LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಾಟ್ಸಾಪ್‌ ನಲ್ಲಿ ಹೊಸ ಭದ್ರತಾ ಫೀಚರ್ ; ಹೊಸ ನಂಬರ್‌ನಿಂದ ಬರುವ ಮೆಸೇಜ್‌ಗಳಿಗೆ ಇನ್ನು ಭಯ ಬೇಡ!

ಅಪರಿಚಿತ ನಂಬರ್‌ಗಳಿಂದ ಬರುವ ಮೆಸೇಜ್‌ಗಳಿಂದ ತೊಂದರೆ ಅನುಭವಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮಿಗಾಗಿ ವಾಟ್ಸಾಪ್ ಹೊಸ ಭದ್ರತಾ ಫೀಚರ್‌ನ್ನು ಪರಿಚಯಿಸಿದೆ. ಇನ್ನು ಮುಂದೆ ಯಾವುದೇ ಹೊಸ ನಂಬರ್‌ನಿಂದ ಮೆಸೇಜ್ ಬಂದರೆ, ಚಾಟ್ ತೆರೆಯುವ ಮುನ್ನವೇ ಎಚ್ಚರಿಕೆ ಸಂದೇಶ ಕಾಣಿಸುತ್ತದೆ. ಸೈಬರ್ ವಂಚಕರ ಬಲೆಗೆ ಬೀಳದಂತೆ ರಕ್ಷಿಸುವ ಈ ಹೊಸ ಫೀಚರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯೋಣ.

ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಫೀಚರ್ ಈಗ ಆಂಡ್ರಾಯ್ಡ್ ಹಾಗೂ ಐಒಎಸ್ (iOS) ಬಳಕೆದಾರರಿಗೆ ಹಂತ ಹಂತವಾಗಿ ಲಭ್ಯವಾಗುತ್ತಿದೆ. ನೀವು ಹಿಂದೆಂದೂ ಸಂಪರ್ಕಿಸದ ಹೊಸ ನಂಬರ್‌ನಿಂದ ಮೆಸೇಜ್ ಬಂದಾಗ, ವಾಟ್ಸಾಪ್ ಸ್ವಯಂಚಾಲಿತವಾಗಿ ಎಚ್ಚರಿಕೆ ತೋರಿಸುತ್ತದೆ.

ಅದರೊಂದಿಗೆ,

  • ಆ ನಂಬರ್ ಯಾವ ದೇಶಕ್ಕೆ ಸೇರಿದೆ?
  • ಆ ನಂಬರ್ ನಿಮ್ಮ ಸಂಪರ್ಕ ಪಟ್ಟಿಯಲ್ಲಿ (Contacts) ಸೇವ್ ಆಗಿದೆಯೇ?
  • ನಿಮಗೆ ಮತ್ತು ಆ ವ್ಯಕ್ತಿಗೆ ಯಾವುದೇ ಕಾಮನ್ ಗ್ರೂಪ್‌ಗಳಿವೆಯೇ?

ಎಂಬ ಮಾಹಿತಿಯನ್ನೂ ತೋರಿಸುತ್ತದೆ. ಈ ವಿವರಗಳನ್ನು ನೋಡಿ ನೀವು ಚಾಟ್ ಮುಂದುವರಿಸಬೇಕೇ ಅಥವಾ ರದ್ದುಪಡಿಸಬೇಕೇ ಎಂದು ನಿರ್ಧರಿಸಬಹುದು. ಮುಖ್ಯವಾಗಿ, ನೀವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಎದುರಿನ ವ್ಯಕ್ತಿಗೆ ಯಾವುದೇ ಮಾಹಿತಿ ಹೋಗುವುದಿಲ್ಲ.

ಈ ಫೀಚರ್ ಯಾಕೆ ಮುಖ್ಯ?

ಇತ್ತೀಚಿನ ದಿನಗಳಲ್ಲಿ ಹಲವಾರು ವಂಚಕರು “ಹಾಯ್, ಇದು ನನ್ನ ಹೊಸ ನಂಬರ್” ಎಂದು ಮೆಸೇಜ್ ಮಾಡಿ ಜನರನ್ನು ನಂಬಿಸಿ ಹಣ ವಂಚಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಚಾಟ್ ತೆರೆಯುವ ಮುನ್ನವೇ ಎಚ್ಚರಿಕೆ ಸಿಗುವುದರಿಂದ ಬಳಕೆದಾರರು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬಹುದು. ಒಂದು ವೇಳೆ ಆ ನಂಬರ್ ವಿದೇಶದದ್ದಾಗಿದ್ದರೆ, ತಕ್ಷಣವೇ ಅನುಮಾನಗೊಂಡು ಚಾಟ್ ಡಿಲೀಟ್ ಮಾಡುವ ಅವಕಾಶವೂ ದೊರೆಯುತ್ತದೆ.

ಇದು ಸಂಪೂರ್ಣ ಪರಿಹಾರವೇ?

ಈ ಫೀಚರ್ ಉಪಯುಕ್ತವಾದರೂ ಇದು ಶೇ.100 ರಷ್ಟು ಸುರಕ್ಷತೆಯನ್ನು ಖಚಿತಪಡಿಸುವುದಿಲ್ಲ. ಉದಾಹರಣೆಗೆ, ವಂಚಕನ ನಂಬರ್ ಈಗಾಗಲೇ ನಿಮ್ಮ ಫೋನ್‌ನಲ್ಲಿ ಸೇವ್ ಆಗಿದ್ದರೆ, ಈ ಎಚ್ಚರಿಕೆ ಕಾಣಿಸದೇ ಇರಬಹುದು. ಹಾಗೆಯೇ ಪ್ರತಿಯೊಂದು ಅಪರಿಚಿತ ನಂಬರ್ ಕೂಡ ವಂಚನೆಯದ್ದೇ ಆಗಿರಬೇಕೆಂದಿಲ್ಲ. ನಿಮ್ಮ ಸ್ನೇಹಿತರು ಹೊಸ ನಂಬರ್ ಬಳಸುತ್ತಿರುವ ಸಾಧ್ಯತೆಯೂ ಇರುತ್ತದೆ.

ಆದ್ದರಿಂದ ಫೀಚರ್ ಎಚ್ಚರಿಕೆ ನೀಡಿದರೂ, ನೀಡದಿದ್ದರೂ ಅಪರಿಚಿತ ವ್ಯಕ್ತಿಗಳೊಂದಿಗೆ ಚಾಟ್ ಮಾಡುವಾಗ ಯಾವಾಗಲೂ ಎಚ್ಚರಿಕೆಯಿಂದಿರುವುದು ಉತ್ತಮ.

ಆನ್‌ಲೈನ್ ವಂಚನೆಗಳಿಂದ ಬಳಕೆದಾರರನ್ನು ರಕ್ಷಿಸಲು ವಾಟ್ಸಾಪ್ ಕೈಗೊಂಡಿರುವ ಈ ಕ್ರಮ ಶ್ಲಾಘನೀಯ. ಹೊಸ ನಂಬರ್‌ಗಳಿಂದ ಬರುವ ಸಂದೇಶಗಳ ಬಗ್ಗೆ ಹೆಚ್ಚುವರಿ ಎಚ್ಚರಿಕೆ ವಹಿಸುವ ಮೂಲಕ ಡಿಜಿಟಲ್ ಭದ್ರತೆಯನ್ನು ಮತ್ತಷ್ಟು ಬಲಪಡಿಸಬಹುದು. ಯಾವುದೇ ಮೆಸೇಜ್ ಅನುಮಾನಾಸ್ಪದವಾಗಿ ಕಂಡರೆ, ತಕ್ಷಣವೇ ಆ ಚಾಟ್‌ನ್ನು ರದ್ದುಪಡಿಸಿ ಅಥವಾ ಬ್ಲಾಕ್ ಮಾಡುವುದು ಸುರಕ್ಷಿತ. ಇಂತಹ ಸಣ್ಣ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಮೂಲಕ ಸೈಬರ್ ವಂಚಕರ ಬಲೆಗೆ ಬೀಳುವುದನ್ನು ತಪ್ಪಿಸಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ