LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಂಕರ್ ಕೇಳಿದ ಪ್ರಶ್ನೆಗೆ ತಲೆಕೆಟ್ಟವನಂತೆ ಉತ್ತರ ಕೊಟ್ಟ ಪಂತ್: ಪಕ್ಕಾ ಎಣ್ಣೆ ಏಟಲ್ಲಿ ಆಡಿದ ಮಾತು ಎಂದ ನೆಟ್ಟಿಗರು; ವಿಡಿಯೊ

ನಿನ್ನೆ ( ಮೇ 19 ) ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 14 ಅಂಕ ಸಂಪಾದಿಸಿದ ರಾಜಸ್ಥಾನ್ ತನ್ನ ಉಳಿದ ಪಂದ್ಯ ಗೆದ್ದರೆ ಪ್ಲೇಆಫ್ ಪ್ರವೇಶ ಪಡೆದುಕೊಳ್ಳುವುದು ಪಕ್ಕಾ ಆಗಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಮಿಚೆಲ್ ಮಾರ್ಷ್ ಹಾಗೂ ಜೋಶ್ ಇಂಗ್ಲಿಸ್ ಅಬ್ಬರದ ಆಟದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 220 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 221 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್, ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೆಲ್ ಜವಾಬ್ದಾರಿಯುತ ಆಟದ ನೆರವಿನಿಂದ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿತು.

ಇನ್ನು ಟೂರ್ನಿಯಲ್ಲಿ ಈಗಾಗಲೇ ಅಧಿಕೃತವಾಗಿ ಎಲಿಮಿನೇಟ್ ಆಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಈ ಪಂದ್ಯ ಮುಖ್ಯವಾದದ್ದಲ್ಲದಿದ್ದರೂ ಪ್ಲೇಆಫ್ ರೇಸ್‌ನಲ್ಲಿ ಇತರೆ ತಂಡಗಳ ಜತೆ ಪೈಪೋಟಿಗೆ ಬಿದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೋಲುಣಿಸಿದ್ದರೆ ಟೂರ್ನಿಯ ರೋಚಕತೆಯನ್ನು ಹೆಚ್ಚಿಸಿ ಪ್ಲೇಆಫ್ ಪ್ರವೇಶವನ್ನು ಮತ್ತಷ್ಟು ಕಠಿಣಗೊಳಿಸಬಹುದಿತ್ತು.

ಆದರೆ ಅದ್ಯಾಕೋ ಈ ಕೆಲಸವನ್ನು ಮಾಡುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಬ್ ಪಂತ್ ಆಸಕ್ತಿ ತೋರಿದಂತೆ ಕಾಣಲಿಲ್ಲ. ಬ್ಯಾಟಿಂಗ್‌ನಲ್ಲಿ 23 ಎಸೆತ ಎದುರಿಸಿ 35 ರನ್ ಬಾರಿಸಿ ಏಕದಿನ ಕ್ರಿಕೆಟ್‌ ಆಡಿದ ಪಂತ್ ಪಂದ್ಯಕ್ಕೂ ಮುನ್ನ ನಡೆದ ಟಾಸ್ ವೇಳೆ ನಡೆದುಕೊಂಡ ರೀತಿಯಿಂದಾಗಿ ಭಾರೀ ಟ್ರೋಲ್‌ಗೀಡಾಗಿದ್ದಾರೆ.

ಹೌದು, ಟಾಸ್ ಬಳಿಕ ಆಂಕರ್ ಇಯಾನ್ ಬಿಷಾಪ್ ಪಂತ್ ಬಳಿ ತಮ್ಮ ಆಡುವ ಬಳಗದಲ್ಲಿ ಇರುವ ಬದಲಾವಣೆಯ ಬಗ್ಗೆ ಕೇಳಿದರು. ಈ ವೇಳೆ ಉತ್ತರ ನೀಡಿದ ಪಂತ್ ಕುಡಿದವರ ಹಾಗೆ ಮಾತನಾಡಿದರು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ನಿರೂಪಕ ಕೇಳಿದ ಪ್ರಶ್ನೆಗೆ ನಶೆಯಲ್ಲಿದ್ದವರ ಹಾಗೆ ಪಂತ್ ನೀಡಿದ ಉತ್ತರ ಕಂಡು ನೆಟ್ಟಿಗರು ನಕ್ಕಿ ವಿಡಿಯೊ ಹಂಚಿಕೊಂಡಿದ್ದಾರೆ. ಪಂತ್ ಹಾಗೂ ಇಯಾನ್ ಬಿಷಾಪ್ ನಡುವೆ ನಡೆದ ಸಂಭಾಷಣೆ ಹೀಗಿತ್ತು.

ಪಂತ್: ಇಂದು ಶಮಿ ಆಡುತ್ತಿಲ್ಲ.

ಬಿಷಾಪ್: ಶಮಿಗೆ ತೊಂದರೆಯಾಗಿದೆಯೇ?

ಪಂತ್: ಹೌದು.

ಬಿಷಾಪ್: ಏನು ತೊಂದರೆ?

ಪಂತ್: ಮೊಹ್ಸಿನ್ ಖಾನ್

ಬಿಷಾಪ್: ಅಲ್ಲ, ಶಮಿಗೆ ಏನಾಗಿದೆ?

ಪಂತ್: ( ನಿಶಬ್ದ )

ಬಿಷಾಪ್: ಯಾರು ಔಟ್, ಯಾರು ಇನ್?

ಪಂತ್: ಶಮಿ ಔಟ್, ಮೊಹ್ಸಿನ್ ಇನ್.

ಬಿಷಾಪ್: ಹೌದು. ನಾನು ಕೇಳುತ್ತಿದ್ದದ್ದು ಏನೆಂದರೆ..

ಪಂತ್: ಏಡನ್ ಔಟ್, ಬದೋನಿ ಇನ್.

ಬಿಷಾಪ್: ಆಯ್ತು. ಇದನ್ನು ಇಲ್ಲಿಗೆ ನಿಲ್ಲಿಸೋಣ.

ಹೀಗೆ ಪಂತ್ ಕೊಟ್ಟ ತಲೆಕೆಟ್ಟ ಉತ್ತರಗಳನ್ನು ಕಂಡು ಸ್ವತಃ ಇಯಾನ್ ಬಿಷಾಪ್ ತಲೆಕೆಡಿಸಿಕೊಂಡು ಸಂಭಾಷಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಿಬಿಟ್ಟರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ