ಕಲಬುರ್ಗಿ : ಗಣೇಶ ಮೂರ್ತಿ ತರಲು ತೆರಳುವಾಗ ಬೈಕ್ ಅಪಘಾತ ಸಂಭವಿಸಿ ಓರ್ವ ಯುವಕ ಸಾವನಪ್ಪಿದ್ದಾನೆ. ಕಲಬುರ್ಗಿ ನಗರದ ಹಿರಾಪುರ ರಸ್ತೆಯ ಫ್ಲೈ ಓವರ್ ನಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಕೋಟನೂರು ಬಡಾವಣೆಯ ಪ್ರಶಾಂತ ಬಿರಾದಾರ್ (23) ಎಂಬ ಯುವಕ ಸಾವನ್ನಪ್ಪಿದ್ದಾನೆ.
ಸ್ನೇಹಿತರ ಜೊತೆ ಗಣೇಶ ಮೂರ್ತಿ ತರಲು ಬೈಕ್ನಲ್ಲಿ ಪ್ರಶಾಂತ್ ತೆರಳಿದ್ದ. ಈ ವೇಳೆ ಬೈಕ್ ನಿಂದ ಬಿದ್ದ ಪರಿಣಾಮ ಇಬ್ಬರಿಗೆ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಖಾಸಗಿ ಆಸ್ಪತ್ರೆಗೆ ಇಬ್ಬರನ್ನು ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಶಾಂತ್ ಬಿರಾದರ್ ಸಾವನ್ನಪ್ಪಿದ್ದಾನೆ. ಇನ್ನು ಗಾಯಗೊಂಡಿರುವ ಮತ್ತೊಬ್ಬ ಯುವಕನಿಗೆ ಚಿಕಿತ್ಸೆ ಮುಂದುವರಿದಿದೆ. ಕಲಬುರ್ಗಿ ಸಂಚಾರಿ ಪೊಲೀಸ್ ಠಾಣೆ ಒಂದರಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.