LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೂಪರ್‌ಸ್ಟಾರ್ ರಜನಿಕಾಂತ್ ‘ಧರ್ಮನ್’ ಚಿತ್ರತಂಡಕ್ಕೆ ನಟಿ ಶ್ರೀಲೀಲಾ ಎಂಟ್ರಿ: ಶೂಟಿಂಗ್ ಸೆಟ್‌ನಿಂದ ವಿಡಿಯೋ ಲೀಕ್

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಹಾಗೂ ಅತ್ಯಂತ ಕುತೂಹಲ ಕೆರಳಿಸಿರುವ ‘ಧರ್ಮನ್’ ಚಿತ್ರದ ತಾರಾಗಣಕ್ಕೆ ಯುವ ನಟಿ ಶ್ರೀಲೀಲಾ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ನಟ ರಾಮ್ ಪೋತಿನೇನಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಇತ್ತೀಚೆಗೆ ನಟಿ ರಾಶಿ ಖನ್ನಾ ಅವರು ಆಕಸ್ಮಿಕವಾಗಿ ಬಹಿರಂಗಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಶ್ರೀಲೀಲಾ ಅವರ ಅಭಿನಯವೂ ಖಚಿತಗೊಂಡಂತಾಗಿದೆ.

ಚಿತ್ರೀಕರಣ ನಡೆಯುತ್ತಿರುವ ಸ್ಥಳದಿಂದ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಶ್ರೀಲೀಲಾ ಅವರು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಚಿತ್ರದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬ ವಿವರಗಳನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಆದರೆ, ‘ಸ್ಕಂದ’ ಸಿನಿಮಾದ ಯಶಸ್ಸಿನ ನಂತರ ಶ್ರೀಲೀಲಾ ಮತ್ತೊಮ್ಮೆ ರಾಮ್ ಪೋತಿನೇನಿ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಲವಾದ ವದಂತಿಗಳು ಫಿಲ್ಮ್ ನಗರಿಯಲ್ಲ ಹರಿದಾಡುತ್ತಿವೆ. ಈ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಅಧಿಕೃತ ಸ್ಪಷ್ಟನೆ ಬರಬೇಕಿದೆ.

ಮತ್ತೊಂದೆಡೆ, ಸಿನಿಮಾದ ನಿರ್ಮಾಣ ಕಾರ್ಯ ಶರವೇಗದಲ್ಲಿ ಸಾಗುತ್ತಿದ್ದು, ಪ್ರಮುಖ ಘಟ್ಟವಾದ ಮೂರನೇ ಹಂತದ (ಥರ್ಡ್ ಶೆಡ್ಯೂಲ್) ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಚಿತ್ರತಂಡ ಘೋಷಿಸಿದೆ.

ಅಶ್ವಥ್ ಮಾರಿಮುತ್ತು ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಉಲಗನಾಯಗನ್ ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆಯಾದ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಹಾಗೂ ‘ಟರ್ಮೆರಿಕ್ ಮೀಡಿಯಾ’ ಜಂಟಿಯಾಗಿ ನಿರ್ಮಿಸುತ್ತಿವೆ. ದಕ್ಷಿಣ ಭಾರತದ ಖ್ಯಾತ ನಟಿ ಸಿಮ್ರಾನ್ ಮತ್ತು ಹಾಸ್ಯ ನಟ ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಯುವ ಸಂಗೀತ ಸಂವೇದನೆ ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ವಿಜಯಪುರದಲ್ಲಿ ಬೆಳ್ಳಂ ಬೆಳಿಗ್ಗೆ ಭೂ ಕಂಪನ : ರಿಕ್ಟರ್ ಮಾಪಕದಲ್ಲಿ 3.5 ರಷ್ಟು ತೀವ್ರತೆ ದಾಖಲು!ನವೆಂಬರ್ ಒಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಕಮಿಷನ್ ದಂಧೆಯ ದಾಖಲೆ ಬಹಿರಂಗ: ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ವಾರ್ನಿಂಗ್!‘ಹನುಮಾನ್ ಅಂಶ 2’ ತಾರಾಗಣದ ಸುತ್ತ ಕುತೂಹಲ: ಅಕ್ಷಯ್ ಕುಮಾರ್ ಅಭಿನಯದ ಬಗ್ಗೆ ನಿರ್ಮಾಪಕಿ ನೀಡಿದ ಹೇಳಿಕೆಯೇನು?ಅಪ್ರಾಪ್ತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣವೇ ಇಲ್ಲ? ಬಿಹಾರಕ್ಕೆ ಏನಾಗಿದೆ..? ಕಾನೂನು ಸುವ್ಯವಸ್ಥೆ ಬಗ್ಗೆ ಭಾರೀ ಚರ್ಚೆಶಿವಸೇನೆ ನಾಯಕ ಪ್ರದೀಪ್ ಪುರ್ಣೇಕರ್ ಗುಂಡಿಕ್ಕಿ ಹತ್ಯೆಬಿಹಾರದಲ್ಲಿ ಅಧಿಕಾರಿ ದಂಪತಿ ಮನೆಗಳ ಮೇಲೆ ವಿಜಿಲೆನ್ಸ್ ದಾಳಿ: ₹1 ಕೋಟಿಗೂ ಅಧಿಕ ನಗದು, ಆಭರಣ, ಐಷಾರಾಮಿ ಕೈಗಡಿಯಾರಗಳು ಪತ್ತೆಪ್ರತಿ ತಿಂಗಳು ₹3,000 ಪಿಂಚಣಿ; ಸಣ್ಣ ವ್ಯಾಪಾರಿಗಳು, ಅಂಗಡಿ ಮಾಲೀಕರಿಗೆ ಸರ್ಕಾರದ ವಿಶೇಷ ಯೋಜನೆ!BREAKING : ಬಿಜೆಪಿಗಿಂತ ಕಾಂಗ್ರೆಸ್ ಸರ್ಕಾರದಲ್ಲೇ ಹೆಚ್ಚು ಕಮಿಷನ್ : ಗುತ್ತಿಗೆದಾರ ಸಂಘದ ಅಧ್ಯಕ್ಷ ಸ್ಪೋಟಕ ಆರೋಪ!BIG NEWS : ಕಮಲ ಕೋಟೆ ಶಿಕಾರಿಪುರದಲ್ಲಿ 'ಕಾಂಗ್ರೆಸ್ ಜೋಡೋ 2.0 ಪಾದಯಾತ್ರೆಗೆ' ಚಾಲನೆ!BREAKIND : ನಾಪತ್ತೆಯಾಗಿದ್ದ KRIDL ಎಇ‌ಇ ಪರ್ವೇಜ್ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಪತ್ತೆ!