: ನೈರ್ಮಲ್ಯ ವ್ಯಾಪ್ತಿ ಶೇ.39ರಿಂದ ಶೇ.100ಕ್ಕೆ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.
4. ಸೌರಶಕ್ತಿ ಸಾಮರ್ಥ್ಯ: ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2.82 ಗಿಗಾವ್ಯಾಟ್‌ನಿಂದ 175 ಗಿಗಾವ್ಯಾಟ್‌ಗೆ ಹೆಚ್ಚಳವಾಗಿದೆ.
5. ಬಾಹ್ಯಾಕಾಶ ಕ್ಷೇತ್ರ: ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಒಂದರಿಂದ 440ಕ್ಕೆ ಏರಿಕೆಯಾಗಿದೆ.
6. ರೈಲ್ವೆ ವಿದ್ಯುದೀಕರಣ: ರೈಲ್ವೆ ಮಾರ್ಗಗಳ ವಿದ್ಯುದೀಕರಣ ಶೇ.20ರಿಂದ ಶೇ.99.6ಕ್ಕೆ ತಲುಪಿದೆ.
7. ಇಂಟರ್ನೆಟ್ ದರ: ಒಂದು ಜಿಬಿ ಡೇಟಾ ದರ 3G ಕಾಲದಲ್ಲಿ ₹308 ಇದ್ದದ್ದು, 5G ಕಾಲದಲ್ಲಿ ₹7.51ಕ್ಕೆ ಇಳಿದಿದೆ ಎಂದು ಹೋಲಿಕೆ ಮಾಡಲಾಗಿದೆ.
8. ರಕ್ಷಣಾ ರಫ್ತು: ರಕ್ಷಣಾ ಉಪಕರಣಗಳ ಆಮದು ಅವಲಂಬನೆಯಿಂದ 80ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುವ ಹಂತಕ್ಕೆ ಭಾರತ ಬೆಳೆದಿದೆ ಎಂದು ಉಲ್ಲೇಖಿಸಲಾಗಿದೆ.
9. ನಕ್ಸಲ್ ಪೀಡಿತ ಜಿಲ್ಲೆಗಳು: ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 182ರಿಂದ ಶೂನ್ಯಕ್ಕೆ ಇಳಿದಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಯುವಜನರನ್ನು ಸೆಳೆಯುವ ಹೊಸ ತಂತ್ರ
GTA V 2013ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿತ್ತು. ಇದೀಗ 13 ವರ್ಷಗಳ ನಂತರ GTA VI ಬಿಡುಗಡೆಯಾಗಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಜನಪ್ರಿಯ ಗೇಮಿಂಗ್ ಸಂಸ್ಕೃತಿಯನ್ನೇ ಬಳಸಿಕೊಂಡು ಸರ್ಕಾರದ ಅಭಿವೃದ್ಧಿ ಸಾಧನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.
ಗೇಮಿಂಗ್ ಶೈಲಿಯ ಚಿತ್ರಗಳು, ಆಕರ್ಷಕ ವಿನ್ಯಾಸ ಮತ್ತು ‘Then-Now’ ಹೋಲಿಕೆಗಳು ಯುವಜನರ ಗಮನ ಸೆಳೆಯುವಂತಿವೆ. ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ.
ಒಟ್ಟಿನಲ್ಲಿ, ಜಾಗತಿಕವಾಗಿ ಜನಪ್ರಿಯವಾಗಿರುವ ವಿಡಿಯೋ ಗೇಮ್‌ನ ಬಿಡುಗಡೆಯನ್ನು ಭಾರತದ ಅಭಿವೃದ್ಧಿಯೊಂದಿಗೆ ಜೋಡಿಸಿರುವ ಪ್ರಧಾನಿ ಮೋದಿಯವರ ಈ ವಿಭಿನ್ನ ಸಾಮಾಜಿಕ ಜಾಲತಾಣದ ಅಭಿಯಾನ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಸೂಚನೆ: ಈ ವರದಿಯಲ್ಲಿರುವ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಸಂಬಂಧಿಸಿದ ಅಂಕಿಅಂಶಗಳು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮಾಹಿತಿಯನ್ನು ಆಧರಿಸಿವೆ. ಇವುಗಳನ್ನು ಸ್ವತಂತ್ರವಾಗಿ ಪರಿಶೀಲಿಸಿದ ಅಂಕಿಅಂಶಗಳೆಂದು ಪರಿಗಣಿಸಬಾರದು. ವಿವಿಧ ಕ್ಷೇತ್ರಗಳ ಅಂಕಿಅಂಶಗಳ ಮೂಲ, ವ್ಯಾಖ್ಯಾನ ಮತ್ತು ಲೆಕ್ಕಾಚಾರದ ವಿಧಾನಗಳಲ್ಲಿ ವ್ಯತ್ಯಾಸಗಳಿರಬಹುದು.