LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮನೀಶ್ ಮಲ್ಹೋತ್ರಾ ಫ್ಯಾಷನ್ ಶೋನಲ್ಲಿ ಕಂಗೊಳಿಸಿದ ಅಲಿಯಾ-ವಿಕ್ಕಿ: ಮಿಜ್ವಾನ್ ರ‍್ಯಾಂಪ್ ವಾಕ್ ವೈರಲ್!

ಮುಂಬೈನಲ್ಲಿ ನಡೆದ ಪ್ರಸಿದ್ಧ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ‘ಮಿಜ್ವಾನ್’ ಫ್ಯಾಷನ್ ಶೋನಲ್ಲಿ ಬಾಲಿವುಡ್ ನಟರಾದ ಅಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ ಶೋಸ್ಟಾಪರ್ ಆಗಿ ಹೆಜ್ಜೆಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಶೇಷ ಕಾರ್ಯಕ್ರಮದ ಸುಂದರ ಫೋಟೋಗಳನ್ನು ಇಬ್ಬರೂ ನಟರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯ ಹರ್ಷ: ಫೋಟೋಗಳನ್ನು ಹಂಚಿಕೊಂಡ ಅಲಿಯಾ ಭಟ್, “ಮಿಜ್ವಾನ್ ಆಯೋಜನೆಗೆ 15 ವರ್ಷ ತುಂಬಿದೆ. ಇದು ಅತ್ಯಂತ ಅರ್ಥಪೂರ್ಣ ಹಾಗೂ ಶಕ್ತಿಶಾಲಿ ಪಯಣ. ಸ್ಥಳೀಯ ಕಲಾಕಾರರಿಗೆ ವೇದಿಕೆ ಕಲ್ಪಿಸಿಕೊಟ್ಟ ಶಬಾನಾ ಅಜ್ಮಿ ಹಾಗೂ ಮನೀಶ್ ಮಲ್ಹೋತ್ರಾ ಅವರಿಗೆ ಅಭಿನಂದನೆಗಳು. ವಿಕ್ಕಿ ಕೌಶಲ್ ಜೊತೆಗಿದ್ದರೆ ಯಾವಾಗಲೂ ಖುಷಿ ನೀಡುತ್ತದೆ” ಎಂದು ಬರೆದುಕೊಂಡಿದ್ದಾರೆ. ಈ ಶೋನಲ್ಲಿ ಅಲಿಯಾ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಐವರಿ ಚಿಕನ್‌ಕಾರಿ ಸೀರೆಯಲ್ಲಿ ದೇವತೆಯಂತೆ ಕಂಗೊಳಿಸಿದರು.

ಇನ್ನೊಂದೆಡೆ ವಿಕ್ಕಿ ಕೌಶಲ್, “ಕೇವಲ ಫ್ಯಾಷನ್‌ಗಿಂತ ಮಿಗಿಲಾದ ಪ್ರಮುಖ ಉದ್ದೇಶಕ್ಕಾಗಿ ರ‍್ಯಾಂಪ್ ವಾಕ್ ಮಾಡಿದ್ದು ಹೆಮ್ಮೆಯ ಸಂಗತಿ. ಅಲಿಯಾ ಭಟ್ ಜೊತೆ ಈ ರ‍್ಯಾಂಪ್ ವಾಕ್ ಹಂಚಿಕೊಂಡದ್ದು ಈ ಕ್ಷಣವನ್ನು ಮತ್ತಷ್ಟು ವಿಶೇಷವಾಗಿಸಿತು. ಇಲ್ಲಿ ನಾವಿಬ್ಬರು ಶೋಸ್ಟಾಪರ್‌ಗಳಾಗಿದ್ದರೂ, ನಿಜವಾದ ಸ್ಟಾರ್‌ಗಳು ಎಂದರೆ ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟುಕೊಂಡಿರುವ ಆ ಹೆಣ್ಣುಮಕ್ಕಳು” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ವಿಕ್ಕಿ ನವಿಲು ನೀಲಿ ಹಾಗೂ ಬಿಳಿ ಬಣ್ಣದ ಚಿಕನ್‌ಕಾರಿ ಶೆರ್ವಾನಿ ಧರಿಸಿ ಮಿಂಚಿದರು.

ಈ ಇಬ್ಬರೂ ಪ್ರತಿಭಾವಂತ ನಟರು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮುಂಬರುವ ಬಿಗ್ ಬಜೆಟ್ ಸಿನಿಮಾ ‘ಲವ್ ಆಂಡ್ ವಾರ್’ನಲ್ಲಿ ರಣಬೀರ್ ಕಪೂರ್ ಅವರೊಂದಿಗೆ ಒಟ್ಟಿಗೆ ನಟಿಸುತ್ತಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೇಕೆದಾಟು ಯೋಜನೆ ಸ್ಥಳಕ್ಕೆ ತಮಿಳುನಾಡು ನಿಯೋಗವೂ ಬಂದು ಪರಿಶೀಲನೆ ಮಾಡಲಿ: ಸಿಎಂ ಡಿ.ಕೆ. ಶಿವಕುಮಾರ್ಬರದ ಪರಿಸ್ಥಿತಿ ಪರಿಶೀಲಿಸಲು ಕರ್ನಾಟಕ, ಮಹಾರಾಷ್ಟ್ರಕ್ಕೆ ಕೇಂದ್ರ ತಂಡಗಳ ಭೇಟಿ18 ವರ್ಷದೊಳಗಿನವರಿಗೆ ಸಾಮಾಜಿಕ ಜಾಲತಾಣಗಳ ಖಾತೆ ತೆರೆಯಲು ನಿರ್ಬಂಧ: ಹೊಸ ನಿಯಮDLಗೆ ಸೆ.30ರೊಳಗೆ ಮೊಬೈಲ್ ನಂಬರ್ ಅಪ್‌ಡೇಟ್ ಮಾಡದಿದ್ದರೆ ಲೈಸೆನ್ಸ್ ರದ್ದಾಗುತ್ತಾ? ವೈರಲ್ ಸುದ್ದಿಯ ಅಸಲಿಯತ್ತು ಇಲ್ಲಿದೆ!ನೇಪಾಳದಲ್ಲಿ ಭಾರಿ ಮಳೆಗೆ ಬೆಟ್ಟ ಕುಸಿದು 24 ಮಂದಿ ಸಾವು, 14 ಜನ ನಾಪತ್ತೆ ; ಭಯಾನಕ ವೀಡಿಯೋ ವೈರಲ್ |WATCH VIDEOUPI ಪೇಮೆಂಟ್‌ಗೆ ಮುನ್ನ ಎಚ್ಚರ! ಹಣ ಕಳುಹಿಸುವಾಗ ಈ ಮಾಹಿತಿ ನಮೂದಿಸುವುದು ಮುಖ್ಯಮತ್ತೆ ಜಾಗತಿಕ ಮಟ್ಟಕ್ಕೆ UPI: ಭಾರತದ ವ್ಯವಸ್ಥೆ ಅಳವಡಿಸಿಕೊಂಡ ಮೊದಲ ಕೆರಿಬಿಯನ್ ರಾಷ್ಟ್ರ ಟ್ರಿನಿಡಾಡ್ ಮತ್ತು ಟೊಬೆಗೊ₹500ಕ್ಕೆ ಲಾಟರಿ ಟಿಕೆಟ್ ಖರೀದಿ.. ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವ್ಯಕ್ತಿ! ಗೆದ್ದ ಹಣ ಎಷ್ಟು ಗೊತ್ತಾ?ಚಲಿಸುತ್ತಿದ್ದ ಬಸ್‌ನಲ್ಲೇ ಗ್ಯಾಂಗ್‌ರೇಪ್; ನಿರ್ಭಯಾ ಪ್ರಕರಣ ಉಲ್ಲೇಖಿಸಿ ಸುಪ್ರೀಂಕೋರ್ಟ್‌ನಿಂದ ಸ್ವಯಂಪ್ರೇರಿತ ವಿಚಾರಣೆಸಚಿನ್‌ರ 100 ಶತಕಗಳ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೆಷ್ಟು ಶತಕ ಬೇಕು? ಲೆಕ್ಕಾಚಾರ ಹೀಗಿದೆ