LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಿಗೆ ಗುಡ್ ನ್ಯೂಸ್: ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣಕ್ಕಾಗಿ 5,547.99 ಕೋಟಿ ರೂ. ಮೌಲ್ಯದ ಬೇಳೆಕಾಳು, ಎಣ್ಣೆಬೀಜಗಳ ಖರೀದಿಗೆ ಅನುಮೋದನೆ

ನವದೆಹಲಿ: ಖಾರೀಫ್ 2026-27ರ ಪಿ ಎಸ್ ಎಸ್ ಅಡಿಯಲ್ಲಿ ₹5,547.99 ಕೋಟಿ ಮೌಲ್ಯದ ಬೇಳೆಕಾಳು ಮತ್ತು ಎಣ್ಣೆಬೀಜಗಳ ಖರೀದಿಗೆ ಚೌಹಾಣ್ ಅನುಮೋದನೆ ನೀಡಲಾಗಿದೆ.

ಪ್ರಮುಖ ರೈತ ಪರ ನಿರ್ಧಾರದಡಿ ಉತ್ತರ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣಕ್ಕಾಗಿ ₹5,547.99 ಕೋಟಿ ಮೌಲ್ಯದ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.)ಯಲ್ಲಿ ಖರೀದಿಗೆ ಅನುಮೋದನೆ ನೀಡಿದ್ದು, ಮೂರು ರಾಜ್ಯಗಳ ರೈತರಿಗೆ ಪಿಎಸ್ಎಸ್ ಆಧಾರದ ಮೇಲೆ ಖರೀದಿಯಿಂದ ಲಾಭವಾಗಲಿದೆ.

ಬೆಂಬಲ ಬೆಲೆಯಲ್ಲಿ 7.06 ಲಕ್ಷ ಮೆಟ್ರಿಕ್ ಟನ್ ಬೇಳೆಕಾಳು ಮತ್ತು ಎಣ್ಣೆಬೀಜಗಳ ಖರೀದಿ. ಉತ್ತರ ಪ್ರದೇಶದಲ್ಲಿ ತೊಗರಿ ಮತ್ತು ಹೆಸರುಕಾಳು, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಸೋಯಾಬೀನ್, ಹೆಸರುಕಾಳು ಹಾಗೂ ಸೂರ್ಯಕಾಂತಿ ಬೆಳೆಗಳ ಎಂ ಎಸ್ ಪಿ ಖರೀದಿಗೆ ಅನುಮೋದನೆ ನೀಡಲಾಗಿದೆ.

ಉತ್ತರ ಪ್ರದೇಶದ ರೈತರಿಗೆ ₹3,992.57 ಕೋಟಿ ಖರೀದಿಗೆ ಅನುಮೋದನೆ; ಕರ್ನಾಟಕಕ್ಕೆ ₹1,107 ಕೋಟಿ ಮತ್ತು ತೆಲಂಗಾಣಕ್ಕೆ ₹448.42 ಕೋಟಿ ಲಭ್ಯವಾಗಲಿದೆ.

ಬೇಳೆಕಾಳು ಮತ್ತು ಎಣ್ಣೆಬೀಜ ಬೆಳೆಗಾರರನ್ನು ಮಾರುಕಟ್ಟೆ ಬೆಲೆ ಕುಸಿತದಿಂದ ರಕ್ಷಿಸಲು ಕೇಂದ್ರ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಉತ್ತರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ 2026-27ರ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ ಬೆಲೆ ಬೆಂಬಲ ಯೋಜನೆ (ಪಿ ಎಸ್ ಎಸ್) ಅಡಿಯಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂ.ಎಸ್.ಪಿ.) ₹5,547.99 ಕೋಟಿ ಮೌಲ್ಯದ ಬೆಳೆ ಖರೀದಿಗೆ ಅನುಮೋದನೆ ನೀಡಿದ್ದಾರೆ. ಮಾರುಕಟ್ಟೆ ಬೆಲೆಗಳ ಕುಸಿತದಿಂದ ರೈತರನ್ನು ರಕ್ಷಿಸುವುದು ಮತ್ತು ಅವರ ಉತ್ಪನ್ನಗಳಿಗೆ, ವಿಶೇಷವಾಗಿ ಬೇಳೆಕಾಳು ಹಾಗೂ ಎಣ್ಣೆಬೀಜ ಬೆಳೆಗಾರರಿಗೆ ಸೂಕ್ತ ಬೆಲೆ ಸಿಗುವಂತೆ ಮಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರೈತರ ಕಲ್ಯಾಣ, ಅವರ ಆದಾಯ ಹೆಚ್ಚಳ ಮತ್ತು ಕೃಷಿಯಲ್ಲಿ ಸ್ವಾವಲಂಬನೆಯನ್ನು ಬಲಪಡಿಸುವುದು ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಚೌಹಾಣ್ ತಿಳಿಸಿದರು. ರೈತರಿಗೆ ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತೆ ಮಾಡಲು ಮತ್ತು ಸಂಗ್ರಹಣೆಗಾಗಿ ಖರೀದಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಹಾಗೂ ಸುಲಭವಾಗಿ ತಲುಪುವಂತೆ ಮಾಡಲು ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು. ಅನುಮೋದಿತ ಸಂಗ್ರಹಣಾ ಯೋಜನೆಯಡಿ, ಮೂರು ರಾಜ್ಯಗಳ ರೈತರು ಕನಿಷ್ಠ ಬೆಂಬಲ ಬೆಲೆಯಲ್ಲಿ ಪ್ರಮುಖ ಬೇಳೆಕಾಳುಗಳು ಮತ್ತು ಎಣ್ಣೆಬೀಜಗಳ ಬೃಹತ್ ಪ್ರಮಾಣದಲ್ಲಿ ಸರ್ಕಾರವು ಖರೀದಿಸುವುದರ ಪ್ರಯೋಜನವನ್ನು ಪಡೆಯಲಿದ್ದಾರೆ.

ಅನುಮೋದಿತ ಖರೀದಿಯಲ್ಲಿ ಅತಿ ದೊಡ್ಡ ಪಾಲನ್ನು ಪಡೆದಿರುವ ಉತ್ತರ ಪ್ರದೇಶಕ್ಕೆ ₹3,992.57 ಕೋಟಿ ಮಂಜೂರಾಗಿದೆ. ಇದರಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ₹3,937.70 ಕೋಟಿ ಮೌಲ್ಯದ 4,66,000 ಮೆಟ್ರಿಕ್ ಟನ್ ತೊಗರಿ ಮತ್ತು ₹54.87 ಕೋಟಿ ಮೌಲ್ಯದ 6,250 ಮೆಟ್ರಿಕ್ ಟನ್ ಹೆಸರುಕಾಳುಗಳ ಖರೀದಿಯು  ಸೇರಿದೆ.

ಕರ್ನಾಟಕದ ಬೇಳೆಕಾಳು ಮತ್ತು ಎಣ್ಣೆಬೀಜ ಬೆಳೆಗಾರರಿಗೆ ಪಿ ಎಸ್ ಎಸ್ ಅಡಿಯಲ್ಲಿ ₹1,107 ಕೋಟಿ ಮೌಲ್ಯದ ಖರೀದಿಗೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ ₹659.27 ಕೋಟಿ ಮೌಲ್ಯದ 1,15,500 ಮೆಟ್ರಿಕ್ ಟನ್ ಸೋಯಾಬೀನ್, ₹335.83 ಕೋಟಿ ಮೌಲ್ಯದ 38,250 ಮೆಟ್ರಿಕ್ ಟನ್ ಹೆಸರುಕಾಳು ಮತ್ತು ₹111.90 ಕೋಟಿ ಮೌಲ್ಯದ 13,413 ಮೆಟ್ರಿಕ್ ಟನ್ ಸೂರ್ಯಕಾಂತಿ ಸೇರಿದೆ.

ತೆಲಂಗಾಣದಲ್ಲಿ ₹448.42 ಕೋಟಿ ಮೌಲ್ಯದ ಖರೀದಿಗೆ ಅನುಮೋದನೆ ನೀಡಲಾಗಿದೆ. ಬೆಲೆ ಬೆಂಬಲ ಯೋಜನೆಯಡಿಯಲ್ಲಿ ಎಂ ಎಸ್ ಪಿಯಲ್ಲಿ ಸಂಗ್ರಹಿಸಲಾಗುವ ₹353.90 ಕೋಟಿ ಮೌಲ್ಯದ 62,000 ಮೆಟ್ರಿಕ್ ಟನ್ ಸೋಯಾಬೀನ್ ಮತ್ತು ₹94.52 ಕೋಟಿ ಮೌಲ್ಯದ 10,766 ಮೆಟ್ರಿಕ್ ಟನ್ ಹೆಸರುಕಾಳು ಸೇರಿದೆ.

ಈ ನಿರ್ಧಾರವು ರೈತರಿಗೆ ಹೆಚ್ಚಿನ ಆರ್ಥಿಕ ಭದ್ರತೆಯನ್ನು ಒದಗಿಸುವುದರ ಜೊತೆಗೆ ದೇಶದಲ್ಲಿ ಬೇಳೆಕಾಳುಗಳು ಮತ್ತು ಎಣ್ಣೆಬೀಜಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಹಾಗೂ ಬೇಳೆಕಾಳು ಮತ್ತು ಖಾದ್ಯ ತೈಲಗಳಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಪ್ರಯತ್ನಗಳಿಗೆ ಕೊಡುಗೆ ನೀಡುತ್ತದೆ ಎಂದು ಚೌಹಾಣ್ ಹೇಳಿದರು. ಎಲ್ಲಾ ನಿಯೋಜಿತ ಕೇಂದ್ರಗಳಲ್ಲಿ ಖರೀದಿ ಮಾಡುವ ವ್ಯವಸ್ಥೆಯು ಪಾರದರ್ಶಕವಾಗಿರುತ್ತದೆ ಮತ್ತು ರೈತರು ತಮ್ಮ ಉತ್ಪನ್ನದ ಹಣವನ್ನು ಸಮಯಕ್ಕೆ ಸರಿಯಾಗಿ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಪಡೆಯಲಿದ್ದಾರೆ ಎಂದು ಭರವಸೆ ನೀಡಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಮ್ಮ ಪರ ನಾನಿದ್ದೇನೆ, ಅನ್ಯಾಯವಾಗಲು ಬಿಡಲ್ಲ: ಸಾಗರದಲ್ಲಿ ಶಾಹಿ ಗಾರ್ಮೆಂಟ್ಸ್ ನೌಕರರಿಗೆ ಶಾಸಕ ಬೇಳೂರು ಅಭಯ!ಮೀರತ್ ‘ನೀಲಿ ಡ್ರಮ್’ ಹತ್ಯೆ ಪ್ರಕರಣ: ಪತ್ನಿ, ಪ್ರಿಯಕರ ತಪ್ಪಿತಸ್ಥರೆಂದು ಕೋರ್ಟ್ ತೀರ್ಪುಸಣ್ಣ ಉಳಿತಾಯ ಖಾತೆದಾರರಿಗೆ ಮುಖ್ಯ ಮಾಹಿತಿ: ಸ್ಮಾಲ್ ಸೇವಿಂಗ್ಸ್ ಸ್ಕೀಂ ಬಡ್ಡಿ ದರಗಳಲ್ಲಿ ಯಥಾಸ್ಥಿತಿಸಾಗರದಲ್ಲಿ ಹೊಸ PF ನೀತಿಗೆ ವಿರೋಧಿಸಿ ಶಾಹಿ ಗಾರ್ಮೆಂಟ್ಸ್ ನೌಕರರು ಬೃಹತ್ ಪ್ರತಿಭಟನೆ!ಪಠ್ಯದಷ್ಟೇ ಕ್ರೀಡೆಯೂ ಬದುಕಿಗೆ ಮುಖ್ಯ, ಮಕ್ಕಳಲ್ಲಿ ನಾಯಕತ್ವ ಗುಣ ಬೆಳವಣಿಗೆಗೆ ಸಹಕಾರಿ: ಸಾಗರ ತಹಶೀಲ್ದಾರ್ ಡಾ.ಪ್ರತಿಭಾ ಅಭಿಪ್ರಾಯಮಂಗಳೂರು MRPL ಸ್ಫೋಟ: ಕೇಂದ್ರದಿಂದ ಉನ್ನತ ಮಟ್ಟದ ತನಿಖೆಗೆ ಸಚಿವ ಯು.ಟಿ.ಖಾದರ್ ಆಗ್ರಹ!BREAKING: ಬೆಂಗಳೂರಲ್ಲಿ ಸಿನಿಮಾ ಪ್ರದರ್ಶನದ ವೇಳೆ ಥಿಯೇಟರ್ ಮೇಲ್ಛಾವಣಿ ಕುಸಿದು ಮೂವರಿಗೆ ಗಾಯಜೋಗ ಜಲಪಾತವನ್ನು ಸರ್ವಋತು ಪ್ರವಾಸಿ ತಾಣವಾಗಿಸುವ ಕಾಮಗಾರಿ ಚುರುಕುಗೊಳಿಸಿ: ಸಚಿವ ಕೆ.ಜೆ.ಜಾರ್ಜ್ ಸೂಚನೆಜಂತರ್ ಮಂತರ್‌ನಲ್ಲಿ ಮಹಿಳೆಯ ಹೈಡ್ರಾಮಾ; “ವಿಜಯ್ ಬಂದು ತಬ್ಬಿಕೊಳ್ಳುವವರೆಗೆ ನಾನು ಕದಲಲ್ಲ” ಎಂದ ಅಭಿಮಾನಿರೈತರಿಗೆ ಗುಡ್ ನ್ಯೂಸ್: ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣಕ್ಕಾಗಿ 5,547.99 ಕೋಟಿ ರೂ. ಮೌಲ್ಯದ ಬೇಳೆಕಾಳು, ಎಣ್ಣೆಬೀಜಗಳ ಖರೀದಿಗೆ ಅನುಮೋದನೆ