LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭೀಕರ ರಸ್ತೆ ಅಪಘಾತ; ಕೈ ಕಳೆದುಕೊಂಡ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ!

21ನೇ ವಯಸ್ಸು.. ಕ್ರೀಡೆಯಲ್ಲಿ ಸಾಧನೆಯ ಉತ್ತುಂಗಕ್ಕೇರುವ ಕನಸು.. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದ ಯುವಕ. 2028ರ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದ ಆತನ ಬದುಕಿನಲ್ಲಿ ವಿಧಿ ಮಾತ್ರ ಕ್ರೂರ ಆಟವಾಡಿದೆ. ಭೀಕರ ರಸ್ತೆ ಅಪಘಾತವೊಂದು ಆತನ ಬಲಗೈಯನ್ನೇ ಕಸಿದುಕೊಂಡಿದೆ.

ಮಲೇಷ್ಯಾದ ಪ್ರತಿಭಾವಂತ ವೇಟ್‌ಲಿಫ್ಟರ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಮೊಹಮ್ಮದ್ ಹಫೀಜುದ್ದೀನ್ ರೋಸ್ಲಿನ್ (21) ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಅವರ ಬಲಗೈಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ, ಆರೋಗ್ಯ ಸ್ಥಿರ

ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಫೀಜುದ್ದೀನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಲೇಷ್ಯಾ ವೇಟ್‌ಲಿಫ್ಟಿಂಗ್ ಫೆಡರೇಶನ್ ಅಧ್ಯಕ್ಷ ಆಯೂಬ್ ರಹಮತ್ ತಿಳಿಸಿದ್ದಾರೆ. ದೈಹಿಕವಾಗಿ ಚೇತರಿಸಿಕೊಳ್ಳುತ್ತಿದ್ದರೂ, ಈ ದುರ್ಘಟನೆ ಅವರ ಕ್ರೀಡಾ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.

ಮಲೇಷ್ಯಾ ವೇಟ್‌ಲಿಫ್ಟಿಂಗ್ ಕ್ರೀಡೆಗೆ ಇದೊಂದು ತುಂಬಲಾರದ ನಷ್ಟ ಎಂದು ಆಯೂಬ್ ಹೇಳಿದ್ದಾರೆ. ಯುವ ಕ್ರೀಡಾಪಟುವಿನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ. ರಾಷ್ಟ್ರೀಯ ಕ್ರೀಡಾ ಮಂಡಳಿ (NSC) ಮೂಲಕ ವಿಮಾ ಸೌಲಭ್ಯಗಳೂ ದೊರೆಯಲಿವೆ ಎಂದು ತಿಳಿಸಿದ್ದಾರೆ.

ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದಿದ್ದ ಪ್ರತಿಭೆ

ಕಳೆದ ವರ್ಷ ಜುಲೈನಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 88 ಕೆ.ಜಿ. ವಿಭಾಗದಲ್ಲಿ ಹಫೀಜುದ್ದೀನ್ ಚಿನ್ನದ ಪದಕ ಗೆದ್ದು ಗಮನ ಸೆಳೆದಿದ್ದರು. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿರುವ ಯುವ ಕ್ರೀಡಾಪಟು ಎಂದೇ ಗುರುತಿಸಿಕೊಂಡಿದ್ದರು.

ಆದರೆ, ಒಂದೇ ಒಂದು ಭೀಕರ ಅಪಘಾತ ಆತನ ಬದುಕಿನ ದಿಕ್ಕನ್ನೇ ಬದಲಿಸಿದೆ. ಕ್ರೀಡಾಂಗಣದಲ್ಲಿ ಬಲದಿಂದ ಭಾರ ಎತ್ತಿ ಗೆಲುವಿನ ಸಂಭ್ರಮ ಆಚರಿಸುತ್ತಿದ್ದ ಯುವಕ, ಈಗ ಆಸ್ಪತ್ರೆಯ ಹಾಸಿಗೆಯಲ್ಲಿ ಹೊಸ ಸವಾಲನ್ನು ಎದುರಿಸುತ್ತಿದ್ದಾನೆ. ಆತನ ಕ್ರೀಡಾ ಕನಸುಗಳಿಗೆ ದೊಡ್ಡ ಹೊಡೆತ ಬಿದ್ದಿದ್ದರೂ, ಬದುಕಿನಲ್ಲಿ ಮತ್ತೆ ಎದ್ದು ನಿಲ್ಲುವ ಧೈರ್ಯವೇ ಈಗ ಆತನ ಮುಂದಿನ ಶಕ್ತಿಯಾಗಬೇಕಿದೆ.

*ಇಂಟರ್‌ಪೋಲ್ ರೆಡ್ ನೋಟಿಸ್ ಬೆನ್ನಲ್ಲೇ UAEಯಿಂದ ಕೇರಳ ಕೊಲೆ ಪ್ರಕರಣದ ಆರೋಪಿ ಭಾರತಕ್ಕೆ ಕರೆತಂದ CBI

ಕೇರಳದಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಸಿಬಿಐ (CBI), ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಕೇರಳ ಪೊಲೀಸರ ಸಹಕಾರದೊಂದಿಗೆ ಯುಎಇಯಿಂದ ಭಾರತಕ್ಕೆ ಕರೆತರಲಾಗಿದೆ. ಇಂಟರ್‌ಪೋಲ್ ರೆಡ್ ನೋಟಿಸ್ ಜಾರಿಯಾಗಿದ್ದ ಆರೋಪಿ ರಘೇಶ್ ಉನ್ನಿಕೋಚನ್‌ನನ್ನು ನವೆಂಬರ್ 18ರಂದು ಭಾರತಕ್ಕೆ ಹಸ್ತಾಂತರಿಸಲಾಗಿದೆ.ಕೇರಳ ಪೊಲೀಸರ ಕೊಲೆ ಪ್ರಕರಣದಲ್ಲಿ ರಘೇಶ್ ಉನ್ನಿಕೋಚನ್ ಆರೋಪಿಯಾಗಿದ್ದು, ತನಿಖೆ ಹಾಗೂ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಪ್ರಕರಣದಲ್ಲಿ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಆರೋಪಿಯ ವಿರುದ್ಧ ನಿರ್ದಿಷ್ಟ ದಿನಾಂಕವಿಲ್ಲದ ಬಂಧನ ವಾರಂಟ್ ಕೂಡ ಹೊರಡಿಸಲಾಗಿತ್ತು.

ಕೇರಳ ಪೊಲೀಸರ ಮನವಿಯ ಮೇರೆಗೆ ಸಿಬಿಐನ ನ್ಯಾಷನಲ್ ಸೆಂಟ್ರಲ್ ಬ್ಯೂರೋ (NCB), ನವದೆಹಲಿ, ಇಂಟರ್‌ಪೋಲ್ ಮೂಲಕ ಆರೋಪಿಯ ವಿರುದ್ಧ ರೆಡ್ ನೋಟಿಸ್ ಹೊರಡಿಸಿತ್ತು. ಬಳಿಕ ಆತನ ಇರುವಿಕೆಯನ್ನು ಪತ್ತೆಹಚ್ಚಿದ ಯುಎಇ ಅಧಿಕಾರಿಗಳು ಬಂಧಿಸಿದ್ದು, ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಗಡಿಪಾರು ಮಾಡಲು ಅನುಮತಿ ನೀಡಿದರು.ಕೇರಳ ಪೊಲೀಸರ ತಂಡ ಯುಎಇಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಬಳಿಕ ಆರೋಪಿಯೊಂದಿಗೆ ಪೊಲೀಸ್ ತಂಡ ನವೆಂಬರ್ 18ರಂದು ತಿರುವನಂತಪುರಕ್ಕೆ ಆಗಮಿಸಿದೆ.

ಇಂಟರ್‌ಪೋಲ್ ಸಹಕಾರದಿಂದ 281ಕ್ಕೂ ಹೆಚ್ಚು ಆರೋಪಿಗಳ ವಾಪಸ್

ಭಾರತದಲ್ಲಿ ಇಂಟರ್‌ಪೋಲ್‌ನ ರಾಷ್ಟ್ರೀಯ ಕೇಂದ್ರವಾಗಿ ಕಾರ್ಯನಿರ್ವಹಿಸುವ ಸಿಬಿಐ, BHARATPOL ವ್ಯವಸ್ಥೆಯ ಮೂಲಕ ದೇಶದ ವಿವಿಧ ತನಿಖಾ ಸಂಸ್ಥೆಗಳೊಂದಿಗೆ ಅಂತರರಾಷ್ಟ್ರೀಯ ಪೊಲೀಸ್ ಸಹಕಾರವನ್ನು ಸುಗಮಗೊಳಿಸುತ್ತಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಲ್ ಟ್ಯಾಂಪರಿಂಗ್ ಗೆ ಪಾಕಿಸ್ತಾನ ಬಳಸುತ್ತಿದ್ದದ್ದು ಬಾಟಲ್ ಕ್ಯಾಪ್: ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ ಶೋಯೆಬ್ ಅಖ್ತರ್ ಸ್ಫೋಟಕ ಹೇಳಿಕೆ1 ಕಂಪ್ಯೂಟರ್ ನಿಂದ 73 ಕೋಟಿ ವರೆಗೆ: 1 ಕಂಪ್ಯೂಟರ್ ನಿಂದ ಗೇಮ್ ಅಭಿವೃದ್ಧಿ; 100 ಕ್ಕೂ ಹೆಚ್ಚು ವಿಡಿಯೋ ಗೇಮ್ಸ್ ರಚಿಸಿದ ಬೆಂಗಳೂರಿನ ವ್ಯಕ್ತಿ: 73 ಕೋಟಿಗೆ ಖರೀದಿಸಿದ ರಾಕ್ ಸ್ಟಾರ್ ಗೇಮ್ಸ್ ಸಂಸ್ಥೆಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆ ನಿರ್ಣಯ ಬಗ್ಗೆ ಶ್ರೀಲಂಕಾ ಸಂಸತ್ತಿನಲ್ಲಿ ನ. 21 ರಂದು ಮಹತ್ವದ ಚರ್ಚೆUPI ಶುಲ್ಕ ವಿಳಂಬದಿಂದ ಪಾವತಿ ಸೇವಾ ಕಂಪನಿಗಳ ಷೇರುಗಳಿಗೆ ಹೊಡೆತ; ನೀವು ಈಗ Paytm, MobiKwik ಷೇರುಗಳನ್ನು ಖರೀದಿಸಬೇಕೇ?‘ಭಾರತ ಈಗ ಸಂಪೂರ್ಣ ಹೊಸ ಆಟವನ್ನಾಡುತ್ತಿದೆ’: GTA VI ಕ್ರೇಜ್ ಗೆ ಕೈಜೋಡಿಸಿದ ಪ್ರಧಾನಿ ಮೋದಿBREAKING: ಟಿವಿಕೆ ಶಾಸಕ ವಿ.ಎಸ್. ಬಾಬು ಹೃದಯಾಘಾತಕ್ಕೆ ಬಲಿರಣವೀರ್ ಸಿಂಗ್ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ; ‘ಪ್ರಳಯ’ ಚಿತ್ರದ ಫೋಟೋಗಳು ಲೀಕ್!ಭೀಕರ ರಸ್ತೆ ಅಪಘಾತ; ಕೈ ಕಳೆದುಕೊಂಡ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ!1 ಲೀಟರ್ ಹಾಲಿನಿಂದ ಎಷ್ಟು ಗ್ರಾಂ ಹಾಲಿನ ಪುಡಿ ತಯಾರಾಗುತ್ತೆ ಗೊತ್ತಾ? ಇಲ್ಲಿದೆ ಅಚ್ಚರಿಯ ಲೆಕ್ಕಾಚಾರಆಡಿಷನ್‌ಗೆ ಫೋಟೋ ಕೇಳಿದಾಗ ಪಾಸ್‌ಪೋರ್ಟ್ ಸೈಜ್ ಫೋಟೋ ಕೊಟ್ಟಿದ್ದ ಅನುಷ್ಕಾ! ಅಂದು ಹೇಗಿದ್ದರು ಗೊತ್ತಾ?