LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಗರದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ 'ಬ್ಲಾಕ್ ಕಾಂಗ್ರೆಸ್'ನಿಂದ ಕಾಗೋಡು ತಿಮ್ಮಪ್ಪ ಹುಟ್ಟುಹಬ್ಬ ಆಚರಣೆ

ಸಾಗರ: ಇಂದು ಹಿಂದುಳಿದ ವರ್ಗಗಳ ಆಶಾಕಿರಣ, ಹಿರಿಯ ಮುತ್ಸದ್ದಿ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ 95ನೇ ಜನ್ಮದಿನದ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಜನಪರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. 

ನಗರದ ತಾಯಿ-ಮಗು ಆಸ್ಪತ್ರೆ ಹಾಗೂ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸುವ ಮೂಲಕ ಹಿರಿಯ ನಾಯಕರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಾಮಾಜಿಕ ನ್ಯಾಯದ ಹರಿಕಾರ ಕಾಗೋಡು: ಕಲಸೆ ಚಂದ್ರಪ್ಪ ಬಣ್ಣನೆ

ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, "ಕಾಗೋಡು ತಿಮ್ಮಪ್ಪನವರು ತಮ್ಮ ಜೀವಿತಾವಧಿಯ ಬಹುಪಾಲು ಸಮಯವನ್ನು ದೀನದಲಿತರು, ಶೋಷಿತರ ಪರ ಹೋರಾಟಕ್ಕಾಗಿಯೇ ಮುಡಿಪಾಗಿಟ್ಟವರು. ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲಘಟ್ಟದಲ್ಲಿ ಶಾಸಕರಾಗಿದ್ದ ಇವರು, ಐತಿಹಾಸಿಕ ‘ಉಳುವವನೇ ಭೂಮಿಯ ಒಡೆಯ’ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿ ಬಡ ರೈತರಿಗೆ ಭೂಮಿ ಹಕ್ಕು ದೊರಕಿಸಿಕೊಟ್ಟರು. ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸಚಿವರಾಗಿ ನಾಡಿನಾದ್ಯಂತ ಕೈಗೊಂಡ ಕ್ರಾಂತಿಕಾರಿ ನಿರ್ಧಾರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ," ಎಂದು ಸ್ಮರಿಸಿದರು.

ಮಹಿಳೆಯರ ಸಬಲೀಕರಣಕ್ಕೆ ಶಕ್ತಿ ತುಂಬಿದ ನಾಯಕ: ಲಲಿತಮ್ಮ

ನಗರಸಭೆ ಮಾಜಿ ಅಧ್ಯಕ್ಷೆ ಎನ್. ಲಲಿತಮ್ಮ ಮಾತನಾಡಿ, "ರಾಜಕೀಯ ರಂಗದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಮತ್ತು ಅಧಿಕಾರ ಸಿಗಬೇಕೆಂದು ಬಲವಾಗಿ ಪ್ರತಿಪಾದಿಸಿದವರು ಕಾಗೋಡು. ಪರಿಶಿಷ್ಟ ಜಾತಿಗೆ ಸೇರಿದ ಸಾಮಾನ್ಯ ಮಹಿಳೆಯಾದ ನನ್ನನ್ನು ನಗರಸಭೆಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ, ಆಡಳಿತ ನಡೆಸಲು ನಿರಂತರ ಮಾರ್ಗದರ್ಶನ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಮಾಜದ ಪ್ರತಿಯೊಂದು ವರ್ಗದ ಏಳಿಗೆಗೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ," ಎಂದರು.

ಯುವ ಪೀಳಿಗೆಗೆ ಕಾಗೋಡು ಹೋರಾಟದ ಹಾದಿಯೇ ಸ್ಫೂರ್ತಿ

ಸಾಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ ಲ್ಯಾವಿಗೆರೆ ಮಾತನಾಡಿ, ಕಾಗೋಡು ತಿಮ್ಮಪ್ಪನವರು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡ ಅಪರೂಪದ ರಾಜಕಾರಣಿ. ಅವರ ರಾಜಕೀಯ ಜೀವನ ಮತ್ತು ಹೋರಾಟದ ಹೆಜ್ಜೆಗುರುತುಗಳು ಇಂದಿನ ಯುವ ಮುಖಂಡರಿಗೆ ಆದರ್ಶಪ್ರಾಯವಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಯಿ-ಮಗು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಾಗೇಂದ್ರಪ್ಪ ಮಾತನಾಡಿದರು. ಮುಖಂಡರಾದ ಕೆ. ಹೊಳೆಯಪ್ಪ, ಎಲ್. ಚಂದ್ರಪ್ಪ, ಗಣಪತಿ ಮಂಡಗಳಲೆ, ವಿಲ್ಸನ್ ಗೊನ್ಸಾಲ್ವಿಸ್, ಗಿರೀಶ್ ಕೋವಿ, ಅನ್ವರ್ ಭಾಷಾ, ಡಿ. ದಿನೇಶ್, ಅಣ್ಣಪ್ಪ ಭೀಮನೇರಿ, ರಮೇಶ್ ಚಂದ್ರಗುತ್ತಿ, ಸರಸ್ವತಿ ನಾಗರಾಜ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: ಹಿರಿಯೂರಲ್ಲಿ ಮಹಿಳೆ ಹತ್ಯೆ, ಅಪ್ರಾಪ್ತ ಸೇರಿ ಒಂದೇ ಕುಟುಂಬದ ನಾಲ್ವರು ಅರೆಸ್ಟ್!'ED ದಾಳಿ'ಯ ವೇಳೆ ಸಿಕ್ಕ ಹಣಕ್ಕೆ ದಾಖಲೆ ಸಮೇತ ಲೆಕ್ಕ ನೀಡುತ್ತೇವೆ: ಸಚಿವ ಸತೀಶ್ ಜಾರಕಿಹೊಳಿಶಾಲಾ ಮಕ್ಕಳಿಗೆ ಕಳಪೆ ಶೂ ವಿತರಣೆ: ಉಪಲೋಕಾಯುಕ್ತರಿಂದ ಸುಮೋಟೋ ಕೇಸ್ ದಾಖಲುಪ್ಯಾರಿಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆ: ಇಸ್ರೋ ಸಾಧನೆ ಕೊಂಡಾಡಿ ಜಾಗತಿಕ ಸಹಭಾಗಿತ್ವಕ್ಕೆ ಪ್ರಧಾನಿ ಮೋದಿ ಕರೆBREAKING: ಶಿವಮೊಗ್ಗದಲ್ಲಿ ತುಂಗಾ ನದಿಗೆ ಜಿಗಿದ ಯುವತಿ ಆತ್ಮಹತ್ಯೆಗೆ ಯತ್ನ, ರಕ್ಷಣೆಸಚಿವ ಎಂ.ಬಿ.ಪಾಟೀಲರ ಫ್ರಾನ್ಸ್, ನೆದರ್ಲೆಂಡ್ಸ್‌ ಪ್ರವಾಸ: ಸಾಫ್ರಾನ್, ನೆಕ್ಸ್ಪೀರಿಯಾ ಜತೆ ಹೂಡಿಕೆ ಮಾತುಕತೆದೆಹಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾಗಿ: 7 ವರ್ಷಗಳ ನಂತರ ಭಾರತಕ್ಕೆ ಭೇಟಿಸಾಗರದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ 'ಬ್ಲಾಕ್ ಕಾಂಗ್ರೆಸ್'ನಿಂದ ಕಾಗೋಡು ತಿಮ್ಮಪ್ಪ ಹುಟ್ಟುಹಬ್ಬ ಆಚರಣೆ‘ಉಳುವವನೇ ಒಡೆಯ’ ತತ್ವದಡಿ ಬಡವರಿಗೆ ಹಕ್ಕುಪತ್ರ ನೀಡಿ: ಸಾಗರದಲ್ಲಿ ಮಾಜಿ ಸಚಿವ ಹಾಲಪ್ಪ ಆಗ್ರಹBREAKING: KPSC ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣ: ಸದಸ್ಯೆ ಶಾಂತಾ ಹೊಸಮನಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ