ಮಂಡ್ಯ : ಬೆಳಗಾವಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಫ್ರಿಡ್ಜ್ ಸ್ಫೋಟಗೊಂಡು ನಾಲ್ವರು ಬಲಿಯಾಗಿದ್ದಾರೆ. ಮತ್ತೊಂದು ಕಡೆ ಸೌದತ್ತಿಯಲ್ಲಿ ಕೆಎಸ್ಆರ್ಟಿಸಿ ಬಸ್ ಬೈಕ್ ಗೆ ಗುದ್ದಿದ ಪರಿಣಾಮ ಮೂವರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಇದೀಗ ಮಂಡ್ಯದಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಸ್ಥಳದಲ್ಲೆ ದಂಪತಿ ಹಾಗು ಪುತ್ರಿ ಸಾವನ್ನಪ್ಪಿದ್ದಾರೆ.
ಮುತ್ತುರಾಜ್, ಪತ್ನಿ ಕಾವ್ಯ ಹಾಗೂ ಪುತ್ರಿ ಕೀರ್ತನ ಮೃತ ದುರ್ದೈವಿಗಳಾಗಿದ್ದಾರೆ. ಹಬ್ಬಕ್ಕೆ ಎಂದು ಮುತ್ತುರಾಜ್ ಕುಟುಂಬ ಅತ್ತೆ ಮನೆಗೆ ತೆರಳಿತು. ಹಬ್ಬ ಮುಗಿಸಿ ಸ್ಕೂಟಿಯಲ್ಲಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ನಸುಕಿನ ಜಾವ ಹಾಲಿನ ಟ್ಯಾಂಕರ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಪತಿ ಮುತ್ತುರಾಜ್, ಪತ್ನಿ ಕಾವ್ಯ ಮತ್ತು ಪುತ್ರಿ ಕೀರ್ತನ ಸಾವನಪ್ಪಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿ ಕಾರ್ಖಾನೆಯಲ್ಲಿ ಮುತ್ತುರಾಜ್ ಕೆಲಸ ಮಾಡುತ್ತಿದ್ದರು ಮುಂಜಾನೆ ಕೆಲಸಕ್ಕೆ ಹೋಗಬೇಕು ಎಂದು ಬರುವಾಗ ಈ ಒಂದು ದುರಂತ ಸಂಭವಿಸಿದೆ. ಗಣೇಶ ಹಬ್ಬ ಕಾರಣ ಅತ್ತೆ ಮನೆಗೆ ತೆರಳಿ ಅಲ್ಲಿ ಕುಟುಂಬದ ಜೊತೆಗೆ ಹಬ್ಬವನ್ನು ಸೆಲೆಬ್ರೇಟ್ ಮಾಡಿ ವಾಪಸ್ ಆಗುವಾಗ ಈ ಒಂದು ದುರಂತ ಸಂಭವಿಸಿದೆ.