LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಾವಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆಗೆ ಶರಣು

ಕಲಬುರ್ಗಿ: ಸಾಲದ ವಿಚಾರವಾಗಿ ದಂಪತಿ ನಡುವೆ ಉಂಟಾದ ಜಗಳ ತಾರಕಕ್ಕೇರಿ, ಮನನೊಂದ ತಾಯಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಬಾವಿಗೆ ಹಾರಿದ ಪರಿಣಾಮ ತಾಯಿ ಮತ್ತು ಓರ್ವ ಮಗಳು ಮೃತಪಟ್ಟಿದ್ದು, ಮತ್ತೋರ್ವ ಮಗಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಮನಕಲಕುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಇಕ್ಕಳಕಿ ಗ್ರಾಮದಲ್ಲಿ ನಡೆದಿದೆ.

ಗೌರಮ್ಮ (52) ಹಾಗೂ ಆಕೆಯ ಪುತ್ರಿ ಭಾಗ್ಯಶ್ರೀ (25) ಮೃತಪಟ್ಟ ದುರ್ದೈವಿಗಳು. ಬಾವಿಗೆ ಹಾರಿದ ಮತ್ತೋರ್ವ ಮಗಳು ಅಂಬಿಕಾ (21) ಅವರನ್ನು ಸ್ಥಳೀಯರು ರಕ್ಷಿಸಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕುಟುಂಬದಲ್ಲಿ ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ಗೌರಮ್ಮ ಹಾಗೂ ಪತಿ ಪೀರಪ್ಪ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಗಲಾಟೆಯಿಂದ ತೀವ್ರ ಮನನೊಂದ ಗೌರಮ್ಮ, ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮನೆಯಿಂದ ಹೊರಬಂದು ಸಮೀಪದ ಕೃಷಿ ಜಮೀನಿನ ಬಾವಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸುತ್ತಮುತ್ತಲಿನ ರೈತರು ಮತ್ತು ಗ್ರಾಮಸ್ಥರು ತಕ್ಷಣವೇ ರಕ್ಷಣೆಗೆ ಧಾವಿಸಿದರಾದರೂ, ಅಷ್ಟರಲ್ಲೇ ಗೌರಮ್ಮ ಮತ್ತು ಭಾಗ್ಯಶ್ರೀ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅಂಬಿಕಾ ಅವರನ್ನು ಪ್ರಾಣಾಪಾಯದಿಂದ ರಕ್ಷಿಸಿ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಗಳೂರು MRPL ಸ್ಫೋಟ: ಕೇಂದ್ರದಿಂದ ಉನ್ನತ ಮಟ್ಟದ ತನಿಖೆಗೆ ಸಚಿವ ಯು.ಟಿ.ಖಾದರ್ ಆಗ್ರಹ!BREAKING: ಬೆಂಗಳೂರಲ್ಲಿ ಸಿನಿಮಾ ಪ್ರದರ್ಶನದ ವೇಳೆ ಥಿಯೇಟರ್ ಮೇಲ್ಛಾವಣಿ ಕುಸಿದು ಮೂವರಿಗೆ ಗಾಯಜೋಗ ಜಲಪಾತವನ್ನು ಸರ್ವಋತು ಪ್ರವಾಸಿ ತಾಣವಾಗಿಸುವ ಕಾಮಗಾರಿ ಚುರುಕುಗೊಳಿಸಿ: ಸಚಿವ ಕೆ.ಜೆ.ಜಾರ್ಜ್ ಸೂಚನೆಜಂತರ್ ಮಂತರ್‌ನಲ್ಲಿ ಮಹಿಳೆಯ ಹೈಡ್ರಾಮಾ; “ವಿಜಯ್ ಬಂದು ತಬ್ಬಿಕೊಳ್ಳುವವರೆಗೆ ನಾನು ಕದಲಲ್ಲ” ಎಂದ ಅಭಿಮಾನಿರೈತರಿಗೆ ಗುಡ್ ನ್ಯೂಸ್: ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣಕ್ಕಾಗಿ 5,547.99 ಕೋಟಿ ರೂ. ಮೌಲ್ಯದ ಬೇಳೆಕಾಳು, ಎಣ್ಣೆಬೀಜಗಳ ಖರೀದಿಗೆ ಅನುಮೋದನೆಮಾಹಿತಿ ಸುರಕ್ಷತೆಯ ವ್ಯವಸ್ಥೆಗಾಗಿ ಬೆಸ್ಕಾಂಗೆ ISO ಪ್ರಮಾಣಪತ್ರಮಂಗಳೂರು ಎಂಆರ್‌ಪಿಎಲ್‌ನಲ್ಲಿ ಭೀಕರ ಬಾಯ್ಲರ್ ಸ್ಫೋಟ: ಓರ್ವ ಸಾವು, 8 ಮಂದಿಗೆ ಗಾಯಮಂಗಳೂರು MRPL ಸ್ಫೋಟ ದುರಂತಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಸಂತಾಪ: ಸಮಗ್ರ ತನಿಖೆಗೆ ಆದೇಶಬಾವಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆಗೆ ಶರಣುಮಣಿಪಾಲ ಕೆಎಂಸಿ ಆಸ್ಪತ್ರೆ ಕಟ್ಟಡದಿಂದ ಜಿಗಿದು ರೋಗಿ ಆತ್ಮಹತ್ಯೆಗೆ ಯತ್ನ: ಐಸಿಯುನಲ್ಲಿ ಚಿಕಿತ್ಸೆ, ಸ್ಥಿತಿ ಗಂಭೀರ!