LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತ ಮಹಿಳಾ ಕ್ರಿಕೆಟ್‌ಗೆ ಬಿಗ್ ಶಾಕ್: ಏಷ್ಯನ್ ಗೇಮ್ಸ್ ಚಿನ್ನದ ಬೆನ್ನಲ್ಲೇ ಕ್ಯಾಪ್ಟನ್ಸಿ ತೊರೆದ ಹರ್ಮನ್‌‌ಪ್ರೀತ್ ಕೌರ್!

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಯಶಸ್ವಿ ನಾಯಕಿ ಹರ್ಮನ್‌ಪ್ರೀತ್ ಕೌರ್, ತಮ್ಮ ನಾಯಕತ್ವದ ಹುದ್ದೆಗೆ ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ. ಕಳೆದ ವರ್ಷ ಭಾರತದಲ್ಲೇ ನಡೆದ ಮಹಿಳಾ ಏಕದಿನ ವಿಶ್ವಕಪ್, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾ ಕಪ್ ಹಾಗೂ ೨೦೨೬ರ ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಗೆದ್ದುಕೊಟ್ಟಿದ್ದ ಹರ್ಮನ್‌ಪ್ರೀತ್, ಗೌರವಾನ್ವಿತ ಹಂತದಲ್ಲೇ ನಾಯಕತ್ವ ತೊರೆದು ಹೊಸ ಪೀಳಿಗೆಗೆ ಹಾದಿ ಮಾಡಿಕೊಟ್ಟಿದ್ದಾರೆ.

ಗುವಾಹಟಿಯಲ್ಲಿ ನಡೆದ ತಂಡದ ಪರಾಮರ್ಶೆ ಸಭೆಯ ನಂತರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಹರ್ಮನ್‌ಪ್ರೀತ್, “ಎಲ್ಲಾ ಮಾದರಿಯ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯುತ್ತಿರುವುದು ಸುಲಭದ ನಿರ್ಧಾರವಲ್ಲ. ಇದು ಹಲವು ವರ್ಷಗಳ ನೆನಪುಗಳು, ಭಾವುಕತೆ ಮತ್ತು ತ್ಯಾಗಗಳಿಂದ ಕೂಡಿದೆ. ನನ್ನ ಜೀವಿತಾವಧಿಯ ಕೊನೆಯವರೆಗೂ ಈ ಕ್ಷಣಗಳು ನೆನಪಿನಲ್ಲಿರುತ್ತವೆ,” ಎಂದು ಬರೆದುಕೊಂಡಿದ್ದಾರೆ.

೩೭ ವರ್ಷದ ಹರ್ಮನ್‌ಪ್ರೀತ್ ಕೌರ್ ಕ್ರೀಡಾ ಬದುಕಿನ ಅಂತಿಮ ಹಂತದಲ್ಲಿದ್ದು, ಅವರ ಸ್ಥಾನಕ್ಕೆ ಹಿರಿಯ ಆಟಗಾರ್ತಿ ಹಾಗೂ ಉಪನಾಯಕಿ ಸ್ಮೃತಿ ಮಂಧಾನ ಹೊಸ ನಾಯಕಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ೨೦೧೬ರಲ್ಲಿ ಟಿ೨೦ ಹಾಗೂ ೨೦೧೭ರಲ್ಲಿ ಏಕದಿನ ತಂಡದ ಸಾರಥ್ಯ ವಹಿಸಿಕೊಂಡಿದ್ದ ಹರ್ಮನ್‌ಪ್ರೀತ್, ೨೦೨೫ರ ವಿಶ್ವಕಪ್ ಗೆಲ್ಲಿಸಿಕೊಡುವ ಮೂಲಕ ವಿಶ್ವಕಪ್ ಎತ್ತಿಹಿಡಿದ ಭಾರತದ ಮೊದಲ ಮಹಿಳಾ ನಾಯಕಿ ಎಂಬ ಇತಿಹಾಸ ನಿರ್ಮಿಸಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಕ್ಕರೆ ರಹಿತ ಕೋಲ್ಕತ್ತಾ ಸ್ಟೈಲ್ ‘ಪಾನ್ ಮುಖವಾಸ್’: 2 ತಿಂಗಳು ಹಾಳಾಗದ ಹೆಲ್ದಿ ರೆಸಿಪಿ ಇಲ್ಲಿದೆ!40ರ ಬಳಿಕ ಮಹಿಳೆಯರ ಆರೋಗ್ಯಕ್ಕೆ ಈ ಪೋಷಕಾಂಶಗಳು ಬಹಳ ಮುಖ್ಯ; ಆಹಾರದಲ್ಲಿ ಇರಲಿ ಈ ಪದಾರ್ಥಗಳು‘ದೃಶ್ಯಂ 3’ ನಟಿ ಇಶಿತಾ ಮಗನಿಗೆ ಕಾಜೋಲ್ ನೀಡಿದ್ದ ಪೋಷಕತ್ವದ ಸೀಕ್ರೆಟ್ ಟಿಪ್ಸ್ ಏನು?: ನಟಿಯ ಸ್ವಾರಸ್ಯಕರ ಮಾತು!ಏಷ್ಯನ್ ಗೇಮ್ಸ್ 2026: ಪದಕ ವಿಜೇತರಿಗೆ ಭರ್ಜರಿ ಬಹುಮಾನ; ಸರ್ಕಾರಿ ಉದ್ಯೋಗದ ಕೊಡುಗೆ44 ವರ್ಷಗಳ ನಂತರ ಮುಖಾಮುಖಿ: ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಪಿಂಕ್ ಸಾಕ್ಸ್ ಧರಿಸಿ ಮೈದಾನಕ್ಕಿಳಿಯಲಿದೆ ಉರುಗ್ವೆ!ಕಿಯಾ ಟೆನಿಸ್ ಪ್ರೀಮಿಯರ್ ಲೀಗ್ ಸೀಸನ್ 8 ರಂಗು: ರೋಹನ್ ಬೋಪಣ್ಣ ಸೇರಿದಂತೆ ಜಾಗತಿಕ ತಾರೆಯರ ಎಂಟ್ರಿ!ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್:ಚಿನ್ನದ ದರದಲ್ಲಿ ಮತ್ತೆ ₹160 ಇಳಿಕೆBREAKING : ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತರಿಗೆ ಗ್ರೂಪ್ ಬಿ ಹುದ್ದೆಗೆ ನೇರ ನೇಮಕಾತಿ : ಡಿಸಿಎಂ ಪರಮೇಶ್ವರ್ ಘೋಷಣೆ!ರೈಲು ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಮಾರ್ಗ ಬದಲಾವಣೆ, ಸಂಚಾರ ನಿಯಂತ್ರಣದೆಹಲಿಯಲ್ಲಿ ಪತ್ರಕರ್ತೆಯ ಮೇಲೆ ದೌರ್ಜನ್ಯ: ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ