LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡಗೆ ಬ್ಯಾರಕ್ ಬದಲಾವಣೆಯ ಸಣ್ಣ ರಿಲೀಫ್ ನೀಡಿ ಜೈಲು ನಿಯಮಾವಳಿಯಂತೆ ಕ್ರಮಕ್ಕೆ ಕೋರ್ಟ್ ಸೂಚನೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯವು ಜೈಲು ಕೈಪಿಡಿಯ ನಿಯಮಾವಳಿಗಳಂತೆ ಬ್ಯಾರಕ್ ಬದಲಾವಣೆ ಕ್ರಮ ಕೈಗೊಳ್ಳಲು ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ನಿರ್ಧಾರವು ಸದ್ಯಕ್ಕೆ ಪವಿತ್ರಾ ಗೌಡಗೆ ಕೊಂಚ ನೆಮ್ಮದಿ ತಂದಿದೆ.  

ವಿಶೇಷ ಸೌಲಭ್ಯ ಪಡೆಯುತ್ತಿದ್ದಾರೆಂಬ ಅನುಮಾನದ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಕಳೆದ ತಿಂಗಳು ಪವಿತ್ರಾ ಗೌಡ ಅವರನ್ನು 16 ಮಂದಿ ವಿಚಾರಣಾಧೀನ ಕೈದಿಗಳಿರುವ ಬ್ಯಾರಕ್‌ಗೆ ಸ್ಥಳಾಂತರಿಸಿದ್ದರು. ಆದರೆ, ಬ್ಯಾರಕ್‌ನಲ್ಲಿರುವವರೆಲ್ಲರೂ ಒಂದೇ ಶೌಚಾಲಯವನ್ನು ಬಳಸುತ್ತಿದ್ದುದರಿಂದ ಸೋಂಕು ಹರಡಿ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂಬ ಕಾರಣ ನೀಡಿ, ಬೇರೆ ಬ್ಯಾರಕ್‌ಗೆ ವರ್ಗಾಯಿಸುವಂತೆ ಕೋರಿ ಪವಿತ್ರಾ ಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಆರೋಪಿಗೆ ಆರೋಗ್ಯ ಸಮಸ್ಯೆಗಳಿದ್ದರೆ ಜೈಲಿನ ಕೈಪಿಡಿ ಮತ್ತು ನಿಯಮಗಳಿಗೆ ಅನುಸಾರವಾಗಿ ಸೂಕ್ತ ನಿರ್ಧಾರ ಕೈಗೊಂಡು ಬ್ಯಾರಕ್ ಬದಲಾಯಿಸಬೇಕೆಂದು ಸ್ಪಷ್ಟಪಡಿಸಿದೆ.  

ಈ ಕೊಲೆ ಪ್ರಕರಣವು ಜೂನ್ 9, 2024 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ಮತ್ತು 201 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗುವುದರೊಂದಿಗೆ ಆರಂಭವಾಗಿತ್ತು. ಜೂನ್ 11, 2024 ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಗಿಸಿದ ಪೊಲೀಸರು ಸೆಪ್ಟೆಂಬರ್ 2, 2024 ರಂದು 17 ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದರು. ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ ಆರೋಪಿಗಳು ಮತ್ತೆ ಶರಣಾಗಿದ್ದು, ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.  

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
CWRC ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸರ್ಕಾರ ನಿರ್ಧಾರ: ಸಚಿವ ಚಲುವರಾಯಸ್ವಾಮಿಕರ್ನಾಟಕಕ್ಕೆ ಮತ್ತೊಂದು ಆಘಾತ: ತಮಿಳುನಾಡಿಗೆ ಮತ್ತೆ ನೀರು ಹರಿಸಲು CWRC ಸೂಚನೆKPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಸಿಐಡಿ ತನಿಖೆಯಲ್ಲಿ ₹12 ಕೋಟಿ ಡೀಲಿಂಗ್ ಬಯಲುBREAKING: ಜೈಲಿನಲ್ಲಿ ಅಕ್ರಮ ಮೊಬೈಲ್ ಬಳಕೆ ಪ್ರಕರಣ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆಸ್ವಿಗ್ಗಿ ಪ್ರಿಯರ ಗಮನಕ್ಕೆ: ಆಹಾರ ಸುರಕ್ಷತಾ ದೂರುಗಳಿಗೆ 24x7 ಸಹಾಯವಾಣಿ ಆರಂಭBIG NEWS: ಮಹದೇವಪ್ಪಣ್ಣನೇ ಆ ಮನೆಲಿ ಇರಲಿ, ನಂದೇನೂ ತಕರಾರಿಲ್ಲ: ಸಚಿವ ಬೈರತಿ ಸುರೇಶ್ ಸ್ಪಷ್ಟನೆರೈತರ 'ಬೆಳೆ ವಿಮೆ ಹಣ' ಕಟ್ಟದ ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಸಿಎಂ ಡಿ ಕೆ ಶಿವಕುಮಾರ್ ಖಡಕ್ ಸೂಚನೆಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಜಯ: ರಂಜನ್ ರಾವ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ಗ್ಯಾರಂಟಿಯಿಂದ ಜನರು ಕೇಂದ್ರದ ಬೆಲೆ ಏರಿಕೆ ತಡೆದುಕೊಂಡಿದ್ದಾರೆ: ಸಚಿವ ಈಶ್ವರ ಖಂಡ್ರೆ ಗ್ಯಾರಂಟಿಯೂ ಜಾರಿ, ರಾಜ್ಯದ ಅಭಿವೃದ್ಧಿಯೂ ಖಾತ್ರಿ:ಈಶ್ವರ ಖಂಡ್ರೆರಾಜ್ಯ ಸರ್ಕಾರದಕ ಒತ್ತಡಕ್ಕೆ ಮಣಿಯದೇ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಅನುಮತಿ ನೀಡಬೇಕು: ಬಿ.ವೈ.ವಿಜಯೇಂದ್ರ