LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾಳೆ ಹುಬ್ಬಳ್ಳಿಯ ನೈಋತ್ಯ ರೇಲ್ವೆ ಕನ್ನಡ ಸಂಘದಲ್ಲಿ ಬಹುಭಾಷಾ ಗೀತಗಾಯನ ‘ಹೂದೋಟ’ ಸಂಭ್ರಮ

ಹುಬ್ಬಳ್ಳಿ: ನಗರದ ನೈಋತ್ಯ ರೇಲ್ವೆ ಕನ್ನಡ ಸಂಘದ ವತಿಯಿಂದ ಮಾಸಿಕ ಕಾರ್ಯಕ್ರಮದ ಭಾಗವಾಗಿ ವೈವಿಧ್ಯಮಯ ಹಾಡುಗಳ ರಸದೌತಣ ನೀಡುವ ‘ಹೂದೋಟ’ ಬಹುಭಾಷಾ ಗೀತಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬುಧವಾರ (ಸೆ. 16) ಸಂಜೆ 6:30ಕ್ಕೆ ಕೇಶವಾಪುರದಲ್ಲಿರುವ ‘ಕನ್ನಡ ಕುಟೀರ’ ಸಭಾಂಗಣದಲ್ಲಿ ಈ ಸಂಗೀತ ಸಂಜೆ ಜರುಗಲಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನೈಋತ್ಯ ರೇಲ್ವೆಯ ಉಪ ಮುಖ್ಯ ವಾಣಿಜ್ಯ ಪ್ರಬಂಧಕ ಅರವಿಂದ ಹೇರ್ಳೆ ಆಗಮಿಸಲಿದ್ದಾರೆ. ಕನ್ನಡ ಸಂಘದ ಅಧ್ಯಕ್ಷ ಶಿವಕುಮಾರ ಬಿ. ಎಲ್. ಅಧ್ಯಕ್ಷತೆ ವಹಿಸಲಿದ್ದು, ಸಂಘದ ಸದಸ್ಯ ಶರಣು ಕನ್ಯಾಳ ಸಮಾರಂಭವನ್ನು ಮುನ್ನಡೆಸಲಿದ್ದಾರೆ.

ವೈವಿಧ್ಯಮಯ ಭಾಷೆಗಳ ಸುಮಧುರ ಗಾನಯಾನ

ಈ ವಿಶೇಷ ಸಾಂಸ್ಕೃತಿಕ ಸಂಜೆಯಲ್ಲಿ ಕನ್ನಡದ ಜನಪ್ರಿಯ ಗೀತೆಗಳ ಜತೆಗೆ ದೇಶದ ವಿವಿಧ ಭಾಷೆಗಳ ಹಾಡುಗಳು ಮೊಳಗಲಿವೆ. ಪ್ರಾದೇಶಿಕ ಗಡಿಗಳನ್ನು ಮೀರಿ ಹಿಂದಿ, ತೆಲುಗು, ತಮಿಳು, ಪಂಜಾಬಿ ಹಾಗೂ ಒಡಿಯಾ ಭಾಷೆಗಳ ಸುಶ್ರಾವ್ಯ ಗೀತೆಗಳನ್ನು ಪ್ರತಿಭಾವಂತ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ವಿವಿಧ ಭಾಷಿಕ ಗಾಯಕರಾದ ಕೆಲೂಡೆಪ್ಪ ದೊಡ್ಡಮನಿ, ಫಕ್ಕೀರೇಶ ಸೋಮಣ್ಣವರ, ಪರಶುರಾಮ ಖಂಡೆಪ್ಪನವರ, ಪ್ರವೀಣ ಪಾಟೀಲ್, ಗೀತಾ, ವಾಸೀಮ್ ಬಾಗಲಕೋಟ, ವೀರೇಶ ಮರೆಗುದ್ದಿ, ಭಾನುಪ್ರಕಾಶ ಈ., ಝೇಂಕಾರ (ಪಂಜಾಬಿ), ರಾಮಪ್ಪ ಕೊಂಡಕೇರ, ರೇಣುಕಾ ಕೋಟುರ, ಪರಶುರಾಮ ಎಮ್., ಡಿ. ಎಮ್. ಜಾಧವ, ಬಸವರಾಜ ಗುಡದರಿ, ಭೀಮನಗೌಡ್ರು ಪಡೆಸೂರ, ಎಂ. ಡಿ. ನೂರುದ್ದೀನ್, ಪ್ರವೀಣ್ ಜೀನಾ (ಒಡಿಯಾ), ಪ್ರೀತಿ ಜೀನಾ (ಹಿಂದಿ), ಬಾಲಾಜಿ ನಾಯ್ಡು (ತೆಲುಗು), ಮುನೀರ್ ಅಹ್ಮದ ಕುರ್ಲಗೇರಿ, ಲಕ್ಷ್ಮಣ ಗಂಜಿಗಟ್ಟಿ, ವೈದೇಹಿ ಆನಂದ ಮೋಹನ್ (ತಮಿಳು), ಆನಂದ ಮೋಹನ್ (ಹಿಂದಿ), ಸಂತೋಷ ಆಚಮಟ್ಟಿ (ಧಾರವಾಡ), ಪಾರ್ವತಿ ಸಾಯನ್ನವರ, ಕೆ. ಬಿ. ಪ್ರಜ್ವಲ್ ಹಾಗೂ ಲತಾ ಎನ್. ಟಿ. ತಮ್ಮ ಗಾಯನದ ಮೂಲಕ ಸಂಗೀತ ಪ್ರೇಮಿಗಳನ್ನು ರಂಜಿಸಲಿದ್ದಾರೆ.

ಸಂಗೀತ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ನೈಋತ್ಯ ರೇಲ್ವೆ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಶಂಭುಲಿಂಗ ಬಿರಾದಾರ, ಸಾಂಸ್ಕೃತಿಕ ಕಾರ್ಯದರ್ಶಿ ಚೆನ್ನಬಸಪ್ಪ ಚೌಗಲಾ, ಖಜಾಂಚಿ ಆದಯ್ಯ ಹಿರೇಮಠ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಪೈಸ್ ಜೆಟ್ ವಿರುದ್ಧ ಪ್ರಯಾಣಿಕರ ಆಕ್ರೋಶ: ಸ್ಪೈಸ್ ಜೆಟ್ ಚೋರ್ ಹೈ ಎಂದು ಘೋಷಣೆViral News: 'ಹುಂಡಿ ಹಣ'ವನ್ನೇ ತಿಂದು ಹಾಕಿದ 'ಇಲಿ'ಗಳು!ಸೆ. 17ರ ಕಲ್ಯಾಣ ಕರ್ನಾಟಕ ಉತ್ಸವ: 7 ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸಲಿರುವ ಸಚಿವರನ್ನು ನಿಯೋಜನೆಮುಸ್ಲಿಂರ ಟೋಪಿ ಹಾಕಿದಕ್ಕೆ ತಲೆ ಬೋಳಿಸಿಕೊಂಡು, ಗಂಗಾ ನದಿಯಲ್ಲಿ ಸ್ನಾನ ಮಾಡಿ ಪ್ರಾಯಶ್ಚಿತ ಮಾಡಿಕೊಂಡಿದ್ದೇನೆ : ಶಾಸಕ ಯತ್ನಾಳ್!69ನೇ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನ: ದಕ್ಷಿಣ ಆಫ್ರಿಕಾದ ಸ್ಪೀಕರ್‌ಗೆ 'A Brochure on Karnataka' ಕಿರುಹೊತ್ತಿಗೆ ಸಮರ್ಪಣೆನಾಳೆ ಹುಬ್ಬಳ್ಳಿಯ ನೈಋತ್ಯ ರೇಲ್ವೆ ಕನ್ನಡ ಸಂಘದಲ್ಲಿ ಬಹುಭಾಷಾ ಗೀತಗಾಯನ ‘ಹೂದೋಟ’ ಸಂಭ್ರಮಸೆ. 18ರ ಸಂಪುಟ ಸಭೆಯಲ್ಲಿ ತುಳು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ: ಶಾಸಕ ಅಶೋಕ್ ಕುಮಾರ್ ರೈ ವಿಶ್ವಾಸSHOCKING: 'ಗಣಪತಿ ಹುಂಡಿ ಹಣ'ಕ್ಕೆ ಕನ್ನ ಹಾಕಿದ 'ಇಲಿ'ಗಳು: ಸಾವಿರಾರು ರೂಪಾಯಿ 'ನೋಟುಗಳು ಚೂರು ಚೂರು'!ನಾಯಕನಾದವನಿಗೆ ಅಡಿಗಡಿಗೂ ಅಡಚಣೆಗಳು ಜಾಸ್ತಿ: ಸಿಎಂ ಡಿ.ಕೆ.ಶಿವಕುಮಾರ್ಚಲಿಸುತ್ತಿದ್ದ ರೈಲಿನಿಂದ ಜಾರಿ ಹೊರಗೆ ನೇತಾಡಿದ ಯುವಕ; ರಕ್ಷಿಸುವ ಬದಲು ವಿಡಿಯೋ ಮಾಡಿದ ಪ್ರಯಾಣಿಕರು |WATCH VIDEO