LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮದ್ದೂರು ಎಪಿಎಂಸಿ ಚುನಾವಣೆ: ಆಮಿಷಗಳಿಗೆ ಒಳಗಾಗದೆ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಕರೆ

ಮಂಡ್ಯ: ಮದ್ದೂರು ವ್ಯವಸಾಯೋತ್ಪನ್ನ ಸಹಕಾರ ಸಂಘದ (TAPCMS) ನಿರ್ದೇಶಕರ ಮಂಡಳಿಗೆ ಸೆಪ್ಟೆಂಬರ್ 27ರಂದು ಚುನಾವಣೆ ನಡೆಯಲಿದ್ದು, ಮತದಾರರು ಯಾವುದೇ ರೀತಿಯ ಆಸೆ-ಆಮಿಷಗಳಿಗೆ ಬಲಿಯಾಗದೆ ಎನ್‌ಡಿಎ (ಜೆಡಿಎಸ್-ಬಿಜೆಪಿ) ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳನ್ನು ಭಾರಿ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಮನವಿ ಮಾಡಿದ್ದಾರೆ.

ಮದ್ದೂರು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಮೈತ್ರಿಕೂಟದ ಅಧಿಕೃತ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರ ಹಿತರಕ್ಷಣೆಗೆ ಸೂಕ್ತ ಅಭ್ಯರ್ಥಿಗಳ ಆಯ್ಕೆ ಅಗತ್ಯ

ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರ ಬೆನ್ನೆಲುಬಾಗಿ ನಿರಂತರವಾಗಿ ಕೆಲಸ ಮಾಡುತ್ತಿವೆ. ಅರ್ಹ ಮತ್ತು ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರಿಂದ ರೈತ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಸಿಗಲಿದೆ. ಹೀಗಾಗಿ ಎರಡೂ ಪಕ್ಷಗಳ ಒಕ್ಕೂಟದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಕೋರಿದರು. ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಜಂಟಿ ಪ್ರಚಾರ ನಡೆಸಿ ಮೈತ್ರಿ ಅಭ್ಯರ್ಥಿಗಳನ್ನು ವಿಜೇತರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

news_1790083360_0_926.webp

ಒಗ್ಗಟ್ಟಿನ ಹೋರಾಟದಿಂದ ಗೆಲುವು ಸಾಧ್ಯ: ಎಸ್.ಪಿ.ಸ್ವಾಮಿ

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮನ್ಮುಲ್ (MANMUL) ನಿರ್ದೇಶಕ ಎಸ್.ಪಿ. ಸ್ವಾಮಿ, ಈ ಬಾರಿ ಚುನಾವಣೆಯಲ್ಲಿ 'ಎ' ವಿಭಾಗದಿಂದ ನಾಲ್ವರು ಹಾಗೂ 'ಬಿ' ವಿಭಾಗದಿಂದ ಏಳು ಮಂದಿ ಅಭ್ಯರ್ಥಿಗಳು ಮೈತ್ರಿಕೂಟದಿಂದ ಕಣದಲ್ಲಿದ್ದಾರೆ. ಚುನಾವಣೆ ಗೆಲ್ಲಲು ಕೇವಲ ನಾಯಕರ ಶ್ರಮ ಸಾಕಾಗುವುದಿಲ್ಲ; ಕೆಳಹಂತದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಒಗ್ಗಟ್ಟಿನಿಂದ ಸಂಘಟಿತರಾಗಿ ಕೆಲಸ ಮಾಡಬೇಕಿದೆ ಎಂದರು.

ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳೆಲ್ಲರೂ ರೈತ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದು, ಕೃಷಿಕರ ಸಂಕಷ್ಟ ಹಾಗೂ ಸಹಕಾರ ಸಂಘಗಳ ಕಾರ್ಯವೈಖರಿಯ ಬಗ್ಗೆ ಸ್ಪಷ್ಟ ಅರಿವು ಹೊಂದಿದ್ದಾರೆ. ರೈತರ ಪರವಾಗಿ ಸಮರ್ಥವಾಗಿ ಕೆಲಸ ಮಾಡುವ ಸಾಮರ್ಥ್ಯ ಇವರಿಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖರ ಉಪಸ್ಥಿತಿ

ಈ ಪ್ರಚಾರ ಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಾದ ಪಿ.ಕೆ. ಕಾವ್ಯ, ಚಂದ್ರನಾಯಕ, ವೈ.ಕೆ. ದ್ಯಾವಯ್ಯ, ಬಸವಚಾರಿ, ಎಂ.ಎಸ್. ಶಶಿಕಲಾ, ಸಿ.ಡಿ. ಸಂತೋಷ್, ಎಸ್.ಡಿ. ಹೊನ್ನೇಗೌಡ ಭಾಗವಹಿಸಿದ್ದರು.

ಅಲ್ಲದೆ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ. ಸತೀಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಸ್.ಬಿ. ಮಹದೇವು, ನಗರಸಭೆಯ ಮಾಜಿ ಸದಸ್ಯ ಎಸ್. ಮಹೇಶ್, ಪುರಸಭೆಯ ಮಾಜಿ ಸದಸ್ಯ ಎಂ.ಪಿ. ಮಂಜುನಾಥ್, ಹಾಗೂ ಪ್ರಮುಖ ಮುಖಂಡರಾದ ಕೂಳಗರೆ ಶೇಖರ್, ಮಹೇಶ್, ಮಂಜುನಾಥ್, ಸುಧೀರ್, ಗುಂಡ ಮಹೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಗಿರೀಶ್ ರಾಜ್, ಮಂಡ್ಯ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
Lakayukta Raid: ರಾಜ್ಯಾದ್ಯಂತ ಲೋಕಾಯುಕ್ತ ಮೆಗಾ ರೇಡ್: 8 ಭ್ರಷ್ಟ ಸರ್ಕಾರಿ ಅಧಿಕಾರಿಗಳ ಬಳಿ ಸಿಕ್ಕಿದ್ದೆಷ್ಟು ಗೊತ್ತಾ? ಇಲ್ಲಿದೆ ಮಾಹಿತಿ!ಕರ್ನಾಟಕವೇ ನನ್ನ ಕರ್ಮಭೂಮಿ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವೇದಿಕೆಯಲ್ಲಿ ಅನಂತ್ ನಾಗ್ ಭಾವುಕ ನುಡಿ!BIG NEWS: ರಾಜ್ಯದಲ್ಲಿ ತಲೆದೋರಿದ ಆರ್ಥಿಕ ಬಿಕ್ಕಟ್ಟು: ಹೊಸ ಯೋಜನೆಗಳಿಗೆ ಅನುಮೋದನೆ ನೀಡಲು ಆರ್ಥಿಕ ಇಲಾಖೆ ಬ್ರೇಕ್!ತೋಟಗಾರಿಕೆ ಇಲಾಖೆ ಹುದ್ದೆಗಳ ನೇಮಕಾತಿ ಪರೀಕ್ಷೆ ದಿನಾಂಕ ಬದಲು, ಹೀಗಿದೆ ನೂತನ ವೇಳಾಪಟ್ಟಿರಾಜ್ಯದಲ್ಲಿ ಮತ್ತೆ 11 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಸರ್ಕಾರ ಅಧಿಕೃತ ಆದೇಶರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಫಿಕ್ಸ್: ಸುಳಿವು ನೀಡಿದ ಸಿಎಂ ಡಿ.ಕೆ ಶಿವಕುಮಾರ್ಮದ್ದೂರು TAPCMS ಚುನಾವಣೆ: ಆಮಿಷಗಳಿಗೆ ಒಳಗಾಗದೆ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಕರೆಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ' ಪ್ರಯಾಣವೂ ದುಬಾರಿ!: ತಿಂಗಳಿಗೆ ₹3520 ಖರ್ಚು; ₹70 ಸಾವಿರ ಸಂಬಳವೂ ಸಾಲದು ಎಂದ ವರದಿ!ನೈರುತ್ಯ ರೈಲ್ವೆಯಿಂದ ಜಾಗೃತಿ ಅರಿವು ಅಭಿಯಾನ: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಆಯೋಜನೆಮದ್ದೂರು ಎಪಿಎಂಸಿ ಚುನಾವಣೆ: ಆಮಿಷಗಳಿಗೆ ಒಳಗಾಗದೆ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಕರೆ