LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿರಾಜ್ ಕೈಬಿಟ್ಟಿದ್ದಕ್ಕೆ ಕೋಚ್ ಕೊಟಕ್ ಸ್ಪಷ್ಟನೆ: ಕೇವಲ ಮೊದಲ ದಿನದ ಆಟಕ್ಕಾಗಿ ತಂಡ ಕಟ್ಟುವುದಿಲ್ಲ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್ ನಿಂದ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಹೊರಗಿಟ್ಟ ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ನಿರ್ಧಾರವನ್ನು ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪಂದ್ಯದ ಕೇವಲ ಮೊದಲ ದಿನದ ವಾತಾವರಣವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡುವುದಿಲ್ಲ, ಬದಲಾಗಿ ಮುಂದಿನ ನಾಲ್ಕೈದು ದಿನಗಳ ಪರಿಸ್ಥಿತಿಯನ್ನು ಲೆಕ್ಕಹಾಕಿ ಅತ್ಯುತ್ತಮ ಸಂಯೋಜನೆಯನ್ನು ಕಣಕ್ಕಿಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ನೇತೃತ್ವದ ನಾಲ್ವರು ವೇಗಿಗಳ ಪಡೆಯಲ್ಲಿ ಸಿರಾಜ್ ಬದಲಿಗೆ ಯುವ ಬೌಲರ್ ಅನ್ಶುಲ್ ಕಾಂಬೋಜ್ ಅವರಿಗೆ ಅವಕಾಶ ನೀಡಲಾಗಿತ್ತು. ಪ್ರಸಿದ್ಧ್ ಕೃಷ್ಣ ಮತ್ತು ಆಕಾಶ್ ದೀಪ್ ತಂಡದಲ್ಲಿದ್ದ ಇತರ ವೇಗಿಗಳಾಗಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೊಟಕ್, ಸಿರಾಜ್ ಅವರ ಫಾರ್ಮ್ ಅಥವಾ ಫಿಟ್ನೆಸ್ ನಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ಪಿಚ್ ಮತ್ತು ಪಂದ್ಯದ ಸಂಪೂರ್ಣ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಇದೇ ವೇಳೆ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಆಯ್ಕೆಯ ಬಗ್ಗೆಯೂ ಅವರು ಕಾರಣ ನೀಡಿದರು. ನ್ಯೂಜಿಲೆಂಡ್ ತಂಡದ ಅಗ್ರ ಕ್ರಮಾಂಕದಲ್ಲಿ ನಾಲ್ವರು ಎಡಗೈ ಬ್ಯಾಟರ್ ಗಳಿರುವುದರಿಂದ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಸದ್ಯದ ಪರಿಸ್ಥಿತಿಗೆ ಇದು ಅತ್ಯುತ್ತಮ ಬೌಲಿಂಗ್ ವಿಭಾಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪಂದ್ಯದ ಮೊದಲ ದಿನದಾಟದಲ್ಲಿ ಬುಮ್ರಾ ದಾಳಿಗೆ ತತ್ತರಿಸಿದ ಕಿವೀಸ್ ಪಡೆ 23 ಓವರ್ ಗಳಲ್ಲಿ 60 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಚೆಂಡಿನ ಹೊಳಪು ಕಡಿಮೆಯಾದ ಬಳಿಕ ಭಾರತದ ಇತರ ವೇಗಿಗಳು ವಿಕೆಟ್ ಪಡೆಯಲು ಪರದಾಡಿದರು. ಇದರ ಲಾಭ ಪಡೆದ ಹೆನ್ರಿ ನಿಕೋಲ್ಸ್ ಮತ್ತು ಗ್ಲೆನ್ ಫಿಲಿಪ್ಸ್ ಅಜೇಯ ಜೊತೆಯಾಟವಾಡಿ ಮೊದಲ ದಿನದಾಂತ್ಯಕ್ಕೆ ತಂಡದ ಮೊತ್ತವನ್ನು 243 ರನ್ ಗಳಿಗೆ ಕೊಂಡೊಯ್ದರು.

ಯುವ ವೇಗಿ ಅನ್ಶುಲ್ ಕಾಂಬೋಜ್ ಅವರ ಬೌಲಿಂಗ್ ವೇಗದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೊಟಕ್, ಅವರು ಗಂಟೆಗೆ 128 ರಿಂದ 130 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಮೂರನೇ ಸ್ಪೆಲ್ ನಲ್ಲಿ ಮಾತ್ರ ವೇಗ ಹೆಚ್ಚು ಮುಖ್ಯವಾಗುತ್ತದೆ, ಹೀಗಾಗಿ ಅವರ ವೇಗದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದರು. ಅಲ್ಲದೆ, ದುಬಾರಿಯಾದ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಬೆಂಬಲಿಸಿದ ಕೋಚ್, ಪ್ರಸಿದ್ಧ್ ಆಕ್ರಮಣಕಾರಿ ಬೌಲರ್ ಆಗಿರುವುದರಿಂದ ಕೆಲವೊಮ್ಮೆ ರನ್ ಬಿಟ್ಟುಕೊಡುವುದು ಸಹಜ. ವಿಕೆಟ್ ಪಡೆದಾಗ ಹೊಗಳಿ, ರನ್ ನೀಡಿದಾಗ ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.

ಬಿಸಿಲಿನ ವಾತಾವರಣದಿಂದಾಗಿ ಪಿಚ್ ನಲ್ಲಿದ್ದ ತೇವಾಂಶ ನಿರೀಕ್ಷೆಗಿಂತ ಬೇಗನೆ ಒಣಗಿತು. ಹೊಸ ಚೆಂಡಿನಲ್ಲಿ ಬೌಲರ್ ಗಳಿಗೆ ನೆರವು ಸಿಕ್ಕರೂ, ನಂತರ ಬ್ಯಾಟಿಂಗ್ ಗೆ ಪಿಚ್ ಸಹಕಾರಿಯಾಯಿತು. ನ್ಯೂಜಿಲೆಂಡ್ ಬ್ಯಾಟರ್ ಗಳು ಯಾವುದೇ ಅಪಾಯಕಾರಿ ಹೊಡೆತಗಳಿಗೆ ಕೈಹಾಕದೆ ತಾಳ್ಮೆಯಿಂದ ಆಡಿ ಯಶಸ್ವಿಯಾದರು ಎಂದು ಕೊಟಕ್ ಎದುರಾಳಿ ತಂಡದ ಬ್ಯಾಟಿಂಗ್ ಪ್ರದರ್ಶನವನ್ನು ಶ್ಲಾಘಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಲ್ ಟ್ಯಾಂಪರಿಂಗ್ ಗೆ ಪಾಕಿಸ್ತಾನ ಬಳಸುತ್ತಿದ್ದದ್ದು ಬಾಟಲ್ ಕ್ಯಾಪ್: ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ ಶೋಯೆಬ್ ಅಖ್ತರ್ ಸ್ಫೋಟಕ ಹೇಳಿಕೆ1 ಕಂಪ್ಯೂಟರ್ ನಿಂದ 73 ಕೋಟಿ ವರೆಗೆ: 1 ಕಂಪ್ಯೂಟರ್ ನಿಂದ ಗೇಮ್ ಅಭಿವೃದ್ಧಿ; 100 ಕ್ಕೂ ಹೆಚ್ಚು ವಿಡಿಯೋ ಗೇಮ್ಸ್ ರಚಿಸಿದ ಬೆಂಗಳೂರಿನ ವ್ಯಕ್ತಿ: 73 ಕೋಟಿಗೆ ಖರೀದಿಸಿದ ರಾಕ್ ಸ್ಟಾರ್ ಗೇಮ್ಸ್ ಸಂಸ್ಥೆಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆ ನಿರ್ಣಯ ಬಗ್ಗೆ ಶ್ರೀಲಂಕಾ ಸಂಸತ್ತಿನಲ್ಲಿ ನ. 21 ರಂದು ಮಹತ್ವದ ಚರ್ಚೆUPI ಶುಲ್ಕ ವಿಳಂಬದಿಂದ ಪಾವತಿ ಸೇವಾ ಕಂಪನಿಗಳ ಷೇರುಗಳಿಗೆ ಹೊಡೆತ; ನೀವು ಈಗ Paytm, MobiKwik ಷೇರುಗಳನ್ನು ಖರೀದಿಸಬೇಕೇ?‘ಭಾರತ ಈಗ ಸಂಪೂರ್ಣ ಹೊಸ ಆಟವನ್ನಾಡುತ್ತಿದೆ’: GTA VI ಕ್ರೇಜ್ ಗೆ ಕೈಜೋಡಿಸಿದ ಪ್ರಧಾನಿ ಮೋದಿBREAKING: ಟಿವಿಕೆ ಶಾಸಕ ವಿ.ಎಸ್. ಬಾಬು ಹೃದಯಾಘಾತಕ್ಕೆ ಬಲಿರಣವೀರ್ ಸಿಂಗ್ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ; ‘ಪ್ರಳಯ’ ಚಿತ್ರದ ಫೋಟೋಗಳು ಲೀಕ್!ಭೀಕರ ರಸ್ತೆ ಅಪಘಾತ; ಕೈ ಕಳೆದುಕೊಂಡ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ!1 ಲೀಟರ್ ಹಾಲಿನಿಂದ ಎಷ್ಟು ಗ್ರಾಂ ಹಾಲಿನ ಪುಡಿ ತಯಾರಾಗುತ್ತೆ ಗೊತ್ತಾ? ಇಲ್ಲಿದೆ ಅಚ್ಚರಿಯ ಲೆಕ್ಕಾಚಾರಆಡಿಷನ್‌ಗೆ ಫೋಟೋ ಕೇಳಿದಾಗ ಪಾಸ್‌ಪೋರ್ಟ್ ಸೈಜ್ ಫೋಟೋ ಕೊಟ್ಟಿದ್ದ ಅನುಷ್ಕಾ! ಅಂದು ಹೇಗಿದ್ದರು ಗೊತ್ತಾ?