ಮೈಸೂರು: ರೈಲ್ವೆ ಕಾರ್ಯಾಚರಣೆಯ ಅಗತ್ಯತೆಗಳ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೆ ವಲಯದಲ್ಲಿ ಸಂಚರಿಸುವ ಹಲವು ಪ್ರಮುಖ ರೈಲುಗಳ ಮಾರ್ಗ ಬದಲಾವಣೆ (ಡೈವರ್ಶನ್) ಹಾಗೂ ಸಂಚಾರ ನಿಯಂತ್ರಣ (ರೆಗ್ಯುಲೇಶನ್) ಮಾಡಲಾಗಿದ್ದು, ರೈಲುಗಳ ಆಗಮನ ಮತ್ತು ನಿರ್ಗಮನ ಸಮಯದಲ್ಲಿ ಬದಲಾವಣೆಗಳಾಗಲಿವೆ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ್ ಧರ್ಮರಾಜ್ ಕಾಲಗೊಂಡ ತಿಳಿಸಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ:
ಮಾರ್ಗ ಬದಲಾವಣೆಗೊಂಡ ರೈಲುಗಳು:
-
ರೈಲು ಸಂಖ್ಯೆ 16159 (ಚೆನ್ನೈ ಎಗ್ಮೋರ್ - ಮಂಗಳೂರು ಸೆಂಟ್ರಲ್): ಅಕ್ಟೋಬರ್ 06 ಮತ್ತು 16ರಂದು ಪ್ರಾರಂಭವಾಗುವ ಈ ರೈಲು ಇರುಗೂರು - ಪೋದನೂರು ಜಂಕ್ಷನ್ - ಸುರತ್ಕಲ್ ಮಾರ್ಗವಾಗಿ ಸಂಚರಿಸಲಿದ್ದು, ಪೀಲಮೇಡು, ಚೇರ್ತಲಾ, ಕೊಯಮತ್ತೂರು ನಾರ್ತ್ ಜಂಕ್ಷನ್ ಹಾಗೂ ಕೊಯಮತ್ತೂರು ಜಂಕ್ಷನ್‌ಗಳಲ್ಲಿ ನಿಲುಗಡೆ ಇರುವುದಿಲ್ಲ.
-
ರೈಲು ಸಂಖ್ಯೆ 16603 (ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್): ಅಕ್ಟೋಬರ್ 16ರಂದು ಪ್ರಯಾಣ ಆರಂಭಿಸುವ ರೈಲು ಕೊಟ್ಟಾಯಂ ಮಾರ್ಗವಾಗಿ ಸಾಗಲಿದೆ. ಈ ವೇಳೆ ಎರ್ನಾಕುಲಂ ಜಂಕ್ಷನ್, ಚೇರ್ತಲಾ, ಆಲಪ್ಪುಳ, ಅಂಬಲಪ್ಪುಳ, ಹರಿಪಾಡ್ ನಿಲ್ದಾಣಗಳನ್ನು ಕೈಬಿಡಲಾಗಿದ್ದು, ಬದಲಿಯಾಗಿ ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಸ್ಸೆರಿ, ತಿರುವಲ್ಲಾ ಹಾಗೂ ಚೆಂಗನ್ನೂರು ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆ ನೀಡಲಾಗಿದೆ.
ಮಾರ್ಗಮಧ್ಯೆ ಸಂಚಾರ ನಿಯಂತ್ರಣ (Regulation en route):
-
ರೈಲು ಸಂಖ್ಯೆ 16348 (ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್): ಅಕ್ಟೋಬರ್ 03, 16 ಮತ್ತು 27ರಂದು 60 ನಿಮಿಷ ಹಾಗೂ ಅಕ್ಟೋಬರ್ 17, 18, 23, 24, 25, 31 ಮತ್ತು ನವೆಂಬರ್ 01ರಂದು 40 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಿಸಲ್ಪಡಲಿದೆ.
-
ರೈಲು ಸಂಖ್ಯೆ 16315 (ಮೈಸೂರು - ತಿರುವನಂತಪುರಂ ನಾರ್ತ್): ಅಕ್ಟೋಬರ್ 07ರಂದು 30 ನಿಮಿಷ ನಿಯಂತ್ರಣಗೊಳ್ಳಲಿದೆ.
-
ರೈಲು ಸಂಖ್ಯೆ 16316 (ತಿರುವನಂತಪುರಂ ನಾರ್ತ್ - ಮೈಸೂರು): ಅಕ್ಟೋಬರ್ 03 ಮತ್ತು 17ರಂದು 10 ನಿಮಿಷ ಮಾರ್ಗಮಧ್ಯೆ ನಿಯಂತ್ರಿಸಲ್ಪಡಲಿದೆ.
-
ರೈಲು ಸಂಖ್ಯೆ 16333 (ವೆರಾವಲ್ ಜಂಕ್ಷನ್ - ತಿರುವನಂತಪುರಂ ಸೆಂಟ್ರಲ್): ಅಕ್ಟೋಬರ್ 22ರಂದು 50 ನಿಮಿಷ ಹಾಗೂ ಅಕ್ಟೋಬರ್ 29ರಂದು 40 ನಿಮಿಷ ತಡವಾಗಿ ಸಾಗಲಿದೆ.
-
ರೈಲು ಸಂಖ್ಯೆ 16337 (ಓಖಾ - ಕೊಚ್ಚಿನ್): ಅಕ್ಟೋಬರ್ 22, 26 ಮತ್ತು 29ರಂದು 40 ನಿಮಿಷ ನಿಯಂತ್ರಣಗೊಳ್ಳಲಿದೆ.
-
ರೈಲು ಸಂಖ್ಯೆ 16335 (ಗಾಂಧಿಧಾಮ್ - ನಾಗರಕೋಯಿಲ್ ಜಂಕ್ಷನ್): ಅಕ್ಟೋಬರ್ 23 ಮತ್ತು 30ರಂದು 40 ನಿಮಿಷ ನಿಯಂತ್ರಣಗೊಳ್ಳಲಿದೆ.
-
ರೈಲು ಸಂಖ್ಯೆ 22656 (ಹಜರತ್ ನಿಜಾಮುದ್ದೀನ್ - ಕೊಚ್ಚಿನ್): ಅಕ್ಟೋಬರ್ 23 ಮತ್ತು 30ರಂದು 40 ನಿಮಿಷ ತಡವಾಗಲಿದೆ.
-
ರೈಲು ಸಂಖ್ಯೆ 22654 (ಹಜರತ್ ನಿಜಾಮುದ್ದೀನ್ - ತಿರುವನಂತಪುರಂ ಸೆಂಟ್ರಲ್): ಅಕ್ಟೋಬರ್ 26ರಂದು 30 ನಿಮಿಷ ನಿಯಂತ್ರಣಗೊಳ್ಳಲಿದೆ.
-
ರೈಲು ಸಂಖ್ಯೆ 22633 (ತಿರುವನಂತಪುರಂ ಸೆಂಟ್ರಲ್ - ಹಜರತ್ ನಿಜಾಮುದ್ದೀನ್): ಅಕ್ಟೋಬರ್ 04ರಂದು 10 ನಿಮಿಷ ಹಾಗೂ ಅಕ್ಟೋಬರ್ 21 ಮತ್ತು 28ರಂದು 30 ನಿಮಿಷ ನಿಯಂತ್ರಿಸಲ್ಪಡಲಿದೆ.
-
ರೈಲು ಸಂಖ್ಯೆ 16312 (ತಿರುವನಂತಪುರಂ ನಾರ್ತ್ - ಶ್ರೀ ಗಂಗಾನಗರ ಜಂಕ್ಷನ್): ಅಕ್ಟೋಬರ್ 03, 10 ಮತ್ತು 17ರಂದು ಆಗಮನ/ನಿರ್ಗಮನದಲ್ಲಿ 20 ನಿಮಿಷ ನಿಯಂತ್ರಣಗೊಳ್ಳಲಿದೆ.
ಆಗಮನ ಮತ್ತು ನಿರ್ಗಮನದಲ್ಲಿ ಹೆಚ್ಚುವರಿ ಸಮಯಾವಕಾಶ (Extra time):
-
ರೈಲು ಸಂಖ್ಯೆ 16315 (ಮೈಸೂರು - ತಿರುವನಂತಪುರಂ ನಾರ್ತ್): ಅಕ್ಟೋಬರ್ 06ರಂದು 20 ನಿಮಿಷ, ಅಕ್ಟೋಬರ್ 08, 09 ಮತ್ತು 22ರಂದು 40 ನಿಮಿಷ ಹಾಗೂ ಅಕ್ಟೋಬರ್ 15ರಂದು 15 ನಿಮಿಷಗಳ ಹೆಚ್ಚುವರಿ ಸಮಯ ತೆಗೆದುಕೊಳ್ಳಲಿದೆ.
-
ರೈಲು ಸಂಖ್ಯೆ 16316 (ತಿರುವನಂತಪುರಂ ನಾರ್ತ್ - ಮೈಸೂರು): ಅಕ್ಟೋಬರ್ 09, 10, 13, 16, 20 ಮತ್ತು 23ರಂದು 20 ನಿಮಿಷ ಹೆಚ್ಚುವರಿ ಸಮಯ.
-
ರೈಲು ಸಂಖ್ಯೆ 16630 (ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್): ಅಕ್ಟೋಬರ್ 06, 07, 08, 09, 15 ಮತ್ತು 22ರಂದು 20 ನಿಮಿಷ ಹೆಚ್ಚುವರಿ ಸಮಯ.
-
ರೈಲು ಸಂಖ್ಯೆ 16603 (ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್): ಅಕ್ಟೋಬರ್ 08 ಮತ್ತು 09ರಂದು 25 ನಿಮಿಷ ಹೆಚ್ಚುವರಿ ಸಮಯ.
-
ರೈಲು ಸಂಖ್ಯೆ 16604 (ತಿರುವನಂತಪುರಂ ಸೆಂಟ್ರಲ್ - ಮಂಗಳೂರು ಸೆಂಟ್ರಲ್): ಅಕ್ಟೋಬರ್ 09, 10, 16 ಮತ್ತು 17ರಂದು 20 ನಿಮಿಷ ಹೆಚ್ಚುವರಿ ಸಮಯ.
-
ರೈಲು ಸಂಖ್ಯೆ 16356 (ಮಂಗಳೂರು ಜಂಕ್ಷನ್ - ತಿರುವನಂತಪುರಂ ನಾರ್ತ್): ಅಕ್ಟೋಬರ್ 09ರಂದು 20 ನಿಮಿಷ ಹೆಚ್ಚುವರಿ ಸಮಯ.
-
ರೈಲು ಸಂಖ್ಯೆ 12777 (ಎಸ್.ಎಸ್.ಎಸ್ ಹುಬ್ಬಳ್ಳಿ - ತಿರುವನಂತಪುರಂ ನಾರ್ತ್): ಅಕ್ಟೋಬರ್ 07ರಂದು 20 ನಿಮಿಷ ಹೆಚ್ಚುವರಿ ಸಮಯ.
-
ರೈಲು ಸಂಖ್ಯೆ 16561 (ಯಶವಂತಪುರ - ತಿರುವನಂತಪುರಂ ನಾರ್ತ್): ಅಕ್ಟೋಬರ್ 08, 15 ಮತ್ತು 22ರಂದು 20 ನಿಮಿಷ ಹೆಚ್ಚುವರಿ ಸಮಯ.
-
ರೈಲು ಸಂಖ್ಯೆ 12258 (ತಿರುವನಂತಪುರಂ ನಾರ್ತ್ - ಯಶವಂತಪುರ): ಅಕ್ಟೋಬರ್ 09, 16 ಮತ್ತು 23ರಂದು 20 ನಿಮಿಷ ಹೆಚ್ಚುವರಿ ಸಮಯ.
-
ರೈಲು ಸಂಖ್ಯೆ 19260 (ಭಾವನಗರ - ತಿರುವನಂತಪುರಂ ನಾರ್ತ್): ಅಕ್ಟೋಬರ್ 06ರಂದು 20 ನಿಮಿಷ ಹೆಚ್ಚುವರಿ ಸಮಯ.
-
ರೈಲು ಸಂಖ್ಯೆ 16338 (ಕೊಚ್ಚಿನ್ - ಓಖಾ): ಅಕ್ಟೋಬರ್ 09, 16 ಮತ್ತು 23ರಂದು 20 ನಿಮಿಷ ಹೆಚ್ಚುವರಿ ಸಮಯ.
-
ರೈಲು ಸಂಖ್ಯೆ 16336 (ನಾಗರಕೋಯಿಲ್ ಜಂಕ್ಷನ್ - ಗಾಂಧಿಧಾಮ್): ಅಕ್ಟೋಬರ್ 20ರಂದು 20 ನಿಮಿಷಗಳ ಹೆಚ್ಚುವರಿ ಸಮಯ ತೆಗೆದುಕೊಳ್ಳಲಿದೆ.
ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರೈಲು ನಿಲ್ದಾಣಗಳಿಗೆ ತೆರಳಲು ಹಾಗೂ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಲು ರೈಲ್ವೆ ಇಲಾಖೆ ಕೋರಿದೆ.