ಶಿವಮೊಗ್ಗ : ಅರಸಾಳು ಗ್ರಾಮದ ಬಳಿ ರೈಲ್ವೆ ಹಳಿಯ ಮೇಲೆ ಗಾತ್ರದ ಮರ ಒಂದು ಬಿದ್ದಿದೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ ತಾಳಗುಪ್ಪ ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚಾರ ಕೆಲವು ಕಾಲ ಸ್ಥಗಿತಗೊಂಡಿತ್ತು.
ಬೆಳಿಗ್ಗೆ 5:20ಕ್ಕೆ ತಾಳಗುಪ್ಪದಿಂದ ರೈಲು ಬೆಂಗಳೂರಿನ ಕಡೆಗೆ ಹೊರಟಿತು ಹಬ್ಬ ಮುಗಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಜನರು ರೈಲು ಸ್ಥಗಿತಗೊಂಡಿದ್ದನ್ನು ತಿಳಿದು ಗಂಗಾಲಾಗಿದ್ದಾರೆ ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ ಸ್ಥಳಕ್ಕೆ ರೈಲ್ವೆ ಹಾಗೂ ಪೊಲೀಸ್ ಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಕಾರ್ಯಾಚರಣೆ ಮುಗಿದ ತಕ್ಷಣ ಬೆಂಗಳೂರಿಗೆ ರೈಲು ಹೋರಡಲಿದೆ.