LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರವಾಸೋದ್ಯಮ ಇಲಾಖೆಯಿಂದ ಮೊದಲ ಬಾರಿಗೆ ರಾಜ್ಯಮಟ್ಟದ ‘ಕರ್ನಾಟಕ ಟೂರಿಸಂ ಅವಾರ್ಡ್ಸ್‌’: ಸಚಿವ ಕೆ.ಜೆ. ಜಾರ್ಜ್‌

ಬೆಂಗಳೂರು : ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಇತಿಹಾಸದಲ್ಲಿ ಮೊದಲ ಬಾರಿಗೆ, ಪ್ರವಾಸೋದ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಸಂಸ್ಥೆಗಳು, ಉದ್ಯಮಿಗಳು ಹಾಗೂ ವ್ಯಕ್ತಿಗಳನ್ನು ರಾಜ್ಯಮಟ್ಟದ ವೇದಿಕೆಯಡಿ ಗುರುತಿಸಲು ‘ಕರ್ನಾಟಕ ಟೂರಿಸಂ ಅವಾರ್ಡ್ಸ್‌ 2026’ ಆಯೋಜಿಸಲಾಗುತ್ತಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಇಲಾಖೆ , ಕರ್ನಾಟಕ ಟೂರಿಸಂ ಸೊಸೈಟಿ (KTS) ಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ಈ ಪ್ರಶಸ್ತಿಗಳು ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸೇವಾ ಗುಣಮಟ್ಟ, ನಾವೀನ್ಯತೆ, ಸುಸ್ಥಿರತೆ ಹಾಗೂ ಸ್ಥಳೀಯ ಸಮುದಾಯದ ಕೊಡುಗೆಯನ್ನು ಗುರುತಿಸುವ ಪ್ರಮುಖ ವೇದಿಕೆಯಾಗಲಿದೆ.

ರಾಜ್ಯದ ‘One State, Many Worlds’ ಬ್ರ್ಯಾಂಡ್‌ ಪರಿಕಲ್ಪನೆಯಡಿ ರೂಪಿಸಿರುವ ಪ್ರಶಸ್ತಿಗಳು ಕರ್ನಾಟಕದ 31 ಜಿಲ್ಲೆಗಳಲ್ಲಿರುವ ಪ್ರವಾಸೋದ್ಯಮ ಕ್ಷೇತ್ರದ ವೈವಿಧ್ಯಮಯ ಸಾಧನೆಗಳನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ಉದ್ದೇಶ ಹೊಂದಿವೆ.

ಕರ್ನಾಟಕ ಟೂರಿಸಂ ಸೊಸೈಟಿ ಅಧ್ಯಕ್ಷ ಕೆ. ಶ್ಯಾಮರಾಜು ಮಾತನಾಡಿ, ಪ್ರವಾಸ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವವರಿಗೆ ಅರ್ಹತೆ ಆಧಾರಿತ, ವಿಶ್ವಾಸಾರ್ಹ ವೇದಿಕೆಯ ಮೂಲಕ ಮಾನ್ಯತೆ ನೀಡುವುದರ ಜೊತೆಗೆ ರಾಜ್ಯದಾದ್ಯಂತ ಸೇವಾ ಗುಣಮಟ್ಟವನ್ನು ಹೆಚ್ಚಿಸುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

5 ಪ್ರಮುಖ ವಿಭಾಗಗಳಲ್ಲಿ 35 ಪ್ರಶಸ್ತಿಗಳು

ಒಟ್ಟು 35 ಪ್ರಶಸ್ತಿಗಳನ್ನು ಐದು ಪ್ರಮುಖ ವಿಭಾಗಗಳಲ್ಲಿ ನೀಡಲಾಗುತ್ತದೆ.
- Accommodation & Hospitality ವಿಭಾಗದಲ್ಲಿ ಹೋಟೆಲ್‌, ರೆಸಾರ್ಟ್‌, ಬೂಟಿಕ್‌ ಸ್ಟೇ, ಹೆರಿಟೇಜ್‌ ಪ್ರಾಪರ್ಟಿ, ರೆಸ್ಟೋರೆಂಟ್‌ ಹಾಗೂ ಆತಿಥ್ಯ ಸೇವೆಗಳಲ್ಲಿನ ಸಾಧನೆಗಳನ್ನು ಗುರುತಿಸಲಾಗುತ್ತದೆ.
- Tour Operators & Travel Agents ವಿಭಾಗದಲ್ಲಿ ದೇಶೀಯ ಹಾಗೂ ಇನ್‌ಬೌಂಡ್‌ ಟೂರ್‌ ಆಪರೇಟರ್‌ಗಳು, ಸಾಹಸ ಪ್ರವಾಸೋದ್ಯಮ ಸಂಸ್ಥೆಗಳು, ಸಾರಿಗೆ ಸೇವೆಗಳು, MICE ಹಾಗೂ ನವೀನ ಪ್ರವಾಸ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
- Events, Venues & Infrastructure ವಿಭಾಗದಲ್ಲಿ ಹೆರಿಟೇಜ್‌ ಸ್ಮಾರಕಗಳು, ವಸ್ತುಸಂಗ್ರಹಾಲಯಗಳು, ಕಾರ್ಯಕ್ರಮ ಹಾಗೂ ಪ್ರವಾಸೋದ್ಯಮ ಸ್ನೇಹಿ ಸ್ಥಳಗಳು ಸೇರಿದಂತೆ ವಿವಿಧ ವಿಭಾಗಗಳನ್ನು ಒಳಗೊಂಡಿದೆ.
- Education, Publications & Individuals ವಿಭಾಗದಲ್ಲಿ ಪ್ರವಾಸಿ ಮಾರ್ಗದರ್ಶಕರು, ನೈಸರ್ಗಿಕ ತಜ್ಞರು, ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು, ತಂತ್ರಜ್ಞಾನ ಕ್ಷೇತ್ರದ ಸಾಧಕರು, ಲೇಖಕರು ಹಾಗೂ ಜೀವಮಾನ ಸಾಧಕರನ್ನು ಗುರುತಿಸಲಾಗುತ್ತದೆ.
- Sustainability & Rural Tourism ವಿಭಾಗದಲ್ಲಿ ಹೋಂಸ್ಟೇ, ಗ್ರಾಮೀಣ ಪ್ರವಾಸೋದ್ಯಮ ಯೋಜನೆಗಳು, ಸುಸ್ಥಿರ ಪ್ರವಾಸೋದ್ಯಮ ಹಾಗೂ ಪ್ರವಾಸಿ ತಾಣಗಳ ಉತ್ತಮ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ.

ಅರ್ಹತೆ ಮತ್ತು ಸಾಧನೆಯೇ ಮಾನದಂಡ

ಪ್ರಶಸ್ತಿಗಳ ಆಯ್ಕೆಗೆ ಉದ್ಯಮ ಕ್ಷೇತ್ರದ ಹಿರಿಯರು, ವಿಷಯ ತಜ್ಞರು ಹಾಗೂ ಸಂಬಂಧಿತ ಪ್ರತಿನಿಧಿಗಳನ್ನು ಒಳಗೊಂಡ ಸ್ವತಂತ್ರ ಸ್ಕ್ರೀನಿಂಗ್‌ ಸಮಿತಿ ಕಾರ್ಯನಿರ್ವಹಿಸಲಿದೆ.

ಸೇವಾ ಗುಣಮಟ್ಟ, ಪ್ರವಾಸಿಗರ ಅಭಿಪ್ರಾಯ ಮತ್ತು ಅನುಭವ, ನಾವೀನ್ಯತೆ, ಪರಿಸರ ಸುಸ್ಥಿರತೆ ಹಾಗೂ ಸ್ಥಳೀಯ ಸಮುದಾಯದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ನಾಮನಿರ್ದೇಶನಗಳನ್ನು ಮೌಲ್ಯಮಾಪನ ಮಾಡಲಾಗುವುದು.

ಈ ಮೂಲಕ ಪ್ರಶಸ್ತಿ ಆಯ್ಕೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು merit-based recognition ಖಚಿತಪಡಿಸುವ ಉದ್ದೇಶ ಹೊಂದಲಾಗಿದೆ.

ಸೆಪ್ಟೆಂಬರ್‌ 17ರವರೆಗೆ ನಾಮನಿರ್ದೇಶನ

ಅರ್ಹ ಹೋಟೆಲ್‌ಗಳು, ರೆಸಾರ್ಟ್‌ಗಳು, ಟೂರ್‌ ಆಪರೇಟರ್‌ಗಳು, ನೋಂದಾಯಿತ ಹೋಂಸ್ಟೇಗಳು, ಪ್ರವಾಸ ಸೇವಾ ಸಂಸ್ಥೆಗಳು, ಪ್ರವಾಸೋದ್ಯಮ ಸ್ಟಾರ್ಟ್‌ಅಪ್‌ಗಳು, ತಂತ್ರಜ್ಞಾನ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸೆಪ್ಟೆಂಬರ್‌ 17, 2026ರ ರಾತ್ರಿ 11.59ರವರೆಗೆ ನಾಮನಿರ್ದೇಶನ ಸಲ್ಲಿಸಬಹುದು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಶ್ವ ಪ್ರವಾಸೋದ್ಯಮ ದಿನವಾದ ಸೆಪ್ಟೆಂಬರ್‌ 27ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು.

“ಕರ್ನಾಟಕದ ಪ್ರವಾಸೋದ್ಯಮದ ನಿಜವಾದ ಶಕ್ತಿ ನಮ್ಮ ತಾಣಗಳ ಜೊತೆಗೆ, ಪ್ರವಾಸಿಗರಿಗೆ ಉತ್ತಮ ಅನುಭವ ನೀಡಲು ಕೆಲಸ ಮಾಡುತ್ತಿರುವ ಸಾವಿರಾರು ಉದ್ಯಮಿಗಳು, ಹೋಟೆಲ್‌ಗಳು, ಪ್ರವಾಸ ನಿರ್ವಾಹಕರು, ಮಾರ್ಗದರ್ಶಕರು ಮತ್ತು ಸ್ಥಳೀಯ ಸಮುದಾಯಗಳಲ್ಲಿದೆ. ಅತ್ಯುತ್ತಮ ಸೇವೆ, ನಾವೀನ್ಯತೆ ಮತ್ತು ಸುಸ್ಥಿರತೆಯನ್ನು ಗುರುತಿಸಿ ಗೌರವಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ benchmark ರೂಪಿಸುವುದು ಕರ್ನಾಟಕ ಟೂರಿಸಂ ಅವಾರ್ಡ್ಸ್‌ನ ಉದ್ದೇಶವಾಗಿದೆ”
- ಕೆ.ಜೆ. ಜಾರ್ಜ್‌, ಮಾನ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು

“ಪ್ರವಾಸೋದ್ಯಮದಲ್ಲಿ ಉತ್ತಮ ಕೆಲಸ ಮಾಡುತ್ತಿರುವವರನ್ನು ಗುರುತಿಸುವುದರ ಜೊತೆಗೆ, ಕ್ಷೇತ್ರದ ಗುಣಮಟ್ಟಕ್ಕೆ ಸ್ಪಷ್ಟ ಮಾನದಂಡಗಳನ್ನು ರೂಪಿಸುವುದು ಈ ಪ್ರಶಸ್ತಿಗಳ ಪ್ರಮುಖ ಉದ್ದೇಶವಾಗಿದೆ. ದೊಡ್ಡ ಹೋಟೆಲ್‌ ಅಥವಾ ಸಂಸ್ಥೆಗಳಷ್ಟೇ ಅಲ್ಲದೆ ಹೋಂಸ್ಟೇಗಳು, ಗ್ರಾಮೀಣ ಪ್ರವಾಸೋದ್ಯಮ, ಗೈಡ್‌ಗಳು, ಸ್ಥಳೀಯ ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಸುಸ್ಥಿರ ಪ್ರವಾಸೋದ್ಯಮ ಉಪಕ್ರಮಗಳಿಗೂ ಸಮಾನ ಅವಕಾಶ ದೊರೆಯುವಂತೆ ವಿಭಾಗಗಳನ್ನು ರೂಪಿಸಲಾಗಿದೆ.”
- ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್, ಕಾರ್ಯದರ್ಶಿಗಳು, ಪ್ರವಾಸೋದ್ಯಮ ಇಲಾಖೆ

ನಾಮನಿರ್ದೇಶನದ ಕೊನೆಯ ದಿನಾಂಕ: ಸೆಪ್ಟೆಂಬರ್‌ 17, 2026
ಪ್ರಶಸ್ತಿ ಪ್ರದಾನ: ಸೆಪ್ಟೆಂಬರ್‌ 27, 2026 – ವಿಶ್ವ ಪ್ರವಾಸೋದ್ಯಮ ದಿನ
ಸ್ಥಳ: ಬೆಂಗಳೂರು
ಅಧಿಕೃತ ವೆಬ್‌ ಪೋರ್ಟಲ್: www.karnatakatourismawards.com

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
CWRC ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸರ್ಕಾರ ನಿರ್ಧಾರ: ಸಚಿವ ಚಲುವರಾಯಸ್ವಾಮಿಕರ್ನಾಟಕಕ್ಕೆ ಮತ್ತೊಂದು ಆಘಾತ: ತಮಿಳುನಾಡಿಗೆ ಮತ್ತೆ ನೀರು ಹರಿಸಲು CWRC ಸೂಚನೆKPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಸಿಐಡಿ ತನಿಖೆಯಲ್ಲಿ ₹12 ಕೋಟಿ ಡೀಲಿಂಗ್ ಬಯಲುBREAKING: ಜೈಲಿನಲ್ಲಿ ಅಕ್ರಮ ಮೊಬೈಲ್ ಬಳಕೆ ಪ್ರಕರಣ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆಸ್ವಿಗ್ಗಿ ಪ್ರಿಯರ ಗಮನಕ್ಕೆ: ಆಹಾರ ಸುರಕ್ಷತಾ ದೂರುಗಳಿಗೆ 24x7 ಸಹಾಯವಾಣಿ ಆರಂಭBIG NEWS: ಮಹದೇವಪ್ಪಣ್ಣನೇ ಆ ಮನೆಲಿ ಇರಲಿ, ನಂದೇನೂ ತಕರಾರಿಲ್ಲ: ಸಚಿವ ಬೈರತಿ ಸುರೇಶ್ ಸ್ಪಷ್ಟನೆರೈತರ 'ಬೆಳೆ ವಿಮೆ ಹಣ' ಕಟ್ಟದ ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಸಿಎಂ ಡಿ ಕೆ ಶಿವಕುಮಾರ್ ಖಡಕ್ ಸೂಚನೆಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಜಯ: ರಂಜನ್ ರಾವ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ಗ್ಯಾರಂಟಿಯಿಂದ ಜನರು ಕೇಂದ್ರದ ಬೆಲೆ ಏರಿಕೆ ತಡೆದುಕೊಂಡಿದ್ದಾರೆ: ಸಚಿವ ಈಶ್ವರ ಖಂಡ್ರೆ ಗ್ಯಾರಂಟಿಯೂ ಜಾರಿ, ರಾಜ್ಯದ ಅಭಿವೃದ್ಧಿಯೂ ಖಾತ್ರಿ:ಈಶ್ವರ ಖಂಡ್ರೆರಾಜ್ಯ ಸರ್ಕಾರದಕ ಒತ್ತಡಕ್ಕೆ ಮಣಿಯದೇ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಅನುಮತಿ ನೀಡಬೇಕು: ಬಿ.ವೈ.ವಿಜಯೇಂದ್ರ