LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆ ಐಪಿಎಲ್ ತಂಡದ ಅಭಿಮಾನಿಗಳಿಂದ ತಾಯಿ ಹಾಗೂ ಅಕ್ಕನಿಗೆ ನಿಂದನೆ: ನಾನೊಬ್ಬ ರಾಷ್ಟ್ರೀಯ ಕ್ರಿಕೆಟಿಗ ಮರ್ಯಾದೆ ಕೊಡ್ರೋ ಎಂದು ಗೋಳಾಡಿದ ಆಟಗಾರ; ವಿಡಿಯೊ

ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಸದ್ಯ ಯಾವ ನಾಲ್ಕು ತಂಡಗಳು ಪ್ಲೇಆಫ್‌ಗೆ ಲಗ್ಗೆ ಇಡಲಿವೆ ಎಂಬ ಪ್ರಶ್ನೆ ಎದ್ದಿದೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಯಶಸ್ವಿಯಾಗಿ ಪ್ಲೇಆಫ್‌ಗೆ ತಲುಪಿದ್ದು, ಇನ್ನುಳಿದ ಒಂದು ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.

ಇನ್ನು ಇದೇ ವೇಳೆ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚೆಪಾಕ್‌ನಲ್ಲೇ ಮಣಿಸಿ ಪ್ಲೇಆಫ್ ಪ್ರವೇಶ ಪಡೆದುಕೊಂಡಿತು. ಟೂರ್ನಿ ಆರಂಭಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ಒಂದು ಡಮ್ಮಿ ತಂಡ, ಅವರು ಯಾವುದೇ ಕಾರಣಕ್ಕೂ ಪ್ಲೇಆಫ್‌ಗೆ ಬರುವುದಿಲ್ಲ ಎಂದು ಗೇಲಿ ಮಾಡಿದ್ದರು.

ಈ ಪೈಕಿ ತೆಲುಗಿನವರೇ ಆದ ಮಾಜಿ ಕ್ರಿಕೆಟಿಗ ಹನುಮ ವಿಹಾರಿ ಸಹ ನಾಲ್ಕು ತಂಡಗಳನ್ನು ಆರಿಸಿ ಸನ್ ರೈಸರ್ಸ್ ಹೈದರಾಬಾದ್ ಹೆಸರನ್ನು ಕೈಬಿಟ್ಟಿದ್ದರು. ಓರ್ವ ತೆಲುಗು ಕ್ರಿಕೆಟಿಗನಾಗಿ ತಮ್ಮದೇ ಸನ್ ರೈಸರ್ಸ್ ತಂಡವನ್ನು ಕಡೆಗಣಿಸಿದ್ದು ಅವರ ಅಭಿಮಾನಿಗಳಲ್ಲಿ ಬೇಸರವಿತ್ತು.

ಈ ಬೇಸರ ದ್ವೇಷಕ್ಕೆ ತಿರುಗಿದ್ದು ಇದೇ ಹನುಮ ವಿಹಾರಿ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಪಿಚ್‌ನಲ್ಲಿ ಮಾತ್ರ ಅಬ್ಬರಿಸುವ ತಂಡ ಎಂದು ನಾಲಿಗೆ ಹರಿಬಿಟ್ಟಾಗ ಹಾಗೂ 2016ರಲ್ಲಿ ಅವರು ಕಪ್ ಗೆದ್ದದ್ದು ರಶೀದ್ ಖಾನ್ ಅವರಿಂದ ಎಂದಾಗ. ಅಸಲಿಗೆ ರಶೀದ್ ಖಾನ್ ಸನ್ ರೈಸರ್ಸ್ ತಂಡ ಸೇರಿದ್ದು 2017ರಲ್ಲಿ ಎಂಬ ಮಾಹಿತಿ ತಿಳಿಯದೇ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡಿದ್ದ ಹನುಮ ವಿಹಾರಿ ಸನ್ ರೈಸರ್ಸ್ ಫ್ಯಾನ್ಸ್ ಪಾಲಿಗೆ ಅಂದೇ ಜೋಕರ್ ಆಗಿಬಿಟ್ಟರು.

ಅಂದಿನಿಂದ ಶುರುವಾದ ಈ ಕ್ರಿಕೆಟಿಗನ ಮೇಲಿನ ಟ್ರೋಲ್ ಆತ ಪದೇಪದೇ ಸನ್ ರೈಸರ್ಸ್ ವಿರುದ್ಧ ಮಾತನಾಡುವಂತೆ ಮಾಡಿತು. ಈ ಅಂಬಾಟಿ ರಾಯುಡು ಆಗಾಗ ಆರ್‌ಸಿಬಿ ಕೆಣಕಿದ ರೀತಿಯದ್ದೇ ಕಥೆ ಇದು.

ಹೀಗೆ ಶುರುವಾದ ಹನುಮ ವಿಹಾರಿ ಹಾಗೂ ಹೈದರಾಬಾದ್ ಫ್ಯಾನ್ಸ್ ನಡುವಿನ ವಾರ್ ಸಾಮಾಜಿಕ ಜಾಲತಾಣದಲ್ಲಿ ನಿಂದನೆಗೆ ತಿರುಗಿತು. ಹಲವು ದಿನಗಳ ಕಾಲ ಇದನ್ನು ಎದುರಿಸಿದ ಹನುಮ ವಿಹಾರಿ ತಡೆದುಕೊಳ್ಳಲಾಗದೇ ಸದ್ಯ ಈ ಕುರಿತು ವಿಡಿಯೊ ಮಾಡಿದ್ದು, ‘ನಾನು ಕ್ರಿಕೆಟಿಗನಾಗಿ ಕಾಮೆಂಟ್ ಮಾಡಿದೆ, ಆದರೆ ನೀವು ಅಮ್ಮ, ಅಕ್ಕ ಎಂದು ನಿಂದಿಸುತ್ತೀರ. ಓರ್ವ ತೆಲುಗು ಕ್ರಿಕೆಟಿಗನಿಗೆ ನೀವು ನೀಡುವ ಗೌರವ ಇದೇನಾ? ನಿಮ್ಮ ಮನೆಯಲ್ಲೂ ಅಮ್ಮ, ಅಕ್ಕ ಇದ್ದಾರೆ ಅವರನ್ನೂ ಸಹ ಹೀಗೆಯೇ ಬಯ್ಯುತ್ತೀರಾ? ನಾನು ತೆಲುಗು ರಾಜ್ಯದವನು ಎಂಬ ಕಾರಣಕ್ಕೆ ಸನ್‌ರೈಸರ್ಸ್‌ಗೆ ಬೆಂಬಲ ನೀಡಬೇಕು ಎನ್ನುವವರು ಕೊಡುವ ಗೌರವ ಸರಿ ಇದೆಯಾ? ತೆಲುಗು ರಾಜ್ಯದವನು ಎಂಬ ಮಾತ್ರಕ್ಕೆ ನಾನು ಸನ್‌ರೈಸರ್ಸ್‌ಗೆ ಬೆಂಬಲ ನೀಡಬೇಕು ಎಂದೇನಿಲ್ಲ. ಐಪಿಎಲ್ ಎಂಬುದು ಒಂದು ಬ್ಯುಸಿನೆಸ್, ಅದನ್ನು ಅರ್ಥ ಮಾಡಿಕೊಳ್ಳಿ’ ಎಂದು ಕಿಡಿಕಾರಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಪ್ರಧಾನಿ ಮೋದಿಯಿಂದ ಮೆಲೋನಿಗೆ ‘Melody’ ಚಾಕೊಲೇಟ್ ಗಿಫ್ಟ್: ಕೇವಲ ಒಂದೇ ದಿನದಲ್ಲಿ 12 ಕೋಟಿ ವ್ಯೂಸ್ ಪಡೆದು ಧೂಳೆಬ್ಬಿಸಿತು ರೋಮ್‌ನ ಕ್ಯೂಟ್ ವಿಡಿಯೋಅಯ್ಯಯ್ಯೋ ಅಲ್ಪಮೊತ್ತಕ್ಕೆ ಸುಸ್ತಾದ ಮುಂಬೈ; ಮತ್ತೊಂದು ತಂಡವನ್ನು ಮನೆಗೆ ಕಳುಹಿಸುವ ಅವಕಾಶ ಕೈಚೆಲ್ಲಿತಾ ಪಾಂಡ್ಯ ಪಡೆ?ಆ ಐಪಿಎಲ್ ತಂಡದ ಅಭಿಮಾನಿಗಳಿಂದ ತಾಯಿ ಹಾಗೂ ಅಕ್ಕನಿಗೆ ನಿಂದನೆ: ನಾನೊಬ್ಬ ರಾಷ್ಟ್ರೀಯ ಕ್ರಿಕೆಟಿಗ ಮರ್ಯಾದೆ ಕೊಡ್ರೋ ಎಂದು ಗೋಳಾಡಿದ ಆಟಗಾರ; ವಿಡಿಯೊಆಸ್ಟ್ರೇಲಿಯಾದ ಮ್ಯಾರಥಾನ್ ನಲ್ಲಿ ಗಮನಸೆಳೆದ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್, ಸದಾನಂದ ಅಮ್ರಾಪುರBIG NEWS: ಕುಮಾರಸ್ವಾಮಿ ಪಂಥಾಹ್ವಾನ ನಾನು ಸ್ವೀಕರಿಸುವೆ: ದಿನಾಂಕ ಹಾಗೂ ಸ್ಥಳ ನಿಗದಿ ಮಾಡಲಿ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್ಜೂ. 1 ರಿಂದ ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಆಸ್ಪತ್ರೆ ಬಂದ್ಕೊಳವೆಬಾವಿಗಳ ಜಲ ಮರುಪೂರಣಕ್ಕೆ ಹೊಸ ತಂತ್ರಜ್ಞಾನ ಅಳವಡಿಕೆ: ‘ಸ್ಪಾಂಜ್ ಜೋನ್’ ಮೂಲಕ ಅಂತರ್ಜಲ ಮಟ್ಟ ಹೆಚ್ಚಳ, ಬತ್ತಿದ ಬೋರ್ ವೆಲ್ ಗಳಿಗೆ ಮರುಜೀವಮಹಿಳೆ ಸರ ದೋಚಿ ಪರಾರಿಯಾಗುತ್ತಿದ್ದಾಗಲೇ ಸಿಕ್ಕಿಬಿದ್ದ ಕಳ್ಳಜೈಲಿನಲ್ಲಿ ಬೇಸತ್ತು ನಟ ದರ್ಶನ್ ಆತ್ಮಹತ್ಯೆ ಯತ್ನ? ಡಿಜಿಪಿ ಅಲೋಕ್ ಕುಮಾರ್‌ ಕೊಟ್ಟ ಉತ್ತರವೇನು?BIG NEWS: ವಿಜಯ್ ಸಂಪುಟದಲ್ಲಿ ಕಾಂಗ್ರೆಸ್ ನ ಇಬ್ಬರಿಗೆ ಸಚಿವ ಸ್ಥಾನ: ತಮಿಳುನಾಡಿನಲ್ಲಿ 59 ವರ್ಷಗಳ ನಂತರ ಸಚಿವ ಸಂಪುಟಕ್ಕೆ ಕಾಂಗ್ರೆಸ್ ಶಾಸಕರು ಸೇರ್ಪಡೆ